MIನಲ್ಲಿ ಬ್ಯಾಟಿಂಗ್ ಗಷ್ಟೇ ರೋಹಿತ್ – ಪಾಂಡ್ಯ ಕ್ಯಾಪ್ಟನ್ಸಿಯೇ ತಲೆ ನೋವಾಯ್ತಾ?
ಸ್ಟಾರ್ಸ್ ದಂಡು.. 6ನೇ ಕಪ್ ಗೆಲ್ತಾರಾ?

MIನಲ್ಲಿ ಬ್ಯಾಟಿಂಗ್ ಗಷ್ಟೇ ರೋಹಿತ್ – ಪಾಂಡ್ಯ ಕ್ಯಾಪ್ಟನ್ಸಿಯೇ ತಲೆ ನೋವಾಯ್ತಾ?ಸ್ಟಾರ್ಸ್ ದಂಡು.. 6ನೇ ಕಪ್ ಗೆಲ್ತಾರಾ?

ಐಪಿಎಲ್ ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ 6ನೇ ಟ್ರೋಫಿ ಗೆದ್ದು ಚರಿತ್ರೆ ಬರೆಯೋ ಟಾರ್ಗೆಟ್​ನಲ್ಲಿದೆ. ಹೀಗಾಗೇ ಮಿನಿ ಆಕ್ಷನ್​ಗೂ ಮುನ್ನವೇ ಇಬ್ಬರು ಸ್ಟಾರ್ ಆಟಗಾರರನ್ನ ಟ್ರೇಡಿಂಗ್ ಮಾಡಿಕೊಂಡಿತ್ತು. ಶಾರ್ದೂಲ್ ಠಾಕೂರ್ ಮತ್ತು ಶೆರ್ಫೇನ್ ರುದರ್ಫೋರ್ಡ್​ರನ್ನ ಖರೀದಿ ಮಾಡಿತ್ತು. ಹಾಗೇ ಅತೀ ಕಡಿಮೆ ಬಜೆಟ್ ಅಂದ್ರೆ 2.75 ಕೋಟಿ ರೂಪಾಯಿ ಬ್ಯಾಲೆನ್ಸ್​ನೊಂದಿಗೆ ಮಿನಿ ಆಕ್ಷನ್​ನಲ್ಲಿ ಐವರನ್ನ ಖರೀದಿ ಮಾಡಿತ್ತು. ಕ್ವಿಂಟನ್ ಡಿಕಾಕ್​ಗೆ 1 ಕೋಟಿ ಕೊಟ್ಟಿದ್ದು ಬಿಟ್ರೆ ಉಳಿದಂತೆ ನಾಲ್ವರನ್ನ ತಲಾ 30 ಲಕ್ಷ ರೂಪಾಯಿಯಂತೆ ಬೇಸ್​ ಪ್ರೈಸ್​ಗೆ ಖರೀದಿ ಮಾಡಿದೆ. ಟೋಟಲಿ ಬ್ಯಾಟಿಂಗ್ ಹಾಗೇ ಬೌಲಿಂಗ್​ನಲ್ಲಿ ಕ್ವಾಲಿಟಿ ಪ್ಲೇಯರ್​​ಗಳೇ ಇರೋದ್ರಿಂದ 2026ರ ಐಪಿಎಲ್​ನಲ್ಲಿ ಮೋಸ್ಟ್ ಡೇಂಜರಸ್ ಟೀಂ ಆಗಿ ಕಾಣ್ತಿದೆ.

ಇದನ್ನೂ ಓದಿ : ವೈಭವ್ ಸೂರ್ಯವಂಶಿಯನ್ನ ಭಾರತ ತಂಡಕ್ಕೆ ಕರೆತನ್ನಿ – ಕಾಂಗ್ರೆಸ್ ಸಂಸದ ಶಶಿ ತರೂರ್

ಮುಂಬೈ ತಂಡದಲ್ಲಿದೆ ಸ್ಟಾರ್ ಆಟಗಾರರ ದಂಡು!

