ಎಲ್ಲರಿಗೂ ಗಿಲ್ಲಿನೇ ಫೇವರಿಟ್! – ಗಿಲ್ಲಿ ಕ್ರೇಜ್ ನೋಡಿ ರಘು, ಸೂರಜ್‌ಗೆ ಶುರುವಾಯ್ತು ಹೊಟ್ಟೆಕಿಚ್ಚು?

ಬಿಗ್‌ಬಾಸ್ ಮನೆಯಲ್ಲಿ ಫ್ಯಾಮಿಲಿ ವೀಕ್ ನಡಿತಾ ಇದೆ. ಸ್ಪರ್ಧಿಗಳ ಮನೆಯವರು ದೊಡ್ಮನೆಗೆ ಆಗಮಿಸಿದ್ದಾರೆ. ಎಲ್ಲರೂ ಮನೆಯವರೊಂದಿಗೆ ಕಾಲ ಕಳಿತಾ ಇದ್ದಾರೆ. ಆದ್ರೆ ಬಹುತೇಕ ಎಲ್ಲಾ ಸ್ಪರ್ಧಿಗಳ ಮನೆಯವರಿಗೆ ಗಿಲ್ಲಿನೇ ಫೇವರಿಟ್. ಎಲ್ಲರೂ ಗಿಲ್ಲಿಯನ್ನೇ ಹೊಗಳುತ್ತಿದ್ದಾರೆ. ಇದೀಗ ಗಿಲ್ಲಿನಟನ ಕ್ರೇಜ್ ನೋಡಿ ರಘು, ಸೂರಜ್ ಗೆ ಹೊಟ್ಟೆಕಿಚ್ಚು ಶುರುವಾಗಿದೆ.
ಇದನ್ನೂ ಓದಿ: ಮೈಸೂರಿನಲ್ಲಿ ಹೀಲಿಯಂ ಗ್ಯಾಸ್ ಸ್ಟೋ*ಟ ಆಕಸ್ಮಿಕವೋ, ಉದ್ದೇಶಪೂರ್ವಕವೋ? – ಸಲೀಂ ಹಿಸ್ಟರಿ ಕೆದಕಲು ಮುಂದಾದ ಖಾಕಿ!
ಬಿಗ್‌ಬಾಸ್ ಮನೆಯ ಒಳಗೂ, ಹೊರಗೂ ಗಿಲ್ಲಿ ಹವಾ ಜೋರಾಗಿದೆ. ಗಿಲ್ಲಿನಟನಿಗೆ ದೊಡ್ಡ ಫ್ಯಾನ್ಸ್ ಬಳಗವೇ ಇದೆ. ಅನೇಕ ಸ್ಪರ್ಧಿಗಳ ಕುಟುಂಬದವರಿಗೂ ಗಿಲ್ಲಿನೇ ಇಷ್ಟ. ಗಿಲ್ಲಿ ದೊಡ್ಮನೆಯಲ್ಲಿ ಚೆನ್ನಾಗಿ ಆಟ ಆಡುತ್ತಿದ್ದಾರೆ. ಅವರು ಕ್ಯಾಪ್ಟನ್ ಆಗಿಯೇ ಇಲ್ಲ. ಈ ವಾರ ಅವರಿಗೆ ಕ್ಯಾಪ್ಟನ್ ಆಗುವ ಚಾನ್ಸ್ ಸಿಗೋ ಸಾಧ್ಯತೆ ಇದೆ. ಸ್ಪರ್ಧಿಗಳ ಮನೆಯವರು ಬಹುತೇಕರು ಗಿಲ್ಲಿಯೇ ಕ್ಯಾಪ್ಟನ್ ಆಗಲಿ ಎಂದು ಬಯಸುತ್ತಿದ್ದಾರೆ. ಈ ಬಗ್ಗೆ ಸೂರಜ್, ರಘು ಪ್ರಶ್ನೆ ಎತ್ತಿದ್ದಾರೆ.
ಎಲ್ಲಾ ಸದಸ್ಯರ ಕುಟುಂಬದವರಿಗೆ ಸ್ಪರ್ಧಿಗಳಿಗೆ ಗಿಲ್ಲಿಯೇ ಫೇವರಿಟ್. ಈ ವಿಷಯ ಸ್ಪಷ್ಟವಾಗಿ ಕಾಣುತ್ತಿದೆ. ಬಂದ ಎಲ್ಲರೂ ಗಿಲ್ಲಿಯನ್ನು ಹೊಗಳುತ್ತಿದ್ದಾರೆ. ಗಿಲ್ಲಿ ಕಾಮಿಡಿ ಇಷ್ಟ ಆಗುತ್ತಿದೆ ಎಂದು ಹೇಳುತ್ತಿದ್ದಾರೆ. ಗಿಲ್ಲಿಯಲ್ಲಿ ಇಷ್ಟ ಆಗುವ ಗುಣ ಹೇಳುತ್ತಿದ್ದಾರೆ. ಗಿಲ್ಲಿ ಇಲ್ಲದೆ ಇದ್ದಿದ್ದರೆ ಇಡೀ ಮನೆ ಡಲ್ ಆಗುತ್ತಿತ್ತು ಎಂದು ಕೆಲವರು ನೇರವಾಗಿ ಹೇಳಿದ್ದು ಇದೆ. ಹೀಗಾಗಿ, ಕ್ಯಾಪ್ಟನ್ ಯಾರಾಗಬೇಕು ಎಂದು ಹೇಳಿದರೆ ಬಹುತೇಕರು ಗಿಲ್ಲಿ ಹೆಸರು ತೆಗೆದುಕೊಂಡಿದ್ದಾರೆ.
ಈ ವಿಷಯದ ಬಗ್ಗೆ ಚರ್ಚೆ ನಡೆದಿದೆ. ರಘು ಹಾಗೂ ಸೂರಜ್ ಈ ಬಗ್ಗೆ ಮಾತನಾಡಿಕೊಂಡಿದ್ದಾರೆ. ಗಿಲ್ಲಿ ಇವತ್ತು ಮಲಗೋದಿಲ್ಲ. ಈಗಾಗಲೇ ನಾಲ್ಕು ವೋಟ್ ಸಿಕ್ಕಿದೆ. ಅವನು ಗೇಮ್ ಆಡಿಯಂತೂ ಕ್ಯಾಪ್ಟ್ ಆಗಲ್ಲ, ಹೀಗಾದರೂ ಮಾಡೋಣ ಅಂತ ಎಂದರು ರಘು. ಆಗ ಸೂರಜ್ ಅವರು, ಬಿಗ್ ಬಾಸ್ ಪ್ಲ್ಯಾನ್ ಹಾಕಿದಾರೆ ಎಂದರು. ಇದು ಸರಿ ಅಲ್ಲ ಎಂದು ವೀಕ್ಷಕರು ಹೇಳಿದ್ದಾರೆ.ಈ ಮೊದಲು ವೋಟಿಂಗ್ ಮೂಲಕ ಧನುಷ್, ಕಾವ್ಯಾ ಕೂಡ ಕ್ಯಾಪ್ಟನ್ ಆಗಿದ್ದಾರೆ.

ನೋಡಿರಿ

