ಉಪ್ಪಿ ಮುಂದೆ ಶಿವಣ್ಣನ ಶಿವತಾಂಡವ – 45 MOVIE REVIEW
ಗೇಮ್ ಚೇಂಜರ್ ಜನ್ಯ, ರಾಜ್ B ಶೆಟ್ಟಿ

ಉಪ್ಪಿ ಮುಂದೆ ಶಿವಣ್ಣನ ಶಿವತಾಂಡವ –  45 MOVIE  REVIEWಗೇಮ್ ಚೇಂಜರ್ ಜನ್ಯ, ರಾಜ್ B ಶೆಟ್ಟಿ

2025ನ್ನ ಅರ್ಧ ಮಾಡಿ.. ಅಂದ್ರೆ 20 + 25ನ್ನ ಕೂಡಿದ್ರೆ ಬರೋದೇ 45.. 2025ರ ಕೊನೆಯಲ್ಲಿ ಸ್ಯಾಂಡಲ್‌ವುಡ್‌ನಲ್ಲಿ 45 ಸಿನಿಮಾದ ಆರ್ಭಟ ಜೋರಾಗಿದೆ..  ತ್ರಿಮೂರ್ತಿಗಳಾದ ಶಿವಣ್ಣ, ಉಪ್ಪಿ, ರಾಜ್‌ ಬಿ ಶೆಟ್ಟಿಯ ಸಂಗಮ  ಪ್ರೇಕ್ಷಕರಿಗೆ ಹಬ್ಬದೂಟ ನೀಡುವುದು ಪಿಕ್ಸ್ ಆಗಿದೆ. I’m god..god is great.. ಶಿವಣ್ಣನ ಮಾಸ್ ಎಂಟ್ರಿ, ಖಡಕ್ ಡೈಲಾಗ್‌ ಮೂಲಕ ಶಿವಣ್ಣ ಸ್ಕ್ರೀನ್‌ನಲ್ಲಿ ಚಿಂದಿ ಉಡಾಯಿಸಿದ್ದಾರೆ. 45 ಸಿನಿಮಾದಲ್ಲಿ ಶಿವಣ್ಣನ ಅಭಿಮಾನಿಗಳಿಗೆ ಶಿವತಾಂಡವ ದರ್ಶನ ಆದ್ರೆ, ರಿಯಲ್ ಸ್ಟಾರ್ ಉಪ್ಪಿ ಅಭಿಮಾನಿಗಳಿಗೆ ಕಣ್ಣಲ್ಲೇ ಶೂಟ್ ಮಾಡಿದ್ದಾರೆ. ಇನ್ನೂ ರಾಜ್ ಬಿ ಶೆಟ್ಟಿ ಆ್ಯಕ್ಟಿಂಗ್ ಅಂತೂ ನೆಕ್ಟ್ ಲೆವೆಲ್‌. ನಿಜ.. 45 ಸಿನಿಮಾ ಕನ್ನಡ ಇಂಡಸ್ಟ್ರೀಯಲ್ಲಿ ಗೇಮ್‌ ಚೇಂಜರ್ ಆಗೋದಂತು ಪಕ್ಕಾ..

45 ಸಿನಿಮಾದಲ್ಲಿ ಶಿವತಾಂಡವೇ ನಡೆದಿದೆ..  ನಿಜಕ್ಕೂ ಇದು ಅರ್ಜುನ್ ಜನ್ಯ ಅವರ ಮೊದಲ ಡೈರೆಕ್ಷನ್ ಸಿನಿಮಾ ಅಂತ ಎಲ್ಲೂ ಕೂಡ ಅನ್ಸಿಲ್ಲ.. ಅಷ್ಟು ಅಚ್ಚುಕಟ್ಟಾಗಿ ಸಿನಿಮಾ ಕಟ್ಟಿದ್ದಾರೆ.. 45 ಸಿನಿಮಾ ಮಲ್ಟಿಸ್ಟಾರ್ ಸಿನಿಮಾ. ಹಾಗಂತ ಇಲ್ಲಿ ಯಾರಿಗೂ ಮೋಸ ಆಗಿಲ್ಲ. ಅತ್ತ ಶಿವಣ್ಣಗೆ, ಇತ್ತ ಉಪೇಂದ್ರಗೆ ಮಧ್ಯೆ ರಾಜ್‌ ಬಿ ಶೆಟ್ಟಿಗೆ ಸರಿಯಾದ ಸ್ಕ್ರೀನ್ ಸ್ಪೇಸ್‌ ಕೊಟ್ಟು ಮೂವರ ಫ್ಯಾನ್ಸ್‌ಗೂ ಇಷ್ಟವಾಗುವಂತೆ 45 ಚಿತ್ರವನ್ನ ಅರ್ಜುನ್ ಜನ್ಯ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ :  17 ವರ್ಷದ ಬಾಲಕಿ ಪ್ರಾಣ ತೆಗೆದ ಪಿಜ್ಜಾ, ಬರ್ಗರ್!‌ –  ಫಾಸ್ಟ್‌ಫುಡ್‌ ತಿನ್ನುವವರೇ ನೀವು ಜೋಪಾನ!

