RCB ಸೇರಿದ ಬೆನ್ನಲ್ಲೇ ಬಂಪರ್ ಲಾಟರಿ – ಪಾಟಿದಾರ್ ಕ್ಯಾಪ್ಟನ್ಸಿ ಕಿತ್ಕೊಂಡ ವೆಂಕಟೇಶ್ ಅಯ್ಯರ್

ಐಪಿಎಲ್ ಮಿನಿ ಆಕ್ಷನ್ ನಲ್ಲಿ ಆರ್ ಸಿಬಿ ದಿ ಬೆಸ್ಟ್ ಅನ್ನೋ ಪ್ಲೇಯರ್ ಗಳನ್ನೇ ಪಿಕ್ ಮಾಡಿದೆ. ಅಖಾಡದಲ್ಲಿ ಬಿಗ್ ಚಾಯ್ಸ್ ಇದ್ರೂ ತುಂಬಾ ಚ್ಯೂಸಿಯಾಗಿ ಸೆಲೆಕ್ಷನ್ ಮಾಡ್ಕೊಂಡಿದ್ದಾರೆ. ಯಾವ ಎಮೋಷನ್ಸ್ಗೂ ಜಾಗ ಕೊಟ್ಟಿಲ್ಲ. ಎಂಟಕ್ಕೆ ಎಂಟೂ ಆಟಗಾರರು ಫೈನ್ ಅನ್ನೋ ಥರನೇ ಇದ್ದಾರೆ. ಬಟ್ ವೆಂಕಟೇಶ್ ಅಯ್ಯರ್ಗೆ 7 ಕೋಟಿ ಕೊಡ್ಬೇಕಿತ್ತಾ ಅನ್ನೋ ವಾದವೂ ಇದೆ. ಇನ್ನೂ ಕೆಲವ್ರು ವೆಂಕಿ ಒಳ್ಳೆ ಆಯ್ಕೆ ಎಂದಿದ್ದಾರೆ. ಬಟ್ ಆರ್ಸಿಬಿಗೆ ಬಂದ್ಮೇಲೆ ವೆಂಕಿ ನಸೀಬಂತೂ ಚೇಂಜ್ ಆಗಿದೆ. ರಜತ್ ಪಾಟಿದಾರ್ ಕ್ಯಾಪ್ಟನ್ಸಿಗೇ ಕಿತ್ಕೊಂಡಿದ್ದಾರೆ.
ಇದನ್ನೂ ಓದಿ : ಸೂರ್ಯ ದಿ ಬ್ಯಾಟರ್ ಕಾಣೆಯಾಗಿದ್ದಾರೆ – ನಾಯಕ ಸೂರ್ಯಕುಮಾರ್ಗೆ ದಿಢೀರ್ ಜ್ಞಾನೋದಯ
ಹಾಲಿ ಚಾಂಪಿಯನ್ ಆರ್ಸಿಬಿ ಮೆಗಾ ಆಕ್ಷನ್ನಲ್ಲಿ ಒಟ್ಟು 8 ಆಟಗಾರರನ್ನ ಖರೀದಿ ಮಾಡಿದೆ. ಇಂಟ್ರೆಸ್ಟಿಂಗ್ ಅಂದ್ರೆ ಆರ್ ಸಿಬಿ ಪರ್ಸ್ ನಲ್ಲಿ ಇದ್ದದ್ದೇ 16.4 ಕೋಟಿ. ಅದರಲ್ಲಿ 7 ಕೋಟಿ ಅಂದರೆ ಶೇಕಡಾ 43ರಷ್ಟು ದುಡ್ಡನ್ನು ವೆಂಕಟೇಶ್ ಅಯ್ಯರ್ಗೇ ಕೊಟ್ಟಿದೆ. ಕಳೆದ ಹರಾಜಿನಲ್ಲಿ 23 ಕೋಟಿವರೆಗೂ ವೆಂಕಿ ಮೇಲೆ ಬಿಡ್ ಕೂಗಿತ್ತು. ಅಂತಿಮವಾಗಿ 23.75 ಕೋಟಿಗೆ ಕೆಕೆಆರ್ ಗೆದ್ದಿತ್ತು. ಬಟ್ ಈ ಸಲ ಹಠ ಮಾಡಿಯೇ ಖರೀದಿ ಮಾಡಿದ್ದಾರೆ. ವೆಂಕಿ ಬಂದ್ಮೇಲೆ ಪ್ಲೇಯಿಂಗ್ 11ನದ್ದೇ ಚಿಂತೆಯಾಗಿದೆ. ಕನ್ನಡಿಗನ ಸ್ಥಾನಕ್ಕೆ ಕುತ್ತು ಬಂತಾ ಅನ್ನೋ ಅನುಮಾನವೂ ಶುರುವಾಗಿದೆ.
