50,000 ಬಳಿಕ ಭೂಮಿ ಸಮೀಪ ಬರಲಿದೆ ಅಪರೂಪದ ಧೂಮಕೇತು – ನೋಡಲು ಮಿಸ್ ಮಾಡಲೇಬೇಡಿ..!

50,000 ಬಳಿಕ ಭೂಮಿ ಸಮೀಪ ಬರಲಿದೆ ಅಪರೂಪದ ಧೂಮಕೇತು – ನೋಡಲು ಮಿಸ್ ಮಾಡಲೇಬೇಡಿ..!

ಕಳೆದ 50,000 ವರ್ಷಗಳ ಹಿಂದೆ  ಸೌರ ವ್ಯೂಹ ಸಮೀಪದ ಹೂರ್ಟ್‌ ಕ್ಲೌಡ್‌ ಕಡೆಯಿಂದ ಬಂದಿದೆ ಎನ್ನಲಾದ ಹಸಿರು ಧೂಮಕೇತು, ಜನವರಿ ಅಂತ್ಯದಲ್ಲಿ ಹಾಗೂ ಫೆಬ್ರವರಿ ಆರಂಭದಲ್ಲಿ ಮತ್ತೆ ಕಾಣಿಸಿಕೊಳ್ಳಲಿದೆ ಎಂದು ನಾಸಾ ಹೇಳಿದೆ.

ಈ ಧೂಮಕೇತುವಿಗೆ ಸಿ/2022 ಇ3(ಜೆಟಿಎಫ್) ಎಂದು ನಾಮಕರಣ ಮಾಡಲಾಗಿದೆ. 2022ರ ಮಾರ್ಚ್‌ನಲ್ಲಿ ಗುರು ಗ್ರಹದ ಸಮೀಪ ಈ ಧೂಮಕೇತುವನ್ನು ಝಿಕಿ ಟ್ರಾನ್ಸಿಯಂಟ್‌ ಫೆಸಿಲಿಟಿ ವಿಜ್ಞಾನಿಗಳು ಪತ್ತೆ ಮಾಡಿದ್ದರು. ಈ ಧೂಮುಕೇತುವಿನ ಸುತ್ತಳತೆ ಸುಮಾರು 1 ಕಿ.ಮೀ. ಇದೆ ಎಂದು ಅಂದಾಜಿಸಲಾಗಿದೆ. ಇದು ನಿಯೋವೈಸ್‌ ಧೂಮಕೇತುಗೆ ಹೋಲಿಸಿದರೆ ಗಾತ್ರದಲ್ಲಿ ಚಿಕ್ಕದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಸಮುದ್ರದ ಆಳಕ್ಕೆ ನೌಕೆ ಕಳಿಸಿಕೊಡಲು ಸಿದ್ಧತೆ ಪೂರ್ಣ – ಸದ್ಯದಲ್ಲೇ ಸಾಗರಯಾನಕ್ಕೆ ಗ್ರೀನ್ ಸಿಗ್ನಲ್

ಕೊನೆಯ ಬಾರಿ ಈ ಧೂಮಕೇತು ಭೂಮಿ ಸಮೀಪ ಹಾದು ಹೋದಾಗ ಮಾನವರು ಇನ್ನೂ ಶಿಲಾಯುಗದಲ್ಲಿದ್ದರು. ಇದಾದ ನಂತರ ಸೌರ ವ್ಯೂಹ ಸಮೀಪ ಈ ಧೂಮಕೇತು ಕಾಣಿಸಿಕೊಂಡಿರಲಿಲ್ಲ. ಇದೀಗ ಹಸಿರು ಧೂಮಕೇತು ಫೆಬ್ರವರಿ 1 ಮತ್ತು 2 ರಂದು ಭೂಮಿ ಸಮೀಪ ಹಾಗೂ ಮತ್ತು ಜನವರಿ 12 ರಂದು ಸೂರ್ಯನ ಸಮೀಪ ಕಾಣಿಸಿಕೊಳ್ಳಲಿದೆ.

ಜ.21-22ರಂದು ಉತ್ತರಾರ್ಧ ಗೋಳದಲ್ಲಿ ಇರುವುವವರಿಗೆ ಈ ಧೂಮಕೇತು ಕಾಣಲಿದೆ. ಫೆ.1ರಂದು ಈ ಧೂಮಕೇತು ಭೂಮಿ ಸಮೀಪ ಕಾಣಿಸಿಕೊಳ್ಳಲಿದೆ. ವಾತಾವರಣ ತಿಳಿಯಾದ ಪ್ರದೇಶದಲ್ಲಿ, ಯಾವುದೇ ಮಾಲಿನ್ಯ ಇಲ್ಲದ ಪ್ರದೇಶದಲ್ಲಿ ಧೂಮಕೇತು ಸ್ಪಷ್ಟವಾಗಿ ಬರಿಗಣ್ಣಿಗೆ ಕಾಣಿಸಲಿದೆ. ಭೂಮಿ ಸಮೀಪ ಬಂದಾಗ ಈ ಧೂಮಕೇತು ಮತ್ತಷ್ಟು ಪ್ರಕರವಾಗಿ ಕಾಣಲಿದೆ. ಫೆ.10ರಂದು ಈ ಧೂಮಕೇತು ಮಂಗಳನ ಸಮೀಪ ಕಾಣಿಸಿಕೊಳ್ಳಲಿದೆ ಎಂದು ಝಿಕಿ ಟ್ರಾನ್ಸಿಯಂಟ್‌ ಫೆಸಿಲಿಟಿ ವಿಜ್ಞಾನಿಗಳು ತಿಳಿಸಿದ್ದಾರೆ.

ಭೂಮಿ ಸಮೀಪ ಹಾದುಹೋಗುವ ಈ ಧೂಮಕೇತು ಅನ್ನು ಬರಿಗಣ್ಣಿನಿಂದ ನೋಡಬಹುದು. ಆದರೆ ವಾತಾವರಣ ಸೂಕ್ತವಲ್ಲದಿದ್ದರೆ ಮಂದವಾಗಿ ಕಾಣಬಹುದು. ಹಾಗಾಗಿ ಟೆಲಿಸ್ಕೋಪ್‌ ಅಥವಾ ಬೈನಾಕ್ಯುಲರ್‌ ಸಹಾಯದಿಂದ ಸ್ಪಷ್ಟವಾಗಿ ಧೂಮಕೇತು ಕಾಣಲಿದೆ. ಮಂಜು ಮತ್ತು ಧೂಳಿನಿಂದ ಕೂಡಿರುವ ಈ ಧೂಮಕೇತು ಅನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

suddiyaana