RCBಯಲ್ಲಿ ಬೆಂಕಿ ಬೌಲರ್ಸ್ – ಜೋಶ್, ಡಫಿ, ಭುವಿ ಬ್ರಹ್ಮಾಸ್ತ್ರ!
ಪೇಸ್ ಓಕೆ.. ಸ್ಪಿನ್ ವೀಕ್ ಆಯ್ತಾ?

RCBಯಲ್ಲಿ ಬೆಂಕಿ ಬೌಲರ್ಸ್ – ಜೋಶ್, ಡಫಿ, ಭುವಿ ಬ್ರಹ್ಮಾಸ್ತ್ರ!ಪೇಸ್ ಓಕೆ.. ಸ್ಪಿನ್ ವೀಕ್ ಆಯ್ತಾ?

ಐಪಿಎಲ್​ನಲ್ಲಿ ಹೈಯೆಸ್ಟ್ ಫ್ಯಾನ್ಸ್ ಬೇಸ್ಡ್ ಹಾಗೇ ಸ್ಟಾರ್ ಡಂ ಇರುವಂತ ಟೀಂ ಅಂದ್ರೆ ಆರ್​ಸಿಬಿ. ಹೀಗಿದ್ರೂ ಆರ್​ಸಿಬಿ ತಮ್ಮ ಚೊಚ್ಚಲ ಕಪ್ ಗೆಲ್ಲೋಕೆ 18 ವರ್ಷಗಳೇ ಬೇಕಾಯ್ತು. 2008ರಿಂದ ಶುರುವಾದ ಐಪಿಎಲ್​ ಅನ್ನೋ ಶ್ರೀಮಂತ ಲೀಗ್​ನಲ್ಲಿ 2025ರ ಆವೃತ್ತಿಯಲ್ಲಿ ಬೆಂಗಳೂರು ಟೀಂ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದ್ರು. ವರ್ಲ್ಡ್ ಕ್ಲಾಸ್ ಪ್ಲೇಯರ್​ಗಳೇ ಇದ್ರೂ ಟ್ರೋಫಿ ವಂಚಿತರಾಗೋಕೆ ಮುಖ್ಯ ಕಾರಣವೇ ಬೌಲಿಂಗ್ ಸ್ಕ್ವಾಡ್ ವೀಕ್ ಇದ್ದದ್ದು. ಆದ್ರೆ ಕಳೆದ ಆವೃತ್ತಿಯಿಂದ ಬೌಲಿಂಗ್ ಯುನಿಟ್ ದಿ ಬೆಸ್ಟ್ ಎನ್ನುವಂತಿದೆ. ಈ ವರ್ಷ ಇನ್ನೂ ಸ್ಟ್ರಾಂಗ್ ಆಗಿದೆ.

ಇದನ್ನೂ ಓದಿ : ಈ ವಾರ ಡಬಲ್‌ ಎಲಿಮಿನೇಷನ್‌! – ದೊಡ್ಮನೆಯಿಂದ ಹೊರ ಹೋಗಿದ್ದು ಇವರೇ!?

2025ರ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2026ರಲ್ಲೂ ಟ್ರೋಫಿ ಗೆಲ್ಲುವಂಥ ಮೋಸ್ಟ್ ಫೇವರೆಟ್ ಟೀಂ ಆಗಿದೆ. ಯಾಕಂದ್ರೆ ಬ್ಯಾಟಿಂಗ್, ಬೌಲಿಂಗ್, ಮಿಡಲ್ ಆರ್ಡರ್, ಫಿನಿಶರ್ಸ್ ಅಂತಾ ಇಡೀ ಟೀಂ ಎಕ್ಸ್​ಟ್ರಾರ್ಡಿನರಿ ಪ್ಲೇಯರ್​ಗಳನ್ನೇ ಹೊಂದಿದೆ. ಎಕ್ಸ್​ಪೀರಿಯನ್ಸ್​ ಌಂಡ್ ಇಂಟರ್​ನ್ಯಾಷನಲ್ ಸ್ಟಾರ್ಸ್ ಕೂಡ ಇರೋದು ಬೆಂಗಳೂರು ತಂಡದ ಮೇನ್ ಅಡ್ವಾಂಟೇಜ್. ಅದ್ರಲ್ಲೂ ಬೌಲಿಂಗ್ ಅಂತೂ ಸಿಕ್ಕಾಪಟ್ಟೆ ಡೇಂಜರಸ್ ಆಗಿದೆ.

ನಂಬರ್ 1

ಬೌಲಿಂಗ್ ಬ್ರಹ್ಮಾಸ್ತ್ರ ಜೋಶ್ ಹೇಜಲ್ ವುಡ್!

