ಪಾಂಡ್ಯ ಫ್ಲೈಯಿಂಗ್‌ ಕಿಸ್‌ ಕಮಾಲ್!‌ – ಹಾರ್ದಿಕ್‌ಗೆ ಪವರ್‌ ತುಂಬಿದ ಮಹಿಕಾ ಯಾರು?

ಪಾಂಡ್ಯ ಫ್ಲೈಯಿಂಗ್‌ ಕಿಸ್‌ ಕಮಾಲ್!‌ – ಹಾರ್ದಿಕ್‌ಗೆ ಪವರ್‌ ತುಂಬಿದ ಮಹಿಕಾ ಯಾರು?

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕೇವಲ 16 ಎಸೆತಗಳಲ್ಲಿ ಪಾಂಡ್ಯ ಅರ್ಧಶತಕ ಗಳಿಸಿದ್ರು. ಈ ಬೆನ್ನಲ್ಲೇ ಪಾಂಡ್ಯ ತನ್ನ ಗರ್ಲ್‌ಫ್ರೆಂಡ್‌ಗೆ ಕಿಸ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: ನಾಳೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ! –  ಈ ಮಾರ್ಗದಲ್ಲಿ ಮೆಟ್ರೋ ಸೇವೆ 1 ಗಂಟೆ ಲೇಟ್‌ !

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಮ್ಯಾಚ್‌ಗೆ ಹಾರ್ದಿಕ್‌ ಪಾಂಡ್ಯ ಗೆಳತಿ ಆಗಮಿಸಿದ್ರು. ಮಹಿಕಾ ಶರ್ಮಾ ಸ್ಟ್ಯಾಂಡ್‌ನಲ್ಲಿ ಕುಳಿತು ಮ್ಯಾಚ್‌ ನೋಡಿದ್ರು. ಪಾಂಡ್ಯ ಆಟ ನೋಡಿ ಮಹಿಕಾ ಶರ್ಮಾ ಕ್ಲೀನ್‌ ಬೋಲ್ಡ್‌ ಆಗಿದ್ದಾರೆ. ಹಾರ್ದಿಕ್ ದೊಡ್ಡ ಹೊಡೆತಗಳನ್ನು ಹೊಡೆಯುತ್ತಿದ್ದಂತೆ ಮಹಿಕಾ ಚಪ್ಪಾಳೆ ತಟ್ಟುತ್ತಿದ್ದರು. ಹಾರ್ದಿಕ್ ಹಾಫ್‌ ಸೆಂಚುರಿ ಬಾರಿಸುತ್ತಿದ್ದಂತೆ, ಮಹಿಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ನಂತರ ಆಕೆ ಕೂಡ ಹಾರ್ದಿಕ್‌ಗೆ ಫ್ಲೈಯಿಂಗ್ ಕಿಸ್ ನೀಡಿದರು. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಯಾರು ಈ ಮಹಿಕಾ?
ಮಹಿಕಾ ಮಾಡೆಲ್ ಆಗಿದ್ದು, 2024ರ ಭಾರತೀಯ ಫ್ಯಾಷನ್ ಪ್ರಶಸ್ತಿಗಳಲ್ಲಿ ವರ್ಷದ ಮಾಡೆಲ್ (ನವಯುಗ) ಪ್ರಶಸ್ತಿಯನ್ನು ಪಡೆದಿದ್ದಾರೆ. ಮಹಿಕಾ ಹಲವಾರು ವರ್ಷಗಳಿಂದ ಕೆಲ ಸಂಗೀತ ವೀಡಿಯೊಗಳು, ಕಿರುಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚಾಗಿ ಬಿಕಿನಿ ಧರಿಸಿದ ಫೋಟೊ ಮತ್ತು ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡುತ್ತಿರುತ್ತಾರೆ. ಮಹಿಕಾ ಅರ್ಥಶಾಸ್ತ್ರ ಮತ್ತು ಹಣಕಾಸಿನಲ್ಲಿ ಪದವಿ ಪಡೆದಿದ್ದಾರೆ. ಆದರೆ ಅವರು ಪೂರ್ಣ ಪ್ರಮಾಣದಲ್ಲಿ ಮಾಡೆಲಿಂಗ್ ಮತ್ತು ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತನಿಷ್ಕ್, ವಿವೋ ಮತ್ತು ಯುನಿಕ್ಲೋ ನಂತಹ ಬ್ರ್ಯಾಂಡ್‌ಗಳ ಜಾಹೀರಾತು ಪ್ರಚಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Shwetha M