ಕಾರ್ಮಿಕ ಅಪ್ಪನ ಕಷ್ಟಕ್ಕೆ ಸಿಕ್ಕಿತು ಪ್ರತಿಫಲ – ಐಪಿಎಲ್ ಅಂಗಳಕ್ಕೆ ಕಾಲಿಟ್ಟ ಬ್ರಿಜೇಶ್ ಕುಮಾರ್

ಕಾರ್ಮಿಕ ಅಪ್ಪನ ಕಷ್ಟಕ್ಕೆ ಸಿಕ್ಕಿತು ಪ್ರತಿಫಲ – ಐಪಿಎಲ್ ಅಂಗಳಕ್ಕೆ ಕಾಲಿಟ್ಟ ಬ್ರಿಜೇಶ್ ಕುಮಾರ್

ಐಪಿಎಲ್ ಮಿನಿ ಹರಾಜು ಮುಗಿಯುತ್ತಿದ್ದಂತೆ ಒಬ್ಬೊಬ್ಬ ಕ್ರಿಕೆಟರ್ ಬದುಕಿನ ಹಾದಿಯ ರೋಚಕ ಚಿತ್ರಣ ವರದಿಯಾಗುತ್ತಿದೆ. ಇದೀಗ ಕಾರ್ಮಿಕನ ಮಗ ಶ್ರೀಮಂತ ಕ್ರಿಕೆಟ್ ಲೀಗ್‌ಗೆ ಕಾಲಿಟ್ಟಿರುವುದು ಬಹುತೇಕ ಬಡಪ್ರತಿಭೆಗಳಿಗೆ ಸ್ಪೂರ್ತಿಯಾಗಿದೆ. ಕ್ರಿಕೆಟ್ ಅನ್ನೋದು ನಿಜವಾದ ಪ್ರತಿಭೆಗೆ ಮಣೆ ಹಾಕುತ್ತದೆ ಅನ್ನೋದಕ್ಕೆ ಜಿತೇಶ್ ಕುಮಾರ್ ಶರ್ಮಾ ಬೆಸ್ಟ್ ಎಕ್ಸಾಂಪಲ್.

ಇದನ್ನೂ ಓದಿ:2 ವರ್ಷಗಳ ಬಳಿಕ ಸರ್ಫರಾಜ್‌ ಖಾನ್‌ಗೆ ಒಲಿದ ಅದೃಷ್ಟ – CSK ತಂಡ ಸೇರಿದ ಭಾರತದ ಯಂಗ್‌ಸ್ಟರ್

ಕ್ರಿಕೆಟ್​ ಎಂದರೆ ಬಡವರಿಗಲ್ಲ. ಐಪಿಎಲ್ ಅನ್ನೋ ದೇಶದ ಬಹುದೊಡ್ಡ ಲೀಗ್​ ಬಡವರಿಗೆ ಕೈಗೆಟುಕಲ್ಲ ಎಂದು ಟೀಕೆ ಮಾಡಿದವರು ಈ ಬಾರಿಯ ಮಿನಿಹರಾಜಿನಲ್ಲಿ ಎಲ್ಲವೂ ಸಾಧ್ಯ ಅನ್ನೋದನ್ನು ಕಣ್ಣಾರೆ ಕಂಡಿದ್ದಾರೆ. ಈ ಬಾರಿಯ ಮಿನಿಹರಾಜಿನಲ್ಲಿ ಅದೆಷ್ಟೋ ಪ್ರತಿಭಾವಂತ ಕ್ರಿಕೆಟರ್‌ಗೆ ಭಾಗ್ಯದ ಬಾಗಿಲು ತೆರೆದಿದೆ. ಇದೀಗ ಕಾಶ್ಮೀರಿ ಕಾರ್ಮಿಕನ ಮಗನೊಬ್ಬ ಶ್ರೀಮಂತ ಕ್ರಿಕೆಟ್ ಲೀಗ್‌ಗೆ ಕಾಲಿಟ್ಟಿದ್ದಾರೆ. ಜಮ್ಮು-ಕಾಶ್ಮೀರದ ಉಧಂಪುರದ ಗ್ರಾಮದ ಹುಡುಗ, ಕಾರ್ಮಿಕನ ಮಗ ವೇಗದ ಬೌಲರ್ ಬ್ರಿಜೇಶ್ ಕುಮಾರ್ ಐಪಿಎಲ್ ಟೂರ್ನಿದೆ ಕಾಲಿಟ್ಟಿದ್ದಾರೆ. ಹರಾಜಿನಲ್ಲಿ ಅನೇಕ ಫ್ರಾಂಚೈಸಿಗಳ ಗಮನ ಸೆಳೆದ ಈ ಬಲಗೈ ವೇಗದ ಬೌಲರ್ ಅನ್ನು ರಾಜಸ್ಥಾನ್ ರಾಯಲ್ಸ್ ತಂಡವು ₹30 ಲಕ್ಷ ಮೂಲ ಬೆಲೆಗೆ ಖರೀದಿಸಿದೆ.