ಐಪಿಎಲ್ ನಲ್ಲಿ ಪ್ಲೇಯರ್ಸ್ ಮತ್ತು ಪರ್ಫಾಮೆನ್ಸ್ ವಿಚಾರದಲ್ಲಿ ಮುಂಬೈ ಇಂಡಿಯನ್ಸ್ ಯಾವಾಗ್ಲೂ ಟಾಪ್​ನಲ್ಲೇ ಇರುತ್ತೆ. ಯಾಕಂದ್ರೆ ಎಂಐ ಪರ ಘಟಾನುಘಟಿ ಪ್ಲೇಯರ್​ಗಳೇ ಕಣಕ್ಕಿಳಿತಿದ್ದಾರೆ. ಅಂಬಾನಿ ಫ್ಯಾಮಿಲಿ ಒಡೆತನದ ಈ ಫ್ರಾಂಚೈಸಿಯಲ್ಲಿ ಸ್ಟಾರ್​ಡಂಗೇನೂ ಕೊರತೆ ಇಲ್ಲ. ಌಂಡ್ ಅಟ್​ಪ್ರಸೆಂಟ್ ಟೀ ಇಂಡಿಯಾ ಪರ ಆಡುವಂತ ಆಟಗಾರರ ದಂಡೇ ಮುಂಬೈ ಪಡೆಯಲ್ಲಿದೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ ಹಾಗೇ ಜಸ್ಪ್ರೀತ್ ಬುಮ್ರಾ ಮೆನ್ ಇನ್ ಬ್ಲ್ಯೂ ಜೆರ್ಸಿಯಲ್ಲಿ ಪವರ್ ಶೋ ತೋರಿಸುತ್ತಿದ್ದಾರೆ. ಸದ್ಯಕ್ಕೆ ಸೂರ್ಯನ್ನ ಬಿಟ್ರೆ ಉಳಿದವ್ರೆಲ್ಲಾ ನೆಕ್ಸ್​ಟ್ ಲೆವೆಲ್ ಪರ್ಫಾಮೆನ್ಸ್ ಕೊಡ್ತಿದ್ದಾರೆ. ಅದ್ಭುತ ಫಾರ್ಮ್​ನಲ್ಲಿದ್ದಾರೆ. ಬಹುಶಃ ಐಪಿಎಲ್ ವೇಳೆಗೆ ಸೂರ್ಯ ಕೂಡ ಕಂ ಬ್ಯಾಕ್ ಮಾಡಿದ್ರೆ ಮುಂಬೈಗೆ ಮತ್ತಷ್ಟು ಬಲ ಬಂದಂತಾಗುತ್ತೆ. ಇವ್ರಿಷ್ಟೇ ಅಲ್ಲದೆ ಬಿಗ್ ಬ್ರೇಕ್ ಥ್ರ್ಯೂ ತಂದುಕೊಡೋ ಫಾರಿನ್ ಪ್ಲೇಯರ್ಸ್ ಕೂಡ ಮುಂಬೈ ತಂಡದಲ್ಲಿದ್ದಾರೆ. ಹೀಗಾಗಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫಿನಿಶರ್ ವಿಭಾಗದಲ್ಲೂ ಮುಂಬೈ ಬಲಿಷ್ಠವಾಗಿದೆ. ಟಾಪ್ ಆರ್ಡರ್ ನಲ್ಲಿ ರೋಹಿತ್ ಶರ್ಮಾ ಮತ್ತು ರಿಯಾನ್ ರಿಕಲ್ಟನ್ ಇನ್ನಿಂಗ್ಸ್ ಆರಂಭ ಮಾಡ್ತಾರೆ. ಲಾಸ್ಟ್ ಸೀಸನ್ ವಿಲ್ ಜಾಕ್ಸ್ 3ನೇ ಕ್ರಮಾಂಕದಲ್ಲಿ ಬಂದಿದ್ರು. ಬಟ್ ಅಷ್ಟು ಇಂಪ್ಯಾಕ್ಟ್ ಮಾಡಿಲ್ಲ. ಸೋ ಈ ಸಲ ಯಾವ ಸ್ಲಾಟ್​ಗೆ ಕಳಿಸ್ತಾರೆ ನೋಡ್ಬೇಕು. ನಂತ್ರ ನೆಕ್ಸ್​ಟ್ ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಹಾಗೇ ರುದರ್ಫೋರ್ಡ್  ಬ್ಯಾಟಿಂಗ್ ಕಂಟಿನ್ಯೂ ಮಾಡ್ತಾರೆ. ಆಲ್​ರೌಂಡರ್ ಗಳಾಗಿ ಹಾರ್ದಿಕ್ ಪಾಂಡ್ಯ ಜೊತೆ ಮಿಚೆಲ್ ಸ್ಯಾಂಟ್ನರ್ ಅವಕಾಶ ಪಡಿಬೋದು. ಹಾಗೇ ಜಸ್ಪ್ರೀತ್ ಬುಮ್ರಾ, ಮಯಾಂಕ್ ಮಾರ್ಕಂಡೆ, ಟ್ರೆಂಟ್ ಬೌಲ್ಟ್ ಬೌಲಿಂಗ್ ವಿಭಾಗವನ್ನ ಲೀಡ್ ಮಾಡ್ತಾರೆ. ಉಳಿದಂತೆ ಅಶ್ವನಿ ಕುಮಾರ್​ರನ್ನ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಬೋದು. ಬಟ್ ಲಾಸ್ಟ್ ಸೀಸನ್​ನಲ್ಲಿ ರೋಹಿತ್ ಶರ್ಮಾರನ್ನ ಇಂಪ್ಯಾಕ್ಟ್ ಪ್ಲೇಯರ್ ಆಗಿ ಫೀಲ್ಡಿಂಗ್ ಟೈಮಲ್ಲಿ ಕೂರಿಸಿದ್ದಕ್ಕೆ ಅಭಿಮಾನಿಗಳು ಅಸಮಾಧನಗೊಂಡಿದ್ರು. ಸೋ ಈ ಸಲ ಏನ್ ಮಾಡ್ತಾರೆ ಅನ್ನೋ ಕುತೂಹಲವೂ ಇದೆ. ಯಾಕಂದ್ರೆ ರೋಹಿತ್ ಆಲ್ರೆಡಿ ಆಸೀಸ್, ಸೌತ್ ಆಫ್ರಿಕಾ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಹಾಗೇ ಬುಧವಾರ ವಿಜಯ್ ಹಜಾರೆಯ ಮೊದಲ ಮ್ಯಾಚಲ್ಲಿ 155 ರನ್ಸ್ ಹೊಡೆದು ತಮ್ಮನ್ನ ಹಿಟ್​ಮ್ಯಾನ್ ಅನ್ನೋದು ಇದಕ್ಕೇ ಅನ್ನೋದನ್ನ ತೋರಿಸಿದ್ರು. ಸೋ ರೋಹಿತ್​ರನ್ನ ಫ್ರಾಂಚೈಸಿ ನೆಗ್ಲೆಕ್ಟ್ ಮಾಡುವಂತಿಲ್ಲ. ಹೀಗಿದ್ರೂ ಎಂಐಗೆ ಇರೋದು ಒಂದೇ ಟೆನ್ಷನ್.

