ಉಪ್ಪು V/s ಸಕ್ಕರೆ.. ಹಾರ್ಟ್‌ಗೆ ಯಾವುದು  ಡೇಂಜರ್?‌ – ನಿಮ್ಮ ಹೃದಯ ಜೋಪಾನ!

ಉಪ್ಪು V/s ಸಕ್ಕರೆ.. ಹಾರ್ಟ್‌ಗೆ ಯಾವುದು  ಡೇಂಜರ್?‌ – ನಿಮ್ಮ ಹೃದಯ ಜೋಪಾನ!

ಉಪ್ಪು ಹಾಗೂ ಸಕ್ಕರೆಯನ್ನ ಒಂದಲ್ಲ ಒಂದು ರೂಪದಲ್ಲಿ ಡೈಲಿ ಸೇವಿಸ್ತೇವೆ. ಈ ಎರಡು ಪದಾರ್ಥ ಇಲ್ಲ ಅಂದ್ರೆ ಅಡುಗೆಗೆ ರುಚಿಯೂ ಇರಲ್ಲ. ಆದ್ರೆ ಇತ್ತೀಚೆಗೆ ಉಪ್ಪು ಹಾಗೂ ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋ ಮಾತು ಕೇಳಿ ಬರ್ತಿದೆ. ಇದು ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುತ್ತೆ ಎನ್ನಲಾಗ್ತಿದೆ. ಅಂದ್ಹಾಗೆ  ಸಕ್ಕರೆ ಮತ್ತು ಉಪ್ಪು ಹೃದಯದ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತವೆ.

ಇದನ್ನೂ ಓದಿ: ಮೈಸೂರು ಅರಮನೆ ಮುಂಭಾಗದಲ್ಲಿ ಬ್ಲಾ*ಸ್‌ ಕೇಸ್!‌ – ಸಾ*ವಿನ ಸಂಖ್ಯೆ 2ಕ್ಕೆ ಏರಿಕೆ

ಹೌದು, ಹೆಚ್ಚು ಸಕ್ಕರೆ ಸೇವಿಸುವವರು ಬೇಗನೆ ಹೃದಯ ಕಾಯಿಲೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯಿಂದ ರಿವೀಲ್‌ ಆಗಿದೆ. ಸಕ್ಕರೆ ಹೆಚ್ಚು ತಿಂದ್ರೆ  ಹೃದಯದ ಆಮ್ಲಜನಕದ ಬೇಡಿಕೆಯನ್ನು ಹೆಚ್ಚಿಸುವುದಲ್ಲದೇ, ಹಾರ್ಟ್‌ ಬೀಟ್‌ ಕೂಡ ಹೆಚ್ಚಾಗುತ್ತದೆ.ಇದ್ರಿಂದಾಗಿ ರಕ್ತದೊತ್ತಡ ಏರಿಳಿತಗೊಳಿಸುವುದರಿಂದಾಗಿ ಹೃದಯಾಘಾತ ಆಗುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಯಿಂದ ಬಹಿರಂಗವಾಗಿದೆ. ಇದಿಷ್ಟೇ ಅಲ್ಲದೆ, ಸಕ್ಕರೆ ಸೇವನೆಯಿಂದ ಕೊಲೆಸ್ಟ್ರಾಲ್, ಟೈಪ್ 2‌ ಡಯಾಬಿಟಿಸ್, ಪಿತ್ತಜನಕಾಂಗದ ಕಾಯಿಲೆ ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ನಂತಹ ಸಮಸ್ಯೆ ಕಾಡಬಹುದು.

ಇನ್ನು ಸೋಡಿಯಂ ಸಮೃದ್ಧವಾಗಿರುವ ಉಪ್ಪು ದೇಹಕ್ಕೆ ಅತ್ಯಗತ್ಯವಾದರೂ, ಅದನ್ನು ಹೆಚ್ಚು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಹೃದಯಕ್ಕೆ ತುಂಬಾ ಡೇಂಜರ್. ಉಪ್ಪನ್ನ ಹೆಚ್ಚು ಸೇವಿಸುವುದರಿಂದ ರಕ್ತನಾಳ ಗಟ್ಟಿಗೊಳಿಸುತ್ತದೆ. ಇದು ಹೃದಯವನ್ನು ಹೆಚ್ಚು ಕೆಲಸ ಮಾಡಲು ಒತ್ತಾಯಿಸುತ್ತದೆ. ಇದ್ರಿಂದಾಗಿ ಅಪಧಮನಿಯ ಗೋಡೆಗಳಿಗೆ ಹಾನಿಯಾಗುವುದರಿಂದ ಪ್ಲೇಕ್ ರಚನೆ ಹೆಚ್ಚಾಗುತ್ತದೆ.  ಇದ್ರಿಂದಾಗಿ ಹೃದಯಾಘಾತ, ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಇದೆ.  ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡುವ ಪ್ರಕಾರ, ಸಕ್ಕರೆಯು ವ್ಯಕ್ತಿಯ ದೈನಂದಿನ ಕ್ಯಾಲೊರಿಗಳಲ್ಲಿ 10% ಕ್ಕಿಂತ ಕಡಿಮೆಯಿರಬೇಕು ಮತ್ತು ದಿನಕ್ಕೆ 2 ಗ್ರಾಂ ಸೋಡಿಯಂ ಮೀರಬಾರದು ಎಂದು ತಿಳಿಸಿದೆ. ಹೀಗಾಗಿ ನೀವು ಆದಷ್ಟು ಉಪ್ಪು ಹಾಗೂ ಸಕ್ಕರೆಯನ್ನ ಸೇವಿಸೋದು ಕಡಿಮೆ ಮಾಡಿ.

Shwetha M