27 ವರ್ಷ ವಯಸ್ಸಿನ ಬ್ರಿಜೇಶ್ ಇನ್ನೂ ದೊಡ್ಡ ಮಟ್ಟದಲ್ಲಿ ಪರಿಚಿತರಲ್ಲ, ಆದರೆ ಅವರ ಹಿನ್ನಲೆ ಮತ್ತು ಜೀವನ ಹೋರಾಟ ಪ್ರತಿಯೊಬ್ಬ ಕ್ರೀಡಾಪಟುವಿಗೆ ಸ್ಪೂರ್ತಿ. ಬಡ ಕುಟುಂಬದಿಂದ ಬಂದ ಈ ಆಟಗಾರನ ಐಪಿಎಲ್ ಪ್ರವೇಶವೇ ಒಂದು ರೋಚಕ ಕಥೆ. ಬ್ರಿಜೇಶ್ ಅವರ ತಂದೆ ಉಧಂಪುರದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ದಿನಗೂಲಿಯಿಂದ ಬರುವ ಚಿಕ್ಕ ಆದಾಯದಿಂದ ಜೀವನ ಸಾಗುತ್ತದೆ. ತಾಯಿ ಶಾಲೆಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದಾರೆ. ದಿನನಿತ್ಯದ ಬದುಕಿನ ಹೋರಾಟದ ನಡುವೆ, ಕ್ರಿಕೆಟ್ ಕನಸನ್ನು ಜೀವಂತವಾಗಿಟ್ಟುಕೊಳ್ಳುವುದು ಬ್ರಿಜೇಶ್‌ಗೆ ಕಷ್ಟಸಾಧ್ಯವಾಗಿತ್ತು. ಆದರೆ, ಬ್ರಿಜೇಶ್ ಸಂಕಷ್ಟಗಳನ್ನೇ ಸವಾಲಾಗಿ ಮೆಟ್ಟಿ ಕ್ರಿಕೆಟ್ ಲೋಕ ತನ್ನತ್ತ ತಿರುಗಿನೋಡುವಂತೆ ಮಾಡಿದ್ದರು.

ರಾಜಸ್ಥಾನ್ ರಾಯಲ್ಸ್ ಬ್ರಿಜೇಶ್ ಕುಮಾರ್ ಮೇಲೆ ಹೂಡಿಕೆ ಮಾಡುವುದಕ್ಕೆ ಕಾರಣವೇನು ಅನ್ನೋ ಪ್ರಶ್ನೆಗೂ ಬ್ರಿಜೇಶ್ ಅವರ ಕ್ರಿಕೆಟ್ ಸಾಧನೆಯೇ ಕಾರಣ. ಬ್ರಿಜೇಶ್ ಬಂಗಾಳದ ಪ್ರೊ ಟಿ20 ಲೀಗ್​ನಲ್ಲಿ ಮಿಂಚಿದರು. ಈ ವರ್ಷ ಸೋವಿಸ್ಕೊ ಸ್ಮ್ಯಾಶ್ ಮಾಲ್ಡಾ ತಂಡದ ಪರ ಆಡಿದ ಅವರು ಕೇವಲ ಏಳು ಪಂದ್ಯಗಳಲ್ಲಿ 11 ವಿಕೆಟ್‌ ಕಬಳಿಸಿದ್ದಾರೆ. ನಿರಂತರ ವೇಗ, ಸರಿಯಾದ ಲೈನ್-ಲೆಂಗ್ತ್ ಮತ್ತು ಒತ್ತಡದ ಕ್ಷಣಗಳಲ್ಲಿ ವಿಕೆಟ್ ಕೀಳುವ ಸಾಮರ್ಥ್ಯ ಆಯ್ಕೆಗಾರರ ಗಮನ ಸೆಳೆದಿದೆ. ಈ ಪ್ರದರ್ಶನವೇ ಅವರಿಗೆ ಐಪಿಎಲ್ ಟ್ರಯಲ್ಸ್ ಮತ್ತು ನಂತರ ಹರಾಜಿನಲ್ಲಿ ಸ್ಥಾನ ಕಲ್ಪಿಸಿಕೊಟ್ಟಿತು. 2026ರ ಐಪಿಎಲ್ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಅಪರಿಚಿತ ಪ್ರತಿಭೆಗಳಿಗೆ ಹೆಚ್ಚು ಒತ್ತು ನೀಡಿರುವುದು ಗಮನಾರ್ಹ. ಬ್ರಿಜೇಶ್ ಶರ್ಮಾ ಜೊತೆಗೆ ಅಮನ್ ರಾವ್, ರವಿ ಸಿಂಗ್, ವಿಘ್ನೇಶ್ ಪುತ್ತೂರ್, ಸುಶಾಂತ್ ಮಿಶ್ರಾ ಮತ್ತು ಯಶ್ ರಾಜ್ ಪೂಂಜಾ ಅವರಂತಹ ಯುವ ಆಟಗಾರರಿಗೂ ಅವಕಾಶ ನೀಡಲಾಗಿದೆ.

Sulekha