ಉಳಿತಾಯ ಅಂದರೆ ಇದಪ್ಪಾ..! – 5 ವರ್ಷದಲ್ಲಿ 1.42 ಕೋಟಿ ರೂಪಾಯಿ ಉಳಿತಾಯ ಫುಡ್ ಡೆಲಿವರಿ ಬಾಯ್‌

ಉಳಿತಾಯ ಅಂದರೆ ಇದಪ್ಪಾ..! – 5 ವರ್ಷದಲ್ಲಿ 1.42 ಕೋಟಿ ರೂಪಾಯಿ ಉಳಿತಾಯ ಫುಡ್ ಡೆಲಿವರಿ ಬಾಯ್‌

ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಕೂಡಾ ಕೈಯಲ್ಲಿ ದುಡ್ಡು ಉಳಿಯಲ್ಲ ಅನ್ನೋರು ಇದ್ದಾರೆ. ಆದರೆ, ಇಲ್ಲೊಬ್ಬ ಡೆಲಿವರಿ ಬಾಯ್ ಇದ್ದಾನೆ. ಈತನಿಗೆ ಕೇವಲ 25 ವರ್ಷ. ಈತ 5 ವರ್ಷದಲ್ಲಿ ಕೋಟಿ ಕೋಟಿ ರೂಪಾಯಿ ಉಳಿತಾಯ ಮಾಡಿದ್ದಾನೆ.

ಇದನ್ನೂ ಓದಿ: ಪಾಂಡ್ಯ ಫ್ಲೈಯಿಂಗ್‌ ಕಿಸ್‌ ಕಮಾಲ್!‌ – ಹಾರ್ದಿಕ್‌ಗೆ ಪವರ್‌ ತುಂಬಿದ ಮಹಿಕಾ ಯಾರು?

ಈಗಿನ ಕಾಲದಲ್ಲಿ  ಖರ್ಚು ಜಾಸ್ತಿ. ಎಷ್ಟು ಸಂಪಾದನೆ ಮಾಡಿದ್ರು ಉಳಿತಾಯ ಮಾಡಲು ಸಾಧ್ಯವಿಲ್ಲ. ಆದ್ರೆ ಮನಸ್ಸು ಮಾಡಿದ್ರೆ ಏನ್‌ ಬೇಕಾದ್ರೂ ಮಾಡ್ಬೋದು ಅನ್ನೋದಕ್ಕೆ ಬೆಸ್ಟ್‌ ಉದಾಹರಣೆ ಈ ಡೆಲೆವರಿ ಬಾಯ್.‌  25 ವರ್ಷದ ಡೆಲಿವರಿ ಬಾಯ್‌ ಕೇವಲ 5 ವರ್ಷಗಳಲ್ಲಿ ಬರೋಬ್ಬರಿ 1.42 ಕೋಟಿ ರೂಪಾಯಿ ಉಳಿತಾಯ ಮಾಡಿ ಸುದ್ದಿಯಾಗಿದ್ದಾರೆ. ದಿನಕ್ಕೆ 13 ಗಂಟೆಗಳ ಕಾಲ ಕಠಿಣ ಪರಿಶ್ರಮ ಮತ್ತು ಕನಿಷ್ಠ ಜೀವನಶೈಲಿಯ ಮೂಲಕ ಈ ಸಾಧನೆ ಮಾಡಿರುವ ಅವರು, ಈಗ ಸ್ವಂತ ಹೋಟೆಲ್ ತೆರೆಯುವ ಕನಸು ಕಾಣುತ್ತಿದ್ದಾರೆ.

