RCB ಮಾಸ್ಟರ್ ಮೈಂಡ್ DK – ಹರಾಜಿನಲ್ಲೇ SMART ಐಡಿಯಾ
2ನೇ ಕಪ್ ಗೆಲ್ಲಿಸುತ್ತಾರಾ ದಿನೇಶ್?

ಐಪಿಎಲ್ ಮಿನಿ ಆಕ್ಷನ್ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಇನ್ನೂ ಸ್ಟ್ರಾಂಗ್ ಆಗಿದೆ. ಹರಾಜಿನಲ್ಲಿ ದಿ ಬೆಸ್ಟ್ ಅನ್ನೋ ಆಟಗಾರರನ್ನೇ ಖರೀದಿ ಮಾಡಿದ್ದಾರೆ. ಕ್ರಿಕೆಟ್ ಎಕ್ಸ್ಪರ್ಟ್ಸ್, ಮಾಜಿ ಪ್ಲೇಯರ್ಸ್, ಕಾಮೆಂಟೇಟರ್ಗಳೇ ಹೇಳೋ ಪ್ರಕಾರ ಬೆಂಗಳೂರು ಟೀಂ ಕಂಪ್ಲೀಟ್ ಪ್ಯಾಕೇಜ್ನಂತಿದೆ. ಈ ಕಂಪ್ಲೀಟ್ ಟೀಮ್ನ ಮಾಸ್ಟರ್ ಮೈಂಡ್ ಅಂದ್ರೆ ಅದು ದಿನೇಶ್ ಕಾರ್ತಿಕ್. ಡಿಕೆ ಬಾಸ್ ಅಂತಾನೇ ಕರೆಸಿಕೊಳ್ಳೋ ದಿನೇಶ್ ಕಾರ್ತಿಕ್ ಆರ್‌ಸಿಬಿ ತಂಡದ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆದ್ಮೇಲೆ ತಂಡದ ದಿಕ್ಕೇ ಬದ್ಲಾಗಿದೆ. 18 ವರ್ಷಗಳ ಬಳಿಕ ಚೊಚ್ಚಲ ಕಪ್ ಗೆದ್ರು. ಈಗ ಮತ್ತಷ್ಟು ಡೇಂಜರಸ್ ಆಗಿ ನೆಕ್ಸ್ಟ್ ಸೀಸನ್ಗೆ ಸಜ್ಜಾಗಿದ್ದಾರೆ.
ಇದನ್ನೂ ಓದಿ : 68ನೇ ವಯಸ್ಸಿನಲ್ಲಿ 58ರ ಆಂಟಿ ಕೈ ಹಿಡಿದ ಅಪ್ಪ – ಇಳಿವಯಸ್ಸಿನ ಅಂಕಲ್ ಮದುವೆಗೆ ಮಕ್ಕಳ ಗಲಾಟೆ
ಐಪಿಎಲ್ ನಲ್ಲೇ ದಿ ಮೋಸ್ಟ್ ಫ್ಯಾನ್ ಬೇಸ್ಡ್ ಟೀಂ ಅಂದ್ರೆ ಅದು ಆರ್‌ಸಿಬಿ. ಜಗತ್ತಿನ ಲೆಜೆಂಡರಿ ಪ್ಲೇಯರ್ಸ್ ಕೂಡ ಆರ್‌ಸಿಬಿ ಜೆರ್ಸಿಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಹೀಗಿದ್ರೂ ಚೊಚ್ಚಲ ಕಪ್ ಗೆಲ್ಲೋಕೆ 18 ಸೀಸನ್ ಕಾಯ್ಬೇಕಾಯ್ತು. 2025ರಲ್ಲಿ ರಜತ್ ಪಾಟಿದಾರ್ ನಾಯಕತ್ವದಲ್ಲಿ ಮೊದಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದ್ದ ಟೀಂ ಈಗ 19ನೇ ಆವೃತ್ತಿಯಲ್ಲೂ ಕಪ್ ಗೆಲ್ಲುವಂಥ ಮೋಸ್ಟ್ ಫೇವರೆಟ್ ಟೀಂ ಎನಿಸಿಕೊಳ್ತಿದೆ. ಯಾಕಂದ್ರೆ ಬ್ಯಾಟಿಂಗ್, ಬೌಲಿಂಗ್, ಮಿಡಲ್ ಆರ್ಡರ್ ಹಾಗೇ ಫಿನಿಶರ್ಸ್ ಅಂತೆಲ್ಲಾ ಇಡೀ ಟೀಂ ಬ್ಯಾಲೆನ್ಸ್ಡ್ ಆಗಿದೆ. ಮೆಗಾ ಹರಾಜು, ಮಿನಿ ಹರಾಜಿನಲ್ಲಿ ಗ್ರೌಂಡ್ ವರ್ಕ್ ಮಾಡಿ ಅಳೆದು ತೂಗಿ ಬಜೆಟ್ಗೆ ತಕ್ಕಂತೆ ಪ್ಲೇಯರ್ಗಳನ್ನೇ ಪಿಕ್ ಮಾಡಿದ್ರು. ತಂಡದಲ್ಲಿ ಇಷ್ಟೆಲ್ಲಾ ಚೇಂಜಸ್ ಆಗೋಕೆ ಮುಖ್ಯ ಕಾರಣವೇ ದಿನೇಶ್ ಕಾರ್ತಿಕ್!