ಆರ್​ಸಿಬಿಯಲ್ಲಿರೋ ಮೋಸ್ಟ್ ಡೇಂಜರಸ್ ಬೌಲರ್ ಅಂದ್ರೆ ಅದು ಜೋಶ್ ಹೇಜಲ್​ವುಡ್. ಇವ್ರ ಎಕ್ಸ್​ಪೀರಿಯನ್ಸ್, ವಿಕೆಟ್ ಟೇಕಿಂಗ್ ಎಬಿಲಿಟಿ, ಌಂಡ್ ವರ್ಲ್ಡ್ ಕ್ಲಾಸ್ ಬೌಲರ್ ಆಗಿರೋ ಹೇಜಲ್​ವುಡ್ ಲಾಸ್ಟ್ ಸೀಸನ್ನಲ್ಲೇ ಬೆಂಗಳೂರು ತಂಡಕ್ಕೆ ಹೇಝಲ್​ಗಾಡ್ ಆಗಿದ್ರು. ಈಗ ಮುಂದಿನ ವರ್ಷವೂ ಎದುರಾಳಿ ಬ್ಯಾಟರ್​ಗಳನ್ನ ಚೆಂಡಾಡುವಂಥ ಮೇನ್ ವೆಪನ್ ಆಗ್ತಾರೆ. ಕಳೆದ ವರ್ಷ ಆರ್​ಸಿಬಿಗೆ ಬೌಲಿಂಗ್​ನ ಪ್ರಮುಖ ಅಸ್ತ್ರವಾಗಿದ್ರು. ಕೆಲ ಪಂದ್ಯಗಳನ್ನ ಮಿಸ್ ಮಾಡಿಕೊಂಡ್ರೂ 22 ವಿಕೆಟ್ ತೆಗೆದು ಟ್ರೋಫಿ ಗೆಲುವಿನ ರೂವಾರಿಯಾಗಿದ್ರು. ಅವ್ರ ಅಕ್ಯುರೆಸಿ, ಲೈನ್ ಌಂಡ್ ಲೈಂಗ್ತ್, ಬೌನ್ಸ್ ಜನರೇಟ್ ಮಾಡೋ ಎಬಿಲಿಟಿ ನೆಕ್ಸ್​ಟ್ ಲೆವೆಲ್​ನಲ್ಲಿದೆ. ಸ್ಲೋವರ್ಸ್ ಬಾಲ್ಸ್, ಯಾರ್ಕರ್​ಗಳಿಂದಲೇ ಬಿಗ್ ಬ್ರೇಕ್ ಥ್ರ್ಯೂಗಳನ್ನ ತಂದುಕೊಡ್ತಾರೆ. ಪ್ರೆಶರ್ ಟೈಮಲ್ಲಿ ಹೇಜಲ್​​ವುಡ್ ನಿಜಕ್ಕೂ ಗಾಡ್ ಆಗ್ತಾರೆ.

ನಂಬರ್ 2

ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಎಕ್ಸ್ ಪೀರಿಯನ್ಸ್!

ಆರ್​ಸಿಬಿಯಲ್ಲಿರೋ ಮತ್ತೊಂದು ಬೌಲಿಂಗ್ ವೆಪನ್ ಅಂದ್ರೆ ಅದು ಭುವನೇಶ್ವರ್ ಕುಮಾರ್. ಅವ್ರ ಸ್ವಿಂಗ್ ಬೌಲಿಂಗ್, ಅದ್ರಲ್ಲೂ ನ್ಯೂಬಾಲ್ ಮತ್ತು ಡೆತ್ ಓವರ್​ಗಳಲ್ಲಿ ಕನ್ಸಿಸ್ಟೆನ್ಸಿಯಾಗಿ ವಿಕೆಟ್​ಗಳನ್ನ ಬೇಟೆಯಾಡ್ತಾರೆ.  ಎರಡೂ ಸೈಡಲ್ಲೂ ಚೆಂಡನ್ನ ಸ್ವಿಂಗ್ ಮಾಡೋ ಸಾಮರ್ಥ್ಯ ಅವ್ರಲ್ಲಿದೆ. ಟೆಸ್ಟ್, ODI ಮತ್ತು T20I ಮೂರೂ ಮಾದರಿಗಳಲ್ಲಿ ಭಾರತದ ಪರ ಹಲವು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಌಂಡ್ ಐಪಿಎಲ್‌ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಮೊದಲ ಬೌಲರ್ ಇವ್ರು.

ನಂಬರ್ 3

ಯಶ್ ದಯಾಳ್ ಗಿದೆ ವಿಕೆಟ್ ಟೇಕಿಂಗ್ ಎಬಿಲಿಟಿ!

