ಅಬ್ಬಬಾ.. ಬೈಕ್‌ ಸೀಟ್‌ನಲ್ಲಿತ್ತು  57 ಲಕ್ಷ ಹಣ! – ಸ್ಮಗ್ಲರ್‌ ಪ್ಲ್ಯಾನ್‌ಗೆ ಪೊಲೀಸರೇ ಶಾಕ್!‌

ಅಬ್ಬಬಾ.. ಬೈಕ್‌ ಸೀಟ್‌ನಲ್ಲಿತ್ತು  57 ಲಕ್ಷ ಹಣ! – ಸ್ಮಗ್ಲರ್‌ ಪ್ಲ್ಯಾನ್‌ಗೆ ಪೊಲೀಸರೇ ಶಾಕ್!‌

ವಾಹನ ತಪಾಸಣೆ ವೇಳೆ ಬೈಕ್‌ ಟ್ಯಾಂಕ್‌ನಲ್ಲಿ ಲಕ್ಷಾಂತರ ರೂಪಾಯಿ ಪತ್ತೆಯಾಗಿರುವ ಘಟನೆ ತಮಿಳುನಾಡು-ಕೇರಳ ಗಡಿಯಲ್ಲಿರುವ ವೇಲಂತವಲಂನಲ್ಲಿ ನಡೆದಿದೆ. ಇದೀಗ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ಮದುವೆಯಾದ 27 ದಿನದಲ್ಲೇ ಮಸಣ ಸೇರಿದ ನವವಧು! – ಗಂಡನೇ ಹೆಂಡ್ತಿ ಜೀವ ತೆಗೆದ್ನಾ?

ತಮಿಳುನಾಡು-ಕೇರಳ ಗಡಿಯಲ್ಲಿರುವ ವೇಲಂತವಲಂನಲ್ಲಿ ಟ್ರಾಫಿಕ್‌ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಕೇರಳಕ್ಕೆ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಇದ್ದಕ್ಕಿದ್ದಂತೆ ತನ್ನ ಬೈಕನ್ನು ತಿರುಗಿಸಿ ವಿರುದ್ಧ ದಿಕ್ಕಿನಲ್ಲಿ ಪರಾರಿಯಾಗಲು ಪ್ರಯತ್ನಿಸುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಆತನ ವರ್ತನೆ ನೋಡಿ ಅನುಮಾನಗೊಂಡ ಪೊಲೀಸರು ಚೇಸ್‌ ಮಾಡಿ ಹಿಡಿದಿದ್ದಾರೆ. ಈ ವೇಳೆ ಆತನನ್ನ ವಿಚಾರಣೆ ನಡೆಸಿದ್ದು, ಸರಿಯಾದ ವಿವರಣೆ ನೀಡದ ಕಾರಣ, ಪೊಲೀಸರು ಅವರ ವಾಹನವನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಬರೋಬ್ಬರಿ 57 ಲಕ್ಷ ನಗದು ಹಣ ಪತ್ತೆಯಾಗಿದೆ. ಆರೋಪಿಯನ್ನ ಕೇರಳದ ಮಲಪ್ಪುರಂ ಮೂಲದ ಶಬೀಕ್ ಎಂದು ಗುರುತಿಸಲಾಗಿದೆ. ಆತ ಆಭರಣ ವ್ಯಾಪಾರಿ ಎಂದು ತನಿಖೆ ವೇಳೆ ಗೊತ್ತಾಗಿದೆ.

ಬೈಕ್ಸೀಟ್ರಹಸ್ಯ ರಿವೀಲ್‌ ಆಗಿದ್ಹೇಗೆ?

ಪೊಲೀಸರಿಗೆ ಆರಂಭದಲ್ಲಿ ಅನುಮಾನಾಸ್ಪದವಾಗಿ ಏನೂ ಸಿಗದಿದ್ದರೂ, ಬೈಕ್‌ ಸೀಟ್‌ಅನ್ನು ಬಡಿದಾಗ ಅದರಿಂದ ಡಿಫರೆಂಟ್‌ ಆದ ಶಬ್ದ ಕೇಳಿ ಬಂದಿತ್ತು. ಇದರಿಂದಾಗಿ ಸೀಟ್‌ಅನ್ನು ಕತ್ತರಿಸಿ ನೋಡಿದಾಗ ಅದರಲ್ಲಿ ಬಚ್ಚಿಟ್ಟಿದ್ದ ಹಣದ ಬಂಡಲ್‌ಗಳು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅದಾದ ಬಳಿಕ ಬೈಕ್‌ಅನ್ನು ಪೊಲೀಸರು ಇನ್ನಷ್ಟು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಪ್ರಟ್ರೋಲ್‌ ಟ್ಯಾಂಕ್‌ನ ಭಾಗದಲ್ಲೂ ಇದೇ ರೀತಿಯಾಗಿ ಹಣ ಬಚ್ಚಿಟ್ಟುಕೊಂಡಿದ್ದು ಕಂಡು ಬಂದಿದೆ.

ಕೊಯಮತ್ತೂರಿನಲ್ಲಿ ಆಭರಣ ಮಾರಾಟದಿಂದ ಬಂದ ಹಣ ಇದು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಯಾವುದೇ ದಾಖಲೆಗಳನ್ನು ನೀಡಲು ಸಾಧ್ಯವಾಗದ ಕಾರಣ, ಪೊಲೀಸರು ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಿದ್ದಾರೆ ಮತ್ತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

Shwetha M