ತಪ್ಪು ತಿದ್ದಿ ನಡೆದ ಪೃಥ್ವಿ ಶಾಗೆ ಸಿಕ್ತು ಹೊಸ ಬದುಕು – ಅನ್‌ಸೋಲ್ಡ್‌ ಭಯದಲ್ಲಿದ್ದ ಪೃಥ್ವಿ ಕೈ ಹಿಡಿದ ಡೆಲ್ಲಿ

ತಪ್ಪು ತಿದ್ದಿ ನಡೆದ ಪೃಥ್ವಿ ಶಾಗೆ ಸಿಕ್ತು ಹೊಸ ಬದುಕು – ಅನ್‌ಸೋಲ್ಡ್‌ ಭಯದಲ್ಲಿದ್ದ ಪೃಥ್ವಿ ಕೈ ಹಿಡಿದ ಡೆಲ್ಲಿ

ತಪ್ಪು ಮಾಡೋದು ಸಹಜ ,ತಿದ್ದಿ ನಡೆಯೋನು ಮನುಜ ಕಣೋ. ಇದು ಪೃಥ್ವಿ ಶಾಗೆ ಹೇಳಿ ಮಾಡಿಸಿದ ಮಾತು. ತನ್ನ ತಪ್ಪನ್ನ ತಿದ್ದಿಕೊಂಡು ಪೃಥ್ವಿ ಶಾ ಹೊಸ ಕನಸಿನೊಂದಿಗೆ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಮತ್ತೆ ಐಪಿಎಲ್‌ಗೆ ಕಂಬ್ಯಾಕ್ ಮಾಡಿದ್ದಾರೆ. ಅಂದಹಾಗೇ ಪೃಥ್ವಿ ಶಾ ಒನ್ ಆಫ್​ ದ ಬೆಸ್ಟ್​ & ಟ್ಯಾಲೆಂಟೆಡ್​ ಕ್ರಿಕೆಟರ್​. ಟೀಮ್​ ಇಂಡಿಯಾ ಪರ ಡೆಬ್ಯೂ ಪಂದ್ಯದಲ್ಲೇ ಶತಕ ಸಿಡಿಸಿ ಟೀಮ್ ಇಂಡಿಯಾದ ಭವಿಷ್ಯ ಎನಿಸಿಕೊಂಡ ಆಟಗಾರ. ಈತನ ಆಟ ನೋಡಿದ ದಿಗ್ಗಜರು, ಮರಿ ಸಚಿನ್​, ಸೆಹ್ವಾಗ್ ಎಂದೇ ಗುಣಗಾನ ಮಾಡಿದ್ದುಂಟು. 18ರ ವಯಸ್ಸಿನಲ್ಲೇ ಇಂಟರ್​ನ್ಯಾಷನಲ್ ಕ್ರಿಕೆಟ್​​ಗೆ ಗ್ರ್ಯಾಂಡ್​​ ಎಂಟ್ರಿ ನೀಡಿದ ಬೆಂಕಿ ಓಪನರ್​. ಆದ್ರೆ, ವಿಶ್ವ ಕ್ರಿಕೆಟ್​ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಈತನ ವೃತ್ತಿ ಜೀವನ ಹಾಳಾಗಿ ಹಳ್ಳ ಹಿಡಿದು ಹೋಯ್ತು..  ಪೃಥ್ವಿ ಶಾರ ಫಿಟ್ನೆಸ್, ಶಿಸ್ತೇ ಆತನ ಕರಿಯರ್​ಗೆ ಮುಳ್ಳಾಗಿ ಹೋಯಿತು. ನಾನು ಕ್ರಿಕೆಟ್‌ನಲ್ಲಿ ಏನೋ ಸಾಧನೆ ಮಾಡಿದ್ದೇನೆ ಅನ್ನೋ ಅಹಂ ನೆತ್ತಿಗೇರಿತ್ತು..   ಬಟ್ ಆಮೇಲೆ ತನ್ನದೇ ತಪ್ಪಿನಿಂದ ಟೀಮ್ ಇಂಡಿಯಾದಿಂದ ಹೊರ ಬಿದ್ದಿದ್ದ ಪೃಥ್ವಿ  ಐಪಿಎಲ್​ನಲ್ಲೂ ಅನ್​ಸೋಲ್ಡ್ ಪ್ಲೇಯರ್ ಆಗಿಬಿಟ್ಟರು. ಸಾಕಷ್ಟು ವರ್ಷ ಐಪಿಎಲ್‌ನಲ್ಲಿ ಚಾನ್ಸ್ ಸಿಗಲೇ ಇಲ್ಲ.. ಆದ್ರೆ 2026ರಲ್ಲಿ ಪೃಥ್ವಿ ಶಾ ಮತ್ತೆ ಐಪಿಎಲ್‌ನಲ್ಲಿ ಮಿಂಚೋಕೆ ರೆಡಿಯಾಗಿದ್ದಾರೆ.

