7 ಕೋಟಿಗೆ ಬೇಕಿತ್ತಾ ವೆಂಕಿ? -ಗ್ರೀನ್.. ಪತಿ KKRಗೆ ಪ್ಲಸ್ ಆಗ್ತಾರಾ?
ಮಿನಿಯಲ್ಲಿ RCB ಬಲ ಹೆಚ್ಚಿದ್ಯಾ?

7 ಕೋಟಿಗೆ ಬೇಕಿತ್ತಾ ವೆಂಕಿ? -ಗ್ರೀನ್.. ಪತಿ KKRಗೆ ಪ್ಲಸ್ ಆಗ್ತಾರಾ?ಮಿನಿಯಲ್ಲಿ RCB ಬಲ ಹೆಚ್ಚಿದ್ಯಾ?

ಸೂಪರ್ ಸ್ಟಾರ್ ಪ್ಲೇಯರ್ಸ್ ಇಲ್ಲ.. ಫ್ರಾಂಚೈಸಿಗಳ ಬಳಿ ಬೇಜಾನ್ ಬ್ಯಾಲೆನ್ಸೂ ಇಲ್ಲ.. ಇದೇನ್ ಮೆಗಾ ಹರಾಜೂ ಅಲ್ಲ.. ಮಿನಿ ಆಕ್ಷನ್.. ಸೋ ಪ್ಲೇಯರ್​ಗಳ ಮೇಲೆ ಹೆಚ್ಚೇನು ಬಿಡ್ಡಿಂಗ್ ಆಗಲ್ಲ ಅಂತಾನೇ ಎಲ್ರೂ ಅನ್ಕೊಂಡಿದ್ರು. ಬಟ್ ದಾಖಲೆಗಳೇ ಧೂಳೀಪಟ ಆಗುವಂತೆ ಬಿಡ್ಡಿಂಗ್ ನಡೆದಿದೆ. ಇತಿಹಾಸ ಸೃಷ್ಟಿಸುವಂತೆ ಹರಾಜು ನಡೆದಿದೆ. ಆರ್​ಸಿಬಿ ಕೂಡ ಅಚ್ಚರಿಯ ಆಟಗಾರರನ್ನ ಪಿಕ್ ಮಾಡಿದೆ.

ಇದನ್ನೂ ಓದಿ : RCBಗೆ ಎಂಟ್ರಿ ಕೊಟ್ಟ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ – 4 ತಂಡಗಳ ಪೈಪೋಟಿಯಲ್ಲಿ ಗೆದ್ದ ಬೆಂಗಳೂರು

ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಸೀಸನ್​ಗಾಗಿ ಅಬುದಾಬಿಯಲ್ಲಿ ನಡೆದ ಮಿನಿ ಆಕ್ಷನ್​ನಲ್ಲಿ ಟೋಟಲಿ 369 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ರು. ಇಂಟ್ರೆಸ್ಟಿಂಗ್ ಅಂದ್ರೆ ಹರಾಜು ಸ್ಟಾರ್ಟ್ ಆದಾಗ ಮೊದಲ ಹೆಸ್ರೇ ಜೇಕ್ ಫ್ರೆಸರ್ ಮೆಕ್ ಗುರ್ಕ್ ಬಂತು. ಅನ್ ಫಾರ್ಚುನೇಟ್ಲಿ ಯಾರು ಈ ಹೆಸ್ರನ್ನ ಸೆಲೆಕ್ಟ್ ಮಾಡ್ಲಿಲ್ಲ. ಌಂಡ್ ಅನ್​ಸೋಲ್ಡ್ ಆದ್ರು. ಫಸ್ಟ್ ರೌಂಡಲ್ಲಿ ಸಾಕಷ್ಟು ಪ್ಲೇಯರ್ಸ್ ಅನ್​ಸೋಲ್ಡ್ ಆದ್ರು. ಲಿಯಾಮ್​ ಲಿವಿಂಗ್​ಸ್ಟೋನ್, ರಚಿನ್​ ರವೀಂದ್ರ ಮತ್ತು ವಿಯಾನ್​ ಮುಲ್ಡರ್​ ಅನ್​ಸೋಲ್ಡ್​ ಆಗಿದ್ದೂ ಅಚ್ಚರಿ ಮೂಡಿಸಿತ್ತು. ಬಟ್ ಫಸ್ಟ್ ರೌಂಡಲ್ಲಿ ಕ್ಯಾಮೆರಾನ್ ಗ್ರೀನ್ ಚರಿತ್ರೆಯನ್ನೇ ಸೃಷ್ಟಿಸಿದ್ರು. ಆ ಬಳಿಕ ಆಕ್ಷನ್ ಅಖಾಡದಲ್ಲಿ ಹಣದ ಹೊಳೆಯೇ ಹರೀದಿದೆ.

