IPL ಬಾಗಿಲು ಒಡೆದ ಸರ್ಫರಾಜ್ – ಬೆಳಗ್ಗೆ 73 ರನ್.. ಸಂಜೆ CSKಗೆ ಖಾನ್
DCಯಲ್ಲಿ ಪೃಥ್ವಿ ಪವರ್ ತೋರಿಸ್ತಾರಾ?

IPL ಬಾಗಿಲು ಒಡೆದ ಸರ್ಫರಾಜ್ – ಬೆಳಗ್ಗೆ 73 ರನ್.. ಸಂಜೆ CSKಗೆ ಖಾನ್DCಯಲ್ಲಿ ಪೃಥ್ವಿ ಪವರ್ ತೋರಿಸ್ತಾರಾ?

ಐಪಿಎಲ್ ಮಿನಿ ಆಕ್ಷನ್​ನಲ್ಲಿ ಸಾಕಷ್ಟು ಅಚ್ಚರಿಯ ಬಿಡ್​ಗಳು ನಡೆದಿವೆ. ಬಿಗ್ ಸ್ಟಾರ್​ಗಳೇ ಅನ್​ಸೋಲ್ಡ್ ಆದ್ರು. ಇನ್ನೂ ಕೆಲವ್ರು ದಾಖಲೆ ಮೊತ್ತಕ್ಕೆ ಸೇಲ್ ಆದ್ರು. ಅನ್​ಕ್ಯಾಪ್ಡ್ ಪ್ಲೇಯರ್ಸ್​ಗೂ ಅದೃಷ್ಟ ಖುಲಾಯಿಸಿತ್ತು. ಬಟ್ ಬಿಡ್ಡಿಂಗ್​ನಲ್ಲಿ ಬಹುತೇಕರಿಗೆ ಸಮಾಧಾನ ತಂದಿದ್ದು ಸರ್ಫರಾಜ್ ಖಾನ್ ಹಾಗೇ ಪೃಥ್ವಿ ಶಾ ಅವ್ರ ಖರೀದಿ.. ಆರಂಭದಲ್ಲಿ ಅನ್​ಸೋಲ್ಡ್ ಅಂತಾ ಬೇಜಾರಾದ್ರೂ ಕೊನೇ ಸುತ್ತಲ್ಲಿ ಅಟ್​ಲೀಸ್ಟ್ ಬೇಸ್ ಪ್ರೈಸ್​ಗಾದ್ರೂ ಚಾನ್ಸ್ ಕೊಟ್ರಲ್ಲ ಅಂತಾ ನಿಟ್ಟುಸಿರು ಬಿಟ್ಟಿದ್ರು.

ಇದನ್ನೂ ಓದಿ : RED ARMYಗೆ ರಣಬೇಟೆಗಾರರು – ಡಫಿ.. ಮಂಗೇಶ್.. ವೆಂಕಿ ಯಾರು ಬೆಸ್ಟ್ ?

ಅಬುದಾಬಿಯಲ್ಲಿ ನಡೆದ ಐಪಿಎಲ್ ಮಿನಿ ಆಕ್ಷನ್​ನಲ್ಲಿ ಕೋಟಿ ಕೋಟಿಗಳ ಡೀಲ್ ನಡೀತು. ಹೈಯೆಸ್ಟ್ ಅಮೌಂಟ್​​ಗೆ ಕೆಲವ್ರು ಸೇಲ್ ಆದ್ರು. ಇನ್ನೂ ಕೆಲವ್ರು ಅನ್​ಸೋಲ್ಡ್ ಆದ್ರು. ಹೀಗಿದ್ರೂ ಎಲ್ಲರ ಗಮನ ಸೆಳೆದಿದ್ದು ಸರ್ಫರಾಜ್ ಖಾನ್ ಮತ್ತು ಪೃಥ್ವಿ ಶಾ. ಇವ್ರಿಬ್ರು ಖರೀದಿ ಆಗ್ಬೇಕು ಅಂತಾ ಫ್ಯಾನ್ಸ್ ಕೂಡ ಕಾಯ್ತಿದ್ರು. ಯಾಕಂದ್ರೆ ಐಪಿಎಲ್​​ನಲ್ಲಿ ಆಡೋಕೆ ಮೋಸ್ಟ್ ಡಿಸರ್ವಿಂಗ್ ಇದ್ದಾರೆ. ಟ್ಯಾಲೆಂಟೆಡ್ ಪ್ಲೇಯರ್ಸ್ ಕೂಡ. ಐಪಿಎಲ್ ಆಡ್ಲೇಬೇಕು ಅನ್ನೋ ಥರ ಡೊಮೆಸ್ಟಿಕ್​ನಲ್ಲಿ ಡಾಮಿನೇಟ್ ಮಾಡಿ ಈಗ ಐಪಿಎಲ್​ ಬಾಗಿಲನ್ನ ಒದ್ದು ಒಳ ಬಂದಿದ್ದಾರೆ. ಅದ್ರಲ್ಲೂ ಸರ್ಫರಾಜ್ ಅಂತೂ ಬ್ಯಾಟ್​ನಲ್ಲೇ ಫ್ರಾಂಚೈಸಿಗಳನ್ನ ಬಡಿದೆಬ್ಬಿಸಿದ್ರು.

