ಕೊಹ್ಲಿ-ಸಾಲ್ಟ್ RCB ಡೆಡ್ಲಿ ಓಪನರ್ಸ್ – SRH, RRನಲ್ಲೂ ಡೇಂಜರ್ ಕಾಂಬೋ
10 ಟೀಂ.. ಹೇಗಿದೆ ಪವರ್ ಪ್ಲೇ ಪ್ಲ್ಯಾನ್?

ಕೊಹ್ಲಿ-ಸಾಲ್ಟ್ RCB ಡೆಡ್ಲಿ ಓಪನರ್ಸ್ – SRH, RRನಲ್ಲೂ ಡೇಂಜರ್ ಕಾಂಬೋ10 ಟೀಂ.. ಹೇಗಿದೆ ಪವರ್ ಪ್ಲೇ ಪ್ಲ್ಯಾನ್?

2026ರ ಐಪಿಎಲ್​ಗೆ ರಗಡ್ ಎಂಟ್ರಿ ಕೊಡೋಕೆ ಹತ್ತೂ ಫ್ರಾಂಚೈಸಿಗಳು ರೆಡಿಯಾಗಿವೆ. ಮಿನಿ ಆಕ್ಷನ್ ಬಳಿಕ ಒಂದಷ್ಟು ತಂಡಗಳಲ್ಲಿ ಮೇಜರ್ ಸರ್ಜರಿಗಳಾಗಿವೆ. ಬ್ಯಾಟಿಂಗ್, ಬೌಲಿಂಗ್ ಅಂತಾ ಎಲ್ಲವನ್ನೂ ಬ್ಯಾಲೆನ್ಸ್ ಮಾಡಿಕೊಂಡು ನೆಕ್ಸ್​ಟ್ ಸೀಸನ್​ಗೆ ಪವರ್​ಫುಲ್ ಆಗೇ ರೆಡಿಯಾಗಿದ್ದಾರೆ. ಹೀಗೆ 19ನೇ ಆವೃತ್ತಿಯ ಐಪಿಎಲ್ ಕಪ್ ಮೇಲೆ ಕಣ್ಣಿಟ್ಟಿರೋ 10 ಫ್ರಾಂಚೈಸಿಗಳಲ್ಲಿ ಓಪನರ್ಸ್ ಆಗಿ ಯಾರು ಕಣಕ್ಕಿಳಿಯಬಹುದು.

ಇದನ್ನೂ ಓದಿ : T-20Iನಲ್ಲಿ ಶುರು ಕ್ಯಾಪ್ಟನ್ಸಿ ರೇಸ್ – ಪಾಂಡ್ಯ Vs ಸಂಜು Vs ಅಕ್ಷರ್!

ಟಿ-20 ಕ್ರಿಕೆಟ್ ಫಾರ್ಮೆಟ್​ನಲ್ಲಿ ಬ್ಯಾಟರ್​ಗಳದ್ದೇ ಅಬ್ಬರ.. ಅದ್ರಲ್ಲೂ ಐಪಿಎಲ್​ನಲ್ಲಂತೂ ಬೌಲರ್​ಗಳನ್ನ ಬೆಂಡೆತ್ತಿ ಬಿಡ್ತಾರೆ. ಪಂದ್ಯಕ್ಕೊಂದು ದಾಖಲೆಗಳು ಬ್ರೇಕ್ ಆಗ್ತಾನೇ ಇರ್ತಾವೆ. ಒಂದ್ಕಡೆ ಯಂಗ್​ಸ್ಟರ್ಸ್ ಮತ್ತೊಂದ್ಕಡೆ ಸೀನಿಯರ್ಸ್ ಕಾಂಬಿನೇಷನ್​ನಲ್ಲಿ ಧೂಳೆಬ್ಬಿಸ್ತಾರೆ. ಕಳೆದ ಆವೃತ್ತಿಯಲ್ಲೇ ಪವರ್​ಹಿಟ್​ಗಳನ್ನ ನೋಡಿದ್ದ ಅಭಿಮಾನಿಗಳಿಗೆ ಮುಂದಿನ ಆವೃತ್ತಿಯಲ್ಲೂ ಹಬ್ಬವೋ ಹಬ್ಬ. ಅದ್ರಲ್ಲೂ ಪವರ್​ಪ್ಲೇನಲ್ಲೇ ಪವರ್​ಶೋ ತೋರಿಸೋಕೆ ಓಪನರ್ಸ್ ಕೂಡ ರೆಡಿಯಾಗಿದ್ದಾರೆ.

19ನೇ ಸೀಸನ್ ಐಪಿಎಲ್ ಓಪನರ್ಸ್!

ತಂಡ                                          ಓಪನರ್ಸ್

ಆರ್ ಸಿಬಿ                                ವಿರಾಟ್ ಕೊಹ್ಲಿ & ಫಿಲ್ ಸಾಲ್ಟ್

ಚೆನ್ನೈ                              ರುತುರಾಜ್ ಗಾಯಕ್ವಾಡ್ & ಆಯುಷ್ ಮ್ಹಾತ್ರೆ

ಮುಂಬೈ                               ರೋಹಿತ್ ಶರ್ಮಾ & ಕ್ವಿಂಟನ್ ಡಿ ಕಾಕ್

ಕೊಲ್ಕತ್ತಾ                                    ಫಿನ್ ಅಲೆನ್ & ಅಜಿಂಕ್ಯ ರಹಾನೆ

ಹೈದ್ರಾಬಾದ್                                  ಅಭಿಷೇಕ್ ಶರ್ಮಾ & ಟ್ರಾವಿಸ್ ಹೆಡ್

ಲಕ್ನೋ                                 ಐಡೆನ್ ಮಾರ್ಕ್ರಾಮ್ & ಮಿಚೆಲ್ ಮಾರ್ಷ್

ಗುಜರಾತ್                              ಶುಭಮನ್ ಗಿಲ್ & ಸಾಯಿ ಸುದರ್ಶನ್

ರಾಜಸ್ಥಾನ                            ಯಶಸ್ವಿ ಜೈಸ್ವಾಲ್ & ವೈಭವ್ ಸೂರ್ಯವಂಶಿ

ಡೆಲ್ಲಿ                                       ಬೆನ್ ಡಕೆಟ್ & ಕೆಎಲ್ ರಾಹುಲ್

ಪಂಜಾಬ್                           ಪ್ರಿಯಾಂಶ್ ಆರ್ಯ ಮತ್ತು ಪ್ರಭ್ಸಿಮ್ರಾನ್ ಸಿಂಗ್

Shantha Kumari