Chinni Love U.. U Must Love Me! – ಪೊಲೀಸಪ್ಪನ ಹಿಂದೆ ಬಿದ್ದ ಪೋಲಿ ಆಂಟಿ!

Chinni Love U.. U Must Love Me! – ಪೊಲೀಸಪ್ಪನ ಹಿಂದೆ ಬಿದ್ದ ಪೋಲಿ ಆಂಟಿ!

Chinni Love u.. u must love me.. ಇದು ಯಾವುದೋ ಸಿನಿಮಾದ ಡೈಲಾಗ್ ಆಲ್ಲ.. ಪೋಲಿ ಆಂಟಿ ಪೊಲೀಸಪ್ಪನಿಗೆ ಬರೆದ ಲವ್ ಲೆಟರ್.. ಮಹಿಳೆಯೊಬ್ಬಳು ಪೊಲೀಸ್ ಇನ್ಸ್ಪೆಕ್ಟರ್ಗೆ ರಕ್ತದಲ್ಲಿ ಲವ್ ಲೆಟರ್ ಬರೆದಿರುವ ಘಟನೆ ನಡೆದಿದೆ. ಮಹಿಳೆ ಕಾಟಕ್ಕೆ ಈಗ ಪೊಲೀಸ್ ಇನ್ಸ್ಪೆಕ್ಟರ್ ಬೇಸತ್ತು ಹೋಗಿದ್ದಾರೆ.

ಇದನ್ನೂ ಓದಿ: ಚೇಂಜ್‌ ಆಗೋ ವ್ಯಕ್ತಿನೇ ಅಲ್ಲ. ನಾಯಿ ಬಾಲ ಡೊಂಕೆ! – ಅಶ್ವಿನಿ ಗೌಡ ಮೇಲೆ ಕೂಗಾಡಿದ ಕಾವ್ಯ!

ಈ ವಿಚಿತ್ರ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ರಾಮಮೂರ್ತಿ ನಗರ ನಿವಾಸಿ, ಇನ್ಸ್‌ಪೆಕ್ಟರ್‌ ಸತೀಶ್‌ಗೆ ವನಜಾ ಎಂಬ ಮಹಿಳೆ ಪದೇ ಪದೇ ಮಸೇಜ್ ಮಾಡಿ ಪ್ರೀತಿಸುವಂತೆ ಮಸೇಜ್ ಮಾಡುತ್ತಿದ್ದರು. ಅಲ್ಲದೇ ಠಾಣೆಯಲ್ಲಿ ಇನ್ಸ್‌ಪೆಕ್ಟರ್‌ ಇಲ್ಲದಾಗ ಅವರ ಟೇಬಲ್ ಮೇಲೆ ಲವ್ ಲೆಟರ್ ಜೊತೆಗೆ ಕಜ್ಜಾಯದ ಡಬ್ಬಿ, ಹೂ ಬೊಕ್ಕೆ ಹಾಗೂ ಎರಡು ಶೀಟ್‌ನಲ್ಲಿ ಇಪ್ಪತ್ತು ಮಾತ್ರೆಗಳನ್ನೂ ಇಟ್ಟು ಹೋಗಿದ್ದಾರೆ. ನೀವು, ನನ್ನ ಪ್ರೀತಿಯನ್ನು ಒಪ್ಪುತ್ತಿಲ್ಲ, ನಿಮಗೆ ತೊಂದರೆ ಕೊಡಲು ನನಗೆ ಇಷ್ಟ ಇಲ್ಲ. ನೀವು ನನ್ನ ಪ್ರೀತಿ ಒಪ್ಪಿಕೊಳ್ಳದಿದ್ದರೆ, ನಾನು ಆತ್ಮಹತ್ಯೆ ಮಾಡಿಕೊಳ್ತುತ್ತೇನೆ. ನನ್ನ ಸಾವಿಗೆ ನೀವೆ ಕಾರಣ ಎಂದು ಹಾರ್ಟ್ ಚಿತ್ರ ಬರೆದು ಅದರಲ್ಲಿ ಚಿನ್ನಿ ಲವ್ ಯೂ, ಯೂ ಮಸ್ಟ್ ಲವ್ ಮೀ ಎಂದು ರಕ್ತದಲ್ಲಿ ಪತ್ರ ಬರೆದಿದ್ದಾಳೆ.

ಮಹಿಳೆ ಪತ್ರ ಬರೆಯುವ ಮುನ್ನ ಮೊಬೈಲ್‌ಗೆ ಸಾಕಷ್ಟು ಬಾರಿ ಮೆಸೇಜ್ ಮಾಡುತ್ತಿದ್ದಳು. ಇದರಿಂದ ಬೇಸತ್ತು ಇನ್ಸ್‌ಪೆಕ್ಟರ್‌ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಾರೆ. ಒಂದಲ್ಲ, ಎರಡಲ್ಲ ಹತ್ತಕ್ಕೂ ಹೆಚ್ಚು ನಂಬರ್‌ಗಳಿಂದ ಮೆಸೆಜ್ ಮಾಡಿದ್ದರಿಂದ ಅಷ್ಟೂ ನಂಬರ್‌ಗಳನ್ನೂ ಇನ್ಸ್‌ಪೆಕ್ಟರ್‌ ಬ್ಲಾಕ್ ಮಾಡಿದ್ದಾರೆ. ಫೋನ್ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದಕ್ಕೆ ಇದೀಗ ಪತ್ರ ಬರೆದಿದ್ದಾಳೆ.

ತಾನು ಕಾಂಗ್ರೆಸ್ ಕಾರ್ಯಕರ್ತೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ತನಗೆ ಪರಿಚಯ ಎಂದು ಹೇಳಿಕೊಂಡಿದ್ದಾಳೆ. ಮೋಟಮ್ಮ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಇರುವ ಫೋಟೋಗಳನ್ನು ಕಳುಹಿಸಿ, ಪ್ರೀತಿಸಲೇಬೇಕು ಎಂದು ಇನ್ಸ್​ಪೆಕ್ಟರ್ ಮೇಲೆ ಒತ್ತಡ ಹೇರಿದ್ದಾಳೆ. ಇದೀಗ ಮಹಿಳೆ ಕಾಟಕ್ಕೆ ಬೇಸತ್ತು, ಇನ್ಸ್‌ಪೆಕ್ಟರ್‌ ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿ, ಆತ್ಮಹತ್ಯೆ ಬೆದರಿಕೆ ಆರೋಪದಲ್ಲಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Shwetha M