RRನಲ್ಲಿ ಲೆಫ್ಟ್ ಹ್ಯಾಂಡರ್ಸ್ ಹವಾ – ಯಶಸ್ವಿ-ವೈಭವ್ ಡೆಡ್ಲಿ ಕಾಂಬೋ!
ಪಿಂಕ್ ಆರ್ಮಿಗೆ ಜಡ್ಡುನೇ ನಾಯಕ?

ಐಪಿಎಲ್ ಮಿನಿ ಆಕ್ಷನ್ನೂ ಮೊದ್ಲೇ ಸದ್ದು ಮಾಡಿದ ತಂಡ ಅಂದ್ರೆ ಅದು ರಾಜಸ್ಥಾನ ರಾಯಲ್ಸ್.. ಯಾಕಂದ್ರೆ ತಮ್ಮ ನಾಯಕ ಸಂಜು ಸ್ಯಾಮ್ಸನ್ರನ್ನೇ ಟ್ರೇಡ್ ಮೂಲಕ ಬಿಟ್ಟುಕೊಟ್ಟಿದ್ರು. ಸಿಎಸ್ಕೆಯಿಂದ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರ್ರನ್ನ ತಗೊಳ್ತಾರೆ. ಌಂಡ್ ಮಿನಿ ಆಕ್ಷನ್ನಲ್ಲೂ ಚೂಸಿಯಾಗಿ ಸೆಲೆಕ್ಷನ್ ಮಾಡ್ಕೊಂಡಿದ್ದಾರೆ. ರಾಜಸ್ಥಾನ ರಾಯಲ್ಸ್ ಟೀಂ 2025ರ ಐಪಿಎಲ್ ಬಳಿಕ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ನ ಬಿಟ್ಟುಕೊಟ್ರು. ಆ ನಂತ್ರ ಕ್ಯಾಪ್ಟನ್ ಸಂಜು ಸ್ಯಾಮ್ಸನ್ರನ್ನೂ ಕಳಿಸಿದ್ರು. ಟ್ರೇಡ್ ವಿಂಡೋದಲ್ಲೂ ಸದ್ದು ಮಾಡಿದ್ರು. ಹಾಗೇ ಮಿನಿ ಆಕ್ಷನ್ನಲ್ಲೂ ಅಚ್ಚರಿಯ ಬಿಡ್ ಮಾಡಿದ್ದಾರೆ. ಒಟ್ಟು 9 ಪ್ಲೇಯರ್ಸ್ನ ಖರೀದಿ ಮಾಡಿದ್ರೂ ಕೂಡ ಇಬ್ಬರಿಗೆ ಮಾತ್ರವೇ ಕೋಟಿ ಮೇಲೆ ಬಿಡ್ ಮಾಡಿದ್ದಾರೆ. ಅದ್ರಲ್ಲಿ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ 7.20 ಕೋಟಿ ರೂ ಹಾಗೇ ಆಡಮ್ ಮಿಲ್ನೆ 2.4 ಕೋಟಿ ರೂ. ಇವ್ರಿಬ್ಬರನ್ನ ಬಿಟ್ರೆ ಉಳಿದವ್ರೆಲ್ಲಾ ಒಂದು ಕೋಟಿ ಒಳಗೇ ಇದ್ದಾರೆ. ಅದ್ರಲ್ಲೂ ಕಳೆದ ವರ್ಷ ಮುಂಬೈ ಪರ ಸದ್ದು ಮಾಡಿದ್ದ ವಿಘ್ನೇಶ್ ಪುತ್ತೂರ್ ಕೂಡ ಪಿಂಕ್ ಆರ್ಮಿ ಸೇರಿದ್ದಾರೆ. ಹೀಗಿದ್ರೂ ಬ್ಯಾಟಿಂಗ್ನಲ್ಲಿ ರಾಜಸ್ಥಾನ ಡಿಫ್ರೆಂಟ್ ಆಗೇ ಕಾಣ್ತಿದೆ.
ಇದನ್ನೂ ಓದಿ : ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಾ? ಇಲ್ವಾ? – ಕೆಎಸ್ಸಿಎ ಮತ್ತು ಗೃಹ ಸಚಿವರ ಸಭೆಯಲ್ಲಿ ಆಗಿದ್ದೇನು?
ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಡೆಡ್ಲಿ ಓಪನರ್ಸ್!
ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭ ಮಾಡ್ಬೋದು. ಜೈಸ್ವಾಲ್ ಅಂತೂ ಆಲ್ರೆಡಿ ಎಕ್ಸ್ಪೀರಿಯೆನ್ಸ್ಡ್ ಬ್ಯಾಟರ್. ಭಾರತ ತಂಡದ ಖಾಯಂ ಆಟಗಾರ. ಇನ್ನು ಸೆನ್ಸೇಷನಲ್ ಸ್ಟಾರ್ ವೈಭವ್ ಸೂರ್ಯವಂಶಿ ಐಪಿಎಲ್ ಬಳಿಕ ರನ್ ಮಳೆ ಸುರಿಸ್ತಾನೇ ಇದ್ದಾರೆ. ಸೋ ನೆಕ್ಸ್ಟ್ ಸೀಸನ್ಗೂ ಇವ್ರೇ ಇನ್ನಿಂಗ್ಸ್ ಆರಂಭ ಮಾಡ್ತಾರೆ. ಇಬ್ರೂ ಅಗ್ರೆಸ್ಸಿವ್ ಆಗೇ ಬ್ಯಾಟ್ ಮಾಡೋದ್ರಿಂದ ಪವರ್ ಪ್ಲೇನಲ್ಲೇ ಬಿಗ್ ಸ್ಕೋರ್ ಬರ್ಬೋದು. ರಿಯಾನ್ ಪರಾಗ್, ಧ್ರುವ್ ಜುರೆಲ್ ಕೂಡ ಉತ್ತಮ ಆಟಗಾರ. ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ತಾರೆ. ಮಿಡಲ್ ಆರ್ಡರ್ನಲ್ಲಿ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರ್ರನ್ ಆಲ್ರೌಂಡರ್ ಗಳಾಗಿ ಬಿಗ್ ಹಿಟ್ಸ್ ಬರಬಹುದು. ಆಲ್ರೌಂಡರ್ ಬ್ಯಾಲೆನ್ಸ್ ಆಗಿದ್ದು ಬೌಲಿಂಗ್ ಡೆಪ್ತ್ ಚೆನ್ನಾಗಿದೆ. ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್ ಮತ್ತು ಸಂದೀಪ್ ಶರ್ಮಾ ಅವರ ವೇಗದ ಬೌಲಿಂಗ್ ದಾಳಿಯಿಂಧ ಪಂದ್ಯದ ಮೇಲೆ ಕಂಟ್ರೋಲ್ ಸಾಧಿಸ್ಬೋದು. ರವಿ ಬಿಷ್ಣೋಯ್ ಮಧ್ಯಮ ಓವರ್ಗಳಲ್ಲಿ ಇಂಪ್ಯಾಕ್ಟ್ ಮಾಡ್ತಾರೆ. ಸೋ ಓವರ್ ಆಲ್ ಪ್ಯಾಕೇಜ್ ನೋಡ್ದಾಗ ಬೆಸ್ಟ್ ಆಗೇ ಕಾಣ್ತಿದೆ. ಹಾಗಾದ್ರೆ ವೀಕ್ನೆಸ್ ಏನೂ ಇಲ್ವಾ ಅಂದ್ರೆ ಖಂಡಿತ ಇದೆ.
ಲೆಫ್ಟ್ ಹ್ಯಾಂಡ್ ಬ್ಯಾಟರ್ ಗಳ ಮೇಲೇ ಡಿಪೆಂಡ್!
ರಾಜಸ್ಥಾನದ ತಂಡದ ಅತಿದೊಡ್ಡ ಮಿಸ್ಟೇಕ್ ಅಂದ್ರೆ ಬ್ಯಾಟಿಂಗ್ ಸಂಯೋಜನೆ. ಅವ್ರ ಸಂಭಾವ್ಯ ಪ್ಲೇಯಿಂಗ್ 11ನ ಟಾಪ್ 7 ಬ್ಯಾಟ್ಸ್ಮನ್ಗಳಲ್ಲಿ ಇಬ್ಬರು ಮಾತ್ರವೇ ಬಲಗೈ ಬ್ಯಾಟ್ಸ್ಮನ್ಗಳನ್ನು ಹೊಂದಿದ್ದಾರೆ. ಉಳಿದವ್ರೆಲ್ಲಾ ಲೆಫ್ಟ್ ಹ್ಯಾಂಡ್ ಬ್ಯಾಟರ್ಸ್. ಸೋ ಇದು ಲೆಫ್ಟ್ ರೈಟ್ ಕಾಂಬಿನೇಷನ್ಗೆ ವಿರುದ್ಧವಾಗಿದೆ. ಸೋ ಜೊತೆಯಾದ ವರ್ಕೌಟ್ ಆಗಲ್ಲ. ಕ್ವಾಲಿಟಿ ಆಫ್-ಸ್ಪಿನ್ ಬೌಲರ್ಸ್ ಮತ್ತು ಎಡಗೈ ವೇಗಿಗಳಿರುವ ತಂಡಗಳಿವೆ ವಿಕೆಟ್ ತೆಗೆಯೋದು ಈಸಿ ಆಗ್ಬೋದು. ಹೆಚ್ಚು ಎಡಗೈ ಬ್ಯಾಟರ್ಸ್ ಇದ್ದಾಗ ಎದುರಾಳಿ ನಾಯಕರಿಗೆ ಬೌಲಿಂಗ್ ತಂತ್ರಗಳನ್ನ ರೂಪಿಸೋದು ಈಸಿಯಾಗುತ್ತೆ. ಅಲ್ದೇ ರಾಜಸ್ಥಾನ ತಂಡದಲ್ಲಿ ಭಾರತೀಯ ಫಿನಿಷರ್ ಇಲ್ಲ. ಪ್ರೆಶರ್ ಟೈಮಲ್ಲಿ ಅಥವಾ ಬಿಗ್ ಸ್ಕೋರ್ ಚೇಸಿಂಗ್ ಮಾಡುವಾಗ ದೇಶೀ ಫಿನಿಶರ್ಸ್ ಮೇಲೆ ಜವಾಬ್ದಾರಿ ಇರುತ್ತೆ. ಬಟ್ ಆರ್ಆರ್ ತಂಡದಲ್ಲಿ ಅಂಥ ಯಾವುದೇ ಪ್ಲೇಯರ್ ಇಲ್ಲ. ಹೀಗೆ ಆರ್ಆರ್ನಲ್ಲಿ ಪ್ಲಸ್ ಌಂಡ್ ಮೈನಸ್ ಎರಡೂ ಇದೆ. ಒಟ್ಟಾರೆ ಟೀಂ ನೋಡಿದಾಗ ಉತ್ತಮ ತಂಡದಂತೆಯೇ ಕಾಣ್ತಿದೆ. ಇನ್ನು ರವೀಂದ್ರ ಜಡೇಜಾ ಕ್ಯಾಪ್ಟನ್ ಆಗೋ ಚಾನ್ಸಸ್ ಇದೆ.

ನೋಡಿರಿ

