ಚೇಂಜ್‌ ಆಗೋ ವ್ಯಕ್ತಿನೇ ಅಲ್ಲ. ನಾಯಿ ಬಾಲ ಡೊಂಕೆ! – ಅಶ್ವಿನಿ ಗೌಡ ಮೇಲೆ ಕೂಗಾಡಿದ ಕಾವ್ಯ!

ಚೇಂಜ್‌ ಆಗೋ ವ್ಯಕ್ತಿನೇ ಅಲ್ಲ. ನಾಯಿ ಬಾಲ ಡೊಂಕೆ! – ಅಶ್ವಿನಿ ಗೌಡ ಮೇಲೆ ಕೂಗಾಡಿದ ಕಾವ್ಯ!

ಬಿಗ್‌ಬಾಸ್‌ ಕನ್ನಡ ಸೀಸನ್‌ 12 ರಲ್ಲಿ ಸ್ಪರ್ಧಿಗಳ ಮಧ್ಯೆ ಟಫ್‌ ಫೈಟ್‌ ನಡಿತಾ ಇದೆ. ಕಪ್‌ ಮೇಲೆ ಎಲ್ಲರ ಕಣ್ಣಿದೆ. ಟಾಸ್ಕ್‌ನಲ್ಲಿ ಗೆಲ್ಲಲು ನಾನಾ ತಂತ್ರ ರೂಪಿಸುತ್ತಿದ್ದಾರೆ. ಆದ್ರೀಗ ಬಿಗ್‌ಬಾಸ್‌ನಲ್ಲಿ ಅಶ್ವಿನಿ ಗೌಡ ಮೋಸ ಮಾಡ್ತಿದ್ದಾರಾ? ಅನ್ನೋ ಪ್ರಶ್ನೆ ಕಾಡ್ತಿದೆ. ಇದೀಗ ಕಾವ್ಯ ಶೈವ ಅಶ್ವಿನಿ ಮೇಲೆ ಕೂಗಾಡಿದ್ದಾರೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಹೊಸ ರೂಲ್ಸ್‌! – ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ 19 ಗೈಡ್​​ಲೈನ್!

ಬಿಗ್‌ಬಾಸ್ ಮನೆಯಲ್ಲಿ ಆಟದ ವಿಚಾರವಾಗಿ ಅಶ್ವಿನಿ ಗೌಡ ಮತ್ತು ಕಾವ್ಯಾ ಶೈವ ನಡುವೆ ತೀವ್ರ ಜಗಳ ನಡೆದಿದೆ. ಏಕವಚನ ಬಳಕೆಯಿಂದ ಶುರುವಾದ ಮಾತಿನ ಚಕಮಕಿ, ವೈಯಕ್ತಿಕ ನಿಂದನೆಗೆ ತಿರುಗಿದೆ. ಇದ್ರ ಪ್ರೋಮೋ ರಿಲೀಸ್‌ ಆಗಿದೆ. ಪ್ರೋಮೋದಲ್ಲಿ ಟಾಸ್ಕ್‌ ಆದಮೇಲೆಯೂ ಅಶ್ವಿನಿ, ಕಾವ್ಯ ಅವರ ಮೇಲೆ ಕುಳಿತುಕೊಂಡಿದ್ದರು. ಸೈರನ್ ಆದರೂ ಎದ್ದಿರಲಿಲ್ಲ. ಇದು ಕಾವ್ಯಗೆ ಕೋಪ ತರಿಸಿದೆ. ಕಾವ್ಯ ಮಾತನಾಡಿ, ಅಶ್ವಿನಿ ಅವರಿಗೆ ಎಷ್ಟು ಕೆಟ್ಟ ಬುದ್ದಿ ಅಂದ್ರೆ ಸೈರನ್‌ ಆದ ಮೇಲೆ ಏಳಬೇಕು ಅಲ್ವಾ? ಅಂತ ರಾಶಿಕಾ ಬಳಿ ಹೇಳಿದ್ದಾರೆ.

