ಬಿಗ್‌ಬಾಸ್‌ ಮನೆಯಲ್ಲಿ ಇರೋಕೆ ಅರ್ಹತೆ ಇಲ್ಲ.. ಮರ್ಯಾದೆ ಕ್ರಾಸ್‌ ಮಾಡ್ತೀನಿ – ಧ್ರುವಂತ್‌ ಮೇಲೆ ಕೂಗಾಡಿದ ರಕ್ಷಿತಾ!

ಬಿಗ್‌ಬಾಸ್‌ ಮನೆಯಲ್ಲಿ ಇರೋಕೆ ಅರ್ಹತೆ ಇಲ್ಲ.. ಮರ್ಯಾದೆ ಕ್ರಾಸ್‌ ಮಾಡ್ತೀನಿ – ಧ್ರುವಂತ್‌ ಮೇಲೆ ಕೂಗಾಡಿದ ರಕ್ಷಿತಾ!

ಬಿಗ್‌ಬಾಸ್‌ ಮನೆಯಲ್ಲಿ ಧ್ರುವಂತ್‌ ಹಾಗೂ ರಕ್ಷಿತಾ ಬದ್ಧ ವೈರಿಗಳಂತೆ ಇದ್ದಾರೆ. ಎಷ್ಟು ಹೊತ್ತಿಗೂ ಜಗಳವಾಡುತ್ತಲೇ ಇರ್ತಾರೆ. ಇದೀಗ ಇಬ್ಬರನ್ನೂ ಬಿಗ್‌ಬಾಸ್‌ ಸೀಕ್ರೆಟ್‌ ರೂಮ್‌ನಲ್ಲಿ ಇರಿಸಿದ್ದಾರೆ. ಇಲ್ಲೂ ಕೂಡ ಇವರಿಬ್ಬರು ಕಿತ್ತಾಡುತ್ತಿದ್ದಾರೆ. ಇದೀಗ ಟಾಸ್ಕ್‌ ವಿಚಾರವಾಗಿ ಮತ್ತೆ ರಕ್ಷಿತಾ, ಧ್ರುವಂತ್‌ ಜಗಳ ಮಾಡಿಕೊಂಡಿದ್ದಾರೆ. ರಕ್ಷಿತಾ ತಾಳ್ಮೆ ಕಳೆದುಕೊಂಡು, ಬೆಡ್‌ ಶೀಟ್‌ನ ತೆಗೆದು ನೆಲಕ್ಕೆ ಎಸೆದಿದ್ದಾರೆ.

ಇದನ್ನೂ ಓದಿ:ಸೆಲ್ಫಿ ತೆಗೆದುಕೊಳ್ಳಲು ಬಂದರಿಂದಲೇ ನಟಿಗೆ ಕಿರುಕುಳ – ಸಿಕ್ಕಿದ್ದೇ ಚಾನ್ಸ್ ಎಂದು ಮೈ ಮುಟ್ಟಿದ್ರು!

ಧ್ರುವಂತ್‌ ಹಾಗೂ ರಕ್ಷಿತಾ ಶೆಟ್ಟಿ ಎಲಿಮಿನೇಟ್‌ ಆಗಿದ್ದಾರೆ ಎಂದು ಮನೆ ಮಂದಿ ಅಂದುಕೊಂಡಿದ್ದಾರೆ. ಅವರು ಸೀಕ್ರೆಟ್‌ ರೂಮ್‌ನಲ್ಲಿದ್ದಾರೆ ಎಂದು ಗೊತ್ತಿಲ್ಲ. ಆದ್ರೆ ಇವರಿಬ್ಬರು ದೊಡ್ಮನೆಯೊಳಗಡೆ ಆಗೋದನ್ನು ನೋಡುತ್ತಿದ್ದಾರೆ. ಇದ್ರ ಜೊತೆಗೆ ರಕ್ಷಿತಾ ಹಾಗೂ ಧ್ರುವಂತ್‌ನ ಬಿಗ್‌ಬಾಸ್‌ ಸೀಕ್ರೆಟ್‌ ರೂಮ್‌ನಲ್ಲಿ ಕೂರಿಸಿ ಕೆಲ ಟಾಸ್ಕ್‌ಗಳನ್ನ ನೀಡಿದ್ದಾರೆ. ಅಲ್ಲೂ ಕೂಡ ಧ್ರುವಂತ್‌ ಹಾಗೂ ರಕ್ಷಿತಾ ಪ್ರತಿ ವಿಚಾರಕ್ಕೆ ಜಗಳ ಆಡುತ್ತಿದ್ದಾರೆ.

