ಕಪ್ ಗೆದ್ದು ಬಾಲ ಬಿಚ್ಚಿದ PAK – ಬೌಲರ್ ಗೆ ಶೂ ತೋರಿಸಿದ ವೈಭವ್
U-19ನಲ್ಲೂ ಇಂಡೋ-ಪಾಕ್ ವಾರ್

ಇಂಡೋ-ಪಾಕ್ ಮ್ಯಾಚ್ ಅಂದ್ರೆ ಅದು ಯಾವ ವಾರ್ಗೂ ಕಮ್ಮಿ ಇರಲ್ಲ. ಆದ್ರೆ ಪ್ರತೀ ಸಲ ಭಾರತದ ಎದುರು ಪಾಕಿಗಳು ಮಣ್ಣು ಮುಕ್ಕೋದು ತಪ್ಪಲ್ಲ. ಇದೇ ವರ್ಷ ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್, ವುಮೆನ್ಸ್ ವಿಶ್ವಕಪ್ನಲ್ಲೂ ಭಾರತವೇ ಡಾಮಿನೇಟ್ ಮಾಡಿ ಗೆದ್ದಿತ್ತು. ಬಟ್ ಈಗ ಅಂಡರ್ 19 ಏಷ್ಯಾಕಪ್ ಫೈನಲ್ನಲ್ಲಿ ಅಪ್ಪಿತಪ್ಪಿ ಪಾಕಿಗಳು ಗೆದ್ಬಿಟ್ಟಿದ್ದಾರೆ. ಅದೂ ಕೂಡ ಭಾರತದ ಎದುರು. ಕೇಳ್ಬೇಕಾ. ಮೈದಾನದಲ್ಲೇ ಬಾಲ ಬಿಚ್ಚಿದ್ದಾರೆ. ಅದಕ್ಕೆ ಸರಿಯಾಗಿ ಭಾರತೀಯರು ತಿರುಗೇಟು ಕೊಟ್ಟಿದ್ದಾರೆ. ಭಾರತ-ಪಾಕಿಸ್ತಾನ ಅಂಡರ್ 19 ಏಷ್ಯಾಕಪ್ ಫೈನಲ್ನಲ್ಲಿ ಆಟಕ್ಕಿಂತ ಕಿತ್ತಾಟವೇ ಜಾಸ್ತಿ ಇತ್ತು.
ಇದನ್ನೂ ಓದಿ : RCB ಸೇರಿದ ಬೆನ್ನಲ್ಲೇ ಬಂಪರ್ ಲಾಟರಿ – ಪಾಟಿದಾರ್ ಕ್ಯಾಪ್ಟನ್ಸಿ ಕಿತ್ಕೊಂಡ ವೆಂಕಟೇಶ್ ಅಯ್ಯರ್
ಏಷ್ಯಾಕಪ್ ಅಂತಾ ಬಂದಾಗ ಕಂಪ್ಲೀಟ್ ಆಗಿ ಪಾರುಪತ್ಯ ಸಾಧಿಸಿರೋದೇ ಭಾರತ. ಅದು ಸೀನಿಯರ್ಸ್ ಟೂರ್ನಿ ಇರ್ಲಿ ಅಥವಾ ಜೂನಿಯರ್ಸ್ ಇರ್ಲಿ. ಬಟ್ ಈ ಸಲ ಅಂಡರ್ 19ನಲ್ಲಿ ಪಾಕಿಸ್ತಾನ ಗೆದ್ದಿದೆ. ಅದೂ ಎರಡನೇ ಸಲ ಕಪ್ ಗೆದ್ದಿರೋದು. ಬಟ್ 8 ಸಲ ಟ್ರೋಫಿ ವಿನ್ನರ್ಸ್ ಆಗಿದ್ದ ಭಾರತ ಈ ಸಲ ರನ್ನರ್ಅಪ್ ಆಗಿದೆ. ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ನಾಯಕತ್ವದ ಟೀಂ ಇಂಡಿಯಾ ಕೇವಲ 156 ರನ್ಗಳಿಗೆ ಆಲೌಟ್ ಆಗುವ ಮೂಲಕ 191 ರನ್ಗಳ ಭಾರಿ ಅಂತರದ ಹೀನಾಯ ಸೋಲು ಕಂಡಿದೆ. ಭಾರತವನ್ನ ಸೋಲಿಸಿ ಕಪ್ ಗೆದ್ದಿದ್ದಕ್ಕೆ ಪಾಕಿಗಳ ಹುಚ್ಚಾಟ ಮಿತಿ ಮೀರಿತ್ತು. ಅದೆಷ್ಟರ ಮಟ್ಟಿಗೆ ಅಂದ್ರೆ ವೈಭವ್ ಸೂರ್ಯವಂಶಿ ತಾಳ್ಮೆ ಕಳ್ಕೊಂಡು ಶೂ ತೋರಿಸಿದ್ದಾರೆ. ಏನೆಲ್ಲಾ ಕಿರಿಕ್ ಆಗಿದೆ ಅನ್ನೋದನ್ನ ಹೇಳೋ ಮೊದ್ಲು ಮ್ಯಾಚ್ ಹೈಲೇಟ್ಸ್ ಬಗ್ಗೆ ಹೇಳಿ ಬಿಡ್ತೇನೆ.