25.20 ಕೋಟಿಗೆ ಕೆಕೆಆರ್ ಸೇರಿದ ಕ್ಯಾಮೆರಾನ್ ಗ್ರೀನ್!

ಇನ್ನು ಮಿನಿ ಆಕ್ಷನ್​ನಲ್ಲಿ ಹೈಯೆಸ್ಟ್ ಪರ್ಸ್ ಬ್ಯಾಲೆನ್ಸ್​ನೊಂದಿಗೆ ಬಂದಿದ್ದ ಕೆಕೆಆರ್​ ದಾಖಲೆ ಮೊತ್ತದಲ್ಲಿ ಆಟಗಾರರನ್ನ ಖರೀದಿ ಮಾಡಿದೆ. ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್ ಕ್ಯಾಮೆರಾನ್ ಗ್ರೀನ್ 2 ಕೋಟಿ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಗ್ರೀನ್ ಖರೀದಿಗೆ ಕೆಕೆಆರ್ ಹಾಗೂ ಸಿಎಸ್​ಕೆ ನಡುವೆ ಭರ್ಜರಿ ಪೈಪೋಟಿ ನಡೀತು.. ಫೈನಲಿ ಕೆಕೆಆರ್ ಬರೋಬ್ಬರಿ 25.20 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಕ್ಯಾಮರೂನ್ ಗ್ರೀನ್ ಐಪಿಎಲ್​​ನಲ್ಲಿ 29 ಪಂದ್ಯಗಳನ್ನಾಡಿದ್ದು, 153ರ ಸ್ಟ್ರೈಕ್​ರೇಟ್​​ನಲ್ಲಿ 707 ರನ್​ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 2 ಅರ್ಧಶತಕಗಳಿವೆ. ಬೌಲಿಂಗ್​​ನಲ್ಲೂ 16 ವಿಕೆಟ್ ಪಡೆದಿದ್ದಾರೆ. ಬಟ್ ಇಂಜುರಿ ಸಮಸ್ಯೆಯಿಂದ ಲಾಸ್ಟ್ ಸೀಸನ್​ ಐಪಿಎಲ್​ನಲ್ಲಿ ಭಾಗಿಯಾಗಿರಲಿಲ್ಲ. ಆದ್ರೆ ಈ ವರ್ಷ ಬಂಪರ್ ಲಾಟರಿಯೇ ಹೊಡೆದಿದೆ.

ಧೋನಿ ಶಿಷ್ಯನಿಗೆ 18 ಕೋಟಿ ಕೊಟ್ಟ ಕೊಲ್ಕತ್ತಾ!

ಇನ್ನು ಮಿನಿ ಆಕ್ಷನ್​ನಲ್ಲಿ ಹೈಯೆಸ್ಟ್ ಬಿಡ್ ಆದ ಮತ್ತೊಬ್ಬ ಪ್ಲೇಯರ್ ಮತೀಶ ಪತಿರಾಣ. ಶ್ರೀಲಂಕಾದ ಯಾರ್ಕರ್ ಕಿಂಗ್, ಜೂನಿಯರ್ ಮಲಿಂಗ ಅಂತಾನೇ ಕರೆಸಿಕೊಳ್ಳೋ ಪತಿರಾಣಾ ಸಿಎಸ್​ಕೆ ಗರಡಿಯಲ್ಲಿ ಪಳಗಿದ ಆಟಗಾರ. ಧೋನಿ ಶಿಷ್ಯ ಅಂತಾನೇ ಕರೆಸಿಕೊಳ್ಳೋ ಪತಿರಾಣಾಗೆ ಬರೋಬ್ಬರಿ 18 ಕೋಟಿ ಬಿಡ್   ಮಾಡಿ ಕೆಕೆಆರ್ ತೆಕ್ಕೆಗೆ ಹಾಕಿಕೊಂಡಿದೆ.

7 ಕೋಟಿಗೆ ಆರ್ ಸಿಬಿಗೆ ಬಂದ ವೆಂಕಟೇಶ್ ಅಯ್ಯರ್!

