ಪ್ರೀತಿ ಗುಟ್ಟು ರಿವೀಲ್‌ ಮಾಡಿದ ಗಿಲ್ಲಿನಟ – ಕಾಮಿಡಿ ಕಿಂಗ್‌ ಪ್ರೀತಿಗೆ ಕ್ರೇಜಿಸ್ಟಾರ್‌ ಸಪೋರ್ಟ್‌

ಪ್ರೀತಿ ಗುಟ್ಟು ರಿವೀಲ್‌ ಮಾಡಿದ ಗಿಲ್ಲಿನಟ – ಕಾಮಿಡಿ ಕಿಂಗ್‌ ಪ್ರೀತಿಗೆ ಕ್ರೇಜಿಸ್ಟಾರ್‌ ಸಪೋರ್ಟ್‌

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ರೋಚಕ ಘಟ್ಟ ತಲುಪಿದೆ. ಸ್ಪರ್ಧಿಗಳ ಮಧ್ಯೆ ಟಫ್‌ ಸ್ಪರ್ಧೆ ಏರ್ಪಟ್ಟಿದೆ. ಇದೀಗ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಬಿಗ್‌ ಸರ್‌ಪ್ರೈಸ್‌ ಕೊಟ್ಟಿದ್ದಾರೆ. ದೊಡ್ಮನೆಗೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಎಂಟ್ರಿಕೊಟ್ಟಿದ್ದಾರೆ. ಲವ್‌ ಗುರು ಮುಂದೆ ಗಿಲ್ಲಿನಟನ ಪ್ರೀತಿ ಗುಟ್ಟು ರಟ್ಟಾಗಿದೆ.

ಇದನ್ನೂ ಓದಿ: ಡೆವಿಲ್‌ಗಾಗಿ ದರ್ಶನ್‌ ಪತ್ನಿ ಥಿಯೇಟರ್‌ ರೌಂಡ್ಸ್!‌ – ವಾರಾಂತ್ಯ ಚಿತ್ರಮಂದಿರಗಳಿಗೆ ವಿಜಯಲಕ್ಷ್ಮೀ ಭೇಟಿ   

ಬಿಗ್‌ಬಾಸ್‌ ಮನೆಗೆ ಆಗಾಗ ವಿಶೇಷ ಅಥಿತಿಗಳು ಬರ್ತಾನೆ ಇರ್ತಾರೆ. ಸಿನಿಮಾ ಪ್ರಮೋಷನ್‌ಗಾಗಿ ಸಿನಿಮಾ ನಟ ನಟಿಯರು ಬರುತ್ತಿರುತ್ತಾರೆ. ಈಗಾಗ್ಲೇ ಡಾರ್ಲಿಂಗ್‌ ಕೃಷ್ಣ, ಸೃಜನ್‌ ಲೋಕೆಶ್‌ ಕೂಡ ದೊಡ್ಮನೆಗೆ ಬಂದು ತಮ್ಮ ಸಿನಿಮಾ ಪ್ರಮೋಟ್‌ ಮಾಡಿದ್ರು. ಇದೀಗ ಬಿಗ್‌ಬಾಸ್‌ ಮನೆಗೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಆಗಮಿಸಿದ್ದಾರೆ. ಸ್ಪರ್ಧಿಗಳ ಜೊತೆ ಕೆಲ ಸಮಯ ಕಳೆದಿದ್ದಾರೆ.

ಪ್ಯಾರ್‌ ಎಂಬ ಚಿತ್ರದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಇದೇ ಚಿತ್ರದಲ್ಲಿ ಬಿಗ್‌ಬಾಸ್ ಸ್ಪರ್ಧಿ ರಾಶಿಕಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಈಗ ರವಿಚಂದ್ರನ್ ಬಿಗ್‌ಬಾಸ್ ಮನೆ ಒಳಗೆ ಹೋಗಿದ್ದಾರೆ. ಚಿತ್ರದ ನಾಯಕ ಭರತ್ ಕೂಡ ಸಾಥ್ ಕೊಟ್ಟಿದ್ದಾರೆ. ಅಲ್ಲೇ ಚಿತ್ರದ ಆಡಿಯೋ ಲಾಂಚ್ ಮಾಡುವುದಾಗಿ ರವಿಚಂದ್ರನ್ ಹೇಳಿದ್ದಾರೆ. ಬಳಿಕ ಸ್ಪರ್ಧಿಗಳ ಜೊತೆ ಒಂದಷ್ಟು ಕಾಲ ಕಳೆದಿದ್ದಾರೆ. ಕಾವ್ಯ, ಸ್ಪಂದನಾ ಜೊತೆ ಕ್ರೇಜಿಸ್ಟಾರ್‌ ಡ್ಯಾನ್ಸ್‌ ಮಾಡಿದ್ದಾರೆ. ಇದೇ ವೇಳೆ ಗಿಲ್ಲಿನಟ ತನ್ನ ಪ್ರೀತಿ ವಿಚಾರ ರಿವೀಲ್‌ ಮಾಡಿದ್ದಾರೆ.

ಫಸ್ಟ್‌ ಲವ್‌ ಬೆಸ್ಟ್‌ ಲವ್‌ ಅಂತಾರೆ. ಪಿಯುಸಿಯಲ್ಲಿ ಇರುವಾಗ ನಮ್ಮ ಊರಿನಲ್ಲಿ ಒಂದು ಹುಡುಗಿ ಬಸ್‌ಗೆ ಹತ್ತುತ್ತಾಳೆ. ಆದ್ರೆ ಹುಡುಗಿ ಫೇಸ್‌ ಕಾಣಿಸಲ್ಲ. ಹುಡುಗಿ ಚೆನ್ನಾಗಿದ್ದಾಳೆ. ಆದ್ರೆ ಮುಖ ಕಾಣಿಸ್ತಿಲ್ಲ. ನಾನು ಎಗರಿ ಎಗರಿ ನೋಡ್ತಿದ್ದೆ ಯಾರು ಅವಳು ಅಂತ. ಮುಂದೆ ಹೋಗಿ ನೋಡಲು ತುಂಬಾ ಟ್ರೈ ಮಾಡಿದೆ. ಬಳಿಕ ಮುಂದಿನ ಡೋರ್‌ ಬಳಿ ನೋಡಿ ನೋಡಿದೆ. ಅಲ್ಲೇ ಲವ್‌ ಆಯ್ತು.. ಅವತ್ತು ಕಾಲೇಜು ಬಂಕ್‌ ಮಾಡಿ ಆಕೆ ಬಗ್ಗೆ ತಿಳಿದುಕೊಂಡೆ ಅಂತ ಹೇಳಿದ್ದಾರೆ. ಗಿಲ್ಲಿ ಲವ್‌ ಸ್ಟೋರಿ ಹೇಳುವಾಗ ಕಾವ್ಯ ಫುಲ್‌ ಕ್ಯೂರಿಯಾಸಿಟಿಯಿಂದ ಕೇಳಿಸಿಕೊಂಡಿದ್ದಾರೆ. ಗಿಲ್ಲಿ ಲವ್‌ ಸ್ಟೋರಿ ಕೇಳಿ ಮನೆಮಂದಿ ಕೂಡ ನಕ್ಕಿದ್ದಾರೆ. ಕ್ರೇಜಿಸ್ಟಾರ್‌ ಗಿಲ್ಲಿ ಪ್ರೀತಿಗೆ ಸಪೋರ್ಟ್‌ ಮಾಡಿದ್ದಾರೆ.

Shwetha M