ಗಿಲ್ಲಿ ವೈಸ್ ಅಲ್ಲ ಈಗ CAPTAIN!!.. ಅಶ್ವಿನಿ ಮುಂದೆ ಗೆದ್ದ ಜಗತ್‌ ಕಿಲಾಡಿ! – ಗಿಲ್ಲಿ ದರ್ಬಾರ್‌ಗೆ ಮನೆ ಮಂದಿ ಸುಸ್ತು  

ಗಿಲ್ಲಿ ವೈಸ್ ಅಲ್ಲ ಈಗ CAPTAIN!!.. ಅಶ್ವಿನಿ ಮುಂದೆ ಗೆದ್ದ ಜಗತ್‌ ಕಿಲಾಡಿ! – ಗಿಲ್ಲಿ ದರ್ಬಾರ್‌ಗೆ ಮನೆ ಮಂದಿ ಸುಸ್ತು  

ಗಿಲ್ಲಿ ಈಗ ವೈಸ್‌ ಕ್ಯಾಪ್ಟನ್‌ ಅಲ್ಲ .. ಕ್ಯಾಪ್ಟನ್‌. ಅದೂ ಕೂಡ  ಅಶ್ವಿನಿಯನ್ನ ಸೋಲಿಸಿ ದೊಡ್ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಇದೀಗ ದೊಡ್ಮನೆಯಲ್ಲಿ ಗಿಲ್ಲಿ ದರ್ಬಾರ್‌ ಶುರುವಾಗಿದೆ.

ಇದನ್ನೂ ಓದಿ: ಹಿರಿಯೂರು ಬಸ್ ದುರಂತ ಬೆನ್ನಲ್ಲೇ ಸರ್ಕಾರ ಅಲರ್ಟ್ – ರಾತ್ರಿ ವೇಳೆ ಬಸ್‌ ಸಂಚಾರ ಸ್ಟಾಪ್?‌

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ರಲ್ಲಿ ಗಿಲ್ಲಿನಟ ಸಖತ್‌ ಹೈಲೈಟ್.‌ ದೊಡ್ಮನೆಯಲ್ಲಿ ಯಾರೇ ಕ್ಯಾಪ್ಟನ್‌ ಆದ್ರೂ ನಾನು ವೈಸ್‌ ಕ್ಯಾಪ್ಟನ್‌ ಅಂತ ಹೇಳ್ತಾ ಬಂದಿಂದ್ರು. ಗಿಲ್ಲಿ ಕ್ಯಾಪ್ಟನ್‌ ಆಗೋದನ್ನ ನೋಡ್ಬೇಕು ಅಂತ ಕ್ಯಾಪ್ಟನ್‌ ಕೂಡ ಕಾಯ್ತಾ ಇದ್ರು. ಇದೀಗ  ಗಿಲ್ಲಿ ನಟ ತಮ್ಮ ಫ್ಯಾನ್ಸ್‌ನ ಬಹುದಿನಗಳ ಕನಸನ್ನ ನನಸು ಮಾಡಿದ್ದಾರೆ. ವೈಸ್‌ ಕ್ಯಾಪ್ಟನ್‌ ಎಂದು ಹೇಳಿಕೊಳ್ಳುತ್ತಿದ್ದ ಗಿಲ್ಲಿ, ಕಡೆಗೂ 13ನೇ ವಾರದಲ್ಲಿ  ಕ್ಯಾಪ್ಟನ್‌ ಪಟ್ಟಕ್ಕೇರಿದ್ದಾರೆ. ಅದೂ ಕೂಡ ಫಿಸಿಕಲ್‌ ಟಾಸ್ಕ್‌ನಲ್ಲಿ ಗೆಲ್ಲೋದ್ರ ಮೂಲಕ.

