ಅಪ್ಪನಂತೆ ಹೇರ್ ಸ್ಟೈಲ್ ಮಾಡಿಕೊಂಡು ದೊಡ್ಮನೆಗೆ ಬಂದ ಮಾಳು ಮಕ್ಕಳು! – ರಘು ಕಣ್ಣೀರು ಹಾಕಿದ್ಯಾಕೆ?

ಅಪ್ಪನಂತೆ ಹೇರ್ ಸ್ಟೈಲ್ ಮಾಡಿಕೊಂಡು ದೊಡ್ಮನೆಗೆ ಬಂದ ಮಾಳು ಮಕ್ಕಳು! – ರಘು ಕಣ್ಣೀರು ಹಾಕಿದ್ಯಾಕೆ?

ಬಿಗ್‌ಬಾಸ್‌ ಮನೆಯಲ್ಲಿ ಈಗ ಸಂಭ್ರಮ ಕಳೆಗಟ್ಟಿದೆ. ಎಲ್ಲಾ ಸ್ಪರ್ಧಿಗಳ ಮನೆಯವರು ದೊಡ್ಮನೆಗೆ ಬರ್ತಿದ್ದಾರೆ. ಈಗಾಗಲೇ ಅಶ್ವಿನಿ, ಗಿಲ್ಲಿ, ಕಾವ್ಯ, ಧನುಷ್‌, ಧ್ರುವಂತ್‌, ರಕ್ಷಿತಾ, ರಾಶಿಕಾ ಮನೆಯವರು ದೊಡ್ಮನೆಗೆ ಬಂದಿದ್ದರು. ಇದೀಗ ಮಾಳು, ಹಾಗೂ ರಘು ಮನೆಯವರು ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ. ಮಾಳು ಮಕ್ಕಳ ಹೇರ್‌ಸ್ಟೈಲ್‌ ನೋಡಿ ಥ್ರಿಲ್‌ ಆಗಿದ್ದಾರೆ. ಮತ್ತೊಂದ್ಕಡೆ ರಘು ದೊಡ್ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ನಾಯಿಗೆ ಹುಷಾರಿಲ್ಲ ಎಂದು ಪ್ರಾಣಬಿಟ್ಟ ಸಹೋದರಿಯರು! – ಅಷ್ಟಕ್ಕೂ ಆಗಿದ್ದೇನು?

ಬಿಗ್ ಬಾಸ್ ಮನೆಯಲ್ಲಿ ನೀಡಲಾದ ಚಾಲೆಂಜ್ ವೇಳೆ ಮಾಳುಗೆ ಭಿನ್ನ ಹೇರ್​​ಸ್ಟೈಲ್ ಮಾಡಲಾಗಿದೆ. ತಲೆಯ ಮಧ್ಯದಲ್ಲಿ ಮಾತ್ರ ಕೂದಲನ್ನು ಇಡಲಾಗಿದೆ. ಈಗ ಮಾಳು ಮಕ್ಕಳು ಅಪ್ಪನ ರೀತಿಯೇ ಹೇರ್‌ಸೈಟಲ್‌ ಮಾಡಿಸಿಕೊಂಡು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಮಕ್ಕಳ ಹೇರ್‌ಸ್ಟೈಲ್‌ ನೋಡಿ ಮಾಳು ಖುಷಿಪಟ್ಟಿದ್ದಾರೆ. ಈ ವೇಳೆ ಮಾಳು ಪತ್ನಿ ಕೂಡ ಭಾವುಕರಾಗಿದ್ದಾರೆ. ಬಳಿಕ ಇಬ್ಬರು ಹಿತಲಕ ಕರಿಬೇಡ ಮಾವ ಅಂತ ಹಾಡಿದ್ದಾರೆ. ಗಿಲ್ಲಿ ಸೇರಿದಂತೆ ಮನೆಯ ಉಳಿದ ಸದಸ್ಯರು ಮಕ್ಕಳನ್ನು ಮುದ್ದಾಡಿದ್ದಾರೆ.

ಮತ್ತೊಂದ್ಕಡೆ  ದೊಡ್ಮನೆಗೆ ರಘು ಅವರ ಪತ್ನಿ ಹಾಗೂ ಮಗ ಬಂದಿದ್ದಾರೆ. ಫ್ಯಾಮಿಲಿ ಕಂಡು ರಘು ಅವರು ಭಾವುಕರಾಗಿದ್ದಾರೆ. ಇದೇ ವೇಳೆ ರಘು ಅವರ ಪತ್ನಿ ಬರ್ತ್‌ಡೇ ಇದ್ದ ಕಾರಣ , ಕೇಕ್‌ ಕಟ್‌ ಮಾಡಿಸಿದ್ದಾರೆ ಬಿಗ್‌ ಬಾಸ್‌. ಈ ವೇಳೆ ಇದು ನನ್ನ ಮರೆಯಲಾರದ ದಿನ ಎಂದು ಹೇಳಿ ಬಿಗ್‌ ಬಾಸ್‌ಗೆ ಧನ್ಯವಾದ ಹೇಳಿದ್ದಾರೆ.

