ಇನ್ಮುಂದೆ ಪಿಯುಸಿ ಪ್ರಮಾಣ ಪತ್ರ ಇದ್ದರಷ್ಟೇ ವಾಹನಗಳಿಗೆ ಇಂಧನ!

ಇನ್ಮುಂದೆ ಪಿಯುಸಿ ಪ್ರಮಾಣ ಪತ್ರ ಇದ್ದರಷ್ಟೇ ವಾಹನಗಳಿಗೆ ಇಂಧನ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ದಿನೇ ದಿನೆ ಹೆಚ್ಚಾಗ್ತಿದೆ. ಉಸಿರಾಡುವ ಗಾಳಿ ವಿಷವಾಗುತ್ತಿದೆ. ದೆಹಲಿಯ AQI 400ರ ಗಡಿ ದಾಟಿ ಅಪಾಯಕಾರಿ ಮಟ್ಟ ತಲುಪಿದ್ದು 50% ಜನರಿಗೆ ವರ್ಕ್‌ ಫ್ರಂ ಹೋಮ್‌  ಮಾಡಲು ಸರ್ಕಾರ ಸೂಚಿಸಿದೆ. ಇದೀಗ ದೆಹಲಿ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನುಮುಂದೆ ಪಿಯುಸಿ ಪ್ರಮಾಣ ಪತ್ರ ಇಲ್ಲದಿದ್ರೆ, ಇಂಧನ ಸಿಗೋದಿಲ್ಲ.

ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್!‌ – ಜಾಮೀನು ಮಂಜೂರಾಗಿ 24 ದಿನದ ಬಳಿಕ ಚಿನ್ನಯ್ಯಗೆ ಬಿಡುಗಡೆ ಭಾಗ್ಯ!

ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಯಲ್ಲಲಿ ಅಲ್ಲಿನ ಸರ್ಕಾರ ಹೊಸ ಹೊಸ ಕ್ರಮ ಕೈಗೊಳ್ಳುತ್ತಿದೆ. ಇದೀಗ ದೆಹಲಿ ಸರ್ಕಾರ ಜಾರಿಗೊಳಿಸಿರುವ ಕಠಿಣ ಮಾಲಿನ್ಯ ನಿಯಂತ್ರಣ ಕ್ರಮಗಳ ಭಾಗವಾಗಿ ಬಿಎಸ್‌-VI ಎಂಜಿನ್‌ ಹೊಂದಿರದ ಹಳೆಯ ಕಾರುಗಳಿಗೆ ದೆಹಲಿ ಪ್ರವೇಶವನ್ನ ನಿಷೇಧಿಸಲಾಗಿದೆ. ಇದರೊಂದಿಗೆ ಪಿಯುಸಿ ಪ್ರಮಾಣ ಪತ್ರ ಹಾಗೂ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಇಂಧನ ನಿಷೇಧಿಸಲಾಗಿದೆ.

ದಟ್ಟ ಮಂಜು, ಕಡಿಮೆ ಗೋಚರತೆಯಿಂದಾಗಿ ಇಂದಿನಿಂದ ಕಠಿಣ ಕ್ರಮ ಅನುಷ್ಠಾನಕ್ಕೆ ಜಾರಿಗೊಳಿಸಿರುವ ರಾಜ್ಯ ಸರ್ಕಾರ ಬಿಎಸ್‌-6 (ಭಾರತ್ ಸ್ಟೇಜ್–6) ವಾಹನಗಳಿಗೆ ಮಾತ್ರ ರಾಷ್ಟ್ರ ರಾಜಧಾನಿ ಪ್ರವೇಶಕ್ಕೆ ಅನುಮತಿಸಲಾಗಿದೆ. ಇದು ದೆಹಲಿ ಸಮೀಪದ ಗುರುಗ್ರಾಮ್, ಗಾಜಿಯಾಬಾದ್, ಫರಿದಾಬಾದ್ ಮತ್ತು ನೋಯ್ಡಾದಿಂದ ದೆಹಲಿಗೆ ಪ್ರವೇಶಿಸುವ 12 ಲಕ್ಷ ವಾಹನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಏಕೆಂದ್ರೆ ಬಿಎಸ್‌-6 ಎಂಜಿನ್‌ ಹೊಂದಿರದ ವಾಹನಗಳು ಈ ಭಾಗಗಳಲ್ಲಿ ಹೆಚ್ಚಾಗಿವೆ. ಹೀಗಾಗಿ ನೋಯ್ಡಾದಿಂದ 4 ಲಕ್ಷಕ್ಕೂ ಹೆಚ್ಚು, ಗುರಗಾಂವ್‌ನಿಂದ 2 ಲಕ್ಷ ಮತ್ತು ಗಾಜಿಯಾಬಾದ್‌ನಿಂದ 5.5 ಲಕ್ಷ ವಾಹನಗಳನ್ನು ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದನ್ನ ನಿಷೇಧಿಸಲಾಗಿದೆ.

ಇನ್ನೂ ದೆಹಲಿ ಪ್ರವೇಶಿಸುವ ವಾಹನಗಳ ತಪಾಸಣೆಗಾಗಿ 580 ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. 126 ಚೆಕ್‌ಪೋಸ್ಟ್‌ಗಳಲ್ಲಿ ಸುಮಾರು 37 ಸ್ಪೀಡ್‌ ಚೆಕ್‌ ವಾಹನಗಳನ್ನೂ ನಿಯೋಜಿಸಲಾಗಿದೆ. ಸಾರಿಗೆ ಇಲಾಖೆ, ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಆಹಾರ ಇಲಾಖೆಯ ಸಿಬ್ಬಂದಿಗಳನ್ನ ಪೆಟ್ರೋಲ್ ಪಂಪ್‌ಗಳಲ್ಲಿ ನಿಯೋಜಿಸಿದ್ದು, ಮಾಲಿನ್ಯ ಹೊಸಸೂಸುವಿಕೆಯ ಮೇಕೆ ತೀವ್ರ ನಿಗಾ ವಹಿಸಲಾಗಿದೆ.

ಈಗಾಗಲೇ ದೆಹಲಿಯ ಪೆಟ್ರೋಲ್ ಪಂಪ್‌ಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ಕ್ಯಾಮೆರಾಗಳನ್ನ ಅಳವಡಿಸಲಾಗಿದೆ. ಈ ತಂತ್ರಜ್ಞಾನವು ಮಾನ್ಯತೆಯಿರುವ ಪಿಯುಸಿ ಪ್ರಮಾಣ ಪತ್ರಗಳನ್ನ ಗುರುತಿಸೋದಕ್ಕೂ ಸಹಾಯ ಮಾಡಲಿದೆ ಎಂದು ತಿಳಿದುಬಂದಿದೆ.

Shwetha M