ಆ್ಯಕ್ಸಿಡೆಂಟ್.. ಕನಸು.. ಭಯ.. ಮನುಷ್ಯ.. ಸಾವು..  ಸಾವಿನ ಬಳಿಕ ಆತ್ಮದ ಒದ್ದಾಟ.. ಯಮ.. ಶಿವ.. ಯುದ್ಧ.. . ಕರ್ಮಫಲ, ಪಾಪ – ಪುಣ್ಯದ ಲೆಕ್ಕಾಚಾರ.. ಇದೇ 45 ಸಿನಿಮಾದ ಕಥೆ.. ಫ್ಯಾಂಟಸಿ, ಫಿಲಾಸಫಿ ಹಾಗೂ ಆಕ್ಷನ್ ಸೇರಿಸಿ ಅರ್ಜುನ್ ಜನ್ಯ ಅದ್ಭುತವಾಗಿ ನಿರ್ದೇಶಿಸಿ ಈ ಸಿನಿಮಾವನ್ನ  ಜನರ ಮುಂದೆ ಇಟ್ಟಿದ್ದಾರೆ. ಸಿನಿಮಾದ ಕೊನೆಯಲ್ಲಿ ಒಂದು ಅದ್ಭುತ ಸಂದೇಶವನ್ನ ಅರ್ಜುನ್ ಜನ್ಯ ಕೊಟ್ಟಿದ್ದಾರೆ.  ಯಾಕೆ 45 ಅನ್ನೋ ಟೈಟಲ್‌ ಇಟ್ಟಿದ್ದಾರೆ ಅನ್ನೋದು ಕೂಡ ಗೊತ್ತಾಗುತ್ತೆ.  ಈ ಸಿನಿಮಾ ಎಲ್ಲೂ ಕೂಡ ಬೋರ್ ಅನ್ಸಲ್ಲ.. ಕ್ಷಣ ಕ್ಷಣಕ್ಕೂ ಮುಂದೆ ಏನಾಗುತ್ತೆ ಅನ್ನೋ ಕಾತುರ ನಮ್ಮನ್ನ ಕಾಡುತ್ತೆ. ಅದರಲ್ಲೂ ರಾತ್ರಿ ಹೊತ್ತು ನಮ್ಮ ಬೆಂಗಳೂರ ರಸ್ತೆಯಲ್ಲಿ ನಡೆಯೋ ಶಿವಣ್ಣ, ಉಪ್ಪಿ ಹಾಗೂ ರಾಜ್‌ ಬಿ ಶೆಟ್ಟಿಯ ಒಂದೊಂದು ಆ್ಯಕ್ಷನ್ ಸೀನ್‌ ಕೂಡ ಥಿಯೇಟರ್‌ನೊಳಗೆ ಕುಳಿತ ನಮಗೆ ಸಿಳ್ಳೆ ಹೊಡೆಯುವಂತೆ ಮಾಡುತ್ತೆ. ಬೊಂಬಾಟ್ ಆ್ಯಕ್ಷನ್ ಸೀನ್ ಇದೆ.. ಈ ಸಿನಿಮಾದ ಹೈಲೆಟ್ ಅಂದ್ರೆ BGM.. BGM ಅಂತೂ ಅರ್ಜುನ್ ಜನ್ಯ  ನೆಕ್ಟ್ ಲೆವೆಲ್ ಮಾಡಿದ್ದಾರೆ.  ಪ್ರತಿ ಕ್ಷಣ ಕೂಡ ಎದೆ ಝಲ್ ಅಂತ ಇರುತ್ತೆ.. ಇನ್ನೂ VFX ಕೂಡ ಚೆನ್ನಾಗಿ ಮಾಡಿದ್ದಾರೆ. ಹೊಸ ಲೋಕಕ್ಕೆ ನಮ್ಮನ್ನ ಕರೆದುಕೊಂಡು ಹೋಗುತ್ತೆ.. ಕೈಮ್ಯಾಕ್ಸ್‌ ಸೀನ್‌ಲ್ಲಿVFXಗೆ ತಕ್ಕಂತೆ BGM ಇದ್ದು, ಇಡೀ ಥಿಯೇಟರ್‌ನ್ನೇ ಶೇಕ್ ಮಾಡುತ್ತೆ.

