ಚಹಲ್‌ಗೆ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ – ಹೇಗಿದೆ ಈಗ ಯುಜ್ವೇಂದ್ರ ಆರೋಗ್ಯ ಸ್ಥಿತಿ?

ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಿಂದ ಬಳಲುತ್ತಿದ್ದು, ಅವರೇ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕಾರಣದಿಂದ ಹರಿಯಾಣ ತಂಡದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್ ಪಂದ್ಯವನ್ನು ತಪ್ಪಿಸಿಕೊಂಡಿದ್ದಾರೆ. ಇದು ಹರಿಯಾಣ ತಂಡದ ಮೇಲೆ ಗಂಭೀರ ಪರಿಣಾಮ ಬೀರಿದೆ. ಡಿಸೆಂಬರ್ 18 ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ನಲ್ಲಿ ಜಾರ್ಖಂಡ್ ವಿರುದ್ಧ ಹರಿಯಾಣ 69 ರನ್‌ಗಳಿಂದ ಸೋಲು ಅನುಭವಿಸಿ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿದೆ.ಕಳೆದ ತಿಂಗಳು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗ್ರೂಪ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಹರಿಯಾಣ ಪರ ಆಡಿದ್ದ ಯುಜ್ವೇಂದ್ರ ಚಹಲ್ ಈಗ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಿಂದ ಬಳಲುತ್ತಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ ಭೇಟಿಗೆ ಹಠ ಹಿಡಿದ ಪವಿತ್ರಾ ಗೌಡ – ಯಾವುದೇ ಕಾರಣಕ್ಕೂ ಮೀಟ್ ಮಾಡಲ್ಲ ಎಂದ ದರ್ಶನ್
ಚಹಲ್ ನವೆಂಬರ್ 30 ರಿಂದ ದೇಶಿ ಕ್ರಿಕೆಟ್‌ನಿಂದ ಹೊರಗಿದ್ದಾರೆ. ಗುರುವಾರ ಪುಣೆಯಲ್ಲಿ ಜಾರ್ಖಂಡ್ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್ ಅನ್ನು ಸಹ ಇವರು ಆಡಿಲ್ಲ . ಫೈನಲ್ ಪಂದ್ಯಕ್ಕೂ ಮುನ್ನ ಚಹಲ್ ತಮ್ಮ ತಂಡಕ್ಕೆ ಶುಭ ಹಾರೈಸಿದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್‌ಗಾಗಿ ನನ್ನ ತಂಡ ಹರಿಯಾಣಕ್ಕೆ ಶುಭಾಶಯಗಳು. ನಾನು ತಂಡದ ಭಾಗವಾಗಲು ಬಯಸಿದ್ದೆ, ಆದರೆ ದುರದೃಷ್ಟವಶಾತ್, ನಾನು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಿಂದ ಬಳಲುತ್ತಿದ್ದೇನೆ, ಇದು ನನ್ನ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ,” ಎಂದು ಪೋಸ್ಟ್ ಹಾಕಿದ್ದಾರೆ. ಚಹಲ್ ಅವರು ಯಾವಾಗ ಹಿಂತಿರುಗುತ್ತಾರೆ ಅನ್ನೋದ್ದನ್ನ ಹೇಳಿಲ್ಲ.

ನೋಡಿರಿ