ಚೀನಾದ ಜಾಂಗ್ ಕ್ಸುಯೆಕಿಯಾಂಗ್ ಎಂಬ ಯುವಕ ಈಗ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದ್ದಾನೆ. ಜಾಂಗ್ ಕ್ಸುಯೆಕಿಯಾಂಗ್ ಮೊದಲು ಫುಜಿಯಾನ್ ಪ್ರಾಂತ್ಯದ ಜಾಂಗ್‌ಝೌ ನಗರದಲ್ಲಿ ತನ್ನ ಸ್ನೇಹಿತನೊಂದಿಗೆ ಹೋಟೆಲ್‌ಆರಂಭಿಸಿದ್ದ. ಇದಕ್ಕಾ ದೊಡ್ಡ ಮೊತ್ತದ ಸಾಲ ಮಾಡಿದ್ದ.  50,000 ಯುವಾನ್ (US$7,000) ಸಾಲ ಮಾಡಿ ಬ್ಯುಸಿನೆಸ್‌ ಆರಂಭಿದ್ದ. ಆದ್ರೆ ಈ ವ್ಯವಹಾರದಲ್ಲಿ ತುಂಬಾ ಲಾಸ್‌ ಆಯ್ತು.  ಮಾಡಿದ ಸಾಲ ತೀರಿಸಲು ಜಾಂಗ್‌ ಹಾಗೂ ಆತನ ಸ್ನೇಹಿತ ಹೊಸ ದಾರಿ ಹುಡುಕಿದ್ರು.  2020ರಲ್ಲಿ ಫುಜಿಯಾನ್ ತೊರೆದು ಕೆಲಸವನ್ನರಸಿ ಶಾಂಘೈಗೆ ಬಂದು ಡೆಲಿವರಿ ಬಾಯ್‌ ಆಗಿ ಕೆಲಸ ಆರಂಭಿಸಿದ್ರು.  ಐದು ವರ್ಷಗಳಲ್ಲಿ ಕಠಿಣ ಕೆಲಸ ಮಾಡಿದ್ದಾರೆ. ದಿನಕ್ಕೆ 13 ಗಂಟೆ ಮತ್ತು ವಾರದ ಏಳು ದಿನವೂ ಕೆಲಸ ಮಾಡಿದ್ದಾರೆ.  ಬೆಳಗ್ಗೆ 10.30ಕ್ಕೆ   ಕೆಲಸ ಶುರು ಮಾಡಿದ್ರೆ, ರಾತ್ರಿ 1 ಗಂಟೆಗೆವರೆಗೆ ಕೆಲಸ ಮಾಡುತ್ತಿದ್ದ. ಅಲ್ಲದೇ ಖರ್ಚು ಕಡಿಮೆ ಮಾಡಿಬೇಕೆಂದು ತಮ್ಮ ಜೀವನ ಶೈಲಿಯನ್ನ ಕೂಡ ಬದಲಾಯಿಸಿಕೊಂಡಿದ್ದಾರೆ. ನನಗೆ ದೈನಂದಿನ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಅನಗತ್ಯ ಖರ್ಚು ಮಾಡಿಲ್ಲ. ಊಟ ಮಾಡುವುದು ಮತ್ತು ಮಲಗುವುದನ್ನು ಹೊರತುಪಡಿಸಿದ್ರೆ ಉಳಿದೆಲ್ಲಾ ಸಮಯವನ್ನು ಕೆಲಸಕ್ಕೆ ಮೀಸಲಿಟ್ಟಿದ್ದ. ಇದ್ರಿಂದಾಗಿ ಆತ ಬರೊಬ್ಬರಿ 1.42 ಕೋಟಿ ರೂಪಾಯಿ ಹಣ ಉಳಿಸಿದ್ದಾನೆ.

ಇನ್ನು  ಜಾಂಗ್ ಕ್ಸುಯೆಕಿಯಾಂಗ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾನೆ. ತಿಂಗಳಿಗೆ ಸುಮಾರು 300 ಆರ್ಡರ್ ಸ್ವೀಕರಿಸಿ ಕಂಪ್ಲೀಟ್ ಮಾಡುತ್ತೇನೆ. ಒಂದು ಆರ್ಡರ್ ತಲುಪಿಸಲು ಗರಿಷ್ಠ 25 ನಿಮಿಷಗಳನ್ನು ಮಾತ್ರ ತೆಗೆದುಕೊಳ್ಳುತ್ತೇನೆ ಎಂದಿದ್ದಾನೆ.  ಜಾಂಗ್ ಕ್ಸುಯೆಕಿಯಾಂಗ್ ಅವರ ಸಿಬ್ಬಂದಿ ಇವರನ್ನು ಆರ್ಡರ್ ಕಿಂಗ್ ಮತ್ತು ಗ್ರೇಟ್ ಗಾಡ್ ಎಂಬ ಹೆಸರುಗಳಿಂದ ಕರೆಯುತ್ತಾರೆ.

ಈ ಬಗ್ಗೆ ಜಾಂಗ್‌ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ಸಾಲಗಳನ್ನು ಹಿಂದುರಿಗಿಸಿ, ದಿನನಿತ್ಯದ ಖರ್ಚುಗಳನ್ನು ತೆಗೆದು ಇಷ್ಟು ಹಣ ಉಳಿಸುವಲ್ಲಿ ಸಕ್ಸಸ್ ಆಗಿದ್ದೇನೆ ಎಂದು ಪೋಸ್ಟ್ ಮಾಡಿಕೊಂಡಿದ್ದರು. ದಿನಕ್ಕೆ 8.5 ಗಂಟೆ ನಿದ್ದೆ ಮಾಡುವ ಜಾಂಗ್ 5 ವರ್ಷದಲ್ಲಿ 3,24,000 ಕಿಲೋಮೀಟರ್‌ ಪ್ರಯಾಣಿಸಿದ್ದಾನೆ.  ನನ್ನ ಕಥೆಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದೆ. ಆದ್ರೆ ಜನರಿಂದ ಇಷ್ಟೊಂದು ಮೆಚ್ಚುಗೆ ಸಿಗುತ್ತೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನನ್ನ ಪರಿಶ್ರಮದ ಬಗ್ಗೆ ನನಗೆ ಹೆಮ್ಮೆ ಇದೆ. ಕಷ್ಟಪಟ್ಟು ಕೆಲಸ ಮಾಡಿದ್ದರಿಂದಲೇ ಇಷ್ಟೊಂದು ಹಣ ಉಳಿತಾಯ ಮಾಡಲು ಸಾಧ್ಯವಾಯ್ತು. ಮುಂದಿನ ವರ್ಷ 8 ಲಕ್ಷ ಯುವಾನ್ ಹೂಡಿಕೆ ಮಾಡಿ ಎರಡು ಹೋಟೆಲ್ ಆರಂಭಿಸುವ ಯೋಜನೆಯನ್ನು ಹೊಂದಿದ್ದೇನೆ ಎಂದು ತಮ್ಮ ಕನಸನ್ನು ಹಂಚಿಕೊಂಡಿದ್ದಾರೆ.

Shwetha M