VHTಯಲ್ಲೂ RO-KO ರೌದ್ರಾವತಾರ – BCCI ಚಳಿ ಬಿಡಿಸಿದ ಸೆಂಚುರಿ ಸಿಡಿಲು
50 ಓವರ್.. 574 ರನ್ಸ್.. ಇತಿಹಾಸ!

ಈ ಬಾರಿಯ ವಿಜಯ್ ಹಜಾರೆ ಟ್ರೋಫಿ ಟೂರ್ನಿಗೆ ರಾಜಕಳೆ ಬಂದಿದೆ. ಯಾಕಂದ್ರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾದ ಘಟಾನುಘಟಿ ಆಟಗಾರರೇ ಅಖಾಡಕ್ಕಿಳಿದಿದ್ರು. ಇವತ್ತು ನಡೆದ ಬೇರೆ ಬೇರೆ ಪಂದ್ಯಗಳಲ್ಲಿ ಸಾಲು ಸಾಲು ಸೆಂಚುರಿಗಳು ಸಿಡಿದಿವೆ. ದಾಖಲೆಯ ಸ್ಕೋರ್ ಬಂದಿವೆ. ಅದ್ರಲ್ಲೂ ರೋಕೋ ಅಂತೂ ಡೊಮೆಸ್ಟಿಕ್ನಲ್ಲೂ ವೀ ಆರ್ ಹೀರೋಸ್ ಅಂತಾ ಇಬ್ಬರೂ ಸೆಂಚುರಿ ಧಮಾಕ ಮಾಡಿದ್ದಾರೆ. ಬಿಸಿಸಿಐಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ : ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಸಮರ! – 15 ಖಾತೆ, 150 ಪೋಸ್ಟ್ ವಿರುದ್ಧ ವಿಜಯಲಕ್ಷ್ಮಿ ದೂರು
ಟೀಂ ಇಂಡಿಯಾದ ಸೂಪರ್ ಸ್ಟಾರ್ ಪ್ಲೇಯರ್ಗಳೆಲ್ಲಾ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡ್ಲೇಬೇಕು ಅಂತಾ ಬಿಸಿಸಿಐ ಬಾಸ್ಗಳು ಖಡಕ್ ಆದೇಶ ಹೊರಡಿಸಿದ್ರು. ಹೀಗಾಗಿ ರೋಹಿತ್, ಕೊಹ್ಲಿ, ರಿಷಭ್ ಪಂತ್, ಇಶಾನ್ ಕಿಶನ್, ನಿತೀಶ್ ರೆಡ್ಡಿ ಸೇರಿದಂತೆ ದಿಗ್ಗಜ ಆಟಗಾರರೆಲ್ಲಾ ಅಖಾಡಕ್ಕಿಳಿದಿದ್ರು. ಸ್ಟಾರ್ಗಳ ಕಮ್ಬ್ಯಾಕ್ನಿಂದ ದೇಶಿ ಟೂರ್ನಿ ವಿಶ್ವದ ಮಟ್ಟದಲ್ಲಿ ಗಮನ ಸೆಳೆದಿದೆ. ಹಾಗೇ ಪರ್ಫಾಮೆನ್ಸ್ ಕೂಡ ಸದ್ದು ಮಾಡಿದೆ.
ಡೆಲ್ಲಿ ಪರ ಕೊಹ್ಲಿ, ಮುಂಬೈ ಪರ ರೋಹಿತ್ ಭರ್ಜರಿ ಸೆಂಚುರಿ!
ವಿಜಯ್ ಹಜಾರೆ ಟೂರ್ನಿ ಈ ಸಲ ಇಷ್ಟೊಂದು ಹೈಲೆಟ್ ಆಗೋಕೆ ಮುಖ್ಯ ಕಾರಣವೇ ರೋಹಿತ್ ಮತ್ತು ಕೊಹ್ಲಿ ಆಡ್ತಾರೆ ಅನ್ನೋದು. ಅದಕ್ಕೆ ತಕ್ಕಂತೆ ಇಬ್ಬರೂ ಕೂಡ ಗ್ರೌಂಡ್ನಲ್ಲಿ ಅಬ್ಬರಿಸಿದ್ದಾರೆ. ಮುಂಬೈ ಪರ ಕಣಕ್ಕಿಳಿದ ರೋಹಿತ್ ಸಿಕ್ಕಿಂ ವಿರುದ್ಧ ಅದ್ಭುತವಾಗಿ ಬ್ಯಾಟ್ ಬೀಸಿದ್ರು. ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಸಿಕ್ಕಿಂ ತಂಡ ಮೊದಲು ಬ್ಯಾಟಿಂಗ್ ಮಾಡಿ 236 ರನ್ ಗಳಿಸಿತ್ತು. 237 ರನ್ಗಳ ಗುರಿ ಪಡೆದ ಮುಂಬೈ ಪರ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಟಿ-20 ಸ್ಟೈಲ್ನಲ್ಲಿ ಬ್ಯಾಟ್ ಬೀಸಿದ್ರು. 62 ಎಸೆತಗಳಲ್ಲಿ ಶತಕ ಪೂರೈಸಿದರು. ಒಟ್ಟಾರೆ 94 ಬಾಲ್ಗಳನ್ನ ಫೇಸ್ ಮಾಡಿ 18 ಫೋರ್, 9 ಸಿಕ್ಸ್ಗಳೊಂದಿಗೆ 155 ರನ್ಸ್ ಕಲೆ ಹಾಕಿದ್ರು. ಇನ್ನು ಡೆಲ್ಲಿ ಪರ ಆಂಧ್ರದ. ಡೆಲ್ಲಿ ಪರ ಆಂಧ್ರಪ್ರದೇಶ ವಿರುದ್ಧ ಬೆಂಗಳೂರಿನಲ್ಲಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ ಕೂಡ ಶತಕ ಬಾರಿಸಿದ್ರು. ಕೇವಲ 83 ಎಸೆತಗಳಲ್ಲಿ 100 ರನ್ ಪೂರೈಸಿದ ಕೊಹ್ಲಿ, 101 ಎಸೆತಗಳಲ್ಲಿ 131 ರನ್ಸ್ ಕಲೆ ಹಾಕಿದ್ರು. 16 ವರ್ಷಗಳ ಬಳಿಕ ಕೊಹ್ಲಿ ಈ ಟೂರ್ನಿಯಲ್ಲಿ ಶತಕ ಬಾರಿಸಿದ್ರು. ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಬಳಿಕ ಈಗ ವಿಜಯ್ ಹಜಾರೆ ಟ್ರೋಫಿಯಲ್ಲೂ ರೋಹಿತ್ ಮತ್ತು ಕೊಹ್ಲಿ ಅದ್ಭುತ ಫಾರ್ಮ್ನಲ್ಲಿದ್ದು ಬ್ಯಾಟ್ ಬೀಸ್ತಿದ್ದಾರೆ. ಇನ್ನು ಇದೇ ಟೂರ್ನಿಯಲ್ಲಿ ವೈಭವ್ ಮತ್ತು ಕಿಶನ್ ಕೂಡ ಅಬ್ಬರಿಸಿದ್ದಾರೆ.
ಬೌಲರ್ ಗಳನ್ನ ಚೆಂಡಾಡಿದ ಕಿಶನ್ ಮತ್ತು ವೈಭವ್!
ಇನ್ನು ಅರುಣಾಚಲ ಪ್ರದೇಶ ವಿರುದ್ಧ ಬಿಹಾರ ತಂಡ ಅಂತೂ ರನ್ಗಳ ಮಳೆ ಸುರಿಸಿದೆ. ವೈಭವ್ ಸೂರ್ಯವಂಶಿ 84 ಎಸೆತಗಳಲ್ಲೇ 190 ರನ್ ಬಾರಿಸಿದ್ರು. 16 ಫೋರ್, 15 ಸಿಕ್ಸರ್ಗಳ ಸಮೇತ 226+ ಸ್ಟ್ರೈಕ್ರೇಟ್ ನಲ್ಲಿ ಬ್ಯಾಟ್ ಬೀಸಿದ್ರು. ಹಾಗೇ ಆಯುಷ್ ಮತ್ತು ಸಕೀಬುಲ್ ಕೂಡ ಭರ್ಜರಿ ಸೆಂಚುರಿ ಬಾರಿಸಿದ್ರು. ಈ ಮೂಲಕ ಬಿಹಾರ ತಂಡ 50 ಓವರ್ಗಳಲ್ಲಿ 574 ರನ್ಸ್ ಕಲೆ ಹಾಕಿತ್ತು. ಲಿಸ್ಟ್ ಎ ಕ್ರಿಕೆಟ್ನಲ್ಲಿ 50 ಓವರ್ಗಳಲ್ಲಿ ತಂಡವೊಂದು ಕಲೆಹಾಕಿದ ಹೈಯೆಸ್ಟ್ ಸ್ಕೋರ್ ಎನ್ನೋ ವಿಶ್ವದಾಖಲೆ ಈಗ ಬಿಹಾರ ಪಾಲಾಗಿದೆ. ಆದ್ರೆ ಅರುಣಾಚಲ ಪ್ರದೇಶ ತಂಡ 177 ರನ್ಗಳಿಗೆ ಆಲೌಟ್ ಆಯ್ತು. ಇನ್ನು ಕರ್ನಾಟಕ ವಿರುದ್ಧ ಕೇವಲ 33 ಎಸೆತಗಳಲ್ಲಿ ಜಾರ್ಖಂಡ್ ಪರ ಇಶಾನ್ ಕಿಶನ್ ಶತಕ ಪೂರೈಸಿದರು. ಈ ಮೂಲಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಎರಡನೇ ಅತಿ ವೇಗದ ಶತಕ ಬಾರಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಕಿಶನ್ ಪಾತ್ರರಾದರು. ಹಾಗೇ ಇದೇ ಪಂದ್ಯದಲ್ಲಿ ಕರ್ನಾಟಕದ ಪರ ದೇವದತ್ ಪಡಿಕ್ಕಲ್ ಕೂಡ ಶತಕ ಬಾರಿಸಿದ್ರು. ಒಟ್ನಲ್ಲಿ ವಿಹೆಚ್ಟಿಯ ಮೊದಲ ದಿನವೇ ಸಾಲು ಸಾಲು ಆಟಗಾರರು ಶತಕ ಸಿಡಿಸಿದ್ದಾರೆ. ಬಟ್ ರೋಹಿತ್ ಮತ್ತು ಕೊಹ್ಲಿಯವ್ರ ಸೆಂಚುರಿಯಂತೂ ಬಿಸಿಸಿಐಗೆ ಕಪಾಳಮೋಕ್ಷ ಮಾಡಿದಂತಿದೆ. ಡೊಮೆಸ್ಟಿಕ್ ಇರ್ಲಿ ಅಥವಾ ಇಂಟರ್ನ್ಯಾಷನಲ್ ಇರ್ಲಿ ನಾವು ಎಲ್ಲಿದ್ರೂ ಲೆಜೆಂಡ್ಸೇ ಅನ್ನೋದನ್ನ ತೋರಿಸಿದ್ದಾರೆ.

ನೋಡಿರಿ

