ರಿಷಬ್, ನಾನು, ರಕ್ಷಿತ್ ಒಟ್ಟಿಗೆ ಸಿನಿಮಾ ಮಾಡ್ತೀವಿ.. ಆದ್ರೆ ಕಾಂತಾರದಲ್ಲಿ ನಟಿಸಲ್ಲ ಎಂದ ರಾಜ್ ಬಿ ಶೆಟ್ಟಿ!

ಕನ್ನಡ ಚಿತ್ರರಂಗದಲ್ಲಿ ಶೆಟ್ಟಿ ಗ್ಯಾಂಗ್ ಹವಾ ಜೋರಾಗಿದೆ. ರಿಷಭ್ ಶೆಟ್ಟಿ, ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ಮಾಡುತ್ತಾ ಬಂದಿದ್ದಾರೆ. ಶೆಟ್ಟಿ ಗ್ಯಾಂಗ್ ಮುಟ್ಟಿದ್ದೆಲ್ಲ ಚಿನ್ನ ಅನ್ನೋ ತರ ಆಗಿದೆ. ಆದ್ರೀ ಶೆಟ್ಟಿ ಗ್ಯಾಂಗ್ ಮಧ್ಯೆ ಎಲ್ಲವೂ ಸರಿಯಿಲ್ಲ. ಫ್ರೆಂಡ್ಶಿಪ್ ಮಧ್ಯೆ ಬಿರುಕು ಮೂಡಿದೆ ಎಂಬ ಮಾತು ಕೇಳಿಬಂದಿತ್ತು. ಇದೀಗ ರಾಜ್ ಬಿ ಶೆಟ್ಟಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಮ್ಮ ಮಧ್ಯೆ ಎಲ್ಲವೂ ಸರಿಯಿದೆ ಎಂದು ಹೇಳೋ ಮೂಲಕ ಹರಿದಾಡುತ್ತಿರುವ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ಇದನ್ನೂ ಓದಿ: Chinni Love U.. U Must Love Me! – ಪೊಲೀಸಪ್ಪನ ಹಿಂದೆ ಬಿದ್ದ ಪೋಲಿ ಆಂಟಿ!
45 ಸಿನಿಮಾ ಟ್ರೈಲರ್ ನೋಡಿದ ವೇಳೆ ರಿಷಬ್ ಶೆಟ್ಟಿ ,ರಾಜ್ ಬಿ ಶೆಟ್ಟಿ ಹೆಸರು ಹೇಳಿರಲಿಲ್ಲ. ಇದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಕಾಂತಾರದ ಬಳಿಕ ಗೆಳೆಯರನ್ನು ರಿಷಬ್ ದೂರ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಈ ಬಗ್ಗೆ ರಾಜ್ ಬಿ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದಾರೆ. ರಿಷಬ್ ಶೆಟ್ಟಿ ಮಾತನಾಡುವ ಬರದಲ್ಲಿ ಹೆಸರು ಹೇಳಲು ಮರೆತಿರಬಹುದು ಅಷ್ಟೇ. ಸಿನಿಮಾದ ಬಗ್ಗೆ ಏನು ಅಗತ್ಯ ಇದೆಯೋ ಅದನ್ನು ಅವರು ಹೇಳಿದ್ದಾರೆ. ಅವರ ಜೊತೆ ನನಗೆ ಯಾವುದೇ ಮನಸ್ತಾಪವಿಲ್ಲ. ಈ ವಿಚಾರವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದರು.
ಒಂದೇ ಸಿನಿಮಾದಲ್ಲಿ ನಟಿಸುವಂತಹ ಸಂದರ್ಭ ಒದಗಿ ಬಂದರೆ ಖಂಡಿತ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಎಂದಿದ್ದಾರೆ. ಕಾಂತಾರ ಸಿನಿಮಾ ಹೊರತುಪಡಿಸಿ ಮುಂದೆ ಸಿನಿಮಾ ಮಾಡಿದಾಗ ನನ್ನ ಅವಶ್ಯಕತೆ ಇದೆ ಅಂದರೆ ನಾನು ಅವರ ಜೊತೆ ಇರುತ್ತೇನೆ ಎಂದಿದ್ದಾರೆ.
ಮುನಿಸು ಇಟ್ಟುಕೊಂಡರೆ ನಮ್ಮ ಇಂಡಸ್ಟ್ರಿ ಉದ್ದಾರ ಆಗುವುದಿಲ್ಲ. ರಕ್ಷಿತ್ ಶೆಟ್ಟಿಯವರು ಕರೆದರೆ ರಿಚರ್ಡ್ ಆ್ಯಂಟನಿಗೆ ಜೊತೆ ನಿಲ್ಲುತ್ತೇನೆ. ರಕ್ಷಿತ್, ರಿಷಬ್ ಹಾಗೂ ನಾನು ಮೂವರು ಒಟ್ಟಿಗೆ ನಟಿಸಬೇಕಾದ ಸಮಯ ಬಂದ್ರೆ ಒಟ್ಟಾಗಿ ಸಿನಿಮಾ ಮಾಡುತ್ತೇವೆ. ರಿಷಬ್ ಶೆಟ್ರು ಇದ್ದಾರೆ, ರಕ್ಷಿತ್ ಇದ್ದಾರೆ ನಾನು ಮಾಡುವುದಿಲ್ಲ ಎನ್ನಲು ಚಿಕ್ಕ ಮಕ್ಕಳಲ್ಲ. ರಕ್ಷಿತ್ ಅವರನ್ನು ಇತ್ತೀಚಿಗೆ ಭೇಟಿಯಾಗಿದ್ದೆ. ಸದ್ಯದಲ್ಲಿ ಅವರು ಸಿನಿಮಾ ಶೂಟಿಂಗ್ ಹೋಗಬಹುದು ಎಂದು ರಾಜ್ ಬಿ ಶೆಟ್ಟಿ ಹೇಳಿದರು.

ನೋಡಿರಿ

