ಡಿಕೆಶಿ, ಸಿದ್ದರಾಮಯ್ಯರನ್ನು ಒಂದು ಮಾಡಲು ಬಸ್ ಯಾತ್ರೆ  ಮುಂದುವರೆದ ಭಾಗ – ಬಿಜೆಪಿ ವ್ಯಂಗ್ಯ

ಡಿಕೆಶಿ, ಸಿದ್ದರಾಮಯ್ಯರನ್ನು ಒಂದು ಮಾಡಲು ಬಸ್ ಯಾತ್ರೆ  ಮುಂದುವರೆದ ಭಾಗ – ಬಿಜೆಪಿ ವ್ಯಂಗ್ಯ

ವಿಧಾನಸಭಾ ಚುನಾವಣೆಗೆ ಇನ್ನೇನು ಮೂರು ತಿಂಗಳು ಬಾಕಿ ಉಳಿದಿವೆ. ಹೀಗಾಗಿ ಎಲ್ಲಾ ರಾಜಕೀಯ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲಾ ರೀತಿಯ ಸರ್ಕಸ್ ನಡೆಸುತ್ತಿದೆ. ಚುನಾವಣೆ ಪೂರ್ವತಯಾರಿ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಬೆಳಗಾವಿಯ ಗಾಂಧಿಬಾವಿಯಲ್ಲಿ ‘ಪ್ರಜಾ ಧ್ವನಿ’ ಬಸ್ ಯಾತ್ರೆಗೆ  ಚಾಲನೆ ನೀಡಿದೆ. ಈ ಬಗ್ಗೆ ಬಿಜೆಪಿ “#ಪ್ರಜಾದ್ರೋಹಯಾತ್ರೆ” ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಅನ್ನು ಅಣಕವಾಡಿದೆ.

ಬಸ್ ಯಾತ್ರೆಯ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರದ್ದು ಪರಸ್ಪರ ಮಾರಕ ಜತೆಗಾರಿಕೆ. ಅವರನ್ನು ಒಂದು ಮಾಡುವ ಪ್ರಯತ್ನವನ್ನು ಕೈ ಹೈಕಮಾಂಡ್ ಹಲವು ಬಾರಿ ಮಾಡಿ ಸೋತಿದೆ. ಬಸ್ ಯಾತ್ರೆ ಎಂಬುದು ಅದರ ಮುಂದುವರಿದ ಭಾಗದ ಪ್ರಯೋಗವಾಗಿದೆ ಎಂದು ವ್ಯಂಗ್ಯವಾಡಿದೆ.

ಇದನ್ನೂ ಓದಿ: ಶಾಸಕರ ಕಾರು ಡಿಕ್ಕಿಯಾಗಿ ವೃದ್ಧೆ ಸಾವು – ನಾಯಿಯನ್ನು ತಪ್ಪಿಸಲು ಹೋಗಿ ಅಜ್ಜಿಯನ್ನೇ ಬಲಿ ಪಡೆದರು..!

‘ಹತ್ತು ದಿನಗಳಲ್ಲಿ 20 ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ಕಾಂಗ್ರೆಸ್ ನ ಬಸ್ ಯಾತ್ರೆ ಒಂದು ಉತ್ತಮವಾದ ಶೈಕ್ಷಣಿಕ ಪ್ರವಾಸ. ಡಬಲ್‌ಎಂಜಿನ್ ಸರ್ಕಾರದ ಪರಿಣಾಮ ರಾಜ್ಯದಲ್ಲಿ ಉತ್ತಮ ರಸ್ತೆಗಳು ನಿಮಗೆ ಇಷ್ಟು ವೇಗದಲ್ಲಿ ಸುದೀರ್ಘ ಯಾತ್ರೆಗೆ ಅವಕಾಶ ಮಾಡಿಕೊಟ್ಟಿದೆ. ಪ್ರಜಾಧ್ವನಿ ಅರಿಯಲು ಇದು ಕಾಂಗ್ರೆಸ್ ಗೆ ಉತ್ತಮ ಅವಕಾಶ. ಐದು ವರ್ಷಗಳ ಸಿದ್ದರಾಮಯ್ಯ ಆಡಳಿತಕ್ಕೆ ಬೇಸತ್ತು ಮತದಾರರು ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇರಿಸಿದರು. ಈಗ ನೆಮ್ಮದಿಯಿಂದ ಬದುಕುತ್ತಿರುವ ಜನರಲ್ಲಿ ಮತ್ತೆ ಭಯ ಹುಟ್ಟಿಸುವ ಕೆಲಸಕ್ಕೆ ಕಾಂಗ್ರೆಸ್ ಮುಂದಾಗಿದೆ’ ಎಂದು ಬಿಜೆಪಿ ಹೇಳಿದೆ.

‘ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಡಿಕೆ ರವಿಯವರಂಥ ನಿಷ್ಠಾವಂತ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕೋಲಾರದ ಜನತೆ ಮರೆತಿಲ್ಲ. ಆ ಕಡೆಗೂ ನಿಮ್ಮ ಬಸ್ ಹೋಗಲಿ, ಜನರ ನೋವು, ಸಂಕಟ ಏನೆಂದು ನಿಮಗೂ ತಿಳಿಯಬಹುದು’ ಎಂದು ಕಾಂಗ್ರೆಸ್ ಬಸ್ ಯಾತ್ರೆ ಬಗ್ಗೆ ಬಿಜೆಪಿ ಕಿಡಿಕಾರಿದೆ.

suddiyaana