ರೈಲಿನಿಂದ ಬೀಳುತ್ತಿದ್ದ ಮಹಿಳೆಯನ್ನ ಸಿನಿಮಾ ಸ್ಟೈಲ್‌ನಲ್ಲಿ ಕಾಪಾಡಿದ ರೈಲ್ವೆ ಸಿಬ್ಬಂದಿ

ರೈಲಿನಿಂದ ಬೀಳುತ್ತಿದ್ದ ಮಹಿಳೆಯನ್ನ ಸಿನಿಮಾ ಸ್ಟೈಲ್‌ನಲ್ಲಿ ಕಾಪಾಡಿದ ರೈಲ್ವೆ ಸಿಬ್ಬಂದಿ

ಚಲಿಸುತ್ತಿದ್ದ ರೈಲಿನಿಂದ  ಬೀಳುತ್ತಿದ್ದ ಬಿದ್ದ ಮಹಿಳೆ ಜಸ್ಟ್ ಎಸ್ಕೇಪ್ ಆಗಿದ್ದಾರೆ.  ತಮಿಳುನಾಡಿನ   ಚೆನ್ನೈ  ತಾಂಬರಂ ನಿಲ್ದಾಣದಲ್ಲಿ ಆಯಾ ತಪ್ಪಿ ಬಿದ್ದ ಮಹಿಳೆಯನ್ನ  ರೈಲ್ವೇ   ಉದ್ಯೋಗಿಯು ರಕ್ಷಿಸಿದ್ದಾರೆ.  ಮಹಿಳೆಯೊಬ್ಬರು ಚಲಿಸುವ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡಿದ್ದು, ಇದನ್ನು ಗಮನಿಸಿದ ರೈಲ್ವೇ ಉದ್ಯೋಗಿಯೂ ತ್ವರಿತ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದರು. ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್   ಆಗಿದೆ. ಚಲಿಸುವ ರೈಲುಗಳನ್ನು ಹತ್ತದಂತೆ ಪದೇ ಪದೇ ಎಚ್ಚರಿಕೆ ನೀಡಿದರೂ ಇಂತಹ ಘಟನೆಗಳು ವರದಿಯಾಗುತ್ತಲೇ ಇರುತ್ತದೆ. ಇದು ಈಗ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಬಾಂಗ್ಲಾ ದಂಗೆ ಹಿಂದೆ ಯೂನಸ್ ಕೈವಾಡ? – ಸರ್ಕಾರದ ಮೇಲೆ ಹಾದಿ ಸಹೋದರನ ಗಂಭೀರ ಆರೋಪ

ತಾಂಬರಂ ನಿಲ್ದಾಣದಲ್ಲಿ ರೈಲು ಹತ್ತುವಾಗ ಜಾರಿಬಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ರೈಲ್ವೇ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೈಲ್ವೇ ಉದ್ಯೋಗಿ ನಿತೀಶ್ ಕುಮಾರ್ ಅವರು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆಗೆ ಅವರ ಜಾಗರೂಕತೆ ಮತ್ತು ಸಮರ್ಪಣೆಯನ್ನು ದಕ್ಷಿಣ ರೈಲ್ವೇ ಶ್ಲಾಘಿಸಿದೆ.

  ಘಟನೆಯ ವಿಡಿಯೋವನ್ನ ನೋಡಲು ಈ ಲಿಂಕ್ ಓಪನ್ ಮಾಡಿ :  https://x.com/i/status/2003128636027863165

ಈ ಘಟನೆ ಡಿಸೆಂಬರ್ 20ರಂದು ಶನಿವಾರ ನಡೆದಿದೆ ಎನ್ನಲಾಗಿದೆ. ತಾಂಬರಂನಲ್ಲಿ ಟಿಕೆಟ್ ತಪಾಸಣಾ ಸಿಬ್ಬಂದಿ ನಿತೀಶ್ ಕುಮಾರ್ ಅವರ ತ್ವರಿತ ಕಾರ್ಯಾಚರಣೆ ನಡೆಸಿ ಬೀಚ್‌ಗೆ ಹೋಗುವ ರೈಲು ಹತ್ತುವಾಗ ಆಕಸ್ಮಿಕವಾಗಿ ಜಾರಿಬಿದ್ದ ಮಹಿಳಾ ಪ್ರಯಾಣಿಕಳನ್ನು ರಕ್ಷಿಸಿತು ಎಂದು ದಕ್ಷಿಣ ರೈಲ್ವೇಯು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಮಹಿಳೆಯ ಬೊಬ್ಬೆ ಕೇಳಿ ತಕ್ಷಣ ಅವರು ಓಡಿ ಮಹಿಳೆಯನ್ನು ರಕ್ಷಿಸಿದರು. ಅವರ ಸಕಾಲಿಕ ಕ್ರಮದಿಂದ ದೊಡ್ಡ ಅನಾಹುತವನ್ನು ತಪ್ಪಿಸಿತು. ಚಲಿಸುವ ರೈಲುಗಳನ್ನು ಹತ್ತಬೇಡಿ ಅಥವಾ ಇಳಿಯಬೇಡಿ ಎಂದು ರೈಲ್ವೆ ಅಧಿಕಾರಿಗಳು ಪದೇ ಪದೇ ಮನವಿ ಮಾಡಿದರೂ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿವೆ . ಕಳೆದ ತಿಂಗಳು ತೆಲಂಗಾಣದ ಹೈದರಾಬಾದ್‌ನ ಕಾಚೆಗುಡ ರೈಲ್ವೆ ನಿಲ್ದಾಣದಲ್ಲಿ ಇದೇ ರೀತಿಯ ಘಟನೆ ನಡೆತ್ತು. ರೈಲ್ವೆ ರಕ್ಷಣಾ ಪಡೆ ಕಾನ್‌ಸ್ಟೆಬಲ್ ಪಂಕಜ್ ಕುಮಾರ್ ಶರ್ಮಾ ಅವರು ಪ್ರಯಾಣಿಕರೊಬ್ಬರನ್ನು ರಕ್ಷಿಸಿದ್ದರು.

Kishor KV