ಹೆಲ್ಮೆಟ್ ಹಾಕದೇ ಬೈಕ್ ಓಡಿಸಿದ ವ್ಯಕ್ತಿ! – ಬೈಕ್ ಸವಾರನ ಕಾರಣ ಕೇಳಿ ಬಿದ್ದು, ಬಿದ್ದು ನಕ್ಕ ಪೊಲೀಸರು!

ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಕಡ್ಡಾಯ. ಪೊಲೀಸರು ಫೈನ್ ಹಾಕ್ತಾರೆ ಅನ್ನೋ ಕಾರಣಕ್ಕೆ ಅದೆಷ್ಟೋ ಜನ ಹೆಲ್ಮೆಟ್ ಧರಿಸುತ್ತಾರೆ. ಇದೀಗ ಇಲ್ಲೊಬ್ಬರು ಹೆಲ್ಮೆಟ್ ಹಾಕದೇ ಬೈಕ್ ಓಡಿಸಿದ್ದು, ಪೊಲೀಸರು ವಾಹನ ಅಡ್ಡಗಟ್ಟಿ ಆತನನ್ನ ಪ್ರಶ್ನೆ ಮಾಡಿದ್ದಾರೆ. ಆತ ಕೊಟ್ಟ ಕಾರಣ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲ.. ಈ ವ್ಯಕ್ತಿಗಾಗಿ ಹೆಲ್ಮೆಟ್ ಕಂಪನಿ ಬಳಿ ವಿಶೇಷ ಮನವಿ ಮಾಡಿದ್ದಾರೆ. ಇದ್ರ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಹದಗೆಟ್ಟ ದೆಹಲಿ ವಾಯು ಗುಣಮಟ್ಟ – ಸರ್ಕಾರಿ, ಖಾಸಗಿ ಸಂಸ್ಥೆಗಳ 50% ನೌಕರರಿಗೆ ವರ್ಕ್ ಫ್ರಂ ಹೋಂ ಕಡ್ಡಾಯ
ಈ ಘಟನೆಯೂ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ. ವ್ಯಕ್ತಿಯೂ ಹೆಲ್ಮೆಟ್ ಹಾಕದೇ ಬೈಕ್ ಓಡಿಸುತ್ತಿದ್ದ ವೇಳೆ ಟ್ರಾಫಿಕ್ ಪೊಲೀಸರು ತಡೆದು ನಿಲ್ಲಿಸಿ ದಂಡ ವಿಧಿಸಲು ಮುಂದಾಗಿದ್ದಾರೆ. ಆದರೆ ಈ ವ್ಯಕ್ತಿಯೂ ನೀಡಿದ ಉತ್ತರಕ್ಕೆ ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದಾರೆ. ಆ ಬಳಿಕ ಪೊಲೀಸರು ಹೆಲ್ಮೆಟ್ ತಯಾರಕರಿಗೆ ವಿಶೇಷ ಮನವಿ ಮಾಡಿದ್ದು ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿವೇಕಾನಂದ್ ತಿವಾರಿ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡ ಸಂಚಾರಿ ಪೊಲೀಸರು ಎಲ್ಲರಿಗೂ ಹೆಲ್ಮೆಟ್ಗಳು ಅವಶ್ಯಕ. ಕಂಪನಿಗೆ ವಿನಂತಿ: ಎಲ್ಲಾ ಗಾತ್ರದ ಹೆಲ್ಮೆಟ್ಗಳನ್ನು ತಯಾರಿಸಿ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೆಲ್ಮೆಟ್ ಹಾಕದೇ ಬೈಕ್ ಓಡಿಸುತ್ತಾ ಬರುತ್ತಿರುವುದನ್ನು ಕಾಣಬಹುದು. ಟ್ರಾಫಿಕ್ ಪೊಲೀಸರು ಸವಾರನನ್ನು ತಡೆದು ನಿಲ್ಲಿಸಿ ಹೆಲ್ಮೆಟ್ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಈ ವ್ಯಕ್ತಿಯೂ ಸರ್ ನನ್ನ ತಲೆ ಸೈಜ್ಗೆ ಊರಿನಲ್ಲಿ ಎಲ್ಲೂ ಹೆಲ್ಮೆಟ್ ಸಿಗಲ್ಲ ಎಂದು ಪ್ರಾಮಾಣಿಕ ಉತ್ತರ ನೀಡಿದ್ದಾನೆ. ಹೀಗೆನ್ನುತ್ತಿದ್ದಂತೆ ಪೊಲೀಸರಿಗೆ ಅನುಮಾನ ಬಂದಿದ್ದು, ಬಳಿಯಿದ್ದ ಹೆಲ್ಮೆಟ್ ನೀಡಿ ಇದನ್ನು ಧರಿಸುವಂತೆ ಹೇಳಿದ್ದಾರೆ. ಈ ವ್ಯಕ್ತಿಯ ತಲೆಯ ಗಾತ್ರ ದೊಡ್ಡದಾಗಿದ್ದು, ಹೀಗಾಗಿ ಹೆಲ್ಮೆಟ್ ಧರಿಸಲು ಸಾಧ್ಯವಾಗಿಲ್ಲ. ಇದನ್ನು ನೋಡುತ್ತಿದ್ದಂತೆ ಪೊಲೀಸರು ಬಿದ್ದು ಬಿದ್ದು ನಕ್ಕಿದ್ದಾರೆ. ಕೊನೆಗೆ ಈ ವಿಡಿಯೋದಲ್ಲಿ ಹೆಲ್ಮೆಟ್ ಕಂಪನಿಗೆ ವಿಶೇಷ ಮನವಿ ಮಾಡಿದ್ದು, ವ್ಯಕ್ತಿಗಳ ತಲೆ ಗಾತ್ರ ದೊಡ್ಡದಿದೆ. ಅವರಿಗೆ ಹೆಲ್ಮೆಟ್ ಧರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸುವುದು ಅತ್ಯವಶ್ಯಕ. ಹೀಗಾಗಿ ದೊಡ್ಡ ಗಾತ್ರದ ಹೆಲ್ಮೆಟ್ ಉತ್ಪಾದಿಸಿ ಎಂದು ಹೇಳಿರುವುದನ್ನು ನೋಡಬಹುದು.
ಈ ವಿಡಿಯೋ 26 ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಪೊಲೀಸರ ಮನವಿಗೆ ಸ್ಪಂದಿಸಿದ ಸ್ಟೀಲ್ಬರ್ಡ್ ಹೆಲ್ಮೆಟ್ ಕಂಪನಿ ನಾವು ಈ ವ್ಯಕ್ತಿಗೆ ಹೆಲ್ಮೆಟ್ ಉಡುಗೊರೆ ನೀಡಲು ಬಯಸಿದ್ದೇವೆ. ದಯವಿಟ್ಟು ವ್ಯಕ್ತಿಯ ಸಂಪರ್ಕ ಇದ್ದರೆ ತಿಳಿಸಿದೆ. ಮತ್ತೊಬ್ಬರು ಇಂತಹ ಪೊಲೀಸರು ಇರ್ಬೇಕು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಪಾಪ ಅವರವರ ಕಷ್ಟ ಅವರವರಿಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.

ನೋಡಿರಿ

