SA ಸರಣಿಯಿಂದ ಗಿಲ್ ಔಟ್ – ಇಂಜುರಿ ನೆಪವೋ.. ಡ್ರಾಪ್ ಸತ್ಯವೋ?
ಸಂಜುಗೆ ನ್ಯಾಯ ಸಿಗೋ ಟೈಂ ಬಂತಾ?

ಬುಧವಾರ ನಡೆಯಬೇಕಿದ್ದ ಭಾರತ ವರ್ಸಸ್ ಸೌತ್ ಆಫ್ರಿಕಾ ನಡುವಿನ ನಾಲ್ಕನೇ ಪಂದ್ಯ ಹೆವಿ ಫಾಗ್ ನಿಂದಾಗಿ ಕ್ಯಾನ್ಸಲ್ ಆಯ್ತು. ಹೀಗಾಗಿ ಎಲ್ಲರ ಕಣ್ಣು ಈಗ ಐದನೇ ಪಂದ್ಯದ ಮೇಲಿದೆ. ನಾಳೆ ಅಂದ್ರೆ ಶುಕ್ರವಾರ ಗುಜರಾತ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಸರಣಿಯ ಕೊನೇ ಪಂದ್ಯ ಇದೆ. ಭಾರತ ಸರಣಿ ಗೆಲ್ಬೇಕು ಅಂದ್ರೆ ಮಸ್ಟ್ ಌಂಡ್ ಶುಡ್ ಈ ಮ್ಯಾಚ್ ವಿನ್ ಆಗ್ಬೇಕು. ಹೀಗಾಗಿ ಭಾರತದ ಪ್ಲೇಯಿಂಗ್ 11ನಲ್ಲಿ ಒಂದಷ್ಟು ಚೇಂಜಸ್ ಆಗೋ ಸಾಧ್ಯತೆ ಇದೆ. ಅದ್ರಲ್ಲೂ ಶುಭ್ಮನ್ ಗಿಲ್ ಸರಣಿಯಿಂದಲೇ ರೂಲ್ಡ್ ಔಟ್ ಆಗಿರೋ ಸುದ್ದಿ ಇದೆ.
ಇದನ್ನೂ ಓದಿ : ಬಿಗ್‌ಬಾಸ್ ಮನೆಯಲ್ಲಿ ಇರೋಕೆ ಅರ್ಹತೆ ಇಲ್ಲ.. ಮರ್ಯಾದೆ ಕ್ರಾಸ್ ಮಾಡ್ತೀನಿ – ಧ್ರುವಂತ್ ಮೇಲೆ ಕೂಗಾಡಿದ ರಕ್ಷಿತಾ!
ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ನಾಲ್ಕನೇ ಪಂದ್ಯಕ್ಕೂ ಮುನ್ನವೇ ಟಿ-20ಐ ತಂಡದ ವೈಸ್ ಕ್ಯಾಪ್ಟನ್ ಶುಭ್ಮನ್ ಗಿಲ್ ತಂಡದಿಂದ ಹೊರ ಬಿದ್ದಿದ್ರು. ನೆಟ್ಸ್ನಲ್ಲಿ ಪ್ರಾಕ್ಟೀಸ್ ಮಾಡುವಾಗ ಗಾಯಕ್ಕೆ ತುತ್ತಾಗಿ ಸರಣಿಯಿಂದಲೇ ರೂಲ್ಡ್ ಔಟ್ ಆಗಿದ್ದಾರೆ. ಹೀಗಾಗಿ ಗಿಲ್ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮುಂದುವರಿಯೋದಿಲ್ಲ ಅಂತಾ ಪಿಟಿಐನಲ್ಲಿ ವರದಿಯಾಗಿದೆ. ನಾಳಿನ ಪಂದ್ಯಕ್ಕೂ ಗಿಲ್ ಆಬ್ಸೆನ್ಸ್ ಇದ್ರೆ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಆರಂಭಿಸೋದು ಪಕ್ಕಾ ಇದೆ.
ಅಭಿಷೇಕ್ ಶರ್ಮಾ ಜೊತೆ ಸಂಜು ಸ್ಯಾಮ್ಸನ್ ಓಪನರ್!
