ಮೆಟ್ರೋ ಪಿಲ್ಲರ್‌ ಕುಸಿದು ತಾಯಿ, ಮಗು ಸಾವು ಪ್ರಕರಣ – ಮೂವರು ಅಧಿಕಾರಿಗಳ ಅಮಾನತು

ಮೆಟ್ರೋ ಪಿಲ್ಲರ್‌ ಕುಸಿದು ತಾಯಿ, ಮಗು ಸಾವು ಪ್ರಕರಣ – ಮೂವರು ಅಧಿಕಾರಿಗಳ ಅಮಾನತು

ಬೆಂಗಳೂರು: ಮೆಟ್ರೋ ಪಿಲ್ಲರ್‌ ಕುಸಿದು ತಾಯಿ, ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿ ಬಿಎಂಆರ್‌ಸಿಎಲ್‌ ಆದೇಶ ಹೊರಡಿಸಿದೆ.

ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಮೆಟ್ರೋ ಡೆಪ್ಯೂಟಿ ಚೀಫ್ ಎಂಜಿನಿಯರ್‌, ಎಕ್ಸಿಕ್ಯೂಟಿವ್ ಎಂಜಿನಿಯರ್, ಸೆಕ್ಷನ್ ಎಂಜಿನಿಯರ್ ಅಮಾನತುಗೊಳಿಸಿ  ಆದೇಶಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಎಂಡಿ ಅಂಜುಂ ಫರ್ವೇಜ್‌ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ನಿಗಮ, ಎನ್‌ಸಿಸಿ ಕಂಪನಿಗೆ ನೋಟಿಸ್ ನೀಡಿದೆ. ಮಂಗಳವಾರ ದುರಂತದ ಬಳಿಕ ಮೆಟ್ರೋ ಚೀಫ್ ಎಂಜಿನಿಯರ್‌ರಿಂದ ಎನ್‌ಸಿಸಿ ಕಂಪನಿಗೆ ನೋಟಿಸ್ ನೀಡಲಾಗಿದೆ. ಬುಧವಾರ ಮೆಟ್ರೋ ನಿರ್ದೇಶಕರಿಂದ ಎನ್‌ಸಿಸಿ ಆಡಳಿತ ವಿಭಾಗಕ್ಕೆ ಮತ್ತೊಂದು ನೋಟಿಸ್ ಬಂದಿದೆ. ಮೂರು ದಿನಗಳ ಒಳಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಲಾಗಿದೆ. ಎನ್‌ಸಿಸಿ ಕಂಪನಿಯ ಮೇಲೆ ಈಗಾಗಲೇ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಪೋಲಿಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಅಂಜುಂ ಫರ್ವೇಜ್‌ ಹೇಳಿದ್ದಾರೆ.

ಇದನ್ನೂ ಓದಿ:  ಬೆಂಗಳೂರಲ್ಲಿ ಮೆಟ್ರೋ ಕಾಮಗಾರಿಗೆ ಎರಡು ಬಲಿ – ತಾಯಿ ಮಗುವಿನ ದಾರುಣ ಸಾವು

ಬೆಂಗಳೂರು ಮೆಟ್ರೋ ಕಾಮಗಾರಿ ದುರಂತ ಪ್ರಕರಣವು ಕೇಂದ್ರದ ಅಂಗಳ ತಲುಪಿದೆ. ಪ್ರಕರಣ ಸಂಬಂಧ ವರದಿ ನೀಡುವಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಕೇಳಿದೆ. ಅಂಜುಂ ಫರ್ವೇಜ್‌ಗೆ ಕರೆ ಮಾಡಿ ವರದಿ ಕೇಳಿದೆ. ಎರಡು ದಿನಗಳಲ್ಲಿ ವರದಿ ನೀಡುವುದಾಗಿ ಮೆಟ್ರೋ ನಿಗಮ ತಿಳಿಸಿದೆ.

suddiyaana