ಬೆಳಗ್ಗೆ 22 ಬಾಲಲ್ಲಿ 73 ರನ್.. ಸಂಜೆ ಸಿಎಸ್ ಕೆಗೆ ಸರ್ಫರಾಜ್!

ಟೀಂ ಇಂಡಿಯಾದಿಂದ ಹೊರಬಿದ್ರೂ ಸರ್ಫರಾಜ್ ಡೊಮೆಸ್ಟಿಕ್​ನಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಅದ್ರಲ್ಲೂ ಬಿಡ್ಡಿಂಗ್ ನಡೆಯೋ ಕೆಲವೇ ಗಂಟೆಗಳಿಗೂ ಮುನ್ನ ಮೈದಾನದಲ್ಲಿ ರನ್ ಮಳೆ ಸುರಿಸಿದ್ರು. ಫ್ರಾಂಚೈಸಿಗಳಿಗೆ ತಾನೇಕೆ ಬೆಸ್ಟ್ ಚಾಯ್ಸ್ ಅನ್ನೋದನ್ನ ರನ್​ಗಳ ಮೂಲಕವೇ ತೋರಿಸಿದ್ರು. ಮಂಗಳವಾರ ಬೆಳಗ್ಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಸರ್ಫರಾಜ್ ಖಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಕೇವಲ 22 ಎಸೆತಗಳಲ್ಲಿ 6 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ 73 ರನ್​ ಕಲೆ ಹಾಕಿದರು. ಹೀಗಿದ್ರೂ ಆರಂಭದ ರೌಂಡ್​ಗಳಲ್ಲಿ ಸರ್ಫರಾಜ್ ಮೇಲೆ ಯಾರೂ ಬಿಡ್ ಮಾಡ್ಲಿಲ್ಲ. ಬಟ್ ಅಂತಿಮವಾಗಿ ಸಿಎಸ್​ಕೆ ಫ್ರಾಂಚೈಸಿ ಮೂಲ ಬೆಲೆ 75 ಲಕ್ಷ ರೂ.ಗಳಿಗೆ ಖರೀದಿಸಿದೆ. ಌಕ್ಚುಲಿ ಸಿಎಸ್​ಕೆಗೆ ಸರ್ಫರಾಜ್ ಖಾನ್ ಅದ್ಭುತ ಆಟಗಾರ ಆಗೋದ್ರಲ್ಲಿ ಡೌಟೇ ಇಲ್ಲ. ಪ್ರಸ್ತುತ ಉತ್ತಮ ಫಾರ್ಮ್​ನಲ್ಲಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ 6 ಇನ್ನಿಂಗ್ಸ್​ಗಳಿಂದ 64ರ ಸರಾಸರಿಯಲ್ಲಿ 256 ರನ್ಸ್ ಕಲೆ ಹಾಕಿದ್ದಾರೆ. ಅದೂ ಕೂಡ 182.85 ಸ್ಟ್ರೈಕ್​ರೇಟ್​ನಲ್ಲಿ. ಹೀಗಾಗೇ ತಮ್ಮ ಸಾಮರ್ಥ್ಯ ತೋರಿಸೋಕೆ ಸಿಎಸ್​ಕೆ ಒಂದು ಚಾನ್ಸ್ ಕೊಟ್ಟಿದ್ದಕ್ಕಾಗಿ ಸರ್ಫರಾಜ್ ಖಾನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಥ್ಯಾಂಕ್ಯೂ ಸೋ ಮಚ್.. ಸಿಎಸ್​ಕೆ ಫಾರ್ ಗಿವಿಂಗ್ ಮಿ ನ್ಯೂ ಲೈಫ್ ಎಂದು ಬರೆದುಕೊಂಡಿದ್ದಾರೆ. ಈ ಅವಕಾಶ ಅವ್ರಿಗೆ ಎಷ್ಟು ಮುಖ್ಯ  ಅನ್ನೋದು ಈ ಪದಗಳಲ್ಲೇ ಗೊತ್ತಾಗುತ್ತೆ.

2 ವರ್ಷಗಳಿಂದ ಐಪಿಎಲ್ ನಿಂದ ದೂರವಿದ್ದ ಸರ್ಫರಾಜ್!