ಇದನ್ನೂ ಓದಿ:  ತಾತನ ಪೆನ್ಷನ್ ಹಣದಲ್ಲಿ ಕ್ರಿಕೆಟ್ ಟ್ರೈನಿಂಗ್ – ದುಡ್ಡಿಲ್ಲದೇ ಪರದಾಡುತ್ತಿದ್ದ ಪ್ರಶಾಂತ್ ವೀರ್ ಈಗ ಕೋಟ್ಯಾಧಿಪತಿ

 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 19ರ ಮೆಗಾ ಹರಾಜಿನಲ್ಲಿ ಭಾರತದ ಯುವ ಸ್ಫೋಟಕ ಬ್ಯಾಟರ್ ಪೃಥ್ವಿ, ಶಾ ಅವರಿಗೆ ಕೊನೆಯ ಕ್ಷಣದಲ್ಲಿ ಅದೃಷ್ಟ ಖುಲಾಯಿಸಿದೆ. ಹರಾಜು ಪಟ್ಟಿಯ ಮೊದಲ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದ ಪೃಥ್ವಿ, ಆರಂಭಿಕ ಸುತ್ತುಗಳಲ್ಲಿ ಯಾವುದೇ ಫ್ರಾಂಚೈಸಿಗಳ ಆಸಕ್ತಿ ಗಳಿಸದೆ ಮಾರಾಟವಾಗದೇ ಉಳಿದಿದ್ದರು. 75 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದಿದ್ದ ಬಲಗೈ ದಾಂಡಿಗ ಪೃಥ್ವಿ ಶಾ ಅವರನ್ನು ಮೊದಲ ಸುತ್ತಿನಲ್ಲಿ ಯಾವ ತಂಡವೂ ಖರೀದಿಸಲಿಲ್ಲ. ನಂತರ, ವಿಶೇಷವಾಗಿ ವೇಗ ಹೆಚ್ಚಿಸಲು ನಡೆಸುವ ‘ಆಕ್ಸಲೇಟರ್ ರೌಂಡ್‌ನಲ್ಲಿ ಮತ್ತೊಮ್ಮೆ ಅವರ ಹೆಸರು ಬಂದರೂ, ಆಗಲೂ ಪೃಥ್ವಿಯನ್ನು ಖರೀದಿಸಲು ಯಾವ ಫ್ರಾಂಚೈಸಿಯೂ ಬಿಡ್ ಮಾಡಲಿಲ್ಲ. ಹೀಗಾಗಿ, ಈ ಬಾರಿ ಪೃಥ್ವಿ ಶಾ ಅನ್‌ಸೋಲ್ಡ್ ಆಗಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು.

ಆದರೆ, ಅಂತಿಮ ಸುತ್ತಿನಲ್ಲಿ ನಡೆದ ಬೆಳವಣಿಗೆಯಲ್ಲಿ ಪೃಥ್ವಿ ಶಾ ಅವರಿಗೆ ಅದೃಷ್ಟದ ಬಾಗಿಲು ತೆರೆದಿದೆ. ಮೂರನೇ ಬಾರಿಗೆ ಅಂತಿಮ ಸುತ್ತಿನಲ್ಲಿ ಕಾಣಿಸಿಕೊಂಡಾಗ, ಅವರ ಹಿಂದಿನ ಫ್ರಾಂಚೈಸಿ ದೆಹಲಿ ಕ್ಯಾಪಿಟಲ್ಸ್ ಬಿಡ್ ಮಾಡುವ ಮೂಲಕ ಅವರಿಗೆ ಹೊಸ ಅವಕಾಶ ನೀಡಿದೆ. ದೆಹಲಿ ಕ್ಯಾಪಿಟಲ್ಸ್ ತಂಡವು ಪೃಥ್ವಿ ಶಾ ಅವರನ್ನು ಅವರ ಮೂಲ ಬೆಲೆ 75 ಲಕ್ಷಕ್ಕೆ ಖರೀದಿಸಿದೆ.  ಈ ಮೂಲಕ, 2024ರ ಸೀಸನ್‌ನಲ್ಲಿ 7.5 ಕೋಟಿ ಪಡೆದಿದ್ದ ಪೃಥ್ವಿ ಶಾ, ಈ ಬಾರಿ ಹತ್ತನೇ ಒಂದು ಭಾಗದ ಬೆಲೆಗೆ ಹಳೆಯ ತಂಡವನ್ನೇ ಸೇರಿಕೊಂಡಿದ್ದಾರೆ.  ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.  ಆದ್ರೆ 19ನೇ   ಸೀಸನ್‌ನಲ್ಲಿ ಯುವ ಬ್ಯಾಟರ್ ಮತ್ತೊಮ್ಮೆ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಪೃಥ್ವಿ ಶಾಗೆ ಮತ್ತೆ ಅದೃಷ್ಟ  ಖುಲಾಯಿಸಿದೆ.

Kishor KV