ಟಾಸ್ ಗೆದ್ರೂ ಬೌಲಿಂಗ್ & ಬ್ಯಾಟಿಂಗ್ ನಲ್ಲಿ ಎಡವಿದ ಭಾರತ!
ಪಂದ್ಯಕ್ಕೂ ಮುನ್ನ ಟಾಸ್ ಗೆದ್ದಂತ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತೆ. ಪಾಕ್ ಪರ ಆರಂಭಿಕ ಆಟಗಾರ ಸಮೀರ್ ಮಿನ್ಹಾಸ್ 113 ಎಸೆತಗಳಲ್ಲಿ 17 ಬೌಂಡರಿಗಳು, 9 ಸಿಕ್ಸರ್ಗಳ ಸಹಾಯದಿಂದ 172 ಸಿಡಿಸಿದರು. ಮತ್ತೊಬ್ಬ ಬ್ಯಾಟರ್ ಅಹ್ಮದ್ ಹುಸೇನ್ 56 ರನ್ ಬಾರಿಸಿದರು. ಈ ಮೂಲಕ ಪಾಕಿಸ್ತಾನ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 347 ರನ್ಸ್ ಕಲೆ ಹಾಕಿತು. 348 ರನ್ಗಳ ಟಾರ್ಗೆಟ್ ಬೆನ್ನತ್ತಿದ ಭಾರತ ಬ್ಯಾಟಿಂಗ್ನಲ್ಲಿ ಫೇಲ್ಯೂರ್ ಆಯ್ತು. ವೈಭವ್ 26 ರನ್ಗಳಿಗೆ ಔಟಾದ್ರೆ ಮಾತ್ರೆ 2 ರನ್ಗೆ ಸುಸ್ತಾದ್ರು. ದೀಪೇಶ್ ದೇವೇಂದ್ರನ್ 36 ರನ್ ಗಳಿಸಿದ್ದು ಬಿಟ್ರೆ ಉಳಿದವರ್ಯಾರು ಸ್ಕೋರ್ ಮಾಡ್ಲಿಲ್ಲ. ಸೋ 26.2 ಓವರ್ಗಳಲ್ಲೇ ಭಾರತ 156 ರನ್ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡ್ರು. ಬಟ್ ಈ ಮ್ಯಾಚ್ ಟೈಮಲ್ಲಿ ಹೈಡ್ರಾಗಳೇ ನಡೆದಿವೆ. ಹೆಜ್ಜೆ ಹೆಜ್ಜೆಗೂ ಕಿರಿಕ್ ಆಗಿದೆ.
ಕಿರಿಕ್ ನಂಬರ್ 1
ಕಿರಿಯರ ತಂಡದಲ್ಲೂ ನೋ ಹ್ಯಾಂಡ್ ಶೇಕ್ !
