ಬೇಕಂತಲೇ ಟಾಸ್ಕ್ ಹಾಳು ಮಾಡ್ದೆ ಏನಿವಾಗ? – ಗಿಲ್ಲಿ ಮಾತಿಗೆ ಸಿಟ್ಟಾದ ಅಶ್ವಿನಿ ಗೌಡ

ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಬಿಗ್ಬಾಸ್ ಮನೆಯಲ್ಲಿ ಸದಾ ಕಿತ್ತಾಡಿಕೊಂಡೇ ಇರ್ತಾರೆ. ಇತ್ತೀಚೆಗೆ ಇವರಿಬ್ಬರ ಜಗಳ ಕೊಂಚ ಕಡಿಮೆಯಾಗಿತ್ತು. ಆದ್ರೀಗ ಮತ್ತೆ ಇವರಿಬ್ಬರ ಜಗಳ ಶುರುವಾಗಿದೆ. ಟಾಸ್ಕ್ ವಿಚಾರಕ್ಕೆ ಗಿಲ್ಲಿ ಹಾಗೂ ಅಶ್ವಿನಿ ಕಿತ್ತಾಡಿಕೊಂಡಿದ್ದಾರೆ.
ಇದನ್ನೂ ಓದಿ: ರಾಜ್ಯದ ಗೃಹಲಕ್ಷ್ಮೀಯರಿಗೆ ಗುಡ್ನ್ಯೂಸ್! – ಈ ವಾರವೇ ಬರಲಿದೆ ಗೃಹಲಕ್ಷ್ಮಿ 2000 ಹಣ!
ಬಿಗ್ಬಾಸ್ ಕನ್ನಡ ಸೀಸನ್ 12 ರ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಟಾಸ್ಕ್ ಕೂಡ ಟಫ್ ಆಗ್ತಿದೆ. ಇದೀಗ ಇದೀಗ ಲಕ್ಷುರಿ ಬಜೆಟ್ ವಿಚಾರಕ್ಕೆ ಅಶ್ವಿನಿ ಹಾಗೂ ಗಿಲ್ಲಿ ನಡುವೆ ಸಖತ್ ಜಗಳ ನಡೆದಿದೆ. ಇದ್ರ ಪ್ರೋಮೋ ರಿಲೀಸ್ ಆಗಿದೆ. ಬಿಗ್ಬಾಸ್ ಲಕ್ಷುರಿ ಬಜೆಟ್ಗೆ ಟಾಸ್ಕ್ವೊಂದನ್ನ ನೀಡಿದ್ದರು. ಸೂಚಿಸಲಾದ ಅವಧಿ ಒಳಗೆ ಆ ಪ್ರದೇಶಕ್ಕೆ ತಲುಪಿ ನೃತ್ಯ ಪ್ರದರ್ಶನ ಮಾಡಬೇಕು. ತೆಗೆದುಕೊಂಡ ಅವಧಿಯಲ್ಲಿ ವಾರದ ಸಾಮಾಗ್ರಿಗಳನ್ನು ಗಳಿಸುತ್ತದೆ ಎಂದು ಬಿಗ್ ಬಾಸ್ ಸೂಚಿಸಿದರು. ಆದರೆ ಈ ವೇಳೆ ಅಶ್ವಿನಿ ಅವರು ನಿಗದಿತ ಸಮಯದಲ್ಲಿ ತಲುಪಲೇ ಇಲ್ಲ. ಹೀಗಾಗಿ ವಾರ ಸಾಮಾಗ್ರಿಯನ್ನ ಕಳೆದುಕೊಂಡಿದ್ದಾರೆ ಸ್ಪರ್ಧಿಗಳು. ಈ ಬೆನ್ನಲ್ಲೇ ಗಿಲ್ಲಿನಟ ಅಶ್ವಿನಿ ಮೇಲೆ ಸಿಟ್ಟಾಗಿದ್ದಾರೆ. ಇದ್ರಿಂದಾಗಿ ಇವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ರಾಶಿಕಾ ಕೂಡ ಗಿಲ್ಲಿ ಕೂಡ ಎರಡು ಬಾರಿ ಮಾಡಿದ ಎಡವಟ್ಟಿಗೆ ದಿನಸಿ ಹೋಗಿತ್ತು ಅಲ್ವಾ ಎಂದಿದ್ದಾರೆ. ಅದಕ್ಕೆ ಗಿಲ್ಲಿ, ನಾನು ಮಾಡ್ದೆ ಅಂತ ನೀವು ಮಾಡೋದಾ? ಅಂತ ಕೇಳಿದ್ದಾರೆ. ಅದಕ್ಕೆ ಅಶ್ವಿನಿ ಅವರು ನಾನು ಬೇಕು ಅಂತ ಮಾಡಿದ್ದು ಏನಿವಾಗ? ಅಂತ ಕೇಳಿದ್ದಾರೆ. ಅದಕ್ಕೆ ಗಿಲ್ಲಿ ಅವರು ಪ್ರತಿ ರೌಂಡ್ನಲ್ಲಿಯೂ ತಪ್ಪುಗಳು ರಿಪೀಟ್ ಆಗ್ತಾವಾ? ಅಂತ ಕೇಳಿದ್ದಾರೆ ಗಿಲ್ಲಿ. ಗಿಲ್ಲಿ ಟಾಸ್ಕ್ಗೆ ಸಖತ್ ಪ್ರಾಮುಖ್ಯತೆ ಕೊಡ್ತಾ ಇದ್ದಾರೆ ಅಂತ ಕಮೆಂಟ್ ಮಾಡ್ತಿದ್ದಾರೆ ವೀಕ್ಷಕರು.
ಚೈತ್ರ ಹೋದ ಮೇಲೆ ಗಿಲ್ಲಿಗೆ ಅಶ್ವಿನಿಯನ್ನು ಗುರಿಯಾಗಿಸಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ರಜತ್ ಹೋದ ಮೇಲೆ ಗಿಲ್ಲಿಗೆ ರಘು ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಕಮೆಂಟ್ ಮಾಡ್ತಿದ್ದಾರೆ ನೆಟ್ಟಿಗರು.

ನೋಡಿರಿ