ಒಟ್ಟಾರೆಯಾಗಿ ಈ ವಾರ ತಮ್ಮ ಮನೆಯವರನ್ನು ನೋಡಿ ಕಣ್ತುಂಬಿಸಿಕೊಂಡಿದ್ದಾರೆ ಸ್ಪರ್ಧಿಗಳು. ವೀಕ್ಷಕರು ಕೂಡ ಫುಲ್‌ ಖುಷ್‌ ಆಗಿದ್ದಾರೆ. ಇದರ ಜೊತೆಗೆ ಒಂದು ಟಾಸ್ಕ್‌ ಕೂಡ ಬಿಗ್‌ ಬಾಸ್‌ ನೀಡಿದೆ. ಮನೆಯ ಮುಂದಿನ ಕ್ಯಾಪ್ಟನ್‌ ಯಾರಾಗಬೇಕು ಎಂಬ ನಿರ್ಧಾರ ಕೂಡ ಈ ಕುಟುಂಬ ಸದಸ್ಯರ ಆಯ್ಕೆಯ ಮೇಲಿದೆ.  ಇದೀಗ ಬಹುತೇಕ ಆಯ್ಕೆ ಗಿಲ್ಲಿ ನಟ ಅವರೇ ಆಗಿದ್ದಾರೆ.ಅಶ್ವಿನಿ ಗೌಡ ಅವರ ತಾಯಿ ಗಿಲ್ಲಿಯನ್ನ ಸೆಲೆಕ್ಟ್‌ ಮಾಡಿ, ಗಿಲ್ಲಿ ಈ ಮನೆಯ ಕ್ಯಾಪ್ಟನ್‌ ಆಗಿ ಏನೆಲ್ಲಾ ಕೆಲಸ ಮಾಡಿಸುತ್ತಾನೆ? ಹೇಗೆಲ್ಲಾ ಮ್ಯಾನೇಜ್ ಮಾಡುತ್ತಾನೆ ಎಂಬುದನ್ನು ನೋಡಬೇಕು, ಅದಕ್ಕಾಗಿ ಗಿಲ್ಲಿಯನ್ನು ಸೆಲೆಕ್ಟ್‌ ಮಾಡುತ್ತೇನೆ ಎಂದಿದ್ದಾರೆ.

ಗಿಲ್ಲಿ ಕ್ಯಾಪ್ಟನ್‌?

ಇನ್ನು ಮಾಳು ಅವರ ಪತ್ನಿ ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. , ರಕ್ಷಿತಾ ಅವರ ತಾಯಿ ಕೂಡ ಗಿಲ್ಲಿಗೆ ತಮ್ಮ ಮತವನ್ನು ಹಾಕಿದ್ದಾರೆ. ಧನುಷ್‌ ತಾಯಿ ವೋಟ್ ಕೂಡ ಗಿಲ್ಲಿಗೆ ಸಿಕ್ಕಿದೆ. “ನನಗೆ ಅಶ್ವಿನಿ ಗೌಡ ಕೂಡ ಇಷ್ಟ. ಆದರೆ, ಗಿಲ್ಲಿ ಸ್ವಲ್ಪ ಜಾಸ್ತಿನೇ ಇಷ್ಟ. ಅವರ ಕಾಮಿಡಿ ನನಗೆ ತುಂಬಾ ಇಷ್ಟ.

ಗಿಲ್ಲಿ ಕ್ಯಾಪ್ಟನ್‌ ಆಗಲಿ” ಎಂದಿದ್ದಾರೆ ಧನುಷ್‌ ತಾಯಿ.ಧ್ರುವಂತ್‌ ಅವರ ಕುಟುಂಬದವರು ಕೂಡ ಗಿಲ್ಲಿ ಫೋಟೋವನ್ನ ಆಯ್ಕೆ ಮಾಡಿ, ಬೋರ್ಡ್‌ನಲ್ಲಿ ಇರಿಸಿದ್ದಾರೆ. ಇಲ್ಲಿ ಹೆಚ್ಚು ಗಿಲ್ಲಿ ಅವರ ಫೋಟೋಗಳೇ ಇರುವುದರಿಂದ, ಅವರೇ ಕ್ಯಾಪ್ಟನ್‌ ಆಗುವ ಸಾಧ್ಯತೆ ಇದೆ.

Shwetha M