ಸ್ವಂದನಾಳನ್ನ ಸೇವ್ ಮಾಡಲು ಸೂರಜ್, ಮಾಳು ಎಲಿಮಿನೇಟ್? – ದತ್ತು ಪುತ್ರಿಯನ್ನ ಉಳಿಸಲು ಬಿಗ್ಬಾಸ್ ಹೊಸ ಆಟ?

ಬಿಗ್ಬಾಸ್ ದೊಡ್ಮನೆಯಲ್ಲಿ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಸೂರಜ್ ದೊಡ್ಮನೆಯಿಂದ ಔಟ್ ಆಗ್ತಿದ್ದಂತೆ ಮಾಳು ಕೂಡ ಎಲಿಮಿನೇಟ್ ಆಗಿದ್ದಾರೆ. ಇದೀಗ ವೀಕ್ಷಕರು ಆಕ್ರೋಶ ಹೊರ ಹಾಕುತ್ತಿದ್ದಾರೆ. ದೊಡ್ಮನೆಯಲ್ಲಿ ಏನೂ ಮಾಡದ ಸ್ಪಂದನಾ ಸೇವ್ ಆಗ್ತಿರೋದು ಹೇಗೆ ಎಂದು ಪ್ರಶ್ನೆ ಮಾಡ್ತಿದ್ದಾರೆ.
ಇದನ್ನೂ ಓದಿ: 4 ವರ್ಷದ ಬಾಲಕಿ ಆಟಕ್ಕೆ ಧೋನಿ ಫಿದಾ!- ಮಂದಾನ ಸ್ಟೈಲ್.. ಕ್ರಿಕೆಟ್ ಲೋಕವೇ ಮೆಚ್ಚಿದ ಶ್ರೇಯಾ ಯಾರು?
ಬಿಗ್ಬಾಸ್ ಶನಿವಾರದ ಸಂಚಿಕೆಯಲ್ಲಿ ಸೂರಜ್ ಅವರು ಮನೆಯಿಂದ ಹೊರ ನಡೆದಿದ್ದಾರೆ. ಭಾನುವಾರ ಸ್ಪಂದನಾ ಹಾಗೂ ಮಾಳು ಅವರು ಡೇಂಜರ್ ಝೋನ್ನಲ್ಲಿ ಇದ್ದಿದ್ದರು. ಹೀಗಾಗಿ ಬಿಗ್ ಬಾಸ್ ಸ್ಪಂದನಾ ಹಾಗೂ ಮಾಳು ಅವರಲ್ಲಿ ಒಬ್ಬರು ಮನೆಯಿಂದ ಆಚೆ ಹೋಗುತ್ತಾರೆ ಎಂದು ಅನೌನ್ಸ್ ಮಾಡಿದ್ದಾರೆ. ಈ ಬೆನ್ನಲ್ಲೇ ಸ್ಪಂದನಾ ದೊಡ್ಮನೆಯಿಂದ ಔಟ್ ಆಗ್ತಾರೆ ಎಂದು ಅಂದ್ಕೊಂಡಿದ್ದರು. ಆದ್ರೆ ವೀಕ್ಷಕರ ಲೆಕ್ಕಾಚಾರ ಉಲ್ಟಾ ಆಗಿದೆ. ಸ್ಪಂದನಾ ಸೇವ್ ಆಗಿದ್ದು ಮಾಳು ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಇದೀಗ ವೀಕ್ಷಕರು ಬಿಗ್ಬಾಸ್ ಮೋಸದಾಟ ಆಡುತ್ತಿದ್ದಾರೆ. ದೊಡ್ಮನೆಯಲ್ಲಿ ಸ್ಪಂದನಾ ಟಾಸ್ಕ್ನಲ್ಲೂ ಝೀರೋ, ಅಷ್ಟೊಂದು ಮನರಂಜನೆ ಕೂಡ ನೀಡ್ತಾ ಇಲ್ಲ. ಮಾಳು ಆರಂಭದಲ್ಲಿ ಮನೆಗೆ ಹೋಗ್ತೀನಿ ಅಂದಿದ್ರೂ ಬರುಬರುತ್ತಾ ಆಟವನ್ನ ಇಂಫ್ರೂವ್ ಮಾಡಿಕೊಂಡಿದ್ರು. ಮನರಂಜನೆ ಅಷ್ಟೊಂದಾಗಿ ಕೊಟ್ಟಿಲ್ಲ ಅಂದ್ರೂ ಒಂದಷ್ಟು ಟಾಸ್ಕ್ಗಳಲ್ಲಿ ತಮ್ಮನ್ನ ತಾವು ಫ್ರೂವ್ ಮಾಡಿದ್ರು. ಆದ್ರೆ ಸ್ಪಂದನಾ ಏನೂ ಮಾಡದೇ ಹೇಗೆ ಸೇವ್ ಆದ್ರು? ಬಿಗ್ಬಾಸ್ ಬೇಕಂತಲೇ ಸ್ಪಂದನಾರನ್ನ ಸೇವ್ ಮಾಡ್ತಿದ್ದಾರಾ? ಮ್ಯಾಚ್ ಫಿಕ್ಸಿಂಗ್ ಏನಾದ್ರೂ ನಡಿತಾ ಇದ್ಯಾ ಅಂತ ವೀಕ್ಷಕರು ಪ್ರಶ್ನೆ ಮಾಡ್ತಿದ್ದಾರೆ.
ಇನ್ನು ಈ ಹಿಂದೆ ಸ್ಪಂದನಾ ಸೋಮಣ್ಣ ಅವರು ಕಲರ್ಸ್ ಕನ್ನಡ ವಾಹಿನಿಯ ನಟಿ. ಹಾಗಾಗಿ ಅವರನ್ನು ಮೇಲಕ್ಕೆತ್ತುವ ಪ್ರಯತ್ನಗಳು ನಡೆದಿರುವ ಬಗ್ಗೆ ಜಾನ್ವಿ ಕೂಡ ಶೋನಲ್ಲೇ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ವೀಕೆಂಡ್ ಸಂಚಿಕೆಯಲ್ಲಿಯೂ ಸುದೀಪ್ ದೀರ್ಘವಾಗಿ ಚರ್ಚೆ ನಡೆಸಿದ್ದರು. ಈ ಚರ್ಚೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸ್ಪಂದನಾ ಸೋಮಣ್ಣ ಕಲರ್ಸ್ ಕನ್ನಡ ಮಗಳು ಎಂಬ ಮಾತುಗಳು ಕೇಳಿ ಬಂದಿದ್ದವು. ಸ್ಪಂದನಾ ಸೇವ್ ಆಗಿರೋದನ್ನು ಗಮನಿಸಿದ ನೆಟ್ಟಿಗರು ಜಾನ್ವಿ ಹೇಳಿದ ಮಾತು ಸತ್ಯವಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮಾಳು ಮನೆಯಲ್ಲಿ ಆಟದ ಜೊತೆಯಲ್ಲಿ ಅಡುಗೆ, ಕ್ಲೀನಿಂಗ್ ಕೆಲಸಗಳನ್ನು ಮಾಡುತ್ತಿದ್ದರು. ಆದ್ರೆ ಸ್ಪಂದನಾ ಯಾವ ಆಟವನ್ನು ಆಡಿಲ್ಲ. ಅಡುಗೆ ಮಾಡಿದ್ದನ್ನು ಸಹ ನಾವು ನೋಡಿಲ್ಲ ಎಂದು ನೆಟ್ಟಿಗರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬರೆದುಕೊಳ್ಳುತ್ತಿದ್ದಾರೆ.

ನೋಡಿರಿ

