ಬಿಗ್‌ಬಾಸ್‌ ವೀಕೆಂಡ್‌ನಲ್ಲಿ ಸುದೀಪ್‌ ನಿರೂಪಣೆ ಇರಲ್ಲ! – ಶನಿವಾರ, ಭಾನುವಾರ ಶೋ ಹೋಸ್ಟ್‌ ಮಾಡೋದ್ಯಾರು?

ಬಿಗ್‌ಬಾಸ್‌ ವೀಕೆಂಡ್‌ನಲ್ಲಿ ಸುದೀಪ್‌ ನಿರೂಪಣೆ ಇರಲ್ಲ! – ಶನಿವಾರ, ಭಾನುವಾರ ಶೋ ಹೋಸ್ಟ್‌ ಮಾಡೋದ್ಯಾರು?

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಈಗ ಅಂತಿಮ ಹಂತಕ್ಕೆ ತಲುಪಿದೆ. ಪ್ರತಿ ಸೀಸನ್‌ ನಲ್ಲೂ ವೀಕೆಂಡ್‌ ಬಂತು ಅಂದ್ರೆ ಸಾಕು ವೀಕ್ಷಕರು ಕಿಚ್ಚನ ಪಂಚಾಯ್ತಿಗೆ ಕಾಯ್ತಾ ಇರ್ತಾರೆ. ಶನಿವಾರ ಕಿಚ್ಚ ಯಾರಿಗೆ ಕ್ಲಾಸ್‌ ತೆಗೆದುಕೊಳ್ಳಲಿದ್ದಾರೆ? ಯಾರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತೆ ಅಂತ ಕಾಯ್ತಾ ಇರ್ತಾರೆ. ಆದ್ರೀಗ ವೀಕ್ಷಕರಿಗೆ ಶಾಕಿಂಗ್‌ ಸುದ್ದಿಯೊಂದಿದೆ. ಸುದೀಪ್‌ ಮುಂದಿನ ವೀಕೆಂಡ್‌ ನಲ್ಲಿ ಬಿಗ್‌ಬಾಸ್‌ ನಿರೂಪಣೆ ಮಾಡಲ್ಲ.

ಇದನ್ನೂ ಓದಿ: ಮೈಲಾರಿಯಲ್ಲಿ ಮಸಾಲೆ ದೋಸೆ ಸವಿದ ಸಿಎಂ ಸಿದ್ದರಾಮಯ್ಯ! – ಮೈಸೂರಿನ ಈ ಹೋಟೆಲ್‌ ಸ್ಪೆಷಾಲಿಟಿ ಏನು?

ಶನಿವಾರ ಹಾಗೂ ಭಾನುವಾರ ಕಿಚ್ಚನ ಪಂಚಾಯ್ತಿ, ಅವರ ಲುಕ್‌, ಅವರ ಮಾತುಗಳನ್ನು ಕೇಳಲು ಕಾಯುತ್ತಿರುತ್ತಾರೆ. ಆದರೀಗ ಸುದೀಪ್‌ ಅವರು ಒಂದು ಅನೌನ್ಸ್‌ ಮಾಡಿದ್ದಾರೆ. ಬಿಗ್ ಬಾಸ್ ಪ್ರಿಯರಿಗೆ ನಿರಾಸೆ ಮೂಡಿಸಿದೆ. ಈ ವಾರ ಕಿಚ್ಚ ಸುದೀಪ್ ಅವರ ನಿರೂಪಣೆ ಇರುವುದಿಲ್ಲ. ಸ್ವತಃ ಕಿಚ್ಚ ಅವರೇ ಈ ಬಗ್ಗೆ ರಿವೀಲ್‌ ಮಾಡಿದ್ದಾರೆ. ಇದಕ್ಕೆ ಕಾರಣ ಮಾರ್ಕ್‌ ಸಿನಿಮಾ.

ಹೌದು, ಕಿಚ್ಚ ಸುದೀಪ್‌ ಅವರ ಬಹುನಿರೀಕ್ಷಿತ ಮಾರ್ಕ್‌ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಇದರ ಮಧ್ಯೆಯೂ ಅವರು ಕಳೆದ ವಾರ ಬಿಗ್ ಬಾಸ್ ನಿರೂಪಣೆ ಮಾಡಿದ್ದರು. ಕಳೆದ ವಾರ ಮಾರ್ಕ್ ಪ್ರೀ ರಿಲೀಸ್ ಈವೆಂಟ್​​ನಲ್ಲಿ ಭಾಗಿ ಆಗಬೇಕಿರುವ ಕಾರಣ ಶುಕ್ರವಾರವೇ ಬಿಗ್ ಬಾಸ್ ಎಪಿಸೋಡ್ ಚಿತ್ರೀಕರಣ ನಡೆದಿತ್ತು. ನನ್ನ ಸಿನಿಮಾ ರಿಲೀಸ್ ಇರುವುದರಿಂದ, ನಾನು ಪ್ರಮೋಷನ್ ಅಲ್ಲಿ ಬ್ಯುಸಿ ಇರ್ತೀನಿ. ಬಿಗ್ ಬಾಸ್​ ಹೇಗೆ ಮುಖ್ಯವೋ ನಾನು ಮಾಡಿದ ಸಿನಿಮಾ ಕೂಡ ಮುಖ್ಯ. ನನ್ನ ತಂಡಕ್ಕೆ ನನ್ನ ಅಗತ್ಯವಿದೆ. ಹೀಗಾಗಿ ಡಿಸೆಂಬರ್ 27-28 ನಾನು ಬಿಗ್ ಬಾಸ್ ನಡೆಸಿಕೊಡುತ್ತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಸತ್ಯಜ್ಯೋತಿ ಫಿಲ್ಮ್ಸ್‌ 39 ವರ್ಷಗಳ ನಂತರ ಕನ್ನಡದಲ್ಲಿ ಮಾರ್ಕ್‌ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಸುದೀಪ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್‌ ಡೈರೆಕ್ಟರ್‌ ವಿಜಯ್‌ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ. ನವೀನ್‌ ಚಂದ್ರ, ಯೋಗಿ ಬಾಬು, ನಿಶ್ವಿಕಾ ನಾಯ್ಡು, ರೋಶಿಣಿ ಪ್ರಕಾಶ್‌, ಅಶ್ವಿನ್ ಹಾಸನ್‌, ಮಹಾಂತೇಶ್‌ ಹಿರೇಮಠ್‌ ಮುಂತಾದವರು ನಟಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತವನ್ನು ನೀಡಿದ್ದಾರೆ.

Shwetha M