ತಾತನ ಪೆನ್ಷನ್ ಹಣದಲ್ಲಿ ಕ್ರಿಕೆಟ್ ಟ್ರೈನಿಂಗ್ – ದುಡ್ಡಿಲ್ಲದೇ ಪರದಾಡುತ್ತಿದ್ದ ಪ್ರಶಾಂತ್ ವೀರ್ ಈಗ ಕೋಟ್ಯಾಧಿಪತಿ
ಜಡೇಜಾ ಸ್ಥಾನಕ್ಕೆ ಚೆನ್ನೈ ತಂಡ ಸೇರಿದ ಸ್ಫೋಟಕ ಆಲ್ರೌಂಡರ್

ತಾತನ ಪೆನ್ಷನ್ ಹಣದಲ್ಲಿ ಕ್ರಿಕೆಟ್ ಟ್ರೈನಿಂಗ್ – ದುಡ್ಡಿಲ್ಲದೇ ಪರದಾಡುತ್ತಿದ್ದ ಪ್ರಶಾಂತ್ ವೀರ್ ಈಗ ಕೋಟ್ಯಾಧಿಪತಿಜಡೇಜಾ ಸ್ಥಾನಕ್ಕೆ ಚೆನ್ನೈ ತಂಡ ಸೇರಿದ ಸ್ಫೋಟಕ ಆಲ್ರೌಂಡರ್

ಐಪಿಎಲ್ 2026 ರ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಲಿಷ್ಠವಾಗಿಯೇ ಕಟ್ಟಿದೆ. ಅಬುಧಾಬಿಯಲ್ಲಿ ನಡೆದ IPL 2026 ರ ಮಿನಿ ಹರಾಜಿನಲ್ಲಿ ಉತ್ತರ ಪ್ರದೇಶದ ಆಲ್‌ರೌಂಡರ್ ಪ್ರಶಾಂತ್ ವೀರ್ ಅವರನ್ನು ಚೆನ್ನೈ ತಂಡ ಖರೀದಿಸಿದ್ದು, ಜಡೇಜಾ ಸ್ಥಾನಕ್ಕೆ ಸರಿಯಾದ ಆಯ್ಕೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಯಶಸ್ವಿ ಜೈಸ್ವಾಲ್‌ಗೆ ತೀವ್ರ ಹೊಟ್ಟೆ ನೋವು, ಆಸ್ಪತ್ರೆಯಲ್ಲಿ ಚಿಕಿತ್ಸೆ

ಆಲ್‌ರೌಂಡರ್ ಪ್ರಶಾಂತ್ ವೀರ್. ಮಿನಿ ಹರಾಜಿನಲ್ಲಿ ಈ ಯುವ ಆಟಗಾರನ ಹೆಸರು ಹರಾಜಿನಲ್ಲಿ ಕಾಣಿಸಿಕೊಂಡ ತಕ್ಷಣ ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ನಡೆಯಿತು. ಆರಂಭದಲ್ಲಿ ಪ್ರಶಾಂತ್ ವೀರ್ ಅವರನ್ನು ಬಿಡ್ ಮಾಡಲು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ತೀವ್ರ ಹಣಾಹಣಿ ನಡೆಯಿತು. ನಂತರ ರಾಜಸ್ಥಾನ ರಾಯಲ್ಸ್ , ಕೋಲ್ಕತ್ತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕೂಡಾ ಜಿದ್ದಾಜಿದ್ದಿನ ಬಿಡ್ಡಿಂಗ್‌ ನಡೆಸಿದರು. 6 ತಂಡಗಳ ನಡುವಿನ ಸುದೀರ್ಘ ಬಿಡ್ಡಿಂಗ್ ಪೈಪೋಟಿ ನಡುವೆ, ಚೆನ್ನೈ ಸೂಪರ್ ಕಿಂಗ್ಸ್ ಅಂತಿಮವಾಗಿ ಪ್ರಶಾಂತ್ ವೀರ್ ಅವರನ್ನು 14.20 ಕೋಟಿ ರೂ.ಗೆ ಖರೀದಿಸಿತು.

