ರಾಯರ ದರ್ಶನ ಪಡೆದ ಡಿವೈನ್‌ ಸ್ಟಾರ್!‌ – ಮಂತ್ರಾಲಯಕ್ಕೆ ಭೇಟಿ ನೀಡಿದ ರಿಷಬ್‌ ಶೆಟ್ಟಿ ಕುಟುಂಬ

ರಾಯರ ದರ್ಶನ ಪಡೆದ ಡಿವೈನ್‌ ಸ್ಟಾರ್!‌ – ಮಂತ್ರಾಲಯಕ್ಕೆ ಭೇಟಿ ನೀಡಿದ ರಿಷಬ್‌ ಶೆಟ್ಟಿ ಕುಟುಂಬ

ಕಾಂತಾರ ಚಾಪ್ಟರ್‌ 1 ಸಕ್ಸಸ್‌ ಬೆನ್ನಲ್ಲೇ ಡಿವೈನ್‌ ಸ್ಟಾರ್‌ ಟೆಂಪಲ್‌ ರನ್‌ ಶುರು ಮಾಡಿದ್ದಾರೆ. ರಾಜ್ಯದ ಪ್ರಸಿದ್ಧ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ ರಿಷಭ್‌ ಶೆಟ್ಟಿ ದಂಪತಿ. ಇದೀಗ ಮಂತ್ರಾಲಯಕ್ಕೆ ರಿಷಭ್‌ ಶೆಟ್ಟಿ ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಭೇಟಿ ನೀಡಿ, ರಾಯರ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಮಹಿಳಾ ಸಾರಿಗೆ ನೌಕರರಿಗೆ ಬಂಪರ್‌ ಗಿಫ್ಟ್!‌ – ವರ್ಷಕ್ಕೆ 12 ದಿನ ವೇತನ ಸಹಿತ ರಜೆ ಹೆಚ್ಚಳ!

ರಾಯಚೂರಿನ ಮಂತ್ರಾಲಯಕ್ಕೆ ಆಗಮಿಸಿ, ಗುರು ರಾಘವೇಂದ್ರ ಸ್ವಾಮಿ ದರ್ಶನ ಪಡೆದಿದ್ದಾರೆ. ಪತ್ನಿ ಪ್ರಗತಿ ಹಾಗೂ ತಮ್ಮ ಇಬ್ಬರು ಮಕ್ಕಳೊಂದಿಗೆ ಆಗಮಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿಯವರಿಂದ ಆಶೀರ್ವಚನ ಪಡೆದುಕೊಂಡಿದ್ದಾರೆ. ರಿಶಬ್ ಶೆಟ್ಟಿ ದಂಪತಿಗೆ ಫಲ ಮಂತ್ರಾಕ್ಷತೆ ನೀಡಿ, ಶ್ರೀಗಳು ಆಶೀರ್ವದಿಸಿದ್ದಾರೆ.

ಆನಂತರ ಮಂಚಾಲಮ್ಮ ದೇವಿ ದರ್ಶನ ಪಡೆದು ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಗಳವಾರ (ಡಿ.23) ತಿರುಪತಿ ತಿರುಮಲ ಸನ್ನಿಧಾನಕ್ಕೆ ಭೇಟಿ ನೀಡಿದ್ದರು.

Shwetha M