ಶುಭ್ಮನ್ ಗಿಲ್ ಸರಣಿಯಿಂದ ಹೊರಬಿದ್ರೂ ಅವ್ರ ಪ್ಲೇಸ್ಗೆ ಯಾರನ್ನೂ ರಿಪ್ಲೇಸ್ ಮಾಡಿಲ್ಲ. ಹೀಗಾಗಿ ನಾಳಿನ ಪಂದ್ಯಕ್ಕೆ ಗಿಲ್ ಬದಲಿಗೆ ಸಂಜುನೇ ಇನ್ನಿಂಗ್ಸ್ ಆರಂಭ ಮಾಡೋ ಸಾಧ್ಯತೆ ಇದೆ. ಅಭಿಷೇಕ್ ಶರ್ಮಾ ಜೊತೆ ಓಪನರ್ ಆಗಿ ಕಣಕ್ಕಿಳಿಯಬಹುದು. ಅಲ್ದೇ ಗಿಲ್ಗಿಂತ ಸಂಜು ನೂರು ಪಾಲು ಬೆಸ್ಟ್ ಇದ್ದಾರೆ. ಗಿಲ್ 2025 ರಲ್ಲಿ ಆಡಿದ 15 ಪಂದ್ಯಗಳಲ್ಲಿ 24.25 ರ ಸರಾಸರಿಯಲ್ಲಿ 291 ರನ್ ಗಳಿಸಿದ್ದಾರೆ. ಒಂದೇ ಒಂದು ಅರ್ಧಶತಕ ಬಂದಿಲ್ಲ. ಬಟ್ ಸಂಜು ಸ್ಯಾಮ್ಸನ್ 2024 ರ ಟಿ20 ವಿಶ್ವಕಪ್ ನಂತರ ಓಪನರ್ ಆಗಿ 13 ಪಂದ್ಯಗಳಲ್ಲಿ 43.60 ಸರಾಸರಿಯಲ್ಲಿ 436 ರನ್ ಗಳಿಸಿದ್ದಾರೆ, ಇದರಲ್ಲಿ ಮೂರು ಶತಕಗಳು ಸೇರಿವೆ. ಹೀಗಿದ್ರೂ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಇದೀಗ ಸಂಜು ಗಾಯಗೊಂಡಿರುವುದರಿಂದ ಸಂಜುಗೆ ತಂಡದಲ್ಲಿ ಸ್ಥಾನ ಸಿಗೋ ಚಾನ್ಸಸ್ ಜಾಸ್ತಿ ಇದೆ. 2026ರ ಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಸಂಜು ಓಪನರ್ ಆಗಿ ಆಡೋದೇ ಬೆಸ್ಟ್ ಇದೆ. ಇದೆಲ್ಲಾ ಒಂದ್ಕಡೆಯಾದ್ರೆ ಗಿಲ್ ನಿಜವಾಗಿಯೂ ಇಂಜುರಿಯಾಗಿದ್ದಾರಾ ಅಥವಾ ಡ್ರಾಪ್ ಮಾಡಿ ನೆಪ ಹೇಳಿದ್ರಾ ಅನ್ನೋ ವಾದವೂ ಇದೆ.
ಸೌತ್ ಆಫ್ರಿಕಾ ವಿರುದ್ಧವೂ ಕಂ ಬ್ಯಾಕ್ ಮಾಡದ ಗಿಲ್!
ಗಿಲ್ಗೆ ಇಂಜುರಿ ಆಗಿದ್ದು ನಿಜನಾ ಇಲ್ವಾ ಅನ್ನೋದಕ್ಕಿಂತ ಸರಣಿಯಿಂದಲೇ ಗಿಲ್ರನ್ನು ಬಿಸಿಸಿಐ ಡ್ರಾಪ್ ಮಾಡಿ ಇಂಜುರಿ ತೇಪೆ ಹಚ್ಚಿದ್ರಾ ಅನ್ನೋ ಅನುಮಾನವೂ ಇದೆ. ಯಾಕಂದ್ರೇ ಏಷ್ಯಾಕಪ್, ಆಸೀಸ್ ಸಿರೀಸ್ನಲ್ಲೂ ಸದ್ದು ಮಾಡದ ಗಿಲ್ ಸೌತ್ ಆಫ್ರಿಕಾ ಸಿರೀಸ್ನಲ್ಲಿ ಕಂ ಬ್ಯಾಕ್ ಮಾಡ್ತಾರೆ ಅನ್ನೋ ನಿರೀಕ್ಷೆ ಇತ್ತು. ಬಟ್ ಇಲ್ಲೂ ಬಿಗ್ ಫೇಲ್ಯೂರ್. ಆಡಿದ ಮೂರು ಪಂದ್ಯಗಳಲ್ಲಿ ಗಿಲ್ ಕೇವಲ 32 ರನ್ ಗಳಿಸಿದರು. ಕಟಕ್ ನಲ್ಲಿ 4 ರನ್ಸ್ ಹಾಗೇ ಮುಲ್ಲನ್‌ಪುರದಲ್ಲಿ ಸೊಹ್ನೆ ಸುತ್ತಿದ್ದ ಗಿಲ್ ಧರ್ಮಶಾಲಾದಲ್ಲಿ 28 ರನ್ ಗಳಿಸಿದ್ರು. ಸರಣಿಯ ಸರಾಸರಿ 10.66 ಆಗಿದ್ದು, 103.22 ಸ್ಟ್ರೈಕ್-ರೇಟ್ ಇದೆ. ಸೋ ಟಿ-20ಐ ಫಾರ್ಮೆಟ್ನಲ್ಲಿ ಗಿಲ್ ಎಷ್ಟು ಕಳಪೆ ಪರ್ಫಾಮೆನ್ಸ್ ಕೊಟ್ಟಿದ್ದಾರೆ ಅನ್ನೋದು ಇಲ್ಲೇ ಗೊತ್ತಾಗ್ತಿದೆ.
ಗಿಲ್ ಹೊರಬಿದ್ರೆ ಸಂಜುಗೆ ಸಿಗುತ್ತಾ ನ್ಯಾಯ?
ಶುಭ್ಮನ್ ಗಿಲ್ಗೆ ಇಂಜುರಿಯಾಗಿದೆ ಅವ್ರು ಕೊನೇ ಪಂದ್ಯಗಳನ್ನ ಆಡಲ್ಲ ಅನ್ನೋದು ಗೊತ್ತಾದಾಗ ತುಂಬಾ ಜನ್ರಿಗೇನು ಶಾಕ್ ಆಗಿಲ್ಲ ಅಥವಾ ಬೇಸರನೂ ಆಗಿಲ್ಲ. ಯಾಕಂದ್ರೆ ಎಲ್ಲರ ಕನ್ಸರ್ನ್ ಇದ್ದದ್ದು ಸಂಜು ಸ್ಯಾಮ್ಸನ್ ಮೇಲೆ. ಗಿಲ್ಗಾಗಿ ಓಪನರ್ ಸ್ಲಾಟ್ ಬಿಟ್ಟುಕೊಟ್ಟು ಬೆಂಚ್ ಕಾಯಿಸೋ ಸಂಜುರನ್ನ ನೋಡಿದಾಗೆಲ್ಲಾ ಫ್ಯಾನ್ಸ್ ಸಿಕ್ಕಾಪಟ್ಟೆ ಹರ್ಟ್ ಆಗ್ತಿದ್ರು. ಛೇ ಇಂಥಾ ಟ್ಯಾಲೆಂಟೆಡ್ ಪ್ಲೇಯರ್ನ ಕೂರಿಸಿದ್ದಾರಲ್ಲ ಅಂತಾ ಬೇಜಾರು ಮಾಡಿಕೊಳ್ತಿದ್ರು. ಗಿಲ್ನ ಪ್ರತೀ ಸಲ ಔಟ್ ಆಗಿ ಹೋಗುವಾಗ್ಲೂ ಸಂಜು ನೋಡಿ ಮರುಕ ಪಡ್ತಿದ್ರು. ಹೀಗಾಗೇ ಈ ಸಲ ಗಿಲ್ ಪಂದ್ಯದಿಂದ ಹೊರಗಿರ್ತಾರೆ ಅಂದಾಗ ಅಟ್ಲೀಸ್ಟ್ ಸಂಜುಗಾದ್ರೂ ಚಾನ್ಸ್ ಸಿಗುತ್ತಲ್ಲ ಅಂತಾ ಸಮಾಧಾನ ಮಾಡಿಕೊಂಡಿದ್ದಾರೆ. ಏಷ್ಯಾಕಪ್ನಿಂದ ಈಚೆಗೆ ಓಪನಿಂಗ್ ಸ್ಲಾಟ್ ಬಿಟ್ಟು ತಂಡದಿಂದಲೇ ಹೊರ ಬೀಳ್ತಿರೋ ಸಂಜು ನಾಲ್ಕನೇ ಪಂದ್ಯದಲ್ಲೇ ಆಡೋ ಚಾನ್ಸಸ್ ಇತ್ತು. ಬಟ್ ಪಂದ್ಯವೇ ರದ್ದಾಗಿತ್ತು. ಈಗ ಐದನೇ ಪಂದ್ಯದಲ್ಲಾದ್ರೂ ಚಾನ್ಸ್ ಕೊಡ್ಲಿ ಅಂತಾ ಫ್ಯಾನ್ಸ್ ಕೂಡ ಹೇಳ್ತಿದ್ದಾರೆ. ಯಾಕಂದ್ರೆ ಒಂದೇ ಒಂದು ಇನ್ನಿಂಗ್ಸ್ ಸಂಜು ಕರಿಯರ್ಗೆ ಬೆಳಕಾಗಬಹುದು. 2026ರ ಟಿ-20 ವಿಶ್ವಕಪ್ ಟೀಂನಲ್ಲಿ ಅವಕಾಶ ಕೊಡಿಸಬಹುದು.

ನೋಡಿರಿ

