ಮೈಲಾರಿಯಲ್ಲಿ ಮಸಾಲೆ ದೋಸೆ ಸವಿದ ಸಿಎಂ ಸಿದ್ದರಾಮಯ್ಯ! – ಮೈಸೂರಿನ ಈ ಹೋಟೆಲ್ ಸ್ಪೆಷಾಲಿಟಿ ಏನು?

ಸಿಎಂ ಸಿದ್ಧರಾಮಯ್ಯ ಇಂದು ಮೈಸೂರಿನ ಮೈಲಾರಿ ಹೋಟೆಲ್‌ಗೆ ಭೇಟಿ ನೀಡಿದ್ದಾರೆ. ಸಚಿವರಾದ ವೆಂಕಟೇಶ್ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು, ಶಾಸಕರೊಂದಿಗೆ ಮೈಲಾರಿ ಹೋಟೆಲ್‌ನಲ್ಲಿ ಸಿಎಂ ಅವರು ಮಸಾಲೆ ದೋಸೆ ಹಾಗೂ ಇಡ್ಲಿ ಸೇವಿಸಿದರು.
ಇದನ್ನೂ ಓದಿ: ದೇವರ ಮಗ ಸೂಪರ್ ಸ್ಟಾರ್.. ತ್ರಿಮೂರ್ತಿಗಳ ಮನಗೆದ್ದ ಪ್ರೀತಮ್ – ಅರ್ಜುನನ ಹಾರವೇ ಆಶೀರ್ವಾದ!
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ನಿವಾಸದ ಬಳಿ ಸೋಮವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಇದೇ ವೇಳೆ ಮೈಲಾರಿ ಹೋಟೆಲ್‌ನಲ್ಲಿ ಬೆಳಗಿನ ಉಪಹಾರ ಸವಿದ್ದಾರೆ. ಅಂದ್ಹಾಗೆ, ಮೈಲಾರಿ ಹೋಟೆಲ್, ಮೃದುವಾದ ದೋಸೆ ಹಾಗೂ ಮಲ್ಲಿಗೆ ಇಡ್ಲಿಗೆ ಸಾಕಷ್ಟು ಫೇಮಸ್. ಸಿಎಂ ಅವರು ಪ್ರತಿ ಬಾರಿ ಮೈಸೂರಿಗೆ ಬಂದಾಗ ಸಿಎಂ ಬೆಣ್ಣೆ ದೋಸೆ, ಕಾಯಿ ಚಟ್ನಿ, ಆಲೂಗಡ್ಡೆ ಈರುಳ್ಳಿ ಪಲ್ಯ, ಇಡ್ಲಿ-ಚಟ್ನಿ ಸವಿಯುತ್ತಾರೆ. ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ತಿಂಡಿ ತಿಂದರೆ ಒಂಥರಾ ಸಮಾಧಾನ, ತೃಪ್ತಿ ಎಂದು ಈ ಹಿಂದೆ ಹಲವು ಬಾರಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ
ಹೋಟೆಲ್ ಮೈಲಾರಿಯಲ್ಲಿ ದೋಸೆ ತಿನ್ನದೇ ಮೈಸೂರಿಗೆ ಬಂದವರು ವಾಪಸ್ ಹೋಗೋದೇ ಇಲ್ಲ. ಅಷ್ಟು ಫೇಮಸ್ ಈ ಹೋಟೆಲ್. ಮೈಸೂರಿನ ನಜರಾಬಾದ್ ರಸ್ತೆಯ ಬಳಿ ಈ ಹೋಟೆಲ್ ಇದೆ. ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೂ ಮುನ್ನವೇ ಶುರುವಾಗಿತ್ತು. ಈ ಹೋಟೆಲ್ ಮೈಲಾರಿ. ಮೈಲಾರಸ್ವಾಮಿ ಮತ್ತು ಅವರ ಪತ್ನಿ ಸುಂದರಮ್ಮ ಅವರು ತಮ್ಮ ಮನೆಯಲ್ಲೇ ಹೋಟೆಲ್ ಆರಂಭಿಸಿದ್ದರು. ಮೊದಲು ಹೋಟೆಲ್ ಮೈಲಾರಿ ಮಾತ್ರ ಇತ್ತು. ಇಬ್ಬರು ಅಣ್ಣ ತಮ್ಮಂದಿರು ಈ ಹೋಟೆಲ್ ನಡೆಸುತ್ತಿದ್ದರು. ಆದರೆ ಅಣ್ಣ ತಮ್ಮಂದಿರ ನಡುವಿನ ಮನಸ್ತಾಪದಿಂದ ಇನ್ನೊಂದು ಮೈಲಾರಿ ಹೋಟೆಲ್ ಆರಂಭಿಸಿದ್ರು. ಆದ್ರೂ ಎರಡು ಮೈಲಾರಿ ಹೋಟೆಲ್ಗಳಲ್ಲಿ ದೋಸೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಹೋಟೆಲ್ ಮೈಲಾರಿಯಲ್ಲಿ ದೋಸೆ ಸವಿಯಲು ಜನರು ಕ್ಯೂ ನಿಂತಿರುತ್ತಾರೆ. ಬೆಳಗ್ಗೆ ಸುಮಾರು 7 ರಿಂದ ಮಧ್ಯಾಹ್ನ 11ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 8:30ರವರೆಗೆ ಹೋಟೆಲ್ ಮೈಲಾರಿ ತೆರೆದಿರುತ್ತೆ.

ನೋಡಿರಿ

