ಡೆವಿಲ್‌ಗಾಗಿ ದರ್ಶನ್‌ ಪತ್ನಿ ಥಿಯೇಟರ್‌ ರೌಂಡ್ಸ್!‌ – ವಾರಾಂತ್ಯ ಚಿತ್ರಮಂದಿರಗಳಿಗೆ ವಿಜಯಲಕ್ಷ್ಮೀ ಭೇಟಿ   

ಡೆವಿಲ್‌ಗಾಗಿ ದರ್ಶನ್‌ ಪತ್ನಿ ಥಿಯೇಟರ್‌ ರೌಂಡ್ಸ್!‌ – ವಾರಾಂತ್ಯ ಚಿತ್ರಮಂದಿರಗಳಿಗೆ ವಿಜಯಲಕ್ಷ್ಮೀ ಭೇಟಿ   

ನಟ ದರ್ಶನ್‌ ಜೈಲಿನಲ್ಲಿರುವಾಗಲೇ ಡೆವಿಲ್‌ ಸಿನಿಮಾ ರಿಲೀಸ್‌ ಆಗಿದೆ. ಡಿಸೆಂಬರ್‌ 11 ರಂದು ಸಿನಿಮಾ ರಿಲೀಸ್‌ ಆಗಿದ್ದು, ದಾಸನನ್ನ ತೆರೆ ಮೇಲೆ ನೋಡಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಇದೀಗ ಡೆವಿಲ್‌ ಸಿನಿಮಾ ಸಕ್ಸಸ್‌ ಗಾಗಿ ವಿಜಯಲಕ್ಷ್ಮೀ ಪಣತೊಟ್ಟಂತೆ ಕಾಡ್ತಿದೆ. ಇದೀಗ ಪ್ರತಿ ವಾರ ವಿಜಯಲಕ್ಷ್ಮೀ ಥಿಯೇಟರ್‌ ವಿಸಿಟ್‌ ಪ್ಲ್ಯಾನ್‌ ಮಾಡಿದ್ದಾರೆ.

ಇದನ್ನೂ ಓದಿ: ದಲಿತ ಶಾಸಕರು, ಸಚಿವರು ಹಾಗೂ ಉದ್ಯಮಿಗಳ ಸಭೆ – ಸತೀಶ್ ಜಾರಕಿಹೊಳಿ ಕೊಟ್ಟ ಸಂದೇಶವೇನು?

ಡೆವಿಲ್ ಚಿತ್ರ ರಿಲೀಸ್‌ ಆಗಿದ್ದು, ಎರಡನೇ ವಾರಕ್ಕೆ ಕಾಲಿಟ್ಟಿದೆ. ಡೆವಿಲ್  ಅದ್ಭುತ ಓಪನಿಂಗ್ ಪಡೆದುಕೊಂಡರೂ ಎರಡನೇ ವಾರದಲ್ಲಿ ಕೊಂಚ ಇಳಿಕೆಯಾಗಿದೆ. ಮೊದಲ ವಾರ ಕೋಟ್ಯಂತರ ರೂಪಾಯಿ ಗಳಿಸಿದ್ದ ಡೆವಿಲ್‌, ಈಗ ಲಕ್ಷಕ್ಕೆ ಇಳಿಕೆಯಾಗಿದೆ. ಡಿಸೆಂಬರ್ 17ರಂದು ಸಿನಿಮಾ ಕೇವಲ 80 ಲಕ್ಷ ರೂಪಾಯಿ ಗಳಿಸಿದೆ. ಇದ್ರ ಬೆನ್ನಲ್ಲೇ ಗಂಡನ ಸಿನಿಮಾ ಗೆಲ್ಲಿಸಲು ವಿಜಿ ಪಣ ತೊಟ್ಟಿದ್ದಾರೆ. ವಿಜಯಲಕ್ಷೀ ಥಿಯೇಟರ್ ವಿಸಿಟ್ ಪ್ಲಾನ್ ಮಾಡಿದ್ದಾರೆ.

ಡೆವಿಲ್ ಚಿತ್ರ ಮಲ್ಟಿಪ್ಲೆಕ್ಸ್ ಸೇರಿದಂತೆ ಸಿಂಗಲ್‌ ಥಿಯೇಟರ್ ಅಲ್ಲೂ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ವಿಜಯಲಕ್ಷ್ಮೀ ಇದೇ ಶನಿವಾರ (ಡಿ.20) ಮಂಡ್ಯಕ್ಕೆ ಹೊರಟ್ಟಿದ್ದಾರೆ. ಮಂಡದಲ್ಲಿ ಡೆವಿಲ್ ಚಿತ್ರ ರಿಲೀಸ್ ಆದ ಥಿಯೇಟರ್‌ಗೆ ಹೋಗುತ್ತಿದ್ದಾರೆ. ಭಾನುವಾರ ದಾವಣಗೆರೆಯ ಡೆವಿಲ್ ಚಿತ್ರ ರಿಲೀಸ್ ಆದ ಥಿಯೇಟರ್‌ಗೂ ವಿಸಿಟ್ ಕೊಡುತ್ತಿದ್ದಾರೆ. ಈ ಬಗ್ಗೆ ಡಿ.ಕಂಪನಿ ಸೋಷಿಯಲ್ ಮೀಡಿಯಾ ಪೇಜ್ ಮಾಹಿತಿ ಹಂಚಿಕೊಂಡಿದ್ದಾರೆ.

Shwetha M