ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಕೆ.ಎಲ್ ರಾಹುಲ್? – ಕ್ಯಾಪ್ಟನ್ ಪಟ್ಟದಿಂದ ಅಕ್ಷರ್ ಪಟೇಲ್ ಔಟ್

ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್, ಹೆಮ್ಮೆಯ ಕನ್ನಡಿಗ ಕೆ.ಎಲ್ ರಾಹುಲ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕ್ಯಾಪ್ಟನ್ ಆಗಿ ಶೈನ್ ಆಗೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ 2026ರ ಐಪಿಎಲ್ಗೆ ನಾಯಕತ್ವ ಬದಲಾವಣೆ ಮಾಡುತ್ತಿದೆ. ಅಕ್ಷರ್ ಪಟೇಲ್ ಅವರ ಕೆಎಲ್ ರಾಹುಲ್ ನಾಯಕರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲೇ ನಡೆಯಲಿದೆ ವಿಜಯ್ ಹಜಾರೆ ಟೂರ್ನಿ ಪಂದ್ಯ! – ಆದ್ರೂ ಕೊಹ್ಲಿನ ಫ್ಯಾನ್ಸ್ ನೋಡುವಂತಿಲ್ಲ!
ಡೆಲ್ಲಿ ಕ್ಯಾಪಿಟಲ್ಸ್ ತಂಡ ಮಿನಿ ಹರಾಜಿನ ನಂತರ ಬಲಿಷ್ಠ ಟೀಮ್ ಕಟ್ಟಿರುವ ಉತ್ಸಾಹದಲ್ಲಿದೆ. ಜೊತೆಗೆ ತಂಡದ ನಾಯಕತ್ವ ಬದಲಾವಣೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಡೆಲ್ಲಿ ಫ್ರಾಂಚೈಸಿ, ಸ್ಟಾರ್ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿದೆ. 2025 ರ ಐಪಿಎಲ್ ಆವೃತ್ತಿಯಲ್ಲಿ ಅಕ್ಷರ್ ತಂಡದ ನಾಯಕರಾಗಿದ್ದರು, ಆದರೆ ಈ ಆವೃತ್ತಿಯಲ್ಲಿ ಅವರು ಆಟಗಾರನಾಗಿ ಮಾತ್ರ ಆಡಲಿದ್ದಾರೆ. ಇದರ ಜೊತೆಗೆ ಅಕ್ಷರ್ ಬದಲಿಗೆ ಯಾರು ತಂಡದ ನಾಯಕತ್ವವಹಿಸಿಕೊಳ್ಳಲಿದ್ದಾರೆ ಎಂಬುದರ ಕುರಿತು ಪ್ರಮುಖ ಮಾಹಿತಿ ಹೊರಬಿದ್ದಿದೆ. ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆ.ಎಲ್ ರಾಹುಲ್ಗೆ ಈಗಾಗಲೇ ನಾಯಕತ್ವದ ಅನುಭವವಿದೆ. ಈ ಹಿಂದೆ ಅವರು ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದ ಅನುಭವವನ್ನು ಹೊಂದಿದ್ದಾರೆ. ಹೀಗಾಗಿ ರಾಹುಲ್ ಅವರನ್ನು ನಾಯಕನಾಗಿ ನೇಮಿಸಿಲು ಆಡಳಿತ ಮಂಡಳಿ ಮುಂದಾಗಿದೆ. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಮಾಡಲಾಗಿಲ್ಲವಾದರೂ, ರಾಹುಲ್ ಅವರ ಹೆಸರು ಫೈನಲ್ ಆಗಿದೆ ಎಂದು ಹೇಳಲಾಗುತ್ತಿದೆ.

ನೋಡಿರಿ