45 ಸಿನಿಮಾದ ಮೂಲಕ ಶಿವರಾಜ್‌ಕುಮಾರ್‌ಗೆ ‘ಮಾಸ್ ಗಾಡ್’ ಎಂಬ ಟೈಟಲ್‌ ಕೊಡಲಾಗಿದೆ. ಈ ಟೈಟಲ್‌ಗೂ 45 ಚಿತ್ರದಲ್ಲಿರುವ ಶಿವಣ್ಣನ ಪಾತ್ರಕ್ಕೂ ನಂಟಿದೆ. ಕೊಂಚ ಲೇಟ್ ಆಗಿ ಎಂಟ್ರಿಕೊಟ್ಟರೂ ಶಿವಣ್ಣನ ಪಾತ್ರ ಲೇಟೆಸ್ಟ್ ಆಗಿದೆ. ಶಿವಣ್ಣನ ಎಂಟ್ರಿ ಮಸ್ತ್ ಕೊಟ್ಟಿದ್ದಾರೆ. ಇಂಟರ್ವೆಲ್ ಆದ ನಂತ್ರ ಶಿವಣ್ಣ ಸ್ಕ್ರೀನ್ ಮೇಲೆ ಜಾದೂ ಮಾಡಿದ್ದಾರೆ. ಇಲ್ಲಿ ತನಕ ತಾಳದ ಅವತಾರವನ್ನ ಶಿವಣ್ಣ 45ನಲ್ಲಿ ತಾಳಿದ್ದಾರೆ. ಕ್ಲೈಮಾಕ್ಸ್‌ನಲ್ಲಿ ಶಿವಣ್ಣನ ಆ್ಯಕ್ಟಿಂಗ್ ಚಿಂದಿ.. 11 ಅವತಾರ ಶಿವಣ್ಣ ತಾಳಿದ್ದಾರೆ. ನೀವು ಟ್ರೈಲರ್‌ನಲ್ಲಿ ನೋಡಿದ್ರಿ ಅಲ್ವಾ ಶಿವಣ್ಣನ ಲೇಡಿ ಗೆಟಪ್‌ ಅದು ಯಾಕೆ ಅಂತ ನಿಮ್ಗೆ ಕ್ಲೈಮ್ಯಾಕ್ಸ್‌ನಲ್ಲಿ ಗೊತ್ತಾಗುತ್ತೆ.

ಇನ್ನೂ 45 ಸಿನಿಮಾದಲ್ಲಿ ಉಪೇಂದ್ರ ಡಿಫರೆಂಟ್‌ ಗೆಟಪ್‌ನಲ್ಲಿ ಕಮಾಲ್ ಮಾಡಿದ್ದಾರೆ.. ಅವರ ಲುಕ್‌ಗೆ  ತಕ್ಕಂತೆ ಬೈಕ್, ಕಾರುಗಳು, ಅವರ ಚಪ್ಪಲಿ, ಅವರು ಕೂರುವ ಚೇರ್‌ ಎಲ್ಲಾ ಡಿಫರೆಂಟ್ ಆಗಿದೆ..ಉಪ್ಪಿ ಆ್ಯಕ್ಟಿಂಗ್‌ ಬಗ್ಗೆ ನಾವು ಕೆಮ್ಮಂಗಿಲ್ಲ.