ಡಿಕೆ ಮೆಂಟರ್ ಆದ್ಮೇಲೆ ಇಡೀ ತಂಡವೇ ಬದಲಾವಣೆ!
ಬೆಂಗಳೂರು ಟೀಂ ಅಂದ್ರೆ ಬರೀ ಅಭಿಮಾನಿಗಳಷ್ಟೇ ಅಲ್ಲ ಇಲ್ಲಿ ಆಡಿದ ಪ್ಲೇಯರ್ಸ್ಗೂ ಅಚ್ಚುಮೆಚ್ಚು. ಹೀಗಾಗಿ ಟೀಂ ಬಿಟ್ರೂ ಅಭಿಮಾನ ಬಿಟ್ಟಿಲ್ಲ. ಕ್ರಿಸ್ ಗೇಲ್, ಎಬಿಡಿವಿಲಿಯರ್ಸ್ ಈಗ್ಲೂ ಆರ್‌ಸಿಬಿ ಸಪೋರ್ಟ್ಗೆ ಬರ್ತಾರೆ. ಹೀಗೇ ಆರ್ಸಿಬಿಯನ್ನ ಅತಿಹೆಚ್ಚು ಪ್ರೀತಿಸೋರಲ್ಲಿ ದಿನೇಶ್ ಕಾರ್ತಿಕ್ ಕೂಡ ಒಬ್ರು. ದಿನೇಶ್ ಕಾರ್ತಿಕ್ ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಪ್ರೀತಿಯ ಡಿಕೆ ಬಾಸ್. 2024ರ ಐಪಿಎಲ್ ಸೀಸನ್ನಲ್ಲಿ ಆರ್‌ಸಿಬಿ ತಂಡದಲ್ಲಿ ಆಪತ್ಪಾಂಧವನಾಗಿ ಬೆಸ್ಟ್ ಫಿನಿಶರ್ ಆಗಿದ್ರು. ಅದೇ ವರ್ಷ ನಿವೃತ್ತಿ ಕೂಡ ಘೋಷಿಸಿದ್ರು.. ಆದ್ರೆ ಡಿಕೆ ಗತ್ತು ಎಂಥಾದ್ದು ಅನ್ನೋದು ಗೊತ್ತಿದ್ದ ಫ್ರಾಂಚೈಸಿ 2025ರ ಐಪಿಎಲ್ಗೂ ಮುನ್ನ ತಂಡದ ಬ್ಯಾಟಿಂಗ್ ಕೋಚ್ ಹಾಗೇ ಮೆಂಟರ್ ಆಗಿ ಆಯ್ಕೆ ಮಾಡಿತ್ತು. ಅಂದಿನಿಂದ ಈವರೆಗೂ ಡಿಕೆ ಸ್ಟ್ರಾಟರ್ಜಿ ಕಂಪ್ಲೀಟ್ ಆಗಿ ವರ್ಕ್ ಆಗ್ತಿದೆ. ಸೋ ಮೆಂಟರ್ ಆಗಿ ಡಿಕೆ ತೆಗೆದುಕೊಂಡ ಒಂದಷ್ಟು ಸ್ಮಾರ್ಟ್ ಮೂವ್ ಬಗ್ಗೆನೇ ನೋಡ್ತಾ ಹೋಗೋಣ. ನಂಬರ್ 1.
ಆರ್ ಸಿಬಿ ಮಾಸ್ಟರ್ ಮೈಂಡ್ ಡಿಕೆ!