ಈ ಮಿನಿ ಹರಾಜಿನಲ್ಲಿ 14.20 ಕೋಟಿ ಪಡೆದ ಪ್ರಶಾಂತ್ ವೀರ್, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಭಾರತೀಯ ಆನ್​ಕ್ಯಾಪ್ಡ್ ಆಟಗಾರನಾದರು. ಅಷ್ಟೇ ಅಲ್ಲ, ಶಿಕ್ಷಕನ ಮಗ, ಮಿಡಲ್ ಕ್ಲಾಸ್ ಹುಡುಗ ತನ್ನ ಕ್ರಿಕೆಟ್ ಪ್ರತಿಭೆಯಿಂದಲೇ ಕೋಟ್ಯಾಧಿತಿಯಾಗಿ ಹೊರಹೊಮ್ಮಿದ್ದಾರೆ. ಅಂದಹಾಗೆ, ಪ್ರಶಾಂತ್ ವೀರ್ ಎಡಗೈ ಸ್ಪಿನ್-ಬೌಲಿಂಗ್ ಆಲ್ರೌಂಡರ್. ನವೆಂಬರ್ 24, 2025 ರಂದು ಉತ್ತರ ಪ್ರದೇಶದ ಅಮೇಥಿಯಲ್ಲಿ ಜನಿಸಿದರು. ಪ್ರಶಾಂತ್ ವೀರ್ ತಂದೆ ಪಾರ್ಟ್‌ಟೈಮ್ ಶಿಕ್ಷಕ ವೃತ್ತಿಯಲ್ಲಿದ್ದಾರೆ. ತಾತನ ಪೆನ್ಷನ್ ದುಡ್ಡಿನಲ್ಲಿ ಕ್ರಿಕೆಟ್ ಟ್ರೈನಿಂಗ್ ಪಡೆಯುತ್ತಾರೆ. ತಾತ ತೀರಿಹೋದ ಮೇಲೆ ಪ್ರಶಾಂತ್ ವೀರ್ ಬದುಕಲ್ಲಿ ಆರ್ಥಿಕ ಸಂಕಷ್ಟ ತಲೆದೋರುತ್ತದೆ. ಕ್ರಿಕೆಟ್ ತರಭೇತಿಗೆ ದುಡ್ಡು ಕಟ್ಟಲಾಗದೇ ತುಂಬಾ ಕಷ್ಟಪಡುತ್ತಾರೆ ಪ್ರಶಾಂತ್ ವೀರ್. ಆದರೆ, ಪ್ರಶಾಂತ್ ವೀರ್ ಕ್ರಿಕೆಟ್ ಬಿಟ್ಟರೂ, ಕ್ರಿಕೆಟ್ ಕೈ ಹಿಡಿದಿತ್ತು. ಹೀಗಾಗಿ ಜೀವದ ಗೆಳೆಯನಿಂದ ಹಣದ ಸಹಾಯ ಸಿಗುತ್ತದೆ. ಕೊನೆಗೂ ಪ್ರಶಾಂತ್ ವೀರ್, ದೇಶಿ ಟೂರ್ನಿಗಳಲ್ಲಿ ಒಂದೊಂದೇ ಸಾಧನೆಯ ಹೆಜ್ಜೆ ಇಡುತ್ತಾ ಬರುತ್ತಾರೆ. ಈ ಬಾರಿ 2025 ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಪ್ರಶಾಂತ್ ವೀರ್ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಆಲ್‌ರೌಂಡರ್ ಆಟದ ಮೂಲಕ ಕ್ರಿಕೆಟ್ ಲೋಕ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಪ್ರಶಾಂತ್ ವೀರ್, ಚೆನ್ನೈ ತಂಡದಿಂದ ಹೊರಗೆ ಕಾಲಿಟ್ಟ ರವೀಂದ್ರ ಜಡೇಜಾ ಬದಲಿಗೆ ಆಯ್ಕೆ ಮಾಡಲಾಗಿದೆ. ಕಳೆದ ನವೆಂಬರ್‌ನಲ್ಲಿ ಸಿಎಸ್‌ಕೆ ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನ ರಾಯಲ್ಸ್‌ಗೆ ಟ್ರೇಡ್ ಮಾಡಲಾಗಿತ್ತು. ಹೀಗಾಗಿ ಜಡ್ಡು ಜಾಗಕ್ಕೆ ಪ್ರಶಾಂತ್ ವೀರ್ ಉತ್ತಮ ಆಯ್ಕೆ ಎಂದು ಹೇಳಲಾಗುತ್ತಿದೆ.

ಪ್ರಶಾಂತ್ ವೀರ್, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇದುವರೆಗೆ ಏಳು ಇನ್ನಿಂಗ್ಸ್‌ಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಆರು ಇನ್ನಿಂಗ್ಸ್‌ಗಳಲ್ಲಿ 112 ರನ್‌ಗಳನ್ನು ಗಳಿಸಿದ್ದಾರೆ. ಮೂರು ಬಾರಿ ಅಜೇಯರಾಗಿ ಉಳಿದಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಿರುದ್ಧ 10 ಎಸೆತಗಳಲ್ಲಿ ಅಜೇಯ 37 ರನ್ ಗಳಿಸಿದ್ದರು. ಯುಪಿ ಟಿ20 ಲೀಗ್‌ನಲ್ಲಿ ನೋಯ್ಡಾ ಸೂಪರ್ ಕಿಂಗ್ಸ್ ಪರ ಆಡುವ ಮೂಲಕ ಸದ್ದು ಮಾಡಿದ್ದರು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಪ್ರಶಾಂತ್ ವೀರ್ ಅವರನ್ನು ಟ್ರಯಲ್ಸ್‌ಗೆ ಆಹ್ವಾನಿಸಲಾಗಿತ್ತು. ಈಗ ಮಿನಿ ಹರಾಜಿನಲ್ಲಿ ದುಬಾರಿ ಬೆಲೆ ಪ್ರಶಾಂತ್ ವೀರ್ ಅವರನ್ನು ಸಿಎಸ್​​ಕೆ ಖರೀದಿಸಿದೆ.

Sulekha