ಇದು ಅಶ್ವಿನಿ ಕಿವಿಗೆ ಬಿದ್ದು, ನೀನು ಪದಗಳನ್ನ ಸರಿಯಾಗಿ ಬಳಕೆ ಮಾಡು ಎಂದಿದ್ದಾರೆ. ಆಗ ಕಾವ್ಯ ಹೋಗಮ್ಮ ಅಂತ ಅಶ್ವಿನಿಗೆ ಹೇಳಿದರು. ನಿನ್ನ ಅಮ್ಮಗೆ ಹೋಗಿ ಹೇಳು ಇದೆಲ್ಲ ಅಂತ ಅಶ್ವಿನಿ ಕೂಗಾಡಿದ್ದಾರೆ. ಕಾವ್ಯ ಮಾತನಾಡಿ, ನೀವು ಚೇಂಜ್‌ ಆಗೋ ವ್ಯಕ್ತಿನೇ ಅಲ್ಲ. ನಾಯಿ ಬಾಲ ಡೊಂಕೆ ಎಂದಿದ್ದಾರೆ ಕಾವ್ಯ. ಅಶ್ವಿನಿ ಗೌಡ ಮೋಸ ಅಂತಾಳೆ, ಇವಳು ದೊಡ್ಡ ಸಾಚಾನ ಅಂತ ಅಶ್ವಿನಿ ಕೂಗಾಡಿದ್ದಾರೆ.

ನಿನ್ನೆ ಕೂಡ ಚೈತ್ರಾ ಮತ್ತು ಅಶ್ವಿನಿ ಗೌಡ ನಡುವೆ ಯಾವ ಲೆವೆಲ್‌ಗೆ ಪೈಪೋಟಿ ಇತ್ತು ಎಂದರೆ, ಅಶ್ವಿನಿಗೆ ಪರಚಿ, ಗಿಲ್ಲಿ, ಉಗಿದು ರಂಪಾ ಮಾಡಿದರೆ, ಚೈತ್ರಾ ಅವರ ಕೈಗೆ ಅಶ್ವಿನಿ ಪಟಪಟ ಅಂತ ಹೊಡೆದೇ ಬಿಟ್ಟಿದ್ದಾರೆ! ತಮ್ಮ ಬಟ್ಟೆಯನ್ನು ಅಶ್ವಿನಿ ಎಳೆದರು ಅಂತ ಚೈತ್ರಾ ಕೂಗಾಡಿದರೆ, ಚೈತ್ರಾ ಕುಂದಾಪುರ ನನ್ನ ಕಾಲನ್ನು ಉಗುರಿನಿಂದ ಪರಚಿದ್ರು ಎಂದು ಅಶ್ವಿನಿ ಗರಂ ಆಗಿದ್ದಾರೆ. ಅಷ್ಟೇ ಅಲ್ಲದೆ, ಪರಚಿದ ಕೈಗೆ ಅಶ್ವಿನಿ ಹೊಡೆದಿದ್ದೂ ಆಗಿದೆ.

ಕೊನೆಗೆ ಚೈತ್ರಾ ಅವರನ್ನು ರಾಶಿಕಾ ನಾಮಿನೇಟ್‌ ಮಾಡಿದ್ದರು. ಇದರಿಂದ ಕ್ರೋಧಗೊಂಡ ಚೈತ್ರಾ, ರಾಶಿಕಾಗೆ ಹಿಡಿಶಾಪ ಹಾಕಿದ್ದರು. ಆಟ ಬದಲಾಯಿಸೋ ಅಧಿಕಾರ ಉಸ್ತುವಾರಿಗೆ ಇಲ್ಲ. ನೀನು ಯಾವ ಉಸ್ತುವಾರಿ ಹೆಸರಿನಲ್ಲಿ ನನ್ನನ್ನ ನಾಮಿನೇಟ್ ಮಾಡಿದಿಯೋ, ಅದೇ ನಿನಗೆ ಕರ್ಮ ರಿಟರ್ನ್ಸ್ ಅನ್ನುವಂತೆ ನಿನಗೆ ಹೊಡೆಯತ್ತೆ ಎಂದು ರಾಶಿಕಾಗೆ ಚೈತ್ರಾ ಕುಂದಾಪುರ ಶಾಪ ಹಾಕಿದ್ದರು.

Shwetha M