- ಡಿಕೆಗೆ ಜವಾಬ್ದಾರಿ ಸಿಕ್ಕ ಬೆನ್ನಲ್ಲೇ ಮೆಗಾ ಆಕ್ಷನ್ ಬಗ್ಗೆ ತಂತ್ರಗಾರಿಕೆ
- 2025ರ ಮೆಗಾ ಹರಾಜಿನಲ್ಲೇ ಕ್ವಾಲಿಟಿ ಪ್ಲೇಯರ್ಸ್ ಶಾರ್ಟ್ ಲಿಸ್ಟ್
- ಪರ್ಫಾಮೆನ್ಸ್, ಯಾವ ಸ್ಲಾಟ್ ನಲ್ಲಿ ಎಫೆಕ್ಟಿವ್ ಅನ್ನೋ ಬಗ್ಗೆ ವರ್ಕ್
- ಬ್ಯಾಟಿಂಗ್ ಚೆನ್ನಾಗಿದ್ರೂ ಬೌಲಿಂಗ್ ವೀಕ್, ಈ ಬಗ್ಗೆ ಗ್ರೌಂಡ್ ವರ್ಕ್
- ಮೆಗಾ ಆಕ್ಷನ್ ನಲ್ಲಿ ಬ್ಯಾಟಿಂಗ್ ಜೊತೆ ಬೌಲಿಂಗ್ ಗೂ ಬೆಸ್ಟ್ ಸೆಲೆಕ್ಷನ್
- ಪ್ರತೀ ಪಂದ್ಯಕ್ಕೂ ಮುನ್ನ ಪ್ಲೇಯಿಂಗ್ 11 ಬಗ್ಗೆ ನಾಯಕನ ಜತೆ ಚರ್ಚೆ
- ಆಟಗಾರರ ಪ್ಲಸ್ & ಮೈನಸ್ ಏನು ಅನ್ನೋ ಬಗ್ಗೆ ಮಾತುಕತೆ ನಡೆಸಿ ಆಯ್ಕೆ
- ಡ್ರೆಸ್ಸಿಂಗ್ ರೂಮ್ ನಲ್ಲಿ ಎಲ್ಲರ ಜೊತೆಯೂ ಫ್ರೆಂಡ್ಲಿಯಾಗಿ ಮಿಂಗಲ್
- 2026ರ ಐಪಿಎಲ್ ಗೆ ರಿಲೀಸ್ ಮಾಡುವಾಗಲೇ ಅಳೆದು ತೂಗಿ ಹೆಜ್ಜೆ
- ಮಿನಿ ಆಕ್ಷನ್ ಆಟಗಾರರ ಖರೀದಿಯಲ್ಲೂ ಸ್ಟ್ರಾಂಗ್ ಪ್ಲೇಯರ್ಸ್ ಆಯ್ಕೆ
ಹೀಗೆ ಡಿಕೆಗೆ ಅಧಿಕಾರ ಸಿಕ್ಕ ಮೇಲೆ ಆರ್ಸಿಬಿಯನ್ನ ಚಾಂಪಿಯನ್ ಮಾಡ್ಲೇಬೇಕು ಅಂತಾ ಪಣ ತೊಟ್ಟ ಡಿಕೆ ಫಸ್ಟ್ ಸೀಸನ್ನಲ್ಲೇ ಮಾಡಿ ತೋರಿಸಿದ್ರು. ಇನ್ನು ಐಪಿಎಲ್‌ನಲ್ಲಿ ಆಟಗಾರನಾಗಿಯೂ ಡಿಕೆ ಸದ್ದು ಮಾಡಿದ್ದಾರೆ. ಆರ್‌ಸಿಬಿ, ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ಸೇರಿದಂತೆ ಆರು ತಂಡಗಳ ಪರ ಡಿಕೆ ಕಣಕ್ಕಿಳಿದಿದ್ರು. 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ ದಿನೇಶ್ ಕಾರ್ತಿಕ್ ಅವರನ್ನು ಖರೀದಿಸಿತ್ತು. ಅಲ್ಲಿಂದ ಈಚೆಗೆ ಆರ್ಸಿಬಿಯಲ್ಲೇ ಕಂಟಿನ್ಯೂ ಆಗ್ತಿದ್ದಾರೆ. ಐಪಿಎಲ್‌ನಲ್ಲಿ 257 ಪಂದ್ಯಗಳನ್ನ ಆಡಿದ್ದು, 22 ಅರ್ಧಶತಕಗಳೊಂದಿಗೆ 4842 ರನ್ ಗಳಿಸಿದ್ದಾರೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಟಾಪ್ 10 ಪ್ಲೇಯರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಡಿಕೆಯವ್ರ ಈ ಟ್ಯಾಲೆಂಟ್ ನೋಡಿಯೇ ದಿ ಹಂಡ್ರೆಡ್ ಲೀಗ್ನಲ್ಲೂ ಲಂಡನ್ ಸ್ಪಿರಿಟ್ ಮೆನ್ಸ್ ಟೀಮ್ನಲ್ಲಿ ಉನ್ನತ ಹುದ್ದೆ ನೀಡಿದ್ದಾರೆ. ಅಲ್ಲೂ ಕೂಡ ಮೆಂಟರ್ ಮತ್ತು ಬ್ಯಾಟಿಂಗ್ ಕೋಚ್ ಆಗಿ ಆಯ್ಕೆ ಮಾಡಿದ್ದಾರೆ.

ನೋಡಿರಿ