ಭಾರತ ಮತ್ತು ಪಾಕ್ ನಡುವೆ ಆಟಗಾರರ ನೋ ಹ್ಯಾಂಡ್ಶೇಕ್ ಇಲ್ಲೂ ಕೂಡ ಕಂಟಿನ್ಯೂ ಆಯ್ತು. ಹಿರಿಯರ ತಂಡದಂತೆಯೇ ಕಿರಿಯರೂ ಕೂಡ ಹಸ್ತಲಾಘವ ಮಾಡಲಿಲ್ಲ. ಗುಂಪು ಹಂತದ ಪಂದ್ಯದಲ್ಲೂ ಆಯುಷ್ ಮಾತ್ರೆ ನೇತೃತ್ವದ ಭಾರತ ತಂಡವು ಹ್ಯಾಂಡ್ಶೇಕ್ ಬಬಿಟ್ಟಿತ್ತು. ಫೈನಲ್ ಪಂದ್ಯದಲ್ಲಿ ಟಾಸ್ ನಂತರವೂ ಯಾವುದೇ ಹಸ್ತಲಾಘವ ನಡೆಯಲಿಲ್ಲ. ಪೆಹಲ್ಗಾಮ್ ಅಟ್ಯಾಕ್ ಬಳಿಕ ಎಲ್ಲಾ ಮಾದರಿ ಕ್ರಿಕೆಟ್ನಲ್ಲೂ ಎರಡೂ ರಾಷ್ಟ್ರಗಳ ನಡುವೆ ಹ್ಯಾಂಡ್ಶೇಕ್ ಸಂಪ್ರದಾಯ ಕೈಬಿಡಲಾಗಿದೆ.
ಕಿರಿಕ್ ನಂಬರ್ 2
ಆಯುಷ್ ಔಟ್ ಆದಾಗ ಅಗ್ರೆಸ್ಸಿವ್ ಸೆಲೆಬ್ರೇಷನ್!
ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ್ದ ಆಯುಷ್ ಮಾತ್ರೆ ಜಸ್ಟ್ ಎರಡು ರನ್ಗಳಲ್ಲೇ ಔಟಾಗಿದ್ರು. ಪಾಕ್ ಬೌಲರ್ ಅಲಿ ರಜಾ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ರು. ಆಯುಷ್ ಔಟ್ ಆಗ್ತಿದ್ದಂತೆ ರಜಾ ಫುಲ್ ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡ್ತಿದ್ರು. ಇಷ್ಟೇ ಆಗಿದ್ರೆ ಏನೂ ಆಗ್ತಿರಲಿಲ್ಲ. ಬಟ್ ಆಯುಷ್ ಕಡೆಗೆ ತಿರುಗಿ ಏನೋ ಹೇಳಿದರು. ಈ ವರ್ತನೆಗೆ ಸಿಟ್ಟಾದ ಆಯುಷ್ ಕೂಡ ಸಿಟ್ಟಾದ್ರು. ಇಬ್ಬರ ನಡುವೆ ವಾಗ್ವಾದ ಕೂಡ ನಡೀತು.
ಕಿರಿಕ್ ನಂಬರ್ 3
ಕೆಣಕಿದ ಪಾಕ್ ಬೌಲರ್ ಗೆ ಶೂ ತೋರಿಸಿದ ವೈಭವ್
ಇನ್ನು ಬಿಗ್ ಸ್ಕೋರ್ ಬೆನ್ನತ್ತಿದ್ದ ಭಾರತಕ್ಕೆ ವೈಭವ್ ಪವರ್ಹಿಟ್ ಮೂಲಕ ಚೇಸಿಂಗ್ಗೆ ಇಳಿದಿದ್ರು. ಬಟ್ ಬ್ಯಾಡ್ಲಕ್ ಐದನೇ ಓವರ್ನಲ್ಲಿ ವಿಕೆಟ್ ಕಳೆದುಕೊಂಡರು. ಸೂರ್ಯವಂಶಿ ಬ್ಯಾಟ್ಗೆ ಚೆಂಡು ಎಡ್ಜ್ ಆಗಿ ನೇರವಾಗಿ ವಿಕೆಟ್ ಕೀಪರ್ ಗ್ಲೌಸ್ಗೆ ಹೋಯಿತು. ಹೀಗಾಗಿ ವೈಭವ್ 26 ರನ್ಗಳಿಗೆ ಔಟಾದರು. ವೈಭವ್ ವಿಕೆಟ್ ಪಡೆದ ಪಾಕಿಸ್ತಾನಿ ವೇಗದ ಬೌಲರ್ ಅಲಿ ರಜಾ ಆಕ್ರಮಣಕಾರಿಯಾಗಿ ಸೆಂಡ್ ಆಫ್ ಕೊಟ್ಟ.. ಜೊತೆಗೆ ಪೆವಿಲಿಯನ್ತ್ತ ಹೋಗುತ್ತಿದ್ದ ವೈಭವ್ ಬಳಿ ಅಸಭ್ಯವಾಗಿ ವರ್ತಿಸಿದ್ರು. ಇದರಿಂದ ಕೆರಳಿದ ವೈಭವ್ ತಮ್ಮ ಶೂ ತೋರಿಸುತ್ತಾ ಇದಕ್ಕೂ ಸಮ ಇಲ್ಲ ಎನ್ನುವಂತೆ ತಿರುಗೇಟು ಕೊಟ್ರು.
