ಫಾರ್ಮ್ ಇಲ್ಲದ ಗಿಲ್ ODIಗೂ ಬೇಡ್ವಾ? – NZ ವಿರುದ್ಧದ ಸರಣಿಗೆ ಯಾರು ಕ್ಯಾಪ್ಟನ್?
ರಾಹುಲ್ Vs ಶ್ರೇಯಸ್.. ಯಾರಿಗೆ ಲಕ್?

ಫಾರ್ಮ್ ಇಲ್ಲದ ಗಿಲ್ ODIಗೂ ಬೇಡ್ವಾ? – NZ ವಿರುದ್ಧದ ಸರಣಿಗೆ ಯಾರು ಕ್ಯಾಪ್ಟನ್?ರಾಹುಲ್ Vs ಶ್ರೇಯಸ್.. ಯಾರಿಗೆ ಲಕ್?

ಟಿ-20 ವಿಶ್ವಕಪ್ ಟೀಮ್​ನಿಂದ ಶುಭ್​ಮನ್ ಗಿಲ್​ರನ್ನ ಕೈಬಿಟ್ಟಿದ್ದು ಅಚ್ಚರಿ ಅನ್ಸಿದ್ರೂ ಅನಿರೀಕ್ಷಿತ ಏನಲ್ಲ. ಗಿಲ್ ಫಾರ್ಮ್ ನೋಡ್ದಾಗ ಡ್ರಾಪ್ ಮಾಡೋದೇ ಬೆಸ್ಟ್ ಅನ್ನೋದೇ ಎಲ್ಲರ ವಾದವಾಗಿತ್ತು. ಬಟ್ ವಾಟ್ ಅಬೌಟ್ ಒನ್ ಡೇ ಫಾರ್ಮೆಟ್. 2026ರ ಜನವರಿ ಸೆಕೆಂಡ್ ವೀಕಿಂದ ಭಾರತದ ಹೊಸ ಜರ್ನಿ ಸ್ಟಾರ್ಟ್ ಆಗುತ್ತೆ. ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಮೂಲಕ ಹೊಸವರ್ಷಾರಂಭದಲ್ಲೇ ನ್ಯೂ ಇನ್ನಿಂಗ್ಸ್ ಶುರು ಮಾಡ್ತಾರೆ.

ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಕೆ.ಎಲ್ ರಾಹುಲ್? – ಕ್ಯಾಪ್ಟನ್ ಪಟ್ಟದಿಂದ ಅಕ್ಷರ್ ಪಟೇಲ್ ಔಟ್

ಟಿ-20 ವಿಶ್ವಕಪ್​ಗಾಗಿ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ 15 ಸದಸ್ಯರ ತಂಡವನ್ನ ಬಿಸಿಸಿಐ ಅನೌನ್ಸ್ ಮಾಡಿದೆ. ಈ ಟೂರ್ನಿಗೆ ಅಕ್ಷರ್ ಪಟೇಲ್ ವೈಸ್ ಕ್ಯಾಪ್ಟನ್ ಆಗಿದ್ದಾರೆ. ಇಶಾನ್ ಕಿಶನ್ ಮತ್ತು ರಿಂಕು ಸಿಂಗ್​ ಅನ್​ಎಕ್ಸ್​​ಪೆಕ್ಟೆಡ್ ರೀತಿ ಸೆಲೆಕ್ಟ್ ಆದ್ರು. ಶುಭ್​ಮನ್ ಗಿಲ್ ಮತ್ತು ಜಿತೇಶ್ ಶರ್ಮಾರನ್ನ ಕೈಬಿಡಲಾಗಿದೆ. ಜಿತೇಶ್​ರನ್ನ ಕೈಬಿಡೋಕೆ ಕಾರಣ ಬ್ಯಾಟಿಂಗ್ ಡೆಪ್ತ್ ಇಂಪ್ರೂ ಮಾಡೋದು. ಕಿಶನ್ ಮತ್ತು ರಿಂಕು ಜಿತೇಶ್​ಗಿಂತ ಬೆಟರ್ ಅನ್ಸಿದ್ದಕ್ಕೆ ಪಿಕ್ ಮಾಡಿದ್ದಾರೆ. ಬಟ್ ಗಿಲ್​ರನ್ನ ಪ್ಯೂರ್ಲಿ ಫೇಲ್ಯೂರ್​ನಿಂದಲೇ ಕೈಬಿಟ್ಟಿದ್ದಾರೆ. ಟಿ-20ಐ ಫಾರ್ಮೆಟ್​ನಲ್ಲಿ ಯೂಸ್ ಆಗ್ತಿಲ್ಲ ಅನ್ನೋ ಕಾರಣಕ್ಕಾಗಿಯೇ ಕೈಬಿಟ್ರು. ಬಟ್ ಈಗ ಏಕದಿನ ಮಾದರಿ ಕ್ರಿಕೆಟ್​ನಲ್ಲಿ ಕಂಟಿನ್ಯೂ ಮಾಡಿಸ್ಬೇಕಾ ನೆಕ್ಸ್​ಟ್ ಸರಣಿಗೆ ಏನು ಮಾಡ್ಬೇಕು ಅನ್ನೋ ಟೆನ್ಷನ್ ಶುರುವಾಗಿದೆ.

ಜನವರಿ 2ನೇ ವಾರದಿಂದ ಏಕದಿನ ಸರಣಿ ಆರಂಭ?

2025ರ ಎಲ್ಲಾ ಪಂದ್ಯಗಳು ಮುಗಿದಿದ್ದು ಇನ್ನೇನಿದ್ರೂ ನೆಕ್ಸ್​ಟ್ ಇಯರ್​ ಪಂದ್ಯಗಳಿವೆ. ನ್ಯೂಜಿಲೆಂಡ್ ವಿರುದ್ಧ ಜನವರಿ 11 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ವಡೋದರಾದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದು ಬಳಿಕ ಜನವರಿ 14ಕ್ಕೆ ರಾಜ್​ಕೋಟ್​ನಲ್ಲಿ ಎರಡನೇ ಪಂದ್ಯ ನಡೆಯಲಿದೆ. ಮೂರನೇ ಪಂದ್ಯಕ್ಕೆ ಜನವರಿ 18ರಂದು ಇಂದೋರ್ ಸಾಕ್ಷಿಯಾಗಲಿದೆ. ಅಲ್ಲಿಗೆ ಮೂರು ಪಂದ್ಯಗಳ ಏಕದಿನ ಸರಣಿ ಮುಗಿಯುತ್ತೆ. ಇದಾದ್ಮೇಲೆ ಭಾರತ ಮತ್ತೆ ಏಕದಿನ ಪಂದ್ಯಗಳನ್ನ ಆಡೋದು ಮುಂದಿನ ವರ್ಷ ಜುಲೈನಲ್ಲಿ. ಟಿ-20 ವಿಶ್ವಕಪ್, ಐಪಿಎಲ್​ ಎಲ್ಲಾ ಮುಗಿಸಿ ಆ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಜುಲೈನಲ್ಲಿ ಆಂಗ್ಲರ ವಿರುದ್ಧ 3 ಪಂದ್ಯಗಳ ಸರಣಿಯನ್ನಾಡಲಿದೆ. ಜುಲೈ 14, 16 ಹಾಗೂ 19ರಂದು ಪಂದ್ಯಗಳು ನಡೆಯಲಿವೆ. ಸೋ ಈಗ ನ್ಯೂಜಿಲೆಂಡ್ ವಿರುದ್ಧದ ಸರಣಿಯದ್ದೇ ಮ್ಯಾನೇಜ್​ಮೆಂಟ್​ಗೆ ತಲೆಬಿಸಿಯಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಸೆಲೆಕ್ಟ್ ಆಗ್ತಾರಾ ಗಿಲ್?

ಶುಭ್​ಮನ್ ಗಿಲ್ ವೈಟ್ ಬಾಲ್ ಫಾರ್ಮೆಟ್​ನಲ್ಲಿ ಕಳಪೆ ಫಾರ್ಮ್​ನಲ್ಲಿದ್ದು ತಂಡದಲ್ಲಿ ಇದ್ದೂ ಇಲ್ಲದಂತಾಗಿದ್ದಾರೆ. ಪದೇಪದೆ ಚಾನ್ಸ್ ಕೊಟ್ರೂ ಒಂದೂ ಬಿಗ್ ಇನ್ನಿಂಗ್ಸ್ ಬರ್ಲಿಲ್ಲ. ಇನ್ನು ಏಷ್ಯಾಕಪ್​ ಬಳಿಕ ಟಿ-20 ತಂಡಕ್ಕೆ ಕಂ ಬ್ಯಾಕ್ ಮಾಡಿದ್ರೂ ಒಂದೂ ಅರ್ಧಶತಕ ಬಾರಿಸದೇ ಈ ವರ್ಷ ಮುಗಿಸಿದ್ರು. ಇನ್ನು ಏಕದಿನ ಮಾದರಿಯಲ್ಲೂ ಅಷ್ಟೊಂದು ಇಂಪ್ರೆಸ್ಸಿವ್ ಆಗಿಲ್ಲ. ಕಳೆದ ಆಸೀಸ್​ ಸರಣಿಯಲ್ಲಿ 3 ಇನ್ನಿಂಗ್ಸ್​ಗಳಿಂದ 42 ರನ್ಸ್ ಅಷ್ಟೇ ಬಂದಿತ್ತು. ಹಾಗೇ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಇಂಜುರಿ ಕಾರಣಕ್ಕೆ ತಂಡದಿಂದಲೇ ಹೊರ ಬಿದ್ದಿದ್ದು. ಸೋ ಕೆಎಲ್ ರಾಹುಲ್ ನಾಯಕತ್ವದಲ್ಲಿ ಭಾರತ ಮೂರು ಪಂದ್ಯಗಳ ಸರಣಿಯನ್ನ 2-1 ಅಂತರದಲ್ಲಿ ಗೆದ್ಕೊಂಡಿತ್ತು. ಸೋ ಇಂಥಾ ಟೈಮಲ್ಲಿ ಗಿಲ್​ಗೆ ನಾಯಕತ್ವ ನೀಡೋದು ಎಷ್ಟು ಸರಿ ಅನ್ನೋ ಚರ್ಚೆ ಶುರುವಾಗಿದೆ. ಹಾಗೇ ಇಂಜುರಿ ಕಾರಣಕ್ಕೆ ಸೌತ್ ಆಫ್ರಿಕಾ ಸಿರೀಸ್ ಮಿಸ್ ಮಾಡ್ಕೊಂಡಿದ್ದ ಶ್ರೇಯಸ್ ಅಯ್ಯರ್ ಕೂಡ ಕಂ ಬ್ಯಾಕ್ ಮಾಡ್ತಿದ್ದು ತಂಡ ಹೇಗಿರುತ್ತೆ ಅನ್ನೋ ಟೆನ್ಷನ್ ಕೂಡ ಇದೆ. ಗಿಲ್​ ಆಡ್ಸಿದ್ರೂ ಕಷ್ಟ ಕೈಬಿಟ್ರೂ ಕಷ್ಟ ಅನ್ನೋ ಹಾಗೇ ಮ್ಯಾನೇಜ್​ಮೆಂಟ್ ಪಾಲಿಗೆ ಬಿಸಿತುಪ್ಪ ಆಗಿಬಿಟ್ಟಿದ್ದಾರೆ.

ಬಿಸಿ ತುಪ್ಪವಾದ ಗಿಲ್!

ಫಾರ್ಮ್ ನಲ್ಲಿ ಇಲ್ಲದ ಗಿಲ್ ಆಯ್ಕೆಯೇ ಬಿಸಿಸಿಐಗೆ ಕಗ್ಗಂಟು

ಟೆಸ್ಟ್ ಕ್ಯಾಪ್ಟನ್ಸಿ ಗೆದ್ರೂ ಏಕದಿನ ಮಾದರಿಯ ನಾಯಕನಾಗಿ ಡಲ್

ರೋಹಿತ್ ಶರ್ಮಾ & ವಿರಾಟ್ ಕೊಹ್ಲಿ ಶೈನ್, ಗಿಲ್ ಫೇಲ್ಯೂರ್

ನ್ಯೂಜಿಲೆಂಡ್ ಸರಣಿಗೆ ಸೆಲೆಕ್ಟ್ ಮಾಡಿದ್ರೆ ಕಳಪೆ ಫಾರ್ಮ್ ಟೆನ್ಷನ್

ಕೆಎಲ್ ರಾಹುಲ್ ನಾಯಕತ್ವದಲ್ಲಿ ಸೌತ್ ಆಫ್ರಿಕಾ ಸರಣಿ ಗೆಲುವು

ಶ್ರೇಯಸ್ ಅಯ್ಯರ್ ಕಂ ಬ್ಯಾಕ್ ಮಾಡ್ತಿರೋದ್ರಿಂದ ನಾಯಕತ್ವ ಗೊಂದಲ

ಗಿಲ್ ಸೈಡ್ ಲೈನ್ ಮಾಡಂಗಿಲ್ಲ.. ಫೇಲ್ಯೂರ್ ಆದ್ರೆ ಬಿಸಿಸಿಐ ಬಗ್ಗೆ ಟೀಕೆ

ಹೀಗೆ ಗಿಲ್ ವಿಚಾರದಲ್ಲಿ ಬಿಸಿಸಿಐ ತುಂಬಾನೇ ಗೊಂದಲಕ್ಕೊಳಲಾಗಿದೆ. ಟಿ-20ಐ ತಂಡದಿಂದ ಆಲ್ರೆಡಿ ಗೇಟ್​ಪಾಸ್ ಕೊಟ್ಟಿದ್ದಾರೆ. ಟಿ-20 ವಿಶ್ವಕಪ್​ಗೆ ಸೆಲೆಕ್ಟ್ ಆಗಿರೋ ತಂಡವೇ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿ ಆಡೋದು ಅಂತಾ ಹೇಳಿರೋದ್ರಿಂದ ಗಿಲ್ ಈ ಸರಣಿ ಮಿಸ್ ಮಾಡಿಕೊಳ್ತಾರೆ. ಬಟ್ ಅದಕ್ಕೂ ಮುನ್ನ ನಡೆಯೋ ಏಕದಿನ ಸರಣಿಯಿಂದ ಏನ್ ಮಾಡೋದು ಅನ್ನೋ ಟೆನ್ಷನ್​ನಲ್ಲಿದ್ದಾರೆ. ಹಂಗೋ ಹಿಂಗೋ ಮಾಡಿ ಇದೊಂದು ಸರಣೀ ಪಾಸಾದ್ರೆ ನೆಕ್ಸ್​ಟ್ ಇನ್ನು ಆರು ತಿಂಗಳು ಗಿಲ್​ಗೆ ಮೆನ್ ಇನ್ ಬ್ಲ್ಯೂ ಜೆರ್ಸಿನಲ್ಲಿ ಕಾಣಿಸಿಕೊಳ್ಳಲ್ಲ. ಸೋ ಗಿಲ್ ವಿಚಾರದಲ್ಲಿ ಬಿಸಿಸಿಐ ಯಾವ ನಿರ್ಧಾರ ತಗೊಳ್ಳುತ್ತೆ ಅನ್ನೋದೇ ಈಗಿರೋ ಪ್ರಶ್ನೆ.

Shantha Kumari