ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಯಾವುದೋ ನಿಲ್ದಾಣಕ್ಕೆ ಇನ್ಯಾವುದೋ ಹೆಸರು! – BMRCLಗೆ ಆಟ.. ಪ್ರಯಾಣಿಕರಿಗೆ ಪ್ರಾಣ ಸಂಕಟ

ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಆರಂಭವಾಗಿ ಹಲವು ತಿಂಗಳುಗಳೇ ಕಳೆದಿವೆ. ಸಾವಿರಾರು ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಆದ್ರೆ ಬಿಎಂಆರ್ಸಿಎಲ್ ಮೆಟ್ರೋ ನಿಲ್ದಾಣದ ಹೆಸರನ್ನೇ ಬದಲಾವಣೆ ಮಾಡಿದೆ. ಇದ್ರಿಂದಾಗಿ ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಇದನ್ನೂ ಓದಿ:ಪೋಷಕರೇ.. ಮಕ್ಕಳ ಬಗ್ಗೆ ಇರಲಿ ಎಚ್ಚರ! – ಟೀಚರ್ ಪಾಠ ಮಾಡ್ತಿರುವಾಗಲೇ ನಡೆಯಿತು ಘೋರ ಕೃತ್ಯ!
ರೂಪೇನಾ ಅಗ್ರಹಾರದಲ್ಲಿ ಯೆಲ್ಲೋ ಲೈನ್ ಮೆಟ್ರೋ ಸ್ಟೇಷನ್ ಇದೆ. ಆದರೆ ಅದಕ್ಕೆ ಬೊಮ್ಮನಹಳ್ಳಿ ಎಂದು ಹೆಸರಿಟ್ಟಿದ್ದಾರೆ. ಬೊಮ್ಮನಹಳ್ಳಿಗೂ ರೂಪೇನಾ ಅಗ್ರಹಾರಕ್ಕೂ ಒಂದು ಕಿಲೋಮೀಟರ್ ಅಂತರ ಇದೆ. ಬೊಮ್ಮನಹಳ್ಳಿಗೆ ಹೋಗುವ ಪ್ರಯಾಣಿಕರು ರೂಪೇನಾ ಅಗ್ರಹಾರದಲ್ಲೇ ಇಳಿಯುತ್ತಿದ್ದಾರೆ. ಬಳಿಕ ಮತ್ತೆ ಆಟೋದಲ್ಲಿ ಪ್ರಯಾಣ ಮಾಡಬೇಕಾದ ದುಸ್ಥಿತಿ ಇದೆ. ಇದೀಗ ಬೊಮ್ಮನಹಳ್ಳಿಗೆ ರೂಪೇನಾ ಅಗ್ರಹಾರ ಹೆಸರು ಸೇರಿಸಿ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸುತ್ತಿದ್ದಾರೆ. ಸರಿಯಾದ ಹೆಸರು ಸೇರಿಸಿಲ್ಲ ಎಂದಾದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಬೊಮ್ಮನಹಳ್ಳಿಯಲ್ಲೂ ಮೆಟ್ರೋ ನಿಲ್ದಾಣ ಇದೆ. ಅದಕ್ಕೆ ಹೊಂಗಸಂದ್ರ ಎಂದು ನಾಮಕರಣ ಮಾಡಿದ್ದಾರೆ! ಹೊಂಗಸಂದ್ರ ಇರುವುದು ಎರಡ್ಮೂರು ಕಿಲೋಮೀಟರ್ ದೂರದಲ್ಲಿ. ಆದರೂ ಬೊಮ್ಮನಹಳ್ಳಿಗೆ ಹೊಂಗಸಂದ್ರ ಎಂದು ಹೆಸರಿಟ್ಟಿದ್ದಾರೆ.
ಇನ್ನು ಎಲೆಕ್ಟ್ರಾನಿಕ್ ಸಿಟಿ ಮತ್ತು ಕೋನಪ್ಪನ ಅಗ್ರಹಾರ ಸ್ಟೇಷನ್ಗಳಲ್ಲೂ ಗೊಂದಲ ಉಂಟು ಮಾಡಿದ್ದು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಕೋನಪ್ಪನ ಅಗ್ರಹಾರ ಸ್ಟೇಷನ್ಗಳಲ್ಲೂ ಬಿಎಂಆರ್ಸಿಎಲ್ ಗೊಂದಲ ಸೃಷ್ಟಿ ಮಾಡಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಿಲ್ದಾಣ ನಿರ್ಮಿಸಿ ಕೋನಪ್ಪನ ಅಗ್ರಹಾರ ಅಂತ ಹೆಸರಿಡಲಾಗಿದೆ. ಕೋನಪ್ಪನ ಅಗ್ರಹಾರದ ನಿಲ್ದಾಣಕ್ಕೆ ಎಲೆಕ್ಟ್ರಾನಿಕ್ ಸಿಟಿ ಎಂದು ನಾಮಕರಣ ಮಾಡಿ ಯಡವಟ್ಟು ಮಾಡಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಇದು ಬಿಎಂಆರ್ಸಿಎಲ್ಗೆ ಆಟ ಜನರಿಗೆ ಪ್ರಾಣ ಸಂಕಟ ಎಂಬಂತಾಗಿದೆ. ಈ ಸ್ಟೇಷನ್ನ ಗೊಂದಲವನ್ನು ಶೀಘ್ರವೇ ಪರಿಹರಿಸದೇ ಹೋರಾಟದ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಪ್ರಯಾಣಿಕರ ಹಿತದೃಷ್ಟಿಯಿಂದ ಬಿಎಂಆರ್ಸಿಎಲ್ ನಿಲ್ದಾಣಗಳ ಹೆಸರನ್ನು ಮರು ಪರಿಶೀಲನೆ ಮಾಡವುದು ಸೂಕ್ತ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿದೆ.

ನೋಡಿರಿ

