ಡಿಕೆ ಶಿವಕುಮಾರ್ ಪ್ರಾರ್ಥನೆಗೆ ಅಸ್ತು ಎಂದ ಮಹಾಗಣಪತಿ! – ಡಿಕೆಶಿ ಸಿಎಂ ಪಟ್ಟ ಏರೋದು ಫಿಕ್ಸ್?

ರಾಜ್ಯದಲ್ಲಿ ಗದ್ದುಗೆ ಗುದ್ದಾಟ ಇನ್ನು ನಿಂತಿಲ್ಲ. ಸಿದ್ಧರಾಮಯ್ಯ ಹೈಕಮಾಂಡ್ ಹೇಳೋವರೆಗೂ ನಾನೇ ಸಿಎಂ ಎಂದು ಹೇಳುತ್ತಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಟೆಂಪಲ್‌ರನ್ ಶುರುಮಾಡಿಕೊಂಡಿದ್ದಾರೆ. ಪವರ್‌ಫುಲ್ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ಆಶಿರ್ವಾದ ಪಡೆಯುತ್ತಿದ್ದಾರೆ. ಇದೀಗ ಡಿಕೆ ಶಿವಕುಮಾರ್‌ಗೆ ಬಲಗಡೆಯಿಂದ ದೇವರ ಪ್ರಸಾದ ಸಿಕ್ಕಿದೆ.
ಇದನ್ನೂ ಓದಿ: ಪಾಂಡ್ಯ ಫ್ಲೈಯಿಂಗ್ ಕಿಸ್ ಕಮಾಲ್! – ಹಾರ್ದಿಕ್‌ಗೆ ಪವರ್ ತುಂಬಿದ ಮಹಿಕಾ ಯಾರು?
ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಸ್ಥಾನಕ್ಕೇರಲು ಶತಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಡಿಕೆಶಿ ದೇವರ ಮೊರೆ ಹೋಗಿದ್ದಾರೆ. ನಿನ್ನೆಯಷ್ಟೇ ಅಂಕೋಲದ ಆಂದ್ಲೆ ಜಗದೀಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ರು. ದೇವಿ ಬಳಿ ವಿಶೇಷ ಪಾರ್ಥನೆ ಸಲ್ಲಿಸಿದ್ರು. ಜಗದೀಶ್ವರಿ ದೇವಸ್ಥಾನದಲ್ಲಿ ಐದು ಬಾರಿ ಬೇಡಿಕೆ ಇಟ್ಟಾಗಲೂ ಒಳ್ಳೆಯ ಮುನ್ಸೂಚನೆ ಸಿಕ್ಕಿದೆಯಂತೆ. ಅದಾದ ಬಳಿಕ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ದೇಗುಲಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು. ವಿಶೇಷ ಪೂಜೆ ವೇಳೆ ಮಹಾಗಣಪತಿ ತಲೆಯ ಮೇಲೆ ಹೂ ಇಟ್ಟು ಪ್ರಾರ್ಥನೆ ಸಲ್ಲಿಸಲಾಗಿತ್ತು. ಪೂಜೆ ವೇಳೆ ಮಹಾಗಣಪತಿ ಬಲಗಡೆಯಿಂದ ಹೂ ನೀಡಿದ್ದು, ಡಿಕೆಶಿಗೆ ಕೊಟ್ಟ ಶುಭ ಸೂಚನೆ ಎನ್ನಲಾಗ್ತಿದೆ.
ಮತ್ತೊಂದೆಡೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರ ನಿವಾಸಕ್ಕೆ ಉತ್ತರ ಭಾರತದ ನಾಗಸಾಧುಗಳು ದಿಢೀರ್ ಭೇಟಿ ನೀಡಿದ್ರು. ಮನೆಯೊಳಗೆ ತೆರಳಿ ನಾಗಸಾಧುಗಳು ಡಿಕೆಶಿಗೆ ಆಶೀರ್ವಾದ ನೀಡಿದ್ದಾರೆ.ನಾಗ ಸಾಧುಗಳ ಭೇಟಿ ಬಗ್ಗೆ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ಅವರೆಲ್ಲಾ ಮನೆಯ ಬಾಗಿಲಿಗೆ ಬಂದಿದ್ರೂ, ಅವರೇ ಬಂದಾಗ ಅವರನ್ನ ಹೋಗಿ ಎನ್ನಲು ಆಗೋದಿಲ್ಲಾ. ಹೀಗಾಗಿ ಒಳಗೆ ಕರೆದಿದ್ದೆ. ಧಾರ್ಮಿಕತೆಯಲ್ಲಿ ಬಂದಿದ್ರೂ, ಬಂದವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡೆ ಎಂದಿದ್ದಾರೆ.
ದೆಹಲಿ ಪ್ರವಾಸದ ಬಗ್ಗೆ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮಂಗಳವಾರ ದೆಹಲಿಗೆ ಹೋಗ್ತಿನಿ. ಜಲಮಂಡಲಿಯಿಂದ ಒಂದು ಕೆಲಸ ಇದೆ ಅದನ್ನು ಮುಗಿಸಬೇಕು. ಮೇಕೆದಾಟು ವಿಚಾರ ಚರ್ಚೆ ಮಾಡಲಾಗುತ್ತೆ. ಇಲಾಖೆಯ ಕೆಲಸದ ಬಗ್ಗೆ ಚರ್ಚೆ ಆಗ್ಬೇಕಿದೆ. ಹೀಗಾಗಿ ದೆಹಲಿಗೆ ಹೋಗುತ್ತಿದ್ದೇನೆ ಎಂದಿದ್ದಾರೆ. ಹೈಕಮಾಂಡ್ ಭೇಟಿ ವಿಚಾರವಾಗಿ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಿಮಗೆ ಹೇಳಿಯೇ ನಾನು ಹೋಗುತ್ತೇನೆ. ನಿಮಗೆ ಹೇಳದೆ ನಾನು ಹೋಗೋದಿಲ್ಲ ಎಂದಿದ್ದಾರೆ.

ನೋಡಿರಿ