ಇನ್ನು ಆರ್​ಸಿಬಿಯ ಮತ್ತೊಬ್ಬ ಪೇಸ್ ಬೌಲರ್ ಯಶ್ ದಯಾಳ್ ಕೂಡ ತಂಡದ ಬೆಸ್ಟ್ ಪ್ಲೇಯರ್ ಆಗಿದ್ದಾರೆ. ಲೆಫ್ಟ್ ಆರ್ಮ್ ಪೇಸರ್ ಆಗಿರೋ ದಯಾಳ್ ರಲ್ಲಿ ಬಾಕ್ ಸ್ವಿಂಗ್ ಮಾಡೋದ್ರ ಜೊತೆಗೆ ಪವರ್ ಪ್ಲೇ ಮತ್ತು ಡೆತ್ ಓವರ್ ಗಳಲ್ಲಿ ಮ್ಯಾಚ್ ಟರ್ನಿಂಗ್ ಪರ್ಫಾಮೆನ್ಸ್ ನೀಡ್ತಾರೆ.

ನಂಬರ್ 4

ಮಿನಿ ಆಕ್ಷನ್ ಹೀರೋ ಜೇಕಬ್ ಡಫಿ ಬೆಸ್ಟ್ ಪ್ಲೇಯರ್!

ನ್ಯೂಜಿಲೆಂಡ್ ಪರ ಅತ್ಯುತ್ತಮ ಪ್ರದರ್ಶನ ನೀಡ್ತಿರೋ 31 ವರ್ಷದ ಬಲಗೈ ವೇಗಿ ಜೇಕಬ್ ಡಫಿ ಸದ್ಯ ಅಂತರರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ನಂಬರ್ 2 ಬೌಲರ್ ಆಗಿದ್ದಾರೆ. ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದು ಪವರ್‌ಪ್ಲೇನಲ್ಲಿ ಸ್ವಿಂಗ್ ಬೌಲಿಂಗ್ ಮೂಲಕ ವಿಕೆಟ್ ತಗೊಳ್ತಾರೆ. ಌಂಡ್ ಡೆತ್ ಬೌಲಿಂಗ್‌ನಲ್ಲಿ ಕೂಡ ರನ್ ಗಳಿಗೆ ಕಡಿವಾಣ ಹಾಕುವ ಸಾಮರ್ಥ್ಯ ಇದೆ. ಹೀಗಾಗಿ ಡಫಿ ಸೆಲೆಕ್ಷನ್ ಸೂಪರ್ ಆಗಿದೆ.

ನಂಬರ್ 5

ಸ್ಪಿನ್ ನಲ್ಲಿ ಕೃನಾಲ್ ಮತ್ತು ಸುಯಾಶ್ ಸ್ಟ್ರೆಂಥ್!

ಪೇಸ್ ವಿಭಾಗ ಅಷ್ಟೇ ಅಲ್ದೇ ಸ್ಪಿನ್ ನಲ್ಲೂ ಒಳ್ಳೆ ಆಟಗಾರರಿದ್ದಾರೆ. ಆಲ್​ ರೌಂಡರ್ ಕೃನಾಲ್ ಪಾಂಡ್ಯ ಮೊದಲ ಆಯ್ಕೆಯಾಗ್ತಾರೆ. ಮಿಡಲ್ ಓವರ್​ಗಳಲ್ಲಿ ಸಮತೋಲನ ಕಾಪಾಡ್ತಾರೆ. ಇನ್ನು ಲೆಗ್-ಸ್ಪಿನ್ನರ್ ಸುಯಾಶ್ ಶರ್ಮಾ ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಇಂಪ್ಯಾಕ್ಟ್ ಮಾಡ್ತಾರೆ. ಇವ್ರಿಷ್ಟೇ ಅಲ್ಲದೇ  ನುವಾನ್ ತುಷಾರ ಕೂಡ ಇದ್ದಾರೆ. ಹಾಗೇ ಆಲ್​ರೌಂಡರ್​ಗಳಲ್ಲಿ ರೊಮಾರಿಯೊ ಶೆಫರ್ಡ್ ಮತ್ತು ವೆಂಕಟೇಶ್ ಅಯ್ಯರ್ ಅವರಂತಹ ಪ್ಲೇಯರ್ಸ್ ಕೂಡ ಬ್ಯಾಕಪ್ ಇರ್ತಾರೆ. ಒಟ್ನಲ್ಲಿ ಆರ್‌ಸಿಬಿ ತನ್ನ ವೇಗದ ವಿಭಾಗದಲ್ಲಿ ಫೈರ್‌ಪವರ್ ಮತ್ತು ಅನುಭವವನ್ನು ಹೊಂದಿದ್ದರೂ ಸ್ಪಿನ್ ವಿಭಾಗದಲ್ಲಿ ಒಬ್ಬ ಅನುಭವಿಯ ಅವಶ್ಯಕತೆ ಇತ್ತು ಅನ್ನೋ ವಾದವೂ ಇದೆ.

Shantha Kumari