ಅಮ್ಮ ಬರ್ತಿದ್ದಂತೆ ಗಿಲ್ಲಿ ಮೇಲೆ ದೂರು ಹೇಳಿದ ಅಶ್ವಿನಿ – ಅತ್ತೆ ಮಗಳು ಅಂದ್ಮೇಲೆ ಅಷ್ಟು ಸಲುಗೆ ಇಲ್ಲ ಅಂದ್ರೆ ಹೇಗೆ ಎಂದು ಹೇಳಿದ ಗಿಲ್ಲಿನಟ

ಅಮ್ಮ ಬರ್ತಿದ್ದಂತೆ ಗಿಲ್ಲಿ ಮೇಲೆ ದೂರು ಹೇಳಿದ ಅಶ್ವಿನಿ – ಅತ್ತೆ ಮಗಳು ಅಂದ್ಮೇಲೆ ಅಷ್ಟು ಸಲುಗೆ ಇಲ್ಲ ಅಂದ್ರೆ ಹೇಗೆ ಎಂದು ಹೇಳಿದ ಗಿಲ್ಲಿನಟ

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿನಟ ಹಾಗೂ ಅಶ್ವಿನಿ ಗೌಡ ಎಷ್ಟು ಕಿತ್ತಾಡಿಕೊಂಡರೂ ಅವರಿಬ್ಬರ ಮಧ್ಯೆ ಒಳ್ಳೆ ಬಾಂಡಿಂಗ್‌ ಇದೆ. ಆಗಾಗ ಗಿಲ್ಲಿನಟ ಅಶ್ವಿನಿಯನ್ನ ಅತ್ತೆ ಮಗಳು ಅಂತ ಕಾಲೆಳಿತಾ ಇರ್ತಾರೆ. ಇದೀಗ ದೊಡ್ಮನೆಗೆ ಗಿಲ್ಲಿ ಅತ್ತೆಯ ಎಂಟ್ರಿಯಾಗಿದೆ. ಅಶ್ವಿನಿ ತಾಯಿ ಗಿಲ್ಲಿಯನ್ನ ನೋಡಿ ಖುಷಿಪಟ್ಟಿದ್ದಲ್ಲದೇ, ಇಬ್ಬರಿಗೂ ಕಿವಿಮಾತು ಕೇಳಿದ್ದಾರೆ.

ಇದನ್ನೂ ಓದಿ: 17 ವರ್ಷದ ಬಾಲಕಿ ಪ್ರಾಣ ತೆಗೆದ ಪಿಜ್ಜಾ, ಬರ್ಗರ್!‌ –  ಫಾಸ್ಟ್‌ಫುಡ್‌ ತಿನ್ನುವವರೇ ನೀವು ಜೋಪಾನ!

ಬಿಗ್​ಬಾಸ್​ ಮನೆಯಲ್ಲಿ ಕುಟುಂಬಸ್ಥರ ಆಗಮನದ ವಾರದಲ್ಲಿ, ಅಶ್ವಿನಿ ಗೌಡ ಅವರ ತಾಯಿ ಆಗಮಿಸಿದ್ದಾರೆ. ಮಗಳನ್ನು ಕಂಡು ಭಾವುಕರಾದ ತಾಯಿ, ಗಿಲ್ಲಿ ನಟನ ಜೊತೆ ಮನಸ್ತಾಪ ಬೇಡವೆಂದು ಕಿವಿಮಾತು ಹೇಳಿದರು. ಆಗ ಗಿಲ್ಲಿ ನಟ, ಅಶ್ವಿನಿ ತಾಯಿಯನ್ನು ಅತ್ತೆ ಎಂದು ಕರೆದು ಮನೆಯಲ್ಲಿ ನಗುವಿನ ಅಲೆ ಎಬ್ಬಿಸಿದರು. ಇದ್ರ ಪ್ರೋಮೋ ರಿಲೀಸ್‌ ಆಗಿದೆ.

ಪ್ರೋಮೋದಲ್ಲಿ ಅಶ್ವಿನಿ ಗೌಡ ಅವರ ಅಮ್ಮನ ಧ್ವನಿ ಹೊರಗಿನಿಂದ ಕೇಳಿಬರುತ್ತಿದ್ದಂತೆಯೇ, ಅಶ್ವಿನಿ ಗೌಡ ಆ ಮಾತು ಕೇಳಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಕೊನೆಗೆ ಅಮ್ಮ ಮನೆಯೊಳಕ್ಕೆ ಬರುತ್ತಾರೆ ಎಂದು ತಿಳಿಯುತ್ತಿದ್ದಂತೆಯೇ ಬಿಗ್​ಬಾಸ್​ಗೆ ನಮಸ್ಕಾರ ಮಾಡಿದ್ದಾರೆ. ತುಂಬಾ ದಿನಗಳ ಬಳಿಕ ಅಮ್ಮ- ಮಗಳ ಮಿಲನವಾಗಿದೆ. ಇಬ್ಬರೂ ಪರಸ್ಪರ ತಬ್ಬಿಕೊಂಡು ಪ್ರೀತಿಯ ಧಾರೆಯನ್ನೇ ಹರಿಸಿದ್ದಾರೆ.

ಕೊನೆಗೆ ಗಿಲ್ಲಿ ನಟನ ಬಳಿ  ಅಶ್ವಿನಿ ಗೌಡ ಅವರ ಅಮ್ಮ ಅವರು ಒಬ್ಬರಿಗೊಬ್ಬರು ಮನಸ್ತಾಪ ಮಾಡಿಕೊಳ್ಳಬೇಡಿ. ಚೆನ್ನಾಗಿರಿ ಎಂದಿದ್ದಾರೆ. ಆಮೇಲೆ ಅಶ್ವಿನಿ ಗೌಡ ಅವರು ಅಮ್ಮನ ಬಳಿ ಗಿಲ್ಲಿಯ ಕಂಪ್ಲೇಂಟ್​ ಮಾಡಿದ್ದಾರೆ. ತುಂಬಾ ನನ್ನನ್ನು ರೇಗಿಸ್ತಾನೆ ಎಂದು ಹೇಳಿದ್ದಾರೆ. ಆಗ ಗಿಲ್ಲಿ ನಟ ಅವರು, ಅತ್ತೆ ಮಗಳು ಎಂದ ಮೇಲೆ ಅಷ್ಟು ಸಲುಗೆ ಇಲ್ಲ ಎಂದರೆ ಹೇಗೆ ಎಂದಿದ್ದಾರೆ. ಕೊನೆಗೆ ಅಶ್ವಿನಿ ಗೌಡ ಅಮ್ಮನನ್ನು ಅತ್ತೆ ಅತ್ತೆ ಎಂದೇ ಮಾತನಾಡಿಸಿದ್ದಾರೆ. ಇದನ್ನು ಕೇಳಿ ಬಿಗ್​ಬಾಸ್​ ಮನೆಯಲ್ಲಿ ಎಲ್ಲರೂ ನಕ್ಕೂ ನಕ್ಕೂ ಸುಸ್ತಾಗಿದ್ದಾರೆ. ಗಿಲ್ಲಿ ಅಶ್ವಿನಿ ಗೌಡ ತಾಯಿ ಜೊತೆ ಇಷ್ಟೊಂದು ಅನ್ಯೋನ್ಯವಾಗಿರುವುದನ್ನು ನೋಡಿ ವೀಕ್ಷಕರು  ಖುಷಿ ಪಟ್ಟುಕೊಳ್ಳುತ್ತಿದ್ದಾರೆ.

Shwetha M