ಕಿರಿಕ್ ನಂಬರ್ 4
ನಖ್ವಿ ಕೈಯಲ್ಲಿ ಪದಕ ಪಡೆಯದ ಭಾರತೀಯರು!
ಇನ್ನು ಏಷ್ಯಾಕಪ್ ಹಿರಿಯರ ತಂಡ ಚಾಂಪಿಯನ್ಸ್ ಆದ್ರೂ ಪಿಸಿಬಿ ಌಂಡ್ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ಪಡೆದಿರಲಿಲ್ಲ. ಇನ್ನೂ ಟ್ರೋಫಿ ಭಾರತದ ಕೈಸೇರಿಲ್ಲ. ಇದು ಅಂಡರ್ 19ನಲ್ಲೂ ಕಂಟಿನ್ಯೂ ಆಗಿದೆ. ಭಾರತದ ಯುವ ಪಡೆ ಮೊಹ್ಸಿನ್ ನಖ್ವಿ ಕೈನಿಂದ ಪದಕ ಪಡೆಯಲು ನಿರಾಕರಿಸಿದೆ. ಪರಿಣಾಮವಾಗಿ ನಖ್ವಿ ಬದಲು ಅಸೋಸಿಯೇಟ್ ಸದಸ್ಯರ ಅಧ್ಯಕ್ಷ ಮುಬಾಸಿರ್ ಉಸ್ಮಾನಿ ಟೀಂ ಇಂಡಿಯಾ ಆಟಗಾರರಿಗೆ ಪದಕ ನೀಡಿದ್ದಾರೆ.
ಹೀಗೆ ಹೆಜ್ಜೆ ಹೆಜ್ಜೆಗೂ ಭಾರತ ಪಾಕ್ ಮ್ಯಾಚ್ ವಾರ್ನಂತೆಯೇ ಇತ್ತು. ಬಟ್ ಪಂದ್ಯದ ಬಳಿಕ ಭಾರತದ ಸೋಲಿನ ಬಳಿಕ ಆಟಗಾರರ ಪರ್ಫಾಮೆನ್ಸ್ ಬಗ್ಗೆ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಕ್ಯಾಪ್ಟನ್ ಆಗಿ ಆಯುಷ್ ಮಾತ್ಹೆ ಸೂರ್ಯಕುಮಾರ್ ಥರ ಆಗಿದ್ದಾರೆ. ಏಷ್ಯಾಕಪ್ ಸಿರೀಸ್ನಲ್ಲಿ ಒಂದೇ ಒಂದು ಅರ್ಧಶತಕ ಬಂದಿಲ್ಲ. 5 ಇನ್ನಿಂಗ್ಸ್ಗಳಲ್ಲಿ 65 ರನ್ಸ್ ಅಷ್ಟೇ ಕಲೆ ಹಾಕಿದ್ದು. ಇನ್ನು ಸೂರ್ಯವಂಶಿ ಕೂಡ ಬಿಗ್ ಮ್ಯಾಚ್ಗಳಲ್ಲಿ ಅವ್ರ ಪರ್ಫಾಮೆನ್ಸ್ ಇಂಪ್ರೂವ್ ಮಾಡಿಕೊಳ್ಬೇಕು. ಪ್ರತೀ ಬಾಲ್ನಲ್ಲಿ ಬಿಗ್ ಶಾಟ್ಸ್ ಹೊಡೆಯೋದನ್ನ ಬಿಟ್ಟು ವಿಕೆಟ್ ಬೀಳದಂತೆ ನೋಡಿಕೊಳ್ಳೋದು ಮುಖ್ಯ ಅಂತಾ ಸಲಹೆ ನೀಡಿದ್ದಾರೆ.

ನೋಡಿರಿ