ಕಳೆದ 2 ವರ್ಷಗಳಿಂದ ಕ್ಯಾಪ್ಟನ್ಸಿಯದ್ದೇ ಗೊಂದಲ!

ಮುಂಬೈ ತಂಡದಲ್ಲಿ ಎಲ್ಲವೂ ಚೆನ್ನಾಗೇ ಇದ್ರೂ ಕ್ಯಾಪ್ಟನ್ಸಿಯದ್ದೇ ಸ್ವಲ್ಪ ಗೊಂದಲ ಇತ್ತು. ಅಂದ್ರೆ 2024ರಲ್ಲಿ ರೋಹಿತ್​ರನ್ನ ದಿಢೀರ್ ಅಂತಾ ಕ್ಯಾಪ್ಟನ್ಸಿಯಿಂದ ಇಳಿಸಿ ಹಾರ್ದಿಕ್​ ಪಾಂಡ್ಯರನ್ನ ನಾಯಕನನ್ನಾಗಿ ನೇಮಿಸಿದ್ದಕ್ಕೆ ಅಸಮಾಧಾನ ಸ್ಫೋಟಗೊಂಡಿತ್ತು. ಬಟ್ ಲಾಸ್ಟ್ ಸೀಸನ್ ಈ ಅಸಮಾಧಾನ ಸ್ವಲ್ಪ ದೂರವಾದಂತೆ ಇತ್ತು. ಹಾಗೇ ಮುಂಬೈ ಪ್ಲೇಆಫ್​ಗೂ ಕಾಲಿಟ್ಟಿತ್ತು.

Shantha Kumari