ಪಡಿಕ್ಕಲ್ ಸ್ಥಾನದಲ್ಲಿ ಬ್ಯಾಟ್ ಬೀಸ್ತಾರಾ ವೆಂಕಿ?
ಆರ್ಸಿಬಿ ಮೊದ್ಲಿಂದಲೂ ಕನ್ನಡಿಗ ಆಟಗಾರರ ವಿರೋಧಿ ಅನ್ನೋ ಪಟ್ಟ ಕಟ್ಟಿಕೊಂಡೇ ಬಂದಿದೆ. ಯಾಕಂದ್ರೆ ಈ ತಂಡದಲ್ಲಿ ಕರ್ನಾಟಕ ಪ್ಲೇಯರ್ಸ್ ಆಡಿದ್ದು ತೀರಾ ಕಡಿಮೆ. ಕಳೆದ ಬಾರಿ ದೇವದತ್ ಪಡಿಕ್ಕಲ್ ಮತ್ತು ಮನೋಜ್ ಬಾಂಢಗೆ ಇದ್ರು. ಪಡಿಕ್ಕಲ್ ಇಂಜುರಿ ಆದ್ಮೇಲೆ ಮಯಾಂಕ್ ಅಗರ್ವಾಲ್ ಬಂದಿದ್ರು. ಬಟ್ ಮಿನಿ ಆಕ್ಷನ್ ಗೂ ಮುನ್ನ ಮಯಾಂಕ್ ಮತ್ತು ಭಾಂಡಗೆ ಇಬ್ರನ್ನೂ ಬಿಟ್ಟುಕೊಟ್ಟಿದ್ರು. ವಾಪಸ್ ಖರೀದಿಯೂ ಮಾಡಿಲ್ಲ. ಈಗ ಉಳಿದಿರೋದೇ ಪಡಿಕ್ಕಲ್ ಮಾತ್ರ. ಹೀಗಿದ್ರೂ ಮುಂದಿನ ಆವೃತ್ತಿಯಲ್ಲಿ ವೆಂಕಿ ಯಿಂದಾಗಿ ಪಡಿಕ್ಕಲ್ ಸ್ಥಾನ ಬಿಟ್ಟುಕೊಡ್ಬೇಕಾ ಅನ್ನೋ ಚರ್ಚೆ ಶುರುವಾಗಿದೆ. ಯಾಕಂದ್ರೆ ಉಳಿದೆಲ್ಲಾ ಸ್ಲಾಟ್ಗಳಿಗೆ ಪ್ಲೇಯರ್ಸ್ ಫಿಕ್ಸ್ ಆಗಿರೋದ್ರಿಂದ ನಂಬರ್ 3ನಲ್ಲಿ ಪಡಿಕ್ಕಲ್ ಬದಲಿಗೆ ಆಡಿಸ್ತಾರಾ ಅನ್ನೋ ಅನುಮಾನ ಇದೆ. ಕಳೆದ ಸೀಸನ್ನಲ್ಲಿ ನಂಬರ್ 3ನಲ್ಲಿ ದೇವದತ್ ಪಡಿಕ್ಕಲ್ 150.61ರ ಸ್ಟ್ರೈಕ್ ರೇಟ್ನಲ್ಲಿ 247 ರನ್ ಸಹ ಗಳಿಸಿದ್ದರು. ಕೊನೇ ಪಂದ್ಯಗಳಲ್ಲಿ ಇಂಜುರಿ ಸಮಸ್ಯೆ ಕಾಡಿತ್ತು. ಈ ಸಲವೂ ನಂಬರ್ 3ನಲ್ಲೇ ಆಡ್ತಾರೆ ಅನ್ಕೊಂಡ್ರೆ ವೆಂಕಿ ಬಂದಿರೋದು ಸ್ವಲ್ಪ ಗೊಂದಲ ಸೃಷ್ಟಿಸಿದೆ. ಬಟ್ ಈ ವಿಚಾರದಲ್ಲಿ ಮ್ಯಾನೇಜ್ಮೆಂಟ್ ಕ್ಲಿಯರ್ ಆಗೇ ಇದ್ದಂಗೆ ಕಾಣಿಸ್ತಿದೆ.
