ಎಷ್ಟೇ ಒದ್ದಾಡಿದರು ನಿಮ್ಗೆ ನಿದ್ದೆ ಬರಲ್ವಾ? – ಈ ಟಿಪ್ಸ್ ಫಾಲೋ ಮಾಡಿ ಮಗುವಿನಂತೆ ನಿದ್ರಿಸಿ

ನಾನು ದಿನ ಎಷ್ಟೇ ಕಷ್ಟಪಟ್ಟರು ರಾತ್ರಿ ಒಳ್ಳೆಯ ನಿದ್ರೆ ಮಾಡಿದ್ರೆ ದೇಹಕ್ಕೆ ಫುಲ್ ರಿಲೀಫ್ ಆಗುತ್ತೆ. ರಾತ್ರಿ ನಿದ್ರೆ ಮಾಡಿ ಎದ್ದಾಗ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತೆ. ಆದ್ರೆ ಈಗ್ ಈಗ ರಾತ್ರಿ ಸಮಯದಲ್ಲಿ ನಿದ್ರೆ ಬಾರದೆ ಇರುವುದೇ ದೊಡ್ಡ ಸಮಸ್ಯೆಯಾಗಿದೆ. ನಿದ್ರಾಹೀನತೆ ಇತ್ತೀಚಿಗೆ ಹಲವರಿಗೆ ಕಾಡುವ ಸಮಸ್ಯೆ. ಮಲಗಿ ಗಂಟೆಗಳು ಕಳೆದರು ನಿದ್ರೆ ಬರುವುದಿಲ್ಲ. ಸಾಕಷ್ಟು ಜನ ಮೊಬೈಲ್ ನೋಡುತ್ತಾ ನಿದ್ದೆ ಮಾಡುವುದ್ದಕ್ಕೆ ಕಮ್ಮಿ ಮಾಡುತ್ತಿದ್ದಾರೆ. ಇದ್ರಿಂದ ಕಣ್ಣು ಉರಿಯುವುದು, ಹಗಲಿನಲ್ಲಿ ನಿದ್ರೆ ಬರುವುದು, ಆಯಾಸ ಹೀಗೆ ಹಲವು ರೀತಿ ಸಮಸ್ಯೆ ಎದುರಿಸುತ್ತಾರೆ.
ರಾತ್ರಿ 12 ಗಂಟೆಯ ನಂತರ ಮಲಗುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ಅವರು ಬೇಗ ಮಲಗಿದರೂ ಸಹ ನಿದ್ರೆ ಬರುವ ಸಮಯ ತಡವಾಗಿರುತ್ತದೆ. ಇಂತಹ ಸಮಯದಲ್ಲಿ ನಿದ್ರೆ ಬರುವಂತೆ ಮಾಡಲು ನೀವು ಹಲವು ರೀತಿಯ ಟ್ರಿಕ್ಸ್ ಮಾಡಿರಬಹುದು. ಬೇಗ ನಿದ್ರೆ ಬರುವಂತೆ ಮಾಡಲು ಒಂದಿಷ್ಟು ಉಪಾಯಗಳಿದ್ದರೂ ಅದ್ಯಾವುದೂ ನಿಮಗೆ ಉತ್ತಮ ಫಲಿತಾಂಶ ನೀಡದೆ ಇರಬಹುದು. ಮಲಗಿದ ತಕ್ಷಣ ನಿದ್ರೆ ಬರುವಂತೆ ಮಾಡುವ ಟ್ರಿಕ್ ತಿಳಿಸಿಕೊಡಲಿದ್ದೇವೆ.
ಪುದಿನ ಎಲೆ ಟೀ
ಮೊದಲು ಪುದಿನ ಎಲೆಗಳನ್ನು ಬಿಡಿಸಿಕೊಂಡು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಗ್ಲಾಸ್ ನೀರು ಹಾಕಿ ಬಿಸಿಯಾಗಲು ಬಿಡಿ. ಹೀಗೆ ನೀರು ಬಿಸಿಯಾಗಲು ಆರಂಭಿಸಿ ಕುದಿಬರಲು ಆರಂಭವಾದಾಗ ಇದಕ್ಕೆ ಬಿಡಿಸಿಕೊಂಡಿದ್ದ ಪುದಿನ ಎಲೆಗಳನ್ನು ಹಾಕಿಕೊಳ್ಳಬೇಕು. ಸಣ್ಣ ಉರಿಯಲ್ಲಿ ಕುದಿಬರಲು ಬಿಡಬೇಕು. ಇದು ಕುದಿಬಂದು 2 ಗ್ಲಾಸ್ ನೀರು 1 ಗ್ಲಾಸ್ಗೆ ಕಡಿಮೆಯಾಗಬೇಕು. ನಂತ್ರ ಗ್ಯಾಸ್ನಿಂದ ಅದ್ದನ್ನ ಇಳಿಸಿ ಸಲ್ಪ ತಣ್ಣಗಾದಾಗ ಜರಡಿ ಹಿಡಿದು ಅದರ ನೀರನ್ನು ಮಾತ್ರ ತೆಗೆದುಕೊಳ್ಳಿ. ಈಗ ಈ ನೀರಿಗೆ 1 ಸ್ಪೂನ್ ಜೇನು ತುಪ್ಪ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಇದನ್ನು ಪ್ರತಿ ದಿನ ಮಲಗುವ ಮುನ್ನ ಕುಡಿಯಬೇಕು. ನಿತ್ಯವೂ ಈ ಪುದಿನ ಟೀ ಮಾಡಿ ಕುಡಿಯುವುದರಿಂದ ತಕ್ಷಣ ನಿದ್ರೆ ಮಾಡಬಹುದು.
ಸೋಂಪುಕಾಳಿನ ನೀರು ಅಥವಾ ಜೀರಿಗೆ ನೀರು
ಇನ್ನು ಮಲಗಿದ ತಕ್ಷಣ ನಿದ್ರೆ ಬರುತ್ತಿಲ್ಲ ಎಂದಾದರೆ ನೀವು ಸಂಜೆಯ ಸಮಯದಲ್ಲಿ ಜೀರಿಗೆ ಅಥವಾ ಸೋಂಪುಕಾಳನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ ನೆನೆಸಿಡಬೇಕು. ನಂತರ ಆ ನೀರನ್ನು ಜರಡಿ ಹಿಡಿದು ಬಳಿಕ ಗ್ಯಾಸ್ ಮೇಲಿಟ್ಟು ಕುದಿಸಿಕೊಳ್ಳಬೇಕು. ನೀರು ಕುದಿಬರುವಾಗ ಒಂದು ಚಿಟಿಕೆ ಅಷ್ಟು ಶುಂಠಿ, ಲವಂಗ ಸೇರಿಸಿ ನಂತರ ಒಲೆಯಿಂದ ಇಳಿಸಿಕೊಂಡು ಬಿಸಿ ಬಿಸಿಯಾಗಿದ್ದಾಗ ಅದನ್ನು ಕುಡಿಯಬೇಕು. ಹೀಗೆ ನಿತ್ಯ ಮಾಡುವುದರಿಂದ ನಿಮ್ಮ ನಿದ್ರಾಹೀನತೆ ಸಮಸ್ಯೆ ಕೊನೆಯಾಗಲಿದೆ. ಮಲಗಿದ ತಕ್ಷಣ ನಿಮಗೆ ನಿದ್ರೆ ಬರಲಿದೆ.

ನೋಡಿರಿ