2025ರ ಐಪಿಎಲ್ ಮೆಗಾ ಆಕ್ಷನ್​ನಲ್ಲಿ ದುಬಾರಿ ಮೊತ್ತಕ್ಕೆ ಸೇಲ್ ಆಗಿ ಅಚ್ಚರಿ ಮೂಡಿಸಿದ್ದ ವೆಂಕಟೇಶ್ ಅಯ್ಯರ್ ಈಗ ಆರ್​ಸಿಬಿಗೆ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಬಾರಿ ಬರೋಬ್ಬರಿ 23 ಕೋಟಿವರೆಗೂ ಬಿಡ್ ಮಾಡಿದ್ರೂ ಕೊನೆಗೆ ಕೆಕೆಆರ್ ಪಾಲಾಗಿದ್ರು. ಬಟ್ ಈ ಸಲ ವೆಂಕಟೇಶ್ ಅಯ್ಯರ್ ಅವರನ್ನ 7 ಕೋಟಿಗೆ ಆರ್‌ಸಿಬಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಆರ್​ಸಿಬಿಗೆ ದಿಸ್ ಇಸ್ ಒನ್ ಆಫ್ ದಿ ಬೆಸ್ಟ್ ಪಿಕ್ ಆಗಿದೆ. ಹಾಗೇ ನ್ಯೂಜಿಲೆಂಡ್​ ಸ್ಟಾರ್​ ವೇಗದ ಬೌಲರ್​ ಜಾಕೊಬ್​ ಡಫಿ 2 ಕೋಟಿ ರೂಪಾಯಿಗೆ ಆರ್​ಸಿಬಿ ಸೇರಿದ್ದಾರೆ. ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇಂಪ್ರೆಸ್ಸಿವ್ ಬೌಲರ್ ಆಗಿದ್ದು 38 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 53 ವಿಕೆಟ್​ಗಳನ್ನು ಪಡೆದಿದ್ದಾರೆ. ಸೋ ಇವ್ರೆಷ್ಟೇ ಅಲ್ಲದೆ ಹರಾಜಿನಲ್ಲಿ ಸದ್ದು ಮಾಡಿದ ಪ್ಲೇಯರ್ಸ್ ಹಾಗೇ ಎಷ್ಟು ಮೊತ್ತಕ್ಕೆ ಯಾವ್ಯಾವ ಟೀಂ ಸೇರಿದ್ರು ಅನ್ನೋದನ್ನ ನೋಡ್ತಾ ಹೋಗೋಣ.

ಮಿನಿ ಆಕ್ಷನ್ ಕುಬೇರರು!

ಆಟಗಾರ                              ತಂಡ                       ಮೊತ್ತ

ಪ್ರಶಾಂತ್​ ವೀರ್                       ಚೆನ್ನೈ                     ₹14.20 ಕೋಟಿ

ಕಾರ್ತಿಕ್ ಶರ್ಮಾ                       ಚೆನ್ನೈ                    ₹14 .20 ಕೋಟಿ

ಅಖಿಬ್​ ದಾರ್​                         ಡೆಲ್ಲಿ                      ₹8.40 ಕೋಟಿ

ರವಿ ಬಿಷ್ಣೋಯ್                      ರಾಜಸ್ಥಾನ                 ₹7.20 ಕೋಟಿ

ತೇಜಸ್ವಿ ಸಿಂಗ್                          ಕೊಲ್ಕತ್ತಾ                  ₹3 ಕೋಟಿ

ಬೆನ್ ಡಕೆಟ್                            ಡೆಲ್ಲಿ                      ₹2 ಕೋಟಿ

ಡೇವಿಡ್ ಮಿಲ್ಲರ್                        ಡೆಲ್ಲಿ                      ₹2 ಕೋಟಿ

ವನಿಂದು ಹಸರಂಗ                        ಲಕ್ನೋ                  ₹2 ಕೋಟಿ

ಫಿನ್ ಅಲೆನ್                            ಡೆಲ್ಲಿ                      ₹2 ಕೋಟಿ

ಅಕೀಲ್ ಹೊಸೈನ್                       ಚೆನ್ನೈ                      ₹2 ಕೋಟಿ

ಕ್ವಿಂಟನ್ ಡಿಕಾಕ್                         ಮುಂಬೈ                   ₹1ಕೋಟಿ

Shantha Kumari