ಬಿಗ್‌ಬಾಸ್‌ ಮನೆಯಲ್ಲಿಗಿಲ್ಲಿ ನಟ ಫಿಸಿಕಲ್‌ ಟಾಸ್ಕ್‌ ಏನೂ ಇಲ್ಲ. ಬರೀ ಮಾತು ಆಡಿಕೊಂಡು ಇಲ್ಲಿಯವರೆಗೆ ಬಂದ್ದಾರೆ. ಫಿಸಿಕಲ್‌ ಟಾಸ್ಕ್‌ ಆಡಿ ಕಂಪ್ಲೀಟ್‌ ಫೇಲ್‌ ಎಂಬ ಮಾತು ಕೇಳಿಬಂದಿತ್ತು. ಈ ವಾರ ಫ್ಯಾಮಿಲಿ ವೀಕ್‌ ಇದ್ದಿದ್ರಿಂದ ಬಿಗ್‌ಬಾಸ್‌  ಮನೆಗೆ ಬಂದ ಸ್ಪರ್ಧಿಗಳ ಮನೆಯವರ ಬಳಿ ಕ್ಯಾಪ್ಟನ್‌ ಯಾರಾಬೇಕು ಎಂದು ಸೂಚಿಸಲು ಹೇಳಿದ್ರು. ಧನುಷ್‌ ಗೌಡ ತಾಯಿ, ರಕ್ಷಿತಾ ಶೆಟ್ಟಿ ಅವರ ತಾಯಿ, ಧ್ರುವಂತ್‌ ಅವರ ಸಹೋದರ, ಅಶ್ವಿನಿ ಗೌಡ ಅವರ ತಾಯಿ, ರಘು ಪತ್ನಿ ಗ್ರೀಷ್ಮಾ ಕೂಡ ಗಿಲ್ಲಿ ಕ್ಯಾಪ್ಟನ್‌ ಆಗಬೇಕು ಎಂದು ಹೇಳಿ ಮತ ಹಾಕಿದ್ದಾರೆ. ಎಲ್ಲರೂ ಗಿಲ್ಲಿಯೇ ನಮ್ಮ ಫೇವರಿಟ್‌, ಅವರು ಹೇಗೆ ಮನೆಯನ್ನು ನಿಭಾಯಿಸುತ್ತಾರೆ ಎಂದು ನೋಡಬೇಕಿದೆ ಎಂದಿದ್ದರು. ಆದ್ರೆ ಒಂದು ವೋಟ್‌ ಮಾತ್ರ ಅಶ್ವಿನಿ ಗೌಡಗೆ ಬಂದಿತ್ತು. ಇವೆಲ್ಲದ್ರ ಮಧ್ಯೆ  ಸೂರಜ್‌, ರಕ್ಷಿತಾ ಹಾಗೂ ರಘು, ಗಿಲ್ಲಿ ಬೆನ್ನ ಹಿಂದೆ ಮಾತನಾಡಿಕೊಂಡ್ರು. ನಾಲು ವೋಟ್‌ ಬಂದಿದ್ದಕ್ಕೆ ಖುಷಿಯಾಗಿದ್ದಾನೆ, ಇವತ್ತು ಗಿಲ್ಲಿ ಮಲಗಲ್ಲ. ಗಿಲ್ಲಿ ಟಾಸ್ಕ್‌ ಆಡಿ ಕ್ಯಾಪ್ಟನ್‌ ಆಗಲ್ಲ, ಹೀಗಾದರೂ ಮಾಡೋಣ ಅಂತ ಕ್ಯಾಪ್ಟನ್‌ ಮಾಡಿದ್ದಾರೆ ಎಂದು ರಘು ಹೇಳಿದ್ರು.  ಬಳಿಕ ಸೂರಜ್‌ ಅವರು, ಗಿಲ್ಲಿ ಕ್ಯಾಪ್ಟನ್‌ ಆಗಲ್ಲ ಅಂತ ಗೊತ್ತಿತ್ತು, ಹೀಗಾಗಿ ಬಿಗ್‌ ಬಾಸ್‌ ಈ ರೀತಿ ಪ್ಲ್ಯಾನ್‌ ಮಾಡಿದ್ದಾರೆ ಎಂದು ಸೂರಜ್‌  ಬಿಗ್‌ ಬಾಸ್‌ ಮೇಲೆಯೇ ಆರೋಪ ಮಾಡಿದ್ದರು. ಇದ್ರ ಬೆನ್ನಲ್ಲೇ ಬಿಗ್‌ಬಾಸ್‌ ಟ್ವಿಸ್ಟ್‌ ಕೊಟ್ಟಿದ್ದಾರೆ. ಇದ್ರ ಪ್ರೋಮೋ ರಿಲೀಸ್‌ ಆಗಿದೆ.

ಅತ್ಯಧಿಕ ಮತಗಳಿಂದ ಆಯ್ಕೆಯಾದ ಗಿಲ್ಲಿ ಅನ್ನುತ್ತಿದ್ದಂತೆ ಗಿಲ್ಲಿ ಎಂದು ನಿಂತು ಕೈ ಮುಗಿಯಲು ಮುಂದಾಗಿದ್ದಾರೆ. ಆದ್ರೆ ಬಿಗ್‌ಬಾಸ್‌ ಗಿಲ್ಲಿ ಜೊತೆ ಅಶ್ವಿನಿ ಗೌಡ ಹೆಸರು ಕೂಡ ಹೇಳಿದ್ದಾರೆ. ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಅವರು ಕ್ಯಾಪ್ಟನ್ಸಿ ಟಾಸ್ಕ್‌ ಆಡಬೇಕು ಎಂದು ಬಿಗ್‌ ಬಾಸ್‌ ಘೋಷಣೆ ಮಾಡಿದ್ದಾರೆ. ಬಳಿಕ ಇಬ್ಬರಿಗೂ ಫಿಸಿಕಲ್‌ ಟಾಸ್ಕ್‌ ಕೊಟ್ಟಿದ್ದಾರೆ. ಈ ಟಾಸ್ಕ್‌ನಲ್ಲಿ ಗಿಲ್ಲಿನಟ ಗೆದ್ದಿದ್ದಾರೆ, ಆ ಬಳಿಕ ಗಿಲ್ಲಿ ವರಸೆಯೇ ಚೇಂಜ್‌ ಆಗಿದೆ. ದೊಡ್ಮನೆಯ  ಕ್ಯಾಪ್ಟನ್‌ ಆಗ್ತಿದ್ದಂತೆ ಗಿಲ್ಲಿ ಲುಕ್‌ ಚೇಂಜ್‌ ಮಾಡಿದ್ದಾರೆ. ಗಿಲ್ಲಿ ನಟ ಪಂಚೆ ಉಟ್ಟು, ಶರ್ಟ್‌ ಹಾಕಿ ವಿಜಯ ತಿಲಕ ಇಟ್ಟುಕೊಂಡು, ಗತ್ತು ಗಾಂಭೀರ್ಯದಿಂದ ಕ್ಯಾಪ್ಟನ್‌ ರೂಮ್‌ಗೆ ಎಂಟ್ರಿಕೊಟ್ಟಿದ್ದಾರೆ.  ಒಟ್ಟಾರೆ ಗಿಲ್ಲಿ ಫಿಸಿಕಲ್‌ ಟಾಸ್ಕ್‌ಗೆ ಫಿಟ್‌ ಇಲ್ಲ ಅಂತ ಹೇಳ್ತಿದ್ದವರ ಮುಂದೆಯೇ ಗಿಲ್ಲಿ ಟಾಸ್ಕ್‌ ಗೆದ್ದು ಕ್ಯಾಪ್ಟನ್‌ ಆಗಿದ್ದಾರೆ.

ಮತ್ತೊಂದ್ಕಡೆ ಈ ವಾರ ಕಿಚ್ಚ ಸುದೀಪ್‌ ವೀಕೆಂಡ್‌ ಶೋ ನಡೆಸುತ್ತಿಲ್ಲ. ಈ ವಾರ ಯಾರು ಶೋ ನಡೆಸ್ತಾರೆ ಅನ್ನೋ ಕ್ಯೂರಿಯಾಸಿಟಿ ಮೂಡಿತ್ತು. ಇದೀಗ ಈ ವಾರ ಡೈರೆಕ್ಟರ್‌ ಪ್ರೇಮ್‌ ಶೋ ಹೋಸ್ಟ್‌ ಮಾಡಲಿದ್ದಾರಂತೆ. ಇದಿಷ್ಟೇ ಅಲ್ಲದೆ ಈ ವಾರ ಡಬಲ್‌ ಎಲಿಮಿನೇಷನ್‌ ಕೂಡ ನಡೆಯಲಿದೆ. ಸೊ ಈ ವಾರ ಯಾರು ದೊಡ್ಮನೆಯಿಂದ ಎಲಿಮಿನೇಟ್‌ ಆಗ್ತಾರೆ ಅನ್ನೋದನ್ನ ಕಾದುನೋಡ್ಬೇಕು.

Shwetha M