ಆಸ್ತಿಗಾಗಿ ಆಕಾಶ್‌ನ ಕಿಡ್ನ್ಯಾಪ್ ಮಾಡಿದ ಕೆಡಿ ಜಿಡಿ! – ಜೈದೇವ್ ಮುಂದೆ ರಣಚಂಡಿಯಾದ ಭೂಮಿಕಾ

ಕೆಡಿ ಜೈದೇವ್‌ಗೆ ಯಾಕೋ ಬುದ್ದಿ ಬರೋ ಹಾಗೆ ಕಾಣ್ತಿಲ್ಲ. ಆಸ್ತಿಗಾಗಿ ಈಗ ಅಣ್ಣನ ಮಗನನ್ನೇ ಕಿಡ್ನ್ಯಾಪ್ ಮಾಡಿದ್ದಾನೆ. ಇದೀಗ ಭೂಮಿಕಾಗೆ ಸತ್ಯ ಗೊತ್ತಾಗಿದೆ. ಇದೀಗ ಭೂಮಿಕಾ ಕೆಡಿ ಮುಂದೆ ಎಂಟ್ರಿಕೊಟ್ಟಿದ್ದಾಳೆ.
ಇದನ್ನೂ ಓದಿ: ಚಿತ್ರದುರ್ಗ ಬಸ್ ದುರಂತದಲ್ಲಿ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ಅಮೃತಧಾರೆ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಈ ಹಿಂದೆ ಜೈದೇವ್ ಆಕಾಶ್ನನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ, ಅವನಿಗೇ ಚಳ್ಳೆಹಣ್ಣು ತಿನ್ನಿಸಿದ್ದ. ಮಲ್ಲಿ ಫೋಟೋ ತೋರಿಸಿದಾಗ ತನಗೆ ಗೊತ್ತೇ ಇಲ್ಲ ಎಂದಿದ್ದ. ಆದರೆ, ಇದೀಗ ಫೋಟೋಶೂಟ್ ಸಂದರ್ಭದಲ್ಲಿ ಮಲ್ಲಿ, ಭೂಮಿಕಾ ಮತ್ತು ಆಕಾಶ್ ಇರುವ ಫೋಟೋ ಅನ್ನು ಮಿಂಚು ಅಲ್ಲಿಯೇ ಬೀಳಿಸಿ ಹೋಗಿದ್ದಳು. ಎಲ್ಲವೂ ಕೈಮೀರಿ ತನ್ನ ಪಾಲಿಗೆ ಏನೂ ಸಿಗದೇ ಹತಾಶನಾಗಿದ್ದ ಜೈದೇವನಿಗೆ ಈ ಫೋಟೋ ಸಿಕ್ಕಿತ್ತು. ಅಲ್ಲಿಗೆ ಆಕಾಶ್ ತನಗೆ ಮೋಸ ಮಾಡಿದ್ದು ತಿಳಿಯಿತು ಮಾತ್ರವಲ್ಲದೇ ಆಕಾಶ್ ಭೂಮಿಕಾ ಮತ್ತು ಗೌತಮ್ ಮಗ ಎನ್ನುವ ಸತ್ಯವೂ ತಿಳಿದಿದೆ. ಆಕಾಶ್, ಭೂಮಿಕಾ ಮತ್ತು ಗೌತಮ್ ಮಗ ಎಂಬ ಸತ್ಯ ತಿಳಿದ ಜೈದೇವ್ ಆತನನ್ನು ಅಪಹರಿಸಿದ್ದಾನೆ.
ಆಕಾಶ್ ಶಾಲೆಗೆ ಹೋಗಿ ಆತನನ್ನು ಕಿಡ್ನ್ಯಾಪ್ ಮಾಡಿದ್ದಾನೆ ಜೈದೇವ್. ಭೂಮಿಕಾ ಆತನಿಗಾಗಿ ಹುಡುಕಾಟ ನಡೆಸಿದಾಗ, ಮಿಂಚುಗೆ ಜೈದೇವನೇ ಇವನನ್ನು ಕರೆದುಕೊಂಡು ಹೋಗಿರಬಹುದು ಎನ್ನುವ ಡೌಟ್ ಬಂದು, ಅವನ ಚಿತ್ರ ಬಿಡಿಸಿ ಭೂಮಿಕಾಗೆ ತೋರಿಸಿದ್ದಾಳೆ. ಅದನ್ನು ನೋಡಿ ಭೂಮಿಕಾ ಶಾಕ್ ಆಗಿದ್ದಾಳೆ. ಕೊನೆಗೆ, ಅವರು ಜೈದೇವನ ಬಳಿಗೆ ಬಂದಿದ್ದಾರೆ. ಇಲ್ಲಿ ಜೈದೇವ ತನ್ನ ಆಟ ಶುರುವಿಟ್ಟುಕೊಂಡಿದ್ದಾನೆ. ಏನು ಅನಾಹುತ ಮಾಡುತ್ತಾನೆಯೋ ಕಾದು ನೋಡಬೇಕಿದೆ. ಮಗನಿಗಾಗಿ ಭೂಮಿಕಾ ಮತ್ತೆ ರಣಚಂಡಿಯಾಗ್ತಾಳಾ ಅನ್ನೋದನ್ನ ಕಾದುನೋಡ್ಬೇಕು. ಸದ್ಯ ಆಕಾಶ್ಗೆ ಆತ ಏನು ಮಾಡಿಲ್ಲ ಎನ್ನುವುದೇ ಸಮಾಧಾನ.

ನೋಡಿರಿ