ಬಿಗ್‌ಬಾಸ್‌ ನ ಇಂದಿನ ಸಂಚಿಕೆಯ ಪ್ರೋಮೋ ರೀಲೀಸ್‌ ಆಗಿದೆ. ಈ ಪ್ರೋಮೋದಲ್ಲಿ ಬಿಗ್‌ ಬಾಸ್‌ ಹೊಸದಾಗಿ ಟಾಸ್ಕ್‌ ನೀಡಿದ್ದಾರೆ. ಸ್ಪರ್ಧಿಗಳು ಕ್ಯಾಪ್ಟನ್ಸಿ ಟಾಸ್ಕ್‌ಗೆ ಜೋಡಿಗಳಾಗಿ ಆಡಬೇಕಿದೆ. ಸೂರಜ್‌ ಹಾಗೂ ಗಿಲ್ಲಿ, ಕಾವ್ಯ ಹಾಗೂ ರಘು ಅವರು ಆಡಲಿ ಎಂದು ಧ್ರುವಂತ್‌ ಹೇಳಿದ್ದರು. ಒಂದು ಕಡೆ ಯಾರು ಡಿಸರ್ವ್‌ ಆಗಿದ್ದಾರೋ ಅವರೇ ಇರಬೇಕು ಎಂದು ರಕ್ಷಿತಾ ಹೇಳಿದ್ದಾರೆ. ಫೇರ್‌ ಗೇಮ್‌ ಆಡು ಎಂದು ಧ್ರುವಂತ್‌ ಹೇಳಿದ್ದರು. ಗಿಲ್ಲಿ ನಟ ಹಾಗೂ ರಘು ಕಂಡರೆ ರಕ್ಷಿತಾಗೆ ಇಷ್ಟ, ಹೀಗಾಗಿ ಇವರಿಬ್ಬರು ಇರಬೇಕು ಎಂದು ರಕ್ಷಿತಾ ಶೆಟ್ಟಿ ಬಯಸುತ್ತಿದ್ದಾರೆ. ಇದೇ ವಿಚಾರಕ್ಕೆ ಇವರಿಬ್ಬರ ಮಧ್ಯೆ ಜಗಳ ಶುರುವಾಗಿದ್ದು, ಇನ್ನೊಂದು ಹಂತಕ್ಕೆ ತಲುಪಿದೆ. ರಕ್ಷಿತಾ ಧ್ರುವಂತ್‌ ಮೇಲೆ ಕೂಗಾಡಿದ್ದಾರೆ.

ನಿಮಗೆ ಬಿಗ್‌ ಬಾಸ್‌ ಮನೆಯಲ್ಲಿ ಇರೋಕೆ ಅರ್ಹತೆ ಇಲ್ಲ. ಮರ್ಯಾದೆ ಕ್ರಾಸ್‌ ಮಾಡ್ತೀನಿ ಎಂದು ಕೂಗಾಡಿದ್ದಾರೆ. ಧ್ರುವಂತ್‌ ಕೂಡ ಕೂಗಾಡಿದ್ದಾರೆ. ಇದಿಷ್ಟೇ ಅಲ್ಲದೇ, ರಕ್ಷಿತಾ ಬೆಡ್‌ ಮೇಲಿದ್ದ ಬೆಡ್‌ಶೀಟ್‌ನ್ನು ತಗೊಂಡು ಎಲ್ಲ ಕಡೆ ಬಿಸಾಕಿದ್ದಾರೆ. ಇದೀಗ ತನಗೆ ಬೇಕಾದವರು ಗೆಲ್ಲಬೇಕು ಎಂದು ರಕ್ಷಿತಾ ಆಟದ ವಿಚಾರದಲ್ಲಿ ತಾರತಮ್ಯ ಮಾಡಿದ್ದು ನೋಡಿ ವೀಕ್ಷಕರಿಗೂ ಬೇಸರ ಆಗಿದೆ. ಸೀಕ್ರೆಟ್‌ ರೂಮ್‌ನಲ್ಲಿ ರಕ್ಷಿತಾ ನಿಜವಾದ ಮುಖ ಹೊರಬಂದಿದೆ ಎಂದು ವೀಕ್ಷಕರು ಹೇಳಿದ್ದಾರೆ.

Shwetha M