ಒಬ್ಬ ಸಾಮಾನ್ಯ ಮನುಷ್ಯ ಒಂದು ಆ್ಯಕ್ಸಿಂಡ್  ಮಾಡಿದ್ರೆ ಏನೆಲ್ಲಾ ಆಗುತ್ತೆ ಅನ್ನೋದ್ದನ್ನ  ರಾಜ್‌ ಬಿ ಶೆಟ್ಟಿ ನಟನೆ ಮೂಲಕ ತೋರಿಸಿಕೊಟ್ಟಿದ್ದಾರೆ. ಒಂದು ಮೊಟ್ಟೆಯ ಕಥೆ ಮತ್ತು  ಗರುಡ ಗಮನ ವೃಷಭ ವಾಹನ’ ಚಿತ್ರಗಳನ್ನ ರಾಜ್‌ ಬಿ ಶೆಟ್ಟಿ ನೆನಪಿಸುತ್ತಾರೆ. ಇಡೀ ಕಥೆಯಲ್ಲಿ ರಾಜ್‌ ಬಿ ಶೆಟ್ಟಿ ಮೇಲೆ ನಡೆಯುತ್ತೆ.. ಹೀಗಾಗಿ ರಾಜ್ ಬಿ ಶೆಟ್ರು ಸಿನಿಮಾ ಶುರುವಿನಿಂದ ಕೊನೆ ತನಕ ಇರುತ್ತಾರೆ.. ಇವರ ಅಭಿನಯಕ್ಕೆ ಪ್ರೇಕಕರು ಪಕ್ಕಾ ಫಿದಾ ಆಗುತ್ತಾರೆ.

ಇನ್ನೂ ಅರ್ಜುನ್ ಜನ್ಯ ನಿರ್ದೇಶನದ ಬಗ್ಗೆ ಎರಡು ಮಾತಿಲ್ಲ.. ಇವರ ಮೊದಲ ನಿರ್ದೇಶನ ಸಿನಿಮಾ ಆದ್ರೂ ಎಲ್ಲೂ ಕೂಡ ಇದು ಇವರ ಚೊಚ್ಚಲ ಸಿನಿಮಾ ಅನ್ಸಲ್ಲ.. ಯಾರೋ ಅನುಭವಿ ಡೈರೆಕ್ಟರ್ ನಿರ್ದೇಶಿಸಿದ ಸಿನಿಮಾ ಅನ್ಸುತ್ತೆ.  ಮೊದಲ ಚಿತ್ರದಲ್ಲೇ ಮಲ್ಟಿ ಸ್ಟಾರರ್ ಎಂಬ ರಿಸ್ಕ್‌ಗೆ ಕೈಹಾಕಿದ್ದರೂ, ಅದನ್ನ ಅರ್ಜುನ್ ಜನ್ಯ ನೀಟಾಗಿ ನಿಭಾಯಿಸಿದ್ದಾರೆ. ಶಿವಣ್ಣ ಹಾಗೂ ಉಪೇಂದ್ರ ಅಭಿಮಾನಿಯಾಗಿ, ಇಬ್ಬರ ಫ್ಯಾನ್ಸ್‌ಗೂ ಇಷ್ಟವಾಗುವಂತೆಯೇ ಚಿತ್ರ ಮಾಡಿದ್ದಾರೆ . ಹಾಗಂತ ರಾಜ್ ಬಿ ಶೆಟ್ಟಿ ಫ್ಯಾನ್ಸ್‌ಗೂ ಮೋಸ ಮಾಡಿಲ್ಲ..ಈಗಾಗಲೇ ಹೇಳಿದ್ದಂತೆ BGM ಬಗ್ಗೆ ಹೇಳುವುದ್ದಕ್ಕೆ ಎರಡು ಮಾತಿಲ್ಲ.  ಅಷ್ಟು ಚೆನ್ನಾಗಿ BGM ಬಳಸಿದ್ದಾರೆ.

ಇನ್ನೂ45 ಕಥೆ ಏನು?  ಯಾಕೆ ಉಪ್ಪಿ ರಾಜ್‌ ಬಿ ಶೆಟ್ಟಿ ಹಿಂದೆ ಬೀಳ್ತಾರೆ.. ಶಿವಣ್ಣ ಹೇಗೆ ಕಾಪಾಡ್ತಾರೆ.. ಚಿಕ್ಕ ತಪ್ಪಿನಿಂದ ಏನೆಲ್ಲಾ ಆಗುತ್ತೆ? ಆತ್ಮಗಳ ಒದ್ದಾಟ ಹೇಗಿರುತ್ತೆ.. ಯಮ, ಶಿವನ ಮತ್ತು ಮನುಷ್ಯನ ಕಥೆ ಏನು ಅನ್ನೋದು ನಿಮ್ಗೆ ಗೊತ್ತಾಗಬೇಕಾದ್ರೆ ನೀವು ಸಿನಿಮಾವನ್ನ ಮಿಸ್ಸ್ ಮಾಡ್ಡೆ 45 ಸಿನಿಮಾ ನೋಡಿ.

 

Kishor KV