ಸರ್ಫರಾಜ್ ಖಾನ್ ಇದುವರೆಗೆ ಐಪಿಎಲ್‌ನಲ್ಲಿ 40 ಪಂದ್ಯಗಳನ್ನು ಆಡಿದ್ದಾರೆ. 23.21 ಸರಾಸರಿ ಮತ್ತು 138.24 ಸ್ಟ್ರೈಕ್ ರೇಟ್‌ನಲ್ಲಿ 441 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 67 ರನ್. ಇದು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಏಕೈಕ ಅರ್ಧಶತಕವಾಗಿದೆ. ಐಪಿಎಲ್ 2023 ರಲ್ಲಿ ಸರ್ಫರಾಜ್ ಖಾನ್ ಡೆಲ್ಲಿ ಕ್ಯಾಪಿಟಲ್ಸ್ ಪರ ಕೊನೇದಾಗಿ ಎರಡು ಪಂದ್ಯಗಳನ್ನು ಆಡಿದರು. ಬಟ್ ಖಾತೆ ತೆರೆಯೋಕೂ ಸಾಧ್ಯವಾಗಿರಲಿಲ್ಲ. ಆ ನಂತ್ರ 2024, 25ರಲ್ಲಿ ಚಾನ್ಸ್ ಸಿಗ್ಲಿಲ್ಲ. ಈಗ ಮತ್ತೆ ಐಪಿಎಲ್​ ಅಂಗಳಕ್ಕೆ ಕಾಲಿಡ್ತಿದ್ದಾರೆ. ರಾಷ್ಟ್ರೀಯ ತಂಡದಿಂದ ಕೈಬಿಟ್ಟಿರೋ ಬಿಸಿಸಿಐಗೆ, ಐಪಿಎಲ್​ನಿಂದ ದೂರವಿಟ್ಟಿದ್ದ ಫ್ರಾಂಚೈಸಿಗಳಿಗೆ ಬ್ಯಾಟ್​ನಲ್ಲೇ ಉತ್ತರಿಸಬೇಕಿದೆ.

ಲಾಸ್ಟ್ ರೌಂಡಲ್ಲಿ ಮೂಲ ಬೆಲೆಗೆ ಮಾರಾಟವಾದ ಪೃಥ್ವಿ ಶಾ!

ಇನ್ನು ಮಿನಿ ಆಕ್ಷನ್​ನಲ್ಲಿ ಎಲ್ಲರ ಗಮನ ಸೆಳೆದಿದ್ದ ಮತ್ತೊಬ್ಬ ಆಟಗಾರ ಪೃಥ್ವಿ ಶಾ.75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಪೃಥ್ವಿ ಶಾ ಅವರನ್ನು ಮೊದಲ ಸುತ್ತಿನಲ್ಲಿ ಹಾಗೇ ಅಕ್ಸ್​ಲೇಟರ್ ರೌಂಡ್​ನಲ್ಲಿ ಯಾರೂ ಪಿಕ್ ಮಾಡಿರಲಿಲ್ಲ.  ಇದಾದ ಬೆನ್ನಲ್ಲೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾರ್ಟ್ ಬ್ರೇಕ್ ಎಮೋಜಿ ಜೊತೆ ಇಟ್ಸ್ ಓಕೆ ಅಂತಾ ಪೋಸ್ಟ್ ಹಾಕಿದ್ರು. ಬಟ್ ಕೊನೆಯ ಸುತ್ತಿನಲ್ಲಿ ಮೂರನೇ ಬಾರಿ ಕಾಣಿಸಿಕೊಂಡ ಪೃಥ್ವಿ ಶಾ ಅವರಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಬಿಡ್ ಮಾಡಿದೆ. 75 ಲಕ್ಷ ರೂಪಾಯಿಗೆ ಖರೀದಿ ಮಾಡ್ತು. ಇದಾದ ಬೆನ್ನಲ್ಲೇ ಹಳೇ ಪೋಸ್ಟ್ ಡಿಲೀಟ್ ಮಾಡಿ ಅಕ್ಷರ್ ಪಟೇಲ್ ಜೊತೆಗಿನ ಫೋಟೋ ಜೊತೆ ನನ್ನ ಕುಟುಂಬಕ್ಕೆ ಹಿಂತಿರುಗಿದ್ದೇನೆ ಎಂದು ಹಾರ್ಟ್ ಎಮೋಜಿ ಪೋಸ್ಟ್ ಮಾಡಿದ್ದಾರೆ.  ಇನ್ನು ಕೊನೇದಾಗಿ 2024 ರಲ್ಲಿ ಪೃಥ್ವಿ ಶಾ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಬಟ್ 2025ರಲ್ಲಿ ಅನ್​ಸೋಲ್ಡ್ ಆಗಿದ್ರು. ಆದ್ರೆ ಡೊಮೆಸ್ಟಿಕ್​ನಲ್ಲಿ ಸದ್ದು ಮಾಡ್ತಾನೇ ಇದ್ದಾರೆ. ಈ ವರ್ಷದ ಅಕ್ಟೋಬರ್‌ನಲ್ಲಿ ರಣಜಿ ಟ್ರೋಫಿಯಲ್ಲಿ ಅತ್ಯಂತ ವೇಗದ ದ್ವಿಶತಕ ಗಳಿಸಿ ಸುದ್ದಿಯಾಗಿದ್ರು. 2025-26 ರ ಸೈಯಸ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 7 ಪಂದ್ಯಗಳಲ್ಲಿ 160ಪ್ಲಸ್ ಸ್ಟ್ರೈಕ್​ ರೇಟ್​ನೊಂದಿಗೆ 183 ರನ್ಸ್ ಕಲೆ ಹಾಕಿದ್ದಾರೆ.

Shantha Kumari