ಅಯ್ಯಯ್ಯೋ.. ಚಿರತೆ ಸೆರೆಗೆ ಇಟ್ಟಿದ್ದ ಬೋನಿನೊಳಗೆ 3 ಗಂಟೆ ಲಾಕ್‌ ಆದ ರೈತ!  

ಅಯ್ಯಯ್ಯೋ.. ಚಿರತೆ ಸೆರೆಗೆ ಇಟ್ಟಿದ್ದ ಬೋನಿನೊಳಗೆ 3 ಗಂಟೆ ಲಾಕ್‌ ಆದ ರೈತ!  

ಚಿರತೆ ಸೆರೆಹಿಡಿಯಲೆಂದು ತಂದಿಟ್ಟ ಬೋನಿನೊಳಗೆ ರೈತ ಲಾಕ್‌ ಆಗಿರುವ ಘಟನೆ ನಡೆದಿದೆ. ಸುಮಾರು 3 ಗಂಟೆಗಳ ಕಾಲ ರೈತ ಬೋನಿನೊಳಗೆ ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ: ನಮ್ಮ ಸುದ್ದಿಗೆ ಬರ್ತೀಯಾ? – ಕಣ್ಣಿಗೆ ಕಾಡಿಗೆ.. ತುಟಿಗೆ ಲಿಪ್‌ಸ್ಟಿಕ್‌ ಹಚ್ಚಿ ಗಿಲ್ಲಿ ಮೇಲೆ ರಿವೇಂಜ್‌ ತೆಗೆದುಕೊಂಡ ಮನೆಮಂದಿ!

ಈ ವಿಚಿತ್ರ ಘಟನೆ ಚಾಮರಾಜನಗರ ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ನಡೆದಿದೆ. ಕಿಟ್ಟಿ ಎಂಬಾತ ಬೋನಿನೊಳಗೆ ಲಾಕ್‌ ಆದ ವ್ತಕ್ತಿ. ಸದ್ಯ ರೈತನನ್ನ ರಕ್ಷಿಸಲಾಗಿದೆ.

ಅಷ್ಟಕ್ಕೂ ಆಗಿದ್ದೇನು?

ಗ್ರಾಮದಲ್ಲಿನ ಮೂರು ಹಸುಗಳನ್ನು ಚಿರತೆ ಕೊಂದು ಹಾಕಿತ್ತು. ಈ ಹಿನ್ನೆಲೆ ಚಿರತೆ ಸೆರೆಗೆ ರುದ್ರ ಎಂಬುವವರ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಟ್ಟಿದ್ದರು. ಈ ವೇಳೆ ಕಿಟ್ಟಿ ಯಾರೂ ಇಲ್ಲದ ವೇಳೆ ಕುತೂಹಲದಿಂದ ಬೋನಿನ ಒಳಹೊಕ್ಕಿದ್ದರು. ಈ ವೇಳೆ ಆಟೋಮ್ಯಾಟಿಕ್ ಆಗಿ ಮುಚ್ಚಿಕೊಂಡ ಬೋನಿನ ಬಾಗಿಲು ಲಾಕ್ ಆಗಿದೆ.

ಬೋನಿನ ಬಾಗಿಲು ತೆರೆಯಲು ಯತ್ನಿಸಿದರೂ ಕೂಡ ಆಗದೇ ವಿಫಲರಾಗಿದ್ದಾರೆ. ಬಳಿಕ ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡಿದ್ದು, ಕಿಟ್ಟಿಯ ಚೀರಾಟ ಕೇಳಿ ಸ್ಥಳಕ್ಕೆ ಬಂದ ರೈತರು ಬಂಧ ಮುಕ್ತಗೊಳಿಸಿದ್ದಾರೆ.

Shwetha M