ಈ ವಾರ ಡಬಲ್‌ ಎಲಿಮಿನೇಷನ್‌! – ದೊಡ್ಮನೆಯಿಂದ ಹೊರ ಹೋಗಿದ್ದು ಇವರೇ!?

ಈ ವಾರ ಡಬಲ್‌ ಎಲಿಮಿನೇಷನ್‌! – ದೊಡ್ಮನೆಯಿಂದ ಹೊರ ಹೋಗಿದ್ದು ಇವರೇ!?

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಈಗ 13ನೇ ವಾರಕ್ಕೆ ಕಾಲಿಟ್ಟಿದೆ. ಶೋ ಫಿನಾಲೆ ಹತ್ತಿರವಾಗ್ತಿದ್ದಂತೆ ಸ್ಪರ್ಧಿಗಳ ಮಧ್ಯೆ ಟಫ್‌ ಫೈಟ್‌ ಏರ್ಪಟ್ಟಿದೆ. ಈ ವಾರ ಸುದೀಪ್‌ ವೀಕೆಂಡ್‌ ಶೋ ನಡೆಸುತ್ತಿಲ್ಲ. ಇದೀಗ ಕಿಚ್ಚ ಸುದೀಪ್‌ ಬದಲು ನಿರ್ದೇಶಕ ಪ್ರೇಮ್‌ ಮತ್ತು ಕೆಡಿ ಚಿತ್ರತಂಡ ಭೇಟಿ ನೀಡಿದೆ. ಈ ವೇಳೆ ಮನೆಯಲ್ಲಿ ಡಬಲ್ ಎಲಿಮಿನೇಷನ್ ಘೋಷಣೆಯಾಗಿದ್ದು, ಸ್ಪರ್ಧಿಗಳು ಆಘಾತಗೊಂಡಿದ್ದಾರೆ.

ಇದನ್ನೂ ಓದಿ: ಕಿತ್ತೊಗಿರೋ ಕಾಮೆಂಟ್ಸ್‌ಗೆ ನಾನು ತಲೆ ಕೆಡಿಸಿಕೊಳ್ಳಲ್ಲ! – ಮಗಳು ಸಾನ್ವಿ ಬಗ್ಗೆ ಕೆಟ್ಟ ಕಮೆಂಟ್‌ ಮಾಡಿದವರಿಗೆ ಕಿಚ್ಚನ ವಾರ್ನ್‌!

ಇಂದಿನ ಸಂಚಿಕೆಯ ಪ್ರೋಮೋ ಈಗ ರಿಲೀಸ್‌ ಆಗಿದೆ. ದೊಡ್ಮನೆಗೆ  ನಿರ್ದೇಶಕ ಪ್ರೇಮ್ ತಮ್ಮ ಕೆಡಿ: ದಿ ಡೆವಿಲ್ ಚಿತ್ರತಂಡ ಮತ್ತು ಭಾಗ್ಯಲಕ್ಷ್ಮೀ ಸೀರಿಯಲ್ ತಂಡ ಆಗಮಿಸಿದೆ. ಅವರನ್ನ ದೊಡ್ಮನೆಗೆ ಗ್ರ್ಯಾಂಡ್‌ ಆಗಿ ವೆಲ್‌ಕಮ್‌ ಮಾಡಲಾಗಿದೆ. ಗೆಸ್ಟ್‌ ದೊಡ್ಮನೆಗೆ ಬರ್ತಿದ್ದಂತೆ ಮನೆಮಂದಿಗೆ ಶಾಕ ಕೂಡ ಎದುರಾಗಿದೆ. ಗಾರ್ಡನ್ ಏರಿಯಾದಲ್ಲಿ ಇಟ್ಟಿದ್ದ ಬೋರ್ಡ್ ಅನ್ನ ಗಿಲ್ಲಿ ಓಪನ್‌ ಮಾಡಿದ್ದು. ಇದನ್ನ ನೋಡುತ್ತಿದ್ದಂತೆ ಸ್ಪರ್ಧಿಗಳೆಲ್ಲಾ ಶಾಕ್ ಆಗಿದ್ದಾರೆ. ಈ ಬೋರ್ಡ್‌ನಲ್ಲಿ ಡಬಲ್‌ ಎಲಿಮಿನೇಷನ್‌ ಎಂದು ಬರೆದಿದ್ದು, ಸ್ಪರ್ಧಿಗಳು ಆಘಾತಗೊಂಡಿದ್ದಾರೆ.

ಪ್ರೋಮೋದಲಲಿ ನಿರ್ದೇಶಕ ಪ್ರೇಮ್ ಮತ್ತು ರೀಷ್ಮಾ ಆಗಮಿಸುತ್ತಿದ್ದಂತೆ ಈ ವಾರಿ ನಾನೇ ಮನೆಯ ಕ್ಯಾಪ್ಟನ್ ಎಂದು ಗಿಲ್ಲಿ ನಟ ಹೇಳಿಕೊಳ್ಳುತ್ತಾರೆ. ಗಿಲ್ಲಿ ನಟ ನಾನೇ ಕ್ಯಾಪ್ಟನ್ ಅಂತ ಹೇಳ್ತಿದ್ದಂತೆ ಪ್ರೇಮ್, ಹಾಗಾದ್ರೆ ನಾನು ಮನೆಯೊಳಗೆ ಬರಲ್ಲ ಎಂದು ತಮಾಷೆ ಮಾಡುತ್ತಾರೆ. ಬಳಿಕ  ನಾಮಿನೇಷನ್ ಪ್ರಕ್ರಿಯೆಯ ತುಣುಕನ್ನು ಸಹ ತೋರಿಸಲಾಗಿದೆ. ಸೀಸನ್ 10ರ ಫಿನಾಲೆಯಲ್ಲಿ ಈ ರೀತಿಯಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಸಿ ವಿನಯ್ ಅವರನ್ನು ಮನೆಯಿಂದ ಹೊರಗೆ ಕರೆದುಕೊಂಡು ಬರಲಾಗಿತ್ತು. ಈ ವಾರ ನಾಮಿನೇಷನ್ ತೂಗುಗತ್ತಿಯಲ್ಲಿ ಅಂತಿಮವಾಗಿ ಸ್ಪಂದನಾ ಸೋಮಣ್ಣ, ಧ್ರುವಂತ್, ಸೂರಜ್ ಮತ್ತು ರಾಶಿಕಾ ನಿಂತಿದ್ದಾರೆ. ಈ ನಾಲ್ವರಲ್ಲಿ ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು ಎಂಬ ಕುತೂಹಲ ಮನೆ ಮಾಡಿದೆ. ಈ ನಾಲ್ವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸ್ಪರ್ಧಿಗಳು ಸದ್ಯಕ್ಕೆ ಸೇಫ್ ಆಗಿದ್ದಾರೆ.

Shwetha M