ಪಂಜಾಬ್ ನಲ್ಲಿ ಭಾರತ್ ಜೋಡೋ ಯಾತ್ರೆ: ‘ದೇಶದಲ್ಲಿ ದ್ವೇಷವನ್ನು ಬಿಜೆಪಿ ಹರಡುತ್ತಿದೆ’ – ರಾಗಾ ಕಿಡಿ
ಪಂಜಾಬ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಈಗಾಗಲೇ ಪಂಜಾಬ್ಗೆ ಪ್ರವೇಶಿಸಿದೆ. ಯಾತ್ರೆ ಆರಂಭಕ್ಕೂ ಮುನ್ನಗುರುದ್ವಾರ ಫತೇಘರ್ ಸಾಹಿಬ್ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿಯು ದೇಶದಲ್ಲಿ ಭಯ ಮತ್ತು ದ್ವೇಷವನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಮತ್ತು ಆರೆಸ್ಸೆಸ್ ನವರು ದೇಶವನ್ನು ವಿಭಜಿಸಿ, ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮವನ್ನು, ಒಂದು ಜಾತಿಯ ವಿರುದ್ಧ ಇನ್ನೊಂದು ಜಾತಿಯನ್ನು, ಒಂದು ಭಾಷೆಯ ವಿರುದ್ಧ ಇನ್ನೊಂದು ಭಾಷೆಯನ್ನು ಎತ್ತಿಕಟ್ಟಿ ದೇಶದಲ್ಲಿ ದ್ವೇಷ ಬಿತ್ತುತ್ತಿದ್ದಾರೆ. ಇದರಿಂದ ಭಾತೃತ್ವದ ವಾತಾವರಣ ಹಾಳಾಗುತ್ತಿದೆ ಎಂದರು.
ಇದನ್ನೂ ಓದಿ: ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ‘ಆರ್ಆರ್ಆರ್’ – ಪ್ರತಿಷ್ಠಿತ ಪ್ರಶಸ್ತಿ ಪಡೆದ ತಂಡಕ್ಕೆ ಮೋದಿ ಅಭಿನಂದನೆ
ಮಾಧ್ಯಮಗಳು ತಮ್ಮ “ಸ್ನೇಹಿತ”ರೂ ಎಂದು ಕರೆದ ರಾಹುಲ್ ಗಾಂಧಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪ್ರಧಾನಿ ನರೇಂದ್ರ ಮೋದಿಯವರ ಮುಖವನ್ನು ಹಗಲಿರುಳು ತೋರಿಸುತ್ತಿವೆ. ಆದರೆ ನಿರುದ್ಯೋಗ ಅಥವಾ ಹಣದುಬ್ಬರದಂತಹ ಸಮಸ್ಯೆಗಳನ್ನು ತೋರಿಸುತ್ತಿಲ್ಲ ಎಂದು ಟೀಕಿಸಿದರು.
ಭಾರತ ಸಹೋದರತ್ವ, ಏಕತೆ ಮತ್ತು ಗೌರವದ ಮೇಲೆ ನಿಂತಿದೆ. ಅದಕ್ಕಾಗಿಯೇ ನಮ್ಮ ‘ಭಾರತ್ ಜೋಡೋ ಯಾತ್ರೆ’ ಎಂದು ಯಶಸ್ವಿಯಾಗಿದೆ ಎಂದು ಹೇಳಿದರು.
ದೇಶದಲ್ಲಿ ಪ್ರೀತಿ, ಏಕತೆ, ಭ್ರಾತೃತ್ವದ ನೆಲೆಸಬೇಕು ಎಂಬ ಉದ್ದೇಶದಿಂದ ಈ ಯಾತ್ರೆ ಆರಂಭವಾಗಿದೆ. ಯಾತ್ರೆಗೆ ಅಪಾರ ಜನಸ್ಪಂದನೆ ವ್ಯಕ್ತವಾಗಿದೆ. ಒಂದು ರಾಜ್ಯಕ್ಕಿಂತ ಮತ್ತೊಂದು ರಾಜ್ಯದಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.