3ನೇ ಸ್ಥಾನಕ್ಕಾಗಿಯೇ ವೆಂಕಿ ಖರೀದಿಸಿತಾ ಫ್ರಾಂಚೈಸಿ?
ವೆಂಕಟೇಶ್ ಅಯ್ಯರ್ ಖರೀದಿ ಹಿಂದೆ ಆರ್ಸಿಬಿ ಫ್ರಾಂಚೈಸಿ ನೆಕ್ಸ್ಟ್ ಲೆವೆಲ್ ಥಿಂಕಿಂಗ್ ಮಾಡಿದಂತಿದೆ. ನಂಬರ್ 3ನಲ್ಲಿ ಇಬ್ಬರ ಪರ್ಫಾಮೆನ್ಸ್ ಕಂಪೇರ್ ಮಾಡಿಯೇ ಪಿಕ್ ಮಾಡಿದ್ರಾ ಅನ್ನೋ ಚರ್ಚೆ ಇದೆ. ವೆಂಕಟೇಶ್ ಅಯ್ಯರ್ ನಂಬರ್ 3ನಲ್ಲಿ 43.23ರ ಸರಾಸರಿಯಲ್ಲಿ 168.77ರ ಸ್ಟ್ರೇಕ್ರೇಟ್ನಲ್ಲಿ 562 ರನ್ ಗಳನ್ನು ಗಳಿಸಿದ್ದಾರೆ. ಆದರೆ, ಪಡಿಕ್ಕಲ್ 24.15ರ ಸರಾಸರಿ ಹಾಗೇ 138.79ರ ಸರಾಸರಿಯಲ್ಲಿ 483 ರನ್ ಗಳನ್ನು ಗಳಿಸಿದ್ದಾರೆ. ಈ ಅಂಕಿಅಂಶಗಳನ್ನ ನೋಡ್ದಾಗ ಮೂರನೇ ಕ್ರಮಾಂಕಕ್ಕೆ ವೆಂಕಟೇಶ್ ಅಯ್ಯರ್ ಅವರೇ ಪಡಿಕ್ಕಲ್ ಗಿಂತ ಸ್ವಲ್ಪ ಬೆಟರ್ ಅನ್ಸಿರಬಹುದು. ಹೀಗಾಗಿ ದೇವದತ್ ಪಡಿಕ್ಕಲ್ಗೆ ವೆಂಕಿ ಪಕ್ಕಾ ವಿಲನ್ ಆಗ್ತಾರೆ. ಅಥವಾ ಸ್ಲಾಟ್ ಚೇಂಜ್ ಆದ್ರೂ ಅಚ್ಚರಿ ಇಲ್ಲ. ಬಟ್ ಆರ್ಸಿಬಿಗೆ ಬಂದ್ಮೇಲೆ ವೆಂಕಿ ನಸೀಬಂತೂ ಚೇಂಜ್ ಆಗಿದೆ. ರಜತ್ ಪಾಟಿದಾರ್ ಕ್ಯಾಪ್ಟನ್ಸಿಯನ್ನೇ ಕಿತ್ಕೊಂಡಿದ್ದಾರೆ.
ರಜತ್ ಪಾಟಿದಾರ್ ಕ್ಯಾಪ್ಟನ್ಸಿ ಕಸಿದ ವೆಂಕಟೇಶ್ ಅಯ್ಯರ್!
ಐಪಿಎಲ್ ಮಿನಿ ಆಕ್ಷನ್ ಬೆನ್ನಲ್ಲೇ ವೆಂಕಟೇಶ್ ಅಯ್ಯರ್ಗೆ ಲಕ್ ಖುಲಾಯಿಸಿದ್ದು ರಜತ್ ಪಾಟಿದಾರ್ ಅವ್ರ ಕ್ಯಾಪ್ಟನ್ಸಿಯನ್ನೇ ಕಿತ್ಕೊಂಡಿದ್ದಾರೆ. ಹಾಗಂತ ಅದು ಐಪಿಎಲ್ ಅಲ್ಲ ವಿಜಯ್ ಹಜಾರೆ ಟ್ರೋಫಿ ಟೂರ್ನಿಗೆ. ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಮುಂಬರುವ 2025-26ರ ವಿಜಯ್ ಹಜಾರೆ ಟ್ರೋಫಿಗೆ ವೆಂಕಟೇಶ್ ಅಯ್ಯರ್ ಅವರನ್ನು ನಾಯಕರನ್ನಾಗಿ ಘೋಷಿಸಿದೆ. 2025-26ರ ಸೀಸನ್ನಲ್ಲಿ ಮಧ್ಯಪ್ರದೇಶದ ಎಲ್ಲಾ ಸ್ವರೂಪದ ನಾಯಕರಾಗಿ ರಜತ್ ಪಾಟಿದಾರ್ ಅವರನ್ನು ನೇಮಕ ಮಾಡುವ ಸಿದ್ಧತೆಗಳು ನಡೆದಿತ್ತು. ಬಟ್ ಅಚ್ಚರಿಯ ಬೆಳವಣಿಗೆಯಲ್ಲಿ ವೆಂಕಿಗೆ ಅದೃಷ್ಟ ಖುಲಾಯಿಸಿದೆ. ಅಲ್ದೇ ವಿಜಯ್ ಹಜಾರೆ ಟ್ರೋಫಿಗೆ ಮಧ್ಯಪ್ರದೇಶ ತಂಡದಲ್ಲಿ ಪಾಟಿದಾರ್ ಅವರನ್ನು ಆಯ್ಕೆ ಮಾಡಲಾಗಿಲ್ಲ. ಯಾವುದೇ ಫಿಟ್ನೆಸ್ ಸಮಸ್ಯೆಗಳಿದ್ಯಾ ಅಥವಾ ವಿಶ್ರಾಂತಿ ನೀಡಿದ್ರಾ ಅನ್ನೋ ಬಗ್ಗೆ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ನಿಂದ ಕ್ಲಾರಿಟಿಯೂ ಸಿಕ್ಕಿಲ್ಲ. ಇನ್ನು ವಿಜಯ್ ಹಜಾರೆಗೆ ಮಧ್ಯಪ್ರದೇಶದ 16 ಸದಸ್ಯರ ತಂಡದಲ್ಲಿ ಕುಮಾರ್ ಕಾರ್ತಿಕೇಯ, ಯಶ್ ದುಬೆ ಮತ್ತು ಮಂಗೇಶ್ ಯಾದವ್ ಸೇರಿದಂತೆ ಅಚ್ಚರಿಯ ಆಟಗಾರರೇ ಇದ್ದಾರೆ. ಌಂಡ್ ಇವರೆಲ್ಲರೂ ಇತ್ತೀಚಿನ ಐಪಿಎಲ್ 2026 ಹರಾಜಿನಲ್ಲಿ ಆಯ್ಕೆಯಾದವರು.
ಐಪಿಎಲ್ ನಲ್ಲಿ ವೆಂಕಿ ಗ್ರಾಫ್ ನಲ್ಲಿ ಸಾಕಷ್ಟು ವೇರಿಯೇಷನ್ಸ್!
ಕಳೆದ ವರ್ಷ ಕೋಲ್ಕತ್ತಾ 23.75 ಕೋಟಿ ರೂ. ನೀಡಿ ಅಯ್ಯರ್ ಅವರನ್ನು ಖರೀದಿಸಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಯ್ಯರ್ ಬಿಡ್ ಮೌಲ್ಯ 70% ಕಡಿಮೆಯಾಗಿದೆ. ಇನ್ನು ಐಪಿಎಲ್ನಲ್ಲಿ ವೆಂಕಿ ಪರ್ಫಾಮೆನ್ಸ್ ಗ್ರಾಫ್ ಸಾಕಷ್ಟು ಏರಿಳಿತಗಳನ್ನ ಕಂಡಿದೆ. 2024ರಲ್ಲಿ ಕೆಕೆಆರ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಆದ್ರೆ 2025ರಲ್ಲಿ 23.75 ಕೋಟಿ ಪಡೆದ್ರೂ ಬಿಗ್ ಸ್ಕೋರ್ ಬಂದಿರಲಿಲ್ಲ. ಒಟ್ಟಾರೆಯಾಗಿ ಐಪಿಎಲ್ನಲ್ಲಿ 56 ಇನ್ನಿಂಗ್ಸ್ಗಳಲ್ಲಿ 29.12 ರ ಸರಾಸರಿಯಲ್ಲಿ 1,468 ರನ್ ಗಳಿಸಿದ್ದಾರೆ, ಸ್ಟ್ರೈಕ್ ರೇಟ್ 137 ಕ್ಕಿಂತ ಹೆಚ್ಚಿದ್ದು, ಇದರಲ್ಲಿ ಒಂದು ಶತಕ ಮತ್ತು 12 ಅರ್ಧಶತಕಗಳು ಸೇರಿವೆ. ಐಪಿಎಲ್ 2025 ರಲ್ಲಿ ಏಳು ಇನ್ನಿಂಗ್ಸ್ಗಳಲ್ಲಿ ಕೇವಲ 142 ರನ್ಗಳನ್ನು ಗಳಿಸಿದರು. ಇನ್ನು ಎಲ್ಲಾ ಟಿ20 ಪಂದ್ಯಗಳಲ್ಲಿ, ಅಯ್ಯರ್ 144 ಪಂದ್ಯಗಳಲ್ಲಿ 34.18 ಸರಾಸರಿ ಮತ್ತು 138.63 ಸೈಕ್ ರೇಟ್ನಲ್ಲಿ 3,179 ರನ್ ಗಳಿಸಿದ್ದಾರೆ ಮತ್ತು 55 ವಿಕೆಟ್ಗಳಿಗೆ ಕೊಡುಗೆ ನೀಡಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೀಸನ್ನಲ್ಲಿ 10 ಪಂದ್ಯಗಳಲ್ಲಿ ಎರಡು ಅರ್ಧಶತಕಗಳನ್ನು ಒಳಗೊಂಡಂತೆ 211 ರನ್ ಗಳಿಸಿದ್ದಾರೆ. ಇದೀಗ ವಿಜಯ್ ಹಜಾರೆ ಟ್ರೋಫಿಗೆ ಕ್ಯಾಪ್ಟನ್ಸಿ ಕೂಡ ಸಿಕ್ಕಿದ್ದು ಫುಲ್ ಹ್ಯಾಪಿಯಾಗಿದ್ದಾರೆ. ಇನ್ನು ಆರ್ಸಿಬಿ ಕೂಡ ಮಿನಿ ಆಕ್ಷನ್ ಬಳಿಕ ಸೂಪರ್ ಪವರ್ ಟೀಂ ಆಗಿದೆ.
6 ಆಟಗಾರರನ್ನ ಬೇಸ್ ಪ್ರೈಸ್ ಗೆ ಖರೀದಿಸಿದ ಆರ್ ಸಿಬಿ!
ಆಕ್ಷನ್ ನಲ್ಲಿ ಖರೀದಿಸಿದ 8 ಆಟಗಾರರ ಪೈಕಿ ಇಬ್ಬರನ್ನ ಮಾತ್ರವೇ ಜಾಸ್ತಿ ಅಮೌಂಟ್ ಕೊಟ್ಟು ಜಾಯ್ನ್ ಮಾಡ್ಕೊಂಡಿದ್ದಾರೆ. ವೆಂಕಟೇಶ್ ಅಯ್ಯರ್ ಮತ್ತು ಮಂಗೇಶ್ ಯಾದವ್. ಉಳಿದಂತೆ 6 ಪ್ಲೇಯರ್ಸ್ ಬೇಸ್ ಪ್ರೈಸ್ಗೇ ಬಂದಿದ್ದಾರೆ. ಜೇಕಬ್ ಡಫಿ, ಜಾರ್ಡನ್ ಕಾಕ್ಸ್ ಸ್ಟಾರ್ ಪ್ಲೇಯರ್ಸ್ ಆದ್ರೂ ಮೂಲಬೆಲೆಗೇ ಬಂದದ್ದು ನಿಜಕ್ಕೂ ಶಾಕಿಂಗ್ ಆಗಿತ್ತು. ಡಫಿ ಅಂತೂ ನಂಬರ್ 2 ಟಿಟ್ವೆಂಟಿ ಬೌಲರ್. ಹೇಜಲ್ವುಡ್ ಇಂಜುರಿಯಾದ್ರೆ ರಿಪ್ಲೇಸ್ ಮಾಡ್ಬೋದು. ಅಥವಾ ಇಬ್ಬರನ್ನೂ ಆಡಿಸ್ಬೋದು. ಕಾಕ್ಸ್ ಕೂಡ ಬೆಂಕಿ ಬ್ಯಾಟರ್. ಅದ್ಭುತ ಫಾರ್ಮ್ನಲ್ಲಿದ್ದಾರೆ. ಮಂಗೇಶ್ ಯಾದವ್ ಕಾಸ್ಟ್ಲಿಯಾದ್ರೇನೋ ಅನ್ಸಿದ್ರೂ ಕೂಡ ಗ್ರೌಂಡ್ ವರ್ಕ್ ಮಾಡದೇ ಆತನ ಮೇಲೆ ಅಷ್ಟೊಂದು ಹಣ ಬಿಡ್ ಮಾಡಲ್ಲ. ಬ್ಯಾಟಿಂಗ್ & ಬೌಲಿಂಗ್ನಲ್ಲಿ ಸ್ಟ್ರೆಂಥ್ ಆಗ್ತಾರೆ ಅನ್ನೋದು ಗೊತ್ತಾದ್ಮೇಲೆ 5 ಕೋಟಿ ಕೊಟ್ಟಿದ್ದಾರೆ. ಇನ್ನು ಮಿಕ್ಕವ್ರನ್ನ ಸ್ಲಾಟ್ ಫಿಲ್ ಮಾಡಿರ್ಬೋದು. ಸೋ ಮಾಜಿ ಪ್ಲೇಯರ್ಸ್ ಅನ್ನೋ ಯಾವ ಎಮೋಷನ್ಸ್, ಅಟ್ಯಾಟ್ಮೆಂಟ್ ಇಲ್ಲದೆ ಪ್ಯೂರ್ಲಿ ಬ್ಯುಸಿನೆಸ್ ಮೈಂಡ್ನಲ್ಲೇ ಪಿಕ್ ಮಾಡಿದ್ದಾರೆ. ಈಗ ಕಂಪ್ಲೀಟ್ ಟೀಂ ಆದ್ಮೇಲೆ ಆರ್ಸಿಬಿ ವೆರಿ ವೆರಿ ಡೇಂಜರಸ್ ಟೀಂ ಆಗಿದೆ.

